Search
  • Follow NativePlanet
Share
ಮುಖಪುಟ » ಸ್ಥಳಗಳು» ಅಲಾಂಗ್

ಅಲಾಂಗ್ - ಕಣಿವೆಗಳ ಕಣ ಕಣಗಳಲ್ಲಿ ಚೆಲುವಿನ ಚಿತ್ತಾರ

27

ಅರುಣಾಚಲ್ ಪ್ರದೇಶದಲ್ಲಿರುವ ಪಶ್ಚಿಮ ಸಿಯಂಗ್ ಜಿಲ್ಲೆಯಲ್ಲಿನ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಅಲಾಂಗ್ ಎಂಬುದು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ ಒಂದು ಸುಂದರವಾದ ಪಟ್ಟಣವಾಗಿದೆ. ಈ ಪಟ್ಟಣವು ಸಿಯಂಗ್ ನದಿಯ ಉಪನದಿಗಳಾದ ಯೊಮ್ಗೊ ಮತ್ತು ಸಿಪು ನದಿಗಳ ದಂಡೆಯಲ್ಲಿ, ಅಸ್ಸಾಂ ಮತ್ತು ಅರುಣಾಚಲ್ ಪ್ರದೇಶದ ಗಡಿಯಲ್ಲಿ ನೆಲೆಗೊಂಡಿದೆ. ಈ ಪಟ್ಟಣವು ಸಮುದ್ರ ಮಟ್ಟದಿಂದ 300 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.

ಇಲ್ಲಿನ ಪ್ರಶಾಂತವಾದ ಮತ್ತು ಸೌಂದರ್ಯವನ್ನೆ ಹೊದ್ದು ಮಲಗಿರುವ ಪರ್ವತಗಳು ನಿಮ್ಮನ್ನು ಪರಿಸರದ ಅನಂತತೆಯೆಡೆಗೆ ಕರೆದೊಯ್ಯುತ್ತವೆ. ಇದು ಪಶ್ಚಿಮ ಸಿಯಾಂಗ್ ಜಿಲ್ಲೆಯ ಆಡಳಿತ ಕೇಂದ್ರವು ಸಹ ಆಗಿದೆ. ಅಲಾಂಗ್ ಚಾರಣಿಗರ, ರಿವರ್ ರಾಫ್ಟಿಂಗ್ ಮಾಡುವವರ ಮತ್ತು ಪರ್ವತಾರೋಹಿಗಳ ಪಾಲಿಗೆ ಸ್ವರ್ಗವೆನಿಸಿದೆ. ಬುಡಕಟ್ಟು ಜನರಿಂದ ತಯಾರಾಗುವ ಬಿದಿರಿನ ಉತ್ಪನ್ನಗಳು, ಕೈಮಗ್ಗಗಳ ಉತ್ಪಾದನೆಯಾದ ಶಾಲು, ಸ್ವೆಟರ್ ಹಾಗು ಬ್ಯಾಗ್‍ಗಳಂತಹ ವಸ್ತುಗಳಿಗೆ ಅಲಾಂಗ್ ಖ್ಯಾತಿಯನ್ನು ಗಳಿಸಿದೆ.

ಅಲಾಂಗ್ ಸುತ್ತ -ಮುತ್ತ ಇರುವ ಪ್ರವಾಸಿ ಆಕರ್ಷಣೆಗಳು

ಅಲಾಂಗ್ ಸುತ್ತ- ಮುತ್ತ ಹಲವಾರು ಚಿಕ್ಕ ಮತ್ತು ದೊಡ್ಡ ಪ್ರವಾಸಿ ಆಕರ್ಷಣೆಗಳು ಇವೆ. ಪಟುಮ್ ಸೇತುವೆ, ತೂಗು ಸೇತುವೆ, ಸಂರಕ್ಷಿತ ಮೆಚುಕ ಕಣಿವೆ, ಅಕಶಿಗಂಗಾ ದೇವಾಲಯ, ದೊನಿಯೊ ದೇವಾಲಯ, ಮಿಥುನ್ ಮತ್ತು ಜೆರ್ಸಿ ತಳಿ ಸಂವರ್ಧನಾ ಫಾರಂ, ಪುವಕ್ ಘಾಟ್, ಮಲಿನಿಥಾನ್, ರಾಮಕೃಷ್ಣ ಆಶ್ರಮ, ಕಮ್ಕಿ ಜಲವಿದ್ಯುತ್ ಜಲಾಶಯಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಆರ್ಕಿಡ್ ಮೀಸಲು ಅರಣ್ಯವು ತನ್ನಲ್ಲಿರುವ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಆರ್ಕಿಡ್‍ಗಳಿಂದಾಗಿ ಪ್ರವಾಸಿಗರ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದೆ.

ಹವಾಮಾನಅಲಾಂಗ್‍ನ ಹವಾಮಾನವು ಆರ್ದ್ರತೆಯಿಂದ ಕೂಡಿದ ಸಮಶೀತೋಷ್ಣ ವಲಯದ ಹವಾಮಾನವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿ ಇಲ್ಲಿ ಆರ್ದ್ರತೆಯಿದ್ದರೆ, ಚಳಿಗಾಲದಲ್ಲಿ ಅಧಿಕ ಚಳಿಯಿರುತ್ತದೆ. ಒಮ್ಮೊಮ್ಮೆ ಇಲ್ಲಿ ಹಿಮಪಾತಗಳ ಸಹ ಉಂಟಾಗುತ್ತದೆ.

ಭೇಟಿ ನೀಡಲು ಅತ್ಯುತ್ತಮ ಅವಧಿ

ಅಲಾಂಗ್‍ಗೆ ಭೇಟಿ ನೀಡಲು ಸೆಪ್ಟೆಂಬರ್ ನಿಂದ ಜನವರಿಯ ತಿಂಗಳುಗಳ ನಡುವಿನ ಸಮಯವು ಅತ್ಯುತ್ತಮ ಅವಧಿಯಾಗಿರುತ್ತದೆ.

ಅಲಾಂಗ್ ಪ್ರಸಿದ್ಧವಾಗಿದೆ

ಅಲಾಂಗ್ ಹವಾಮಾನ

ಉತ್ತಮ ಸಮಯ ಅಲಾಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅಲಾಂಗ್

  • ರಸ್ತೆಯ ಮೂಲಕ
    ಅಲಾಂಗ್‍ಗೆ ರಸ್ತೆ ಸಂಪರ್ಕ ಉತ್ತಮವಾಗಿದೆ. ಇಲ್ಲಿನ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ 52 ಪಾಸಿಘಾಟ್ ಮೂಲಕ ಇಲ್ಲಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಲಾಂಗ್‍ಗೆ ಹೋಗಲು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಿಲಪತ್ಥರ್ ನಲ್ಲಿ ಇಲ್ಲಿಗೆ ಸಮೀಪದ ರೈಲು ನಿಲ್ದಾಣ ನೆಲೆಗೊಂಡಿದೆ. ಅಲಾಂಗ್‍ಗೆ ಯಾವುದೇ ನೇರ ರೈಲಿನ ಮಾರ್ಗವಿಲ್ಲ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅಲಾಂಗ್‍ನಲ್ಲಿ ಒಂದು ವಿಮಾನ ನಿಲ್ದಾಣವಿದ್ದು, ಇದು ಇಲ್ಲಿನವರನ್ನು ಇತರ ಸ್ಥಳಗಳ ಜೊತೆಗೆ ಸಂಪರ್ಕ ಕಲ್ಪಿಸಲು ನೆರವಾಗುತ್ತದೆ. ಪ್ರವಾಸಿಗರು ಸಹ ಇದರ ಸದುಪಯೋಗವನ್ನು ಪಡೆಯಬಹುದು. ಇದರ ಜೊತೆಗೆ ಇಟಾನಗರ್, ಝಿರೊ ಮತ್ತು ಡಪೊರಿಜಿಗಳಿಂದ ಅಲಾಂಗ್‍ಗೆ ಹೆಲಿಕಾಪ್ಟರ್ ಸೌಲಭ್ಯ ದೊರೆಯುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun