ಮಲಿನಿಥನ್ ಎಂಬುದು ಅಸ್ಸಾಂ ಮತ್ತು ಅರುಣಾಚಲ್ ಪ್ರದೇಶದ ಗಡಿ ಭಾಗದಲ್ಲಿ, ಸಿಯಂಗ್ ಬೆಟ್ಟದ ತಪ್ಪಲಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಸ್ಥಳದಲ್ಲಿ 14 ಅಥವಾ 15 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಒಂದು ದುರ್ಗಾ ದೇವಿಯ ದೇವಾಲಯವನ್ನು ಉತ್ಖನನ ಮಾಡಿ ಹೊರತೆಗೆಯಲಾಗಿದೆ. ಇಲ್ಲಿ ಹಲವಾರು ದೇವಾನು ದೇವತೆಗಳ ವಿಗ್ರಹಗಳು, ಹೂವಿನ ಮತ್ತು ಪ್ರಾಣಿಗಳ ಚಿತ್ತಾರಗಳನ್ನು ನಾವು ಕಾಣಬಹುದು. ಇದು ಪವಿತ್ರವಾದ ಧಾರ್ಮಿಕ ಸ್ಥಳವೆಂಬ ಕೀರ್ತಿಗೆ ಪಾತ್ರವಾಗಿದೆ. ಹಾಗಾಗಿ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ.
ಹಿಂದೂ ಪುರಾಣಕ್ಕೆ ಸಂಬಂಧಿಸಿದ ದಂತಕತೆಯೊಂದು ಈ ಸ್ಥಳಕ್ಕೆ ಸಂಬಂಧಪಟ್ಟಿದೆ.ಇದರ ಪ್ರಕಾರ ರುಕ್ಮಣಿ ದೇವಿಯ ಮದುವೆಗೆ ಮೊದಲು ಶ್ರೀ ಕೃಷ್ಣನು ಆಕೆಯನ್ನು ಅಪಹರಿಸಿದಾಗ, ಪಾರ್ವತಿಯು ದೇವಿಯು ಹೂವಿನ ಹಾರದೊಂದಿಗೆ ಈ ಇಬ್ಬರನ್ನು ಸ್ವಾಗತಿಸಿದಳಂತೆ. ಇದರಿಂದ ಸಂತುಷ್ಟಗೊಂಡ ಶ್ರೀ ಕೃಷ್ಣನು ಪಾರ್ವತಿಗೆ ಸುಚರು ಮಾಲಿನಿ ಎಂದು ಕರೆದನಂತೆ. ಹಾಗಾಗಿ ಈ ಸ್ಥಳಕ್ಕೆ ಮಾಲಿನಿಥಾನ್ ಎಂದು ಹೆಸರು ಬಂದಿತು. ಇದು ಅಲಾಂಗ್ನಿಂದ 150 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.