Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಚಿ » ಆಕರ್ಷಣೆಗಳು » ಮಂಜುಶ್ರಿ ದೇವಾಲಯ

ಮಂಜುಶ್ರಿ ದೇವಾಲಯ, ಅಲ್ಚಿ

2

ಅಲ್ಚಿ ಬೌದ್ಧ ಮಠದ ಮಂಜುಶ್ರಿ ದೇವಾಲಯವು ಜಂಪೆ ಲಾ-ಖಾಂಗ್ ಎಂತಲೂ ಪ್ರಸಿದ್ಧವಾಗಿದ್ದು, ಅಲ್ಚಿಯ ಲೊತ್ಸಾವಾ ಲಾ-ಖಾಂಗ್ ಗೆ ಹತ್ತಿರದಲ್ಲಿದೆ. ಈ ದೇವಾಲಯವು 12 ನೇ ಶತಮಾನದ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಚೌಕಾಕಾರದಲ್ಲಿ ನಿರ್ಮಿತವಾಗಿದ್ದು ಇಂದ್ರೀಯಾತೀತ ಜ್ಞಾನದ ಪ್ರತೀಕವಾದ ಮಂಜುಶ್ರಿ ಬೋಧಿಸತ್ವರ ನಾಲ್ಕು ವಿಗ್ರಹಗಳನ್ನು ಒಳಗೊಂಡಿದೆ. ಎಲ್ಲ ವಿಗ್ರಹಗಳಲ್ಲೂ ಮಂಜುಶ್ರಿಯ ಒಂದು ಮುಖ ಹಾಗು ನಾಲ್ಕು ಕೈಗಳನ್ನು ಕಾಣಬಹುದು.

ಪ್ರತಿಯೊಂದು ವಿಗ್ರಹಗಳು ಸಿಂಹದ ಮೇಲೆ ಆಸೀನವಾಗಿದ್ದು, ನಾಲ್ಕು ಕೈಗಳಲ್ಲಿ ಬಿಲ್ಲು, ಬಾಣ, ಪುಸ್ತಕ ಮತ್ತು ಖಡ್ಗಗಳನ್ನು ಹಿಡಿದಿರುವುದು ಗೋಚರಿಸುತ್ತದೆ. 'ಏಳು ಆಭರಣಗಳು' ಮತ್ತು 'ಎಂಟು ಅನುಮಾನದ ಚಿಹ್ನೆಗಳನ್ನು' ಆಸನದ ಕೆಳಗೆ ಬಿಂಬಿಸಲಾಗಿದೆ. ವಿಗ್ರಹವು ಕಿರೀಟ ಹಾಗು ಆಭರಣಗಳಿಂದ ಅಲಂಕೃತವಾಗಿದೆ.

ಗೋಡೆಗಳ ಮೇಲೆ ಬುದ್ಧನ ಚಿತ್ರಗಳನ್ನು ನೋಡಬಹುದಾಗಿದ್ದು, ದೇವಾಲಯದ ಕೇಂದ್ರ ಗೋಡೆಯ ಮೇಲೆ ಮುಖ್ಯ ದೇವತೆ ಮಂಜುಶ್ರಿಯ ಚಿತ್ರವನ್ನು ಕಾಣಬಹುದು. ದೇವಾಲಯದ ಬದಿಯ ಗೋಡೆಗಳ ಬಲಭಾಗದಲ್ಲಿ ಅಮಿತಾಭ ಅಥವಾ ಅನಂತ ಪ್ರಕಾಶದ ಬುದ್ಧನ ಚಿತ್ರಗಳನ್ನು ನೋಡಬಹುದಾಗಿದ್ದು, ಎಡಭಾಗದಲ್ಲಿ ಅಕ್ಷೋಭ್ಯನ ಚಿತ್ರಗಳನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
14 Jun,Sun
Return On
15 Jun,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
14 Jun,Sun
Check Out
15 Jun,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
14 Jun,Sun
Return On
15 Jun,Mon