Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಚಿ » ಆಕರ್ಷಣೆಗಳು » ಡು-ಖಾಂಗ್

ಡು-ಖಾಂಗ್, ಅಲ್ಚಿ

1

ಅಲ್ಚಿ ಬೌದ್ಧ ಮಠ ಸಂಕೀರ್ಣದ ಮಧ್ಯಭಾಗದಲ್ಲಿ ಕಂಡುಬರುವ ದೇವಾಲಯ ಡು-ಖಾಂಗ್. ಈ ಮಠ ಸಂಕೀರ್ಣದಲ್ಲೆ ಇದೊಂದು ಪುರಾತನ ಹಾಗು ದೊಡ್ಡದಾದ ದೇವಾಲಯವಾಗಿದ್ದು, ಇದರಲ್ಲೆ ಬೌದ್ಧ ಸನ್ಯಾಸಿಗಳು ಹಲವು ಆಚರಣೆಗಳನ್ನು ಕೈಗೊಳ್ಳುತ್ತಾರೆ. 12 ಹಾಗು 13 ನೇ ಶತಮಾನದಲ್ಲಿ ಈ ದೇವಾಲಯವನ್ನು ಇತರೆ ರಚನೆಗಳೊಂದಿಗೆ ವಿಸ್ತರಿಸಲಾಯಿತು.

ಏನಿಲ್ಲವೆಂದರೂ ಬುದ್ಧನ ಸುಮಾರು 1000 ಹಸಿಚಿತ್ರಗಳನ್ನು ಈ ದೇವಾಲಯದ ಇಕ್ಕೆಲಗಳಲ್ಲಿ ರಚಿಸಲಾಗಿದೆ. ಈ ದೇವಾಲಯದ ಹೊರದ್ವಾರದಲ್ಲಿ, ಹಿಂದು ಧರ್ಮದ ವಿನಾಶನದ ಪ್ರತೀಕವಾದ ಮಹಾಕಾಲ್, ಶಿವ ಮತ್ತು ಭಾವಚಕ್ರ ಅಥವಾ ಜೀವನಚಕ್ರ (ಸಂಸಾರದ ನಿರಂತರ ಪಯಣ)ದ ಆಕೃತಿಗಳನ್ನು ಕಾಣಬಹುದು.

ದೇವಾಲಯದ ಗೋಡೆಗಳು ಪಂಚ ತತ್ಘಟಗಳನ್ನು ಪ್ರತಿಫಲಿಸುತ್ತದೆ. ವೈರೋಚನ (ಸೆಲೆಸ್ಟಿಯಲ್ ಬುದ್ಧ/ಆಕಾಶ ಬುದ್ಧ) ಈ ದೇವಾಲಯದ ಪ್ರಮುಖ ದೇವತೆ. ಈ ವಿಗ್ರಹದ ಸುತ್ತಲೂ ಪಂಚ ತತ್ಘಟಗಳನ್ನು ಆರು ಮಂಡಲ(ಬೌದ್ಧ ಪವಿತ್ರ ಕಲೆ)ಗಳ ಜೊತೆ ಚಿತ್ರಿಸಲಾಗಿದೆ. ಈ ಮಂಡಲಗಳನ್ನು ಹಲವು ಬುದ್ಧ, ಧರ್ಮಗಳ ರಕ್ಷಕ, ಬೋಧಿಸತ್ವ ಮತ್ತು ಇತರೆ ದೇವತೆಗಳ ಸುತ್ತಲೂ ಕಾಣಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed