ತೂಗು ಸೇತುವೆಯನ್ನು ಕೇವಲ ಹಗ್ಗಗಳು ಮತ್ತು ಬಿದಿರಿನ ಬೊಂಬುಗಳಿಂದ ನಿರ್ಮಿಸಲಾಗಿದೆ. ಈ ಸಣ್ಣ ಸೇತುವೆಗಳನ್ನು ಸ್ಥಳೀಯ ಜನರೇ ತಮ್ಮ ಸಂಪರ್ಕ ವ್ಯವಸ್ಥೆಗಾಗಿ ನಿರ್ಮಿಸಿಕೊಂಡಿದ್ದಾರೆ. ಇವುಗಳು ಸುಮಾರು 60-70 ಮೀಟರ್ ಉದ್ದವಿದ್ದು, ಬುಡಕಟ್ಟು ಜನರನ್ನು ಪರ್ವತ ಪ್ರಾಂತ್ಯದ ಬೇರೆ, ಬೇರೆ ಪ್ರದೇಶಗಳೊಂದಿಗೆ ಸಂಪರ್ಕಿಸಲು ನೆರವಾಗುತ್ತವೆ. ಇಲ್ಲಿ ಮೀನು ಹಿಡಿಯುತ್ತ ಕಾಲ ಕಳೆಯಬಹುದು.