Search
  • Follow NativePlanet
Share

ಅಲ್ಚಿ - ಪ್ರಶಾಂತತೆಯ ಸೊಬಗು

19

ಲಡಾಖ್ ಜಿಲ್ಲೆಯ ಲೇಹ್ ನಲ್ಲಿ ನೆಲೆಗೊಂಡಿರುವ ಜನಪ್ರಿಯ ಹಳ್ಳಿಯೇ ಅಲ್ಚಿ. ಇಂಡಸ್ ನದಿಯ ತಟದಲ್ಲಿ ನೆಲೆಸಿರುವ ಈ ಪ್ರಶಾಂತ ಹಳ್ಳಿಯು ಹಿಮಾಲಯ ಕೇಂದ್ರ ಪ್ರದೇಶದ ಲೇಹ್ ನಿಂದ 70 ಕಿ.ಮೀ ದೂರದಲ್ಲಿದೆ.

ತನ್ನಲ್ಲಿರುವ ಅಲ್ಚಿ ಎಂಬ ಹೆಸರಿನ ಮೊನಾಸ್ಟರಿ(ಮಠ)ಯಿಂದಲೆ ಈ ಹಳ್ಳಿಯು ಜನಪ್ರಿಯವಾಗಿದೆ. ಅಲ್ಚಿ ಮೊನಾಸ್ಟರಿಯು ಲಡಾಖ್ ನ ಪ್ರಖ್ಯಾತ ಆಕರ್ಷಣೆಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಲಡಾಖ್ ನಲ್ಲಿರುವ ಇತರೆ ಮಠಗಳು ಪರ್ವತಗಳ ತುದಿಗಳಲ್ಲಿ ನೆಲೆಸಿದ್ದರೆ, ಅಲ್ಚಿ ಮಠವು ಮಾತ್ರ ಪ್ರದೇಶದ ಕೆಳವಲಯದಲ್ಲಿ ನಿರ್ಮಿತವಾಗಿದೆ. ಅನನ್ಯವಾದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ಈ ಮಠದ ಇತಿಹಾಸವು 11 ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಈ ಮಠದ ಕಟ್ಟಡವು ಮೂರು ಪ್ರಮುಖ ದೇವಾಲಯಗಳನ್ನು ಒಳಗೊಂಡಿದ್ದು, ಅವುಗಳೆಂದರೆ ಡು-ಖಂಗ್, ಸುಮ್-ಸೆಕ್ ಮತ್ತು ಮಂಜುಶ್ರಿ ದೇವಾಲಯ. ಈ ದೇವಾಲಯಗಳ ಗೋಡೆಗಳ ಮೇಲೆ ಬುದ್ಧ ಹಾಗು ಇತರೆ ದೇವತೆಗಳ ಸುಂದರ ವರ್ಣಚಿತ್ರಗಳನ್ನು ಕಾಣಬಹುದಾಗಿದೆ.

ಪ್ರಾಕೃತಿಕ ಸೊಬಗಿನ ಮಡಿಲಲ್ಲಿ ಸ್ಥಿತಗೊಂಡಿರುವ ಅಲ್ಚಿಯು, ಭೇಟಿ ನೀಡುವ ಪ್ರವಾಸಿಗರಿಗೆ ಒಂದು ವಿಹಂಗಮವಾದ ನೈಸರ್ಗಿಕ ನೋಟವನ್ನು ಒದಗಿಸುತ್ತದೆ. ಈ ಒಂದು ಸ್ಥಳದಲ್ಲಿ ಪ್ರವಾಸಿಗರು ಮಠಗಳ ಜೀವನ ಶೈಲಿಯನ್ನು ಅತಿ ಹತ್ತಿರದಿಂದ ಗಮನಿಸಬಹುದು. ವಾಸ್ತವ್ಯಕ್ಕೂ ಕೂಡ ಇಲ್ಲಿ ಸೌಲಭ್ಯಗಳಿವೆ.

ಈ ಪ್ರದೇಶಕ್ಕೆ ವಿಮಾನಗಳ ಮೂಲಕವು ತಲುಪಬಹುದು. ಇದಕ್ಕೆ ಹತ್ತಿರದಲ್ಲಿರುವ ವಾಯುನೆಲೆಯೆಂದರೆ ಲೇಹ್. ಇಲ್ಲಿರುವ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಾದ ಪುಣೆ, ದೆಹಲಿ, ಜಮ್ಮು ಮತ್ತು ಶ್ರೀನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ಇನ್ನು ಹತ್ತಿರದ ರೈಲು ತುದಗಳೆಂದರೆ, ಪಠಾನ್ಕೋಟ್ ಮತ್ತು ಚಂಡೀಗಡ್.

ಅಲ್ಚಿ ಗ್ರಾಮವು ವಿಪರೀತವಾದ ಹವಾಮಾನ ಗುಣಲಕ್ಷಣಗಳನ್ನು ಹೊಂದಿದೆ. ಚಳಿಗಾಲದಲ್ಲಿ ಮೈಕೊರೆಯುವಂತಹ ಚಳಿ ಇಲ್ಲಿದ್ದು, ಬೇಸಿಗೆಯು ಆರಾಮದಾಯಕವಾಗಿರುತ್ತದೆ. ವರ್ಷಪೂರ್ತಿ ಮಳೆಯನ್ನು ಅನುಭವಿಸುವ ಈ ಪ್ರದೇಶವು ಬೇಸಿಗೆಯ ಸಂದರ್ಭದಲ್ಲಿ ಅದರಲ್ಲೂ ವಿಶೆಷವಾಗಿ ರಾತ್ರಿ ಹೊತ್ತಿನಲ್ಲಿ ತಾಪಮಾನದಲ್ಲಿ ಕುಸಿತವನ್ನು ಕಾಣುತ್ತಿರುತ್ತದೆ. ಅಲ್ಚಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜೂನ್ ಮತ್ತು ಸೆಪ್ಟಂಬರ್ ತಿಂಗಳುಗಳ ಮಧ್ಯದ ಅವಧಿ.

ಅಲ್ಚಿ ಪ್ರಸಿದ್ಧವಾಗಿದೆ

ಅಲ್ಚಿ ಹವಾಮಾನ

ಉತ್ತಮ ಸಮಯ ಅಲ್ಚಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅಲ್ಚಿ

  • ರಸ್ತೆಯ ಮೂಲಕ
    ಅಲ್ಚಿಗೆ ತಲುಪಲು ಮನಾಲಿ ಹಾಗು ಶ್ರೀನಗರಗಳಿಂದ ನಿರಂತರವಾದ ಬಸ್ಸುಗಳ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಅಲ್ಚಿಗೆ ಹತ್ತಿರದಲ್ಲಿರುವ ರೈಲು ತುದಿಗಳೆಂದರೆ ಪಠಾನ್ಕೋಟ್ ಮತ್ತು ಚಂಡೀಗಡ್. ಪಠಾನ್ಕೋಟ್ ಮತ್ತು ಲೇಹ್ ಮಧ್ಯದಲ್ಲಿನ ಅಂತರ 278 ಕಿ.ಮೀ ಆಗಿದ್ದು, ಈ ಎರಡೂ ಸ್ಥಳಗಳು ನಿರಂತರವಾದ ರೈಲುಗಳ ಮೂಲಕ ಉತ್ತಮ ಸಂಪರ್ಕವನ್ನು ಸಾಧಿಸಿವೆ. ಪಠಾನ್ಕೋಟ್ ರೈಲು ನಿಲ್ದಾಣವು ಭಾರತದ ಹಲವು ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದಿಂದ ಅಲ್ಚಿಗೆ ತಲುಪಲು ಟಾಕ್ಸಿ ಅಥವಾ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅಲ್ಚಿಗೆ ಹತ್ತಿರದಲ್ಲಿರುವ ವಾಯುನೆಲೆ ಎಂದರೆ ಲೇಹ್. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಾದ ಪುಣೆ, ದೆಹಲಿ, ಜಮ್ಮು ಮತ್ತು ಶ್ರೀನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದಿಂದ ಅಲ್ಚಿಗೆ ತಲುಪಲು ಟಾಕ್ಸಿ ಅಥವಾ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed