Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ದಿಗಂಬರ ಜೈನ ಬಡಾಮಂದಿರ

ದಿಗಂಬರ ಜೈನ ಬಡಾಮಂದಿರ, ಹಸ್ತಿನಾಪುರ

1

ಹಸ್ತಿನಾಪುರವು ಜೈನ ಸಮುದಾಯದ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರ - ಒಂದು ಮಹತ್ವದ ಯಾತ್ರಾ ಕೇಂದ್ರ ಎಂದು ಪರಿಗಣಿಸಲ್ಪಟ್ಟಿದೆ. ದಿಗಂಬರ ಜೈನ ಬಡಾ ದೇವಸ್ಥಾನವು ನಗರದ ಅತ್ಯಂತ ಹಳೆಯ ಜೈನ ದೇವಸ್ಥಾನವಾಗಿದೆ. ಬಡಾ ಎಂಬ ಶಬ್ದವು ಈ ದೇವಾಲಯವು ನಿಜವಾಗಿಯೂ ಎಷ್ಟು ದೊಡ್ಡದಾಗಿದೆ ಎಂಬುದನ್ನು ಸೂಚಿಸುತ್ತದೆ. ಇದು ನಲವತ್ತು ಅಡಿ ಎತ್ತರದ ಪರ್ವತದ ಮೇಲೆ ಇದೆ. ಈ ಭವ್ಯವಾದ ದೇವಾಲಯವು ನಾಲ್ಕು ಅಡಿ ಎತ್ತರದ ಪೀಠದ ಮೇಲೆ ನಿರ್ಮಿಸಲಾಗಿದೆ.

ಕೃತಕವಾಗಿ ನಿರ್ಮಿಸಲ್ಪಟ್ಟ ಉದ್ದ ಗೋಪುರದಿಂದ ಅಲಂಕೃತಗೊಂಡಿದೆ. ಈ ದೇವಾಲಯವು ಮೂರು ದ್ವಾರಗಳನ್ನು ಒಳಗೊಂಡಿದೆ. ಭಗವಾನ್ ಶಾಂತಿನಾಥರ ಶ್ವೇತ ವರ್ಣದ ಪ್ರತಿಮೆಯನ್ನು ನೀವು ಇಲ್ಲಿ ಕಾಣಬಹುದು. ಈ ದೇವಸ್ಥಾನದ ಪ್ರಮುಖ ದೇವತೆಯು ಪದ್ಮಾಸನದ ಭಂಗಿಯಲ್ಲಿದೆ. ಈ ದೇವಾಲಯದ ಅದ್ವೀತಿಯ ಲಕ್ಷಣ ಎಂದರೆ,  ಈ ದೇವಸ್ಥಾನದ ಸಂಪೂರ್ಣ ಎತ್ತರವನ್ನು ಸುರುಳಿಯಾಕಾರದ ರಚನೆಯಲ್ಲಿ ನಿರ್ಮಿಸಲಾಗಿದೆ. ಇದರ ಒಳಾಂಗಣ ವಿನ್ಯಾಸವನ್ನು ಜೈನ ಧರ್ಮಗ್ರಂಥಗಳ ಕಥೆಗಳನ್ನು ಹೇಳುವ ಸ್ವರ್ಣ ವರ್ಣ ಚಿತ್ರಗಳಿಂದ ಅಲಂಕರಿಸಲಾಗಿದೆ. ಈ ಒಳಾಂಗಣ ವಿನ್ಯಾಸವನ್ನು ಮಾಡಲು ಸುಮಾರು 7-8 ಕೀಲೋ ಗ್ರಾಂ ಚಿನ್ನವನ್ನು ವ್ಯಯಿಸಲಾಯಿತು ಎಂಬ ನಂಬಿಕೆ ಇದೆ.

ಈ ದೇವಾಲಯದ ಆವರಣವು ಗ್ರಂಥಾಲಯ, ವೃದ್ಧಾಶ್ರಮ, ಜೈನಮಂದಿರ, ಆಚಾರ್ಯ ವಿದ್ಯಾನಂದ ಮ್ಯೂಜಿಯಂ ಮತ್ತು ಕೈಲಾಶ ಪರ್ವತಗಳಿಗೆ ನೆಲೆಯಾಗಿದೆ. ಈ ದೇವಾಲಯದಲ್ಲಿ ಭಕ್ತರು ಉಳಿದುಕೊಳ್ಳುವುದಕ್ಕೆ ವಸತಿ ಮತ್ತು ಊಟದ ವ್ಯವಸ್ಥೆ ಸೌಲಭ್ಯವಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat