Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ಹಳೆಯ ಪಾಂಡೇಶ್ವರ ದೇವಸ್ಥಾನ

ಹಳೆಯ ಪಾಂಡೇಶ್ವರ ದೇವಸ್ಥಾನ, ಹಸ್ತಿನಾಪುರ

1

ಹಸ್ತಿನಾಪುರ ಎಂದರೆ, ಆನೆಗಳ ನಗರ ಎಂದು ಅರ್ಥ. ಮಹಾಭಾರತದ ಕಾಲದಲ್ಲಿ ಹಸ್ತಿನಾಪುರವು ಕೌರವರ ರಾಜಧಾನಿಯಾಗಿತ್ತು. ಮಹಾ ಭಾರತದ ಕಾಲದಲ್ಲಿ ಪಾಂಡವರು ಮತ್ತು ಕೌರವರ ಮಧ್ಯೆ ಕುರುಕ್ಷೇತ್ರ ಯುದ್ಧ ನಡೆಯಿತು. ಅದರ ಮೂಲ ಬೇರುಗಳನ್ನು ನೀವು ಹಸ್ತಿನಾಪುರದಲ್ಲಿ ಕಾಣಬಹುದು. ಮಹಾ ಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ಗೆಲುವಾಯಿತು. ನಂತರ ಹಸ್ತಿನಾಪುರವನ್ನು ಪಾಂಡವರು ಆಳಿದರು.

ಹಸ್ತಿನಾಪರದ ಹಳೆಯ ನಗರದ ಅವಶೇಷಗಳು ಇರುವ ಸ್ಥಳದಲ್ಲಿ ನೀವು ಹಳೆಯ ಪಾಂಡೇಶ್ವರ ದೇವಸ್ಥಾನವನ್ನು ಕಾಣಬಹುದು. ಇದು  ಶಿವನ ದೇವಸ್ಥಾನವಾಗಿದೆ. ದಂತ ಕಥೆಗಳ ಪ್ರಕಾರ, ಈ ದೇವಾಲಯದ ಗರ್ಭಗುಡಿಯಲ್ಲಿರುವ ಶಿವನ ಲಿಂಗವನ್ನು ದಾನ ವೀರ ಕರ್ಣನು ದಾನ ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಕರ್ಣನು ಪಾಂಡವರ ಹಿರಿಯ ಸಹೋದರನಾಗಿದ್ದು, ಅಂದಿನ ಕಾಲದಲ್ಲಿ ಅತ್ಯಂತ ಕೊಡುಗೈ ದಾನ ವೀರ ಎಂದು ಪ್ರಸಿದ್ಧನಾಗಿದ್ದನು.

ಕರ್ಣನು ಮಹಾಭಾರತದ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬನು ಎಂದು ಹೆಸರುವಾಸಿಯಾಗಿದ್ದಾನೆ. ಇವನು ಮಹಾ ಭಾರತ ಯುದ್ಧದಲ್ಲಿ ಕೌರವರ ಪಕ್ಷವನ್ನು ವಹಿಸಿದ್ದನು. ಬಂಗಾಳಿ ಸಮುದಾಯದವರಿಂದ ಚಿಕ್ಕ ಪರ್ವತದ ಮೇಲೆ ನಿರ್ಮಿಸಲ್ಪಟ್ಟ ಕಾಳಿ ದೇವತೆಯ ವಿಗ್ರಹದ ಕೆಳಗಡೆ ಈ ದೇವಸ್ಥಾನವನ್ನು ಸ್ಥಾಪಿಸಲಾಗಿದೆ.

ಇದು ಹಸ್ತಿನಾಪುರ ನಗರದ ಮತ್ತು ಅದರ ಸುತ್ತಮುತ್ತಲಿನ  ಸ್ಥಳಗಳ ರಮಣಿಯ ನೋಟವನ್ನು ಒದಗಸುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri