Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಚಿ » ಆಕರ್ಷಣೆಗಳು » ಅಲ್ಚಿ ಬೌದ್ಧ ಮಠ

ಅಲ್ಚಿ ಬೌದ್ಧ ಮಠ, ಅಲ್ಚಿ

4

ಅಲ್ಚಿ ಗ್ರಾಮದಲ್ಲಿ ನೆಲೆಗೊಂಡಿರುವ ಅಲ್ಚಿ ಬೌದ್ಧ ಮಠವು ಲಡಾಖ್ ನಲ್ಲಿರುವ ಹಲವು ಪುರಾತನ ಮಠಗಳಲ್ಲಿ ಒಂದಾಗಿದೆ. ಇಂಡಸ್ ನದಿಯ ತಟದ ಮೇಲಿರುವ ಈ ಮಠವನ್ನು ಅಲ್ಚಿ ಚೊಸ್ಖೋರ್ ಹಾಗು ಅಲ್ಚಿ ಗೊಂಪಾ ಎಂಬ ನಾಮಗಳಿಂದಲೂ ಸಂಭೋದಿಸಲಾಗುತ್ತದೆ. ಈ ಮಠವನ್ನು ಸಂಸ್ಕೃತದಲ್ಲಿರುವ ಬೌದ್ಧ ವ್ಯಾಖ್ಯಾನಗಳನ್ನು ಟಿಬೇಟಿಯನ್ ಭಾಷೆಗೆ ಭಾಷಾಂತರಿಸಿದ ಭಾಷಾಂತರಗಾರ ರಿಂಚೆನ್ ಝಾಂಗ್ಪೊ ಎಂಬಾತನು 958 ಮಾತು1055 ಮಧ್ಯದ ಅವಧಿಯಲ್ಲಿ ನಿರ್ಮಿಸಿದ ಎಂದು ನಂಬಲಾಗಿದೆ.

ಈ ಮಠದ ಒಂದು ಮಹತ್ವವಾದ ಗುಣಲಕ್ಷಣವೆಂದರೆ, ಇದು ಸಮತಟ್ಟಾದ ಭೂಮಿಯಲ್ಲಿ ನಿರ್ಮಿತವಾದುದು. ಈ ಮಠ ಸಂಕೀರ್ಣದಲ್ಲಿ ಮೂರು ದೇವಾಲಯಗಳನ್ನು ನೋಡಬಹುದಾಗಿದ್ದು, ಅವುಗಳೆಂದರೆ ಡು-ಖಾಂಗ್, ಸುಮ್-ಸೆಕ್ ಮತ್ತು ಮಂಜುಶ್ರಿ ದೇವಾಲಯಗಳು. ಈ ದೇವಾಲಯಗಳ ಇತಿಹಾಸವು 12 ರಿಂದ 13 ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಲೊತ್ಸಾಬಾ ಲಾ-ಖಾಂಗ್ ಅಥವಾ ಭಾಷಾಂತಕಾರನ ದೇವಾಲಯ ಮತ್ತು ಲಾ-ಖಾಂಗ್ ಸೋಮಾ ದೇವಾಲಯಗಳು ಈ ಮಠದಲ್ಲಿರುವ ಅನ್ಯ ಎರಡು ಪ್ರಮುಖ ದೇವಾಲಯಗಳು. ಕಾರ್ಟೆನ್ಸ್ ಅಥವಾ ಸ್ತೂಪಗಳು ಈ ದೇವಾಲಯದ ಅಂಗಳದಲ್ಲಿರುವ ಮುಖ್ಯವಾದ ರಚನೆಗಳು. ಪ್ರಸ್ತುತ ಲಿಕಿರ್ ಬೌದ್ಧ ಮಠದ ಸನ್ಯಾಸಿಗಳು ಈ ಅಲ್ಚಿ ಮಠದ ನಿರ್ವಹಣೆ ಮಾಡುತ್ತಿದ್ದಾರೆ. ಈ ಮಠದಲ್ಲಿ ಛಾಯಾಚಿತ್ರಣವನ್ನು ನಿಷೇಧಿಸಲಾಗಿದ್ದು, ವಿದ್ಯುತ್ ಸಂಪರ್ಕ ಇನ್ನೂ ಇಲ್ಲದಿರುವ ಕಾರಣ ಪ್ರವಾಸಿಗರು ಟಾರ್ಚ್ ಗಳನ್ನು ಹಿಡಿದು ಪ್ರವೇಶ ಪಡೆಯಬಹುದಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat