Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ಜೈನ ಜಂಬುದ್ವೀಪ ಮಂದಿರ

ಜೈನ ಜಂಬುದ್ವೀಪ ಮಂದಿರ, ಹಸ್ತಿನಾಪುರ

1

ಜೈನ ಜಂಬುದ್ವೀಪ ಮಂದಿರದ ನಿರ್ಮಾಣವನ್ನು ಮಹಾ ತ್ಯಾಗಿ ಮತ್ತು ಶ್ರಮ ಜೀವಿಯಾದ ಜೈನ ಸಾಧ್ವಿ , ಪರಮ ಪೂಜ್ಯ ಶಿರೋಮಣಿ ಶ್ರೀ ಜ್ಞಾನ ಮಾತಾಜಿಯ ಗೌರವಾರ್ಥವಾಗಿ ಮತ್ತು ಸ್ಮರಣಾರ್ಥವಾಗಿ ಮಾಡಲಾಗಿದೆ. ಸಾಧ್ವಿಯು 1965 ರಲ್ಲಿ ವಿಂಧ್ಯ ಪರ್ವತದ ಮೇಲೆ ಇರುವ ಭಗವಾನ್ ಬಾಹುಬಲಿಯ ಪವಿತ್ರ ವಿಗ್ರಹದ ಕೆಳಗೆ ತಪಸ್ಸಿಗೆ ಕುಳಿತಿದ್ದಳು. ಆಗ ತನ್ನ ಧ್ಯಾನದಲ್ಲಿ ಭವ್ಯ ಮಧ್ಯಲೋಕ - ಮಧ್ಯಮ ವಿಶ್ವವನ್ನು, ಜೊತೆಗೆ ಹದಿಮೂರು ದ್ವೀಪಗಳನ್ನು - ತೇರಾ ದ್ವೀಪಗಳನ್ನು ಕಂಡಳಂತೆ.

ಸಾಧ್ವಿಯು ತನ್ನ ಧ್ಯಾನದಲ್ಲಿ ಕಂಡ ಲೋಕದ ವಿವರಣೆಯನ್ನು ಕುರಿತು 2000 ವರ್ಷಗಳ ಹಿಂದೆ ಬರೆಯಲಾದ ಜೈನ ಧರ್ಮಗ್ರಂಥಗಳಲ್ಲಿ, ಉದಾಹರಣೆಗೆ  ತಿಲೋಯಪನ್ನತಿ ಮತ್ತು ತ್ರಿಲೋಕಸರಗಳಲ್ಲಿ ಉಲ್ಲೇಖಿಸಲಾಗಿತ್ತು. ಇದರ ಆಧಾರದ ಮೇಲೆ ಸಾಧ್ವಿಯು ತನ್ನ ಧ್ಯಾನದಲ್ಲಿ ಕಂಡ ಲೋಕವನ್ನು ಪ್ರಮಾಣಿಕರಿಸಲಾಯಿತು. ಪ್ರಥಮ ಜೈನ ತೀರ್ಥಂಕರರಾದ ಭಗವಾನ್ ವೃಷಭ ದೇವ ಅಥವಾ ಹಸ್ತಿನಾಪುರದ ಯುವರಾಜ ಶ್ರೇಯಂಸ ಕುಮಾರರು ಸಹ ತಮ್ಮ ಧ್ಯಾನದಲ್ಲಿ ಈ ಸುಮೇರು ಪರ್ವತವನ್ನು ಕಂಡರು, ಎಂದು ನಂಬಲಾಗಿದೆ.

ಸಾಧ್ವಿಯು ಸರಿಯಾದ ಸ್ಥಳವನ್ನು ಅನ್ವೇಷಣೆ ಮಾಡುವ ಸಲುವಾಗಿ ದೇಶಾದ್ಯಂತ ಪಾದಯಾತ್ರೆಯನ್ನು (ಕೇವಲ ನಡೆದುಕೊಂಡೇ ದೇಶ ಸಂಚಾರವನ್ನು ಮಾಡುವುದು) ಕೈಗೊಂಡರು. ಕೊನೆಗೆ ಅವರು ಹಸ್ತಿನಾಪುರದಲ್ಲಿ ನೆಲೆ ನಿಂತರು. ಮತ್ತು ಈ ಸ್ಥಳದ ಪಾವಿತ್ರ್ಯತೆಯನ್ನು ಗುರುತಿಸಿದರು. ತನ್ನ ಕನಸಿನ ಯೋಜನೆಯ ನಿರ್ಮಾಣ ಕಾರ್ಯವನ್ನು ಇಲ್ಲಿಯೇ ಮಾಡಬೇಕೆಂದು ನಿರ್ಧರಿಸಿದರು. ದೇವಾಲಯದ ಶಂಕು ಸ್ಥಾಪನೆಯನ್ನು 1974 ರಲ್ಲಿ ಮಾಡಲಾಯಿತು ಮತ್ತು 1985 ರಲ್ಲಿ ಈ ದೇವಾಲಯದ ನಿರ್ಮಾಣ ಕಾರ್ಯವು ಸಂಪೂರ್ಣಗೊಂಡಿತು. ಈ ದೇವಾಲಯದ ರಚನೆಯು ಜೈನ ಭೌಗೋಳಿಕತೆಯು ಸೂಚಿಸುವಂತೆ ಬ್ರಹ್ಮಾಂಡದ ಮಾದರಿಯನ್ನು ಚಿತ್ರಿಸುತ್ತದೆ. ಇದರ ಮಧ್ಯದಲ್ಲಿ 101 ಅಡಿ ಎತ್ತರದ ಸುಮೇರು ಪರ್ವತವು ನೆಲೆಗೊಂಡಿದೆ. ಪೂರ್ವ, ಪಶ್ವಿಮ, ಉತ್ತರ ಮತ್ತು ದಕ್ಷಿಣ ನಾಲ್ಕು ದಿಕ್ಕುಗಳು, ನಾಲ್ಕು ಪ್ರದೇಶಗಳಲ್ಲಿ ಚಾಚಿ ಕೊಂಡಿರುವಂತೆ 250 ಅಡಿ ವ್ಯಾಸ ಉಳ್ಳ ಜಂಬು ದ್ವೀಪ ದೇವಸ್ಥಾನವಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun