Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ಕಮಲ ದೇವಸ್ಥಾನ

ಕಮಲ ದೇವಸ್ಥಾನ, ಹಸ್ತಿನಾಪುರ

1

ಈ ದೇವಸ್ಥಾನವನ್ನು ಹಿಂದಿಯಲ್ಲಿ ಕಮಲ ಮಂದಿರ ಎಂದು ಕರೆಯುತ್ತಾರೆ. ಇದು ಕಮಲ ಮಂದಿರ ಎಂದೇ ಜನಪ್ರಿಯತೆಯನ್ನು ಪಡೆದಿದೆ. ಈ ಮಂದಿರವು ಪ್ರಸಿದ್ಧ ಜಂಬುದ್ಚೀಪ ದೇವಸ್ಥಾನದ ಅಂಗಳದಲ್ಲಿಯೇ ನೆಲೆಸಿದೆ. ಚಿಕ್ಕದಾಗಿದ್ದರೂ ಸುಂದರವಾಗಿರುವ ಈ ದೇವಸ್ಥಾನವನ್ನು ಫೆಬ್ರುವರಿ 1975 ರಲ್ಲಿ ನಿರ್ಮಿಸಲಾಯಿತು. ಈ ಮಂದಿರದಲ್ಲಿ ಭಗವಾನ್ ಮಹಾವೀರರ ಪವಿತ್ರ ವಿಗ್ರಹ ಇದೆ. ಈ ಮಂದಿರವು ಅಸಂಖ್ಯಾತ ಭಕ್ತರನ್ನು, ಯಾತ್ರಿಕರನ್ನು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇವರು ಈ ಮಂದಿರಕ್ಕೆ ಅಪಾರ ಮೊತ್ತದ ಹಣವನ್ನು ಪೂಜೆ ಮತ್ತು ಹರಕೆಯ ಹೆಸರಿನಲ್ಲಿ, ಮತ್ತು ಅದರ ಭಾಗವಾಗಿ,  ಉದಾರವಾಗಿ ನೀಡುತ್ತಾರೆ. ಅವರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಚತ್ತರ- ಸ್ವರ್ಣ ಛತ್ರಿಗಳನ್ನು ದಾನವಾಗಿ ಕೊಡುತ್ತಾರೆ. ಮತ್ತು ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರೆ.

101 ಅಡಿ ಎತ್ತರದಲ್ಲಿರುವ ಸುಮೇರು ಪರ್ವತದ ಹತ್ತಿರದಲ್ಲಿರುವ ಪಾಂಡು ಶಿಖ ಆಥವಾ ಉನ್ನತ ಮಟ್ಟದ ತುದಿಯಲ್ಲಿ ಈ ದೇವಸ್ಥಾನವಿದೆ. ಈ ಪರಾಕಾಷ್ಟೆಯನ್ನು ತಲುಪಲು ಮೆಟ್ಟಿಲುಗಳ 136 ಒಳಹಂತಗಳನ್ನು ಏರಬೇಕಾಗುವುದು. ಸುಮೇರು ಪರ್ವತದ ಅತ್ಯಂತ ಮೇಲ್ತುದಿಯು ಪರ್ವತಗಳ, ನದಿಗಳ, ದೇವಸ್ಥಾನಗಳ, ಜಂಬುದ್ವೀಪದ ಉದ್ಯಾನವನಗಳು ಮತ್ತು ನಗರದ ಸುತ್ತಲಿರುವ ಅರಣ್ಯದ ರಮಣೀಯ ನೋಟವನ್ನು ಒದಗಿಸುತ್ತದೆ.

ಜೈನ ಧರ್ಮಗ್ರಂಥಗಳ ಪ್ರಕಾರ, ಸುಮೇರು ಪರ್ವತವು ಅತ್ಯಂತ ಪವಿತ್ರವಾಗಿದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾಗಿದೆ. ಎಲ್ಲ ಜೈನ ತೀರ್ಥಂಕರರ ತೈಲ ಅಭಿಷೇಕವನ್ನು ಈ ಪರ್ವತದಲ್ಲಿ ನೇರವೇರಿಸಲಾಗಿದೆ. ಇದು ಈ ದೇವಸ್ಥಾನದಲ್ಲಿ ನಿರ್ಮಿಸಲಾಗಿರುವ ಮಾದರಿಗಳ ಕುರಿತು ವಿವರಣೆಯನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat