• Follow NativePlanet
Share
» »ಚತುರ್ಭುಜಾ ದೇವಾಲಯವು ನಿಮ್ಮ ಮುಂದಿನ ಗಮ್ಯಸ್ಥಾನ ವಾಗಿರಬೇಕು ಏಕೆ

ಚತುರ್ಭುಜಾ ದೇವಾಲಯವು ನಿಮ್ಮ ಮುಂದಿನ ಗಮ್ಯಸ್ಥಾನ ವಾಗಿರಬೇಕು ಏಕೆ

Posted By: Manjula Balaraj Tantry

ಮಧ್ಯಪ್ರದೇಶದಲ್ಲಿ ಒರಛಾ ಇದ್ದು, ಇದು ಒಂದು ಕಾಲದ ಅಂದರೆ ರಜಪೂತರ ಕಾಲದಲ್ಲಿಯ ಅತೀ ದೊಡ್ಡ ರಾಜಕೀಯ ಕೇಂದ್ರವಾಗಿತ್ತು. ಆದರೆ ಈಗ ಇದು ಒಂದು ಸಾವಿರಾರು ಭವ್ಯವಾದ ಅದ್ಬುತಗಳನ್ನು ಒಳಗೊಂಡ ಪ್ರಸಿದ್ದವಾದ ಪ್ರವಾಸಿ ತಾಣವೆನಿಸಿದೆ. ಅಂತಹ ಅದ್ಬುತಗಳಲ್ಲಿ ಚತುರ್ಭುಜ ದೇವಾಲಯವೂ ಒಂದಾಗಿದ್ದು, ಇದು ವಿವರಿಸಲು ಯೋಗ್ಯವಾದ ಆಸಕ್ತಿದಾಯಕ ಕಥೆಗಳನ್ನೊಳಗೊಂಡಿದೆ.

ನಿಸ್ಸಂದೇಹವಾಗಿಯೂ ಭಾರತದ ಪ್ರತೀ ರಾಜ್ಯದವೂ ಐತಿಹಾಸಿಕ ಮತ್ತು ನವಯುಗದ ರತ್ನಗಳನ್ನು ಹೊಂದಿದ್ದು, ಇದು ಇಲ್ಲಿಗೆ ಭೇಟಿ ಕೊಡುವ ಸಂದರ್ಶಕರನ್ನು ಮತ್ತು ಪ್ರಶಂಸಕರನ್ನು ಪ್ರತೀ ಬಾರಿಯೂ ಅವುಗಳ ಭವ್ಯತೆಯಿಂದ ಅಚ್ಚರಿಪಡಿಸುತ್ತವೆ.

ಮಧ್ಯಪ್ರದೇಶ ಅಂತಹ ರಾಜ್ಯಗಳಲ್ಲಿಒಂದಾಗಿದ್ದು ಇಲ್ಲಿ ಪ್ರಾಚೀನ ಅದ್ಬುತಗಳ ಗಣಿಯನ್ನೇ ಹೊಂದಿದೆ. ಸಾವಿರಾರು ವರ್ಷ ಹಳೆಯದಾದ ಪುರಾತತ್ವ ಶಾಸ್ತ್ರಗಳ ತಾಣಗಳಿಂದ ಹಿಡಿದು ನೂರಾರು ವರ್ಷ ಹಳೆಯದಾದ ಸುಂದರವಾದ ಮತ್ತು ಅದ್ಬುತವಾದ ಸ್ಮಾರಕಗಳವರೆಗೆ ಭಾರತದ ಹೃದಯ ಭಾಗದಲ್ಲಿರುವ ಈ ರಾಜ್ಯವು ತನ್ನಲ್ಲಿ ದೇಶದಲ್ಲಿರಬೇಕಾದ ಎಲ್ಲ ಅದ್ಬುತಗಳನ್ನೂ ಹೊಂದಿದೆ.

ಮಧ್ಯಪ್ರದೇಶದಲ್ಲಿ ಒರಛಾ ಇದ್ದು, ಇದು ಒಂದು ಕಾಲದ ಅಂದರೆ ರಜಪೂತರ ಕಾಲದಲ್ಲಿಯ ಅತೀ ದೊಡ್ಡ ರಾಜಕೀಯ ಕೇಂದ್ರವಾಗಿತ್ತು. ಆದರೆ ಈಗ ಇದು ಒಂದು ಸಾವಿರಾರು ಭವ್ಯವಾದ ಅದ್ಬುತಗಳನ್ನು ಒಳಗೊಂಡ ಪ್ರಸಿದ್ದವಾದ ಪ್ರವಾಸಿ ತಾಣವೆನಿಸಿದೆ.

ಅಂತಹ ಅದ್ಬುತಗಳಲ್ಲಿ ಚತುರ್ಭುಜ ದೇವಾಲಯವೂ ಒಂದಾಗಿದ್ದು, ಇದು ವಿವರಿಸಲು ಯೋಗ್ಯವಾದ ಆಸಕ್ತಿದಾಯಕ ಕಥೆಗಳನ್ನೊಳಗೊಂಡಿದೆ. ನೀವು ಇದಕ್ಕೆ ಸಂಭಂದಿಸಿದ ಕಥೆಗಳನ್ನು ಕೇಳ ಬಯಸುವಿರಾ? ಸರಿ ಹಾಗಿದ್ದಲ್ಲಿ ಚತುರ್ಭುಜ ದೇವಾಲಯದ ಬಗ್ಗೆ ಹೆಚ್ಚಿನದನ್ನು ತಿಳಿಯಲು ಇಲ್ಲಿ ಓದಿ.

ಚತುರ್ಭುಜ ದೇವಾಲಯಕ್ಕೆ ಭೇಟಿ ಕೊಡಲು ಸೂಕ್ತ ಸಮಯ

ಚತುರ್ಭುಜ ದೇವಾಲಯಕ್ಕೆ ಭೇಟಿ ಕೊಡಲು ಸೂಕ್ತ ಸಮಯ

PC- Yann

ಚತುರ್ಭುಜ ದೇವಾಲಯದ ಸುತ್ತಲೂ ತೀವ್ರ ಬಗೆಯ ತಾಪಮಾನವು ಇರುತ್ತದೆ. ಆದುದರಿಂದ ಚತುರ್ಭುಜ ದೇವಾಲಯಕ್ಕೆ ಬೇಸಿಗೆ ಕಾಲದಲ್ಲಿ ಭೇಟಿ ಕೊಡುವುದು ಹೆಚ್ಚು ಸೂಕ್ತವಲ್ಲ. ನೀವು ದೇವಾಲಯದ ಸುತ್ತಲೂ ಅನುಕೂಲಕರ ವಾತಾವರಣದಲ್ಲಿ ತಿರುಗಾಡಲು ಬಯಸಿದಲ್ಲಿ, ಚತುರ್ಭುಜ ದೇವಾಲಯಕ್ಕೆ ಭೇಟಿ ಕೊಡಲು ಸೂಕ್ತವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಕೊನೆಯವರೆಗೆ.

ಚತುರ್ಭುಜ ದೇವಾಲಯದ ಭವ್ಯ ಇತಿಹಾಸ

ಚತುರ್ಭುಜ ದೇವಾಲಯದ ಭವ್ಯ ಇತಿಹಾಸ

PC- Brian Gratwicke

ಈ ದೇವಾಲಯದ ನಿರ್ಮಾಣವು ರಜಪೂತ ರಾಜ ಮಧುಕರ್ ಶಹಾ ಅವರಿಂದ ಪ್ರಾರಂಭವಾಗಿ ನಂತರ ಇದನ್ನು ಅವರ ಮಗ ವೀರ್ ಸಿಂಗ್ ದಿಯೋ ಅವರಿಂದ ಪೂರ್ಣಗೊಂಡಿತು ಇದರ ಇತಿಹಾಸವು 16 ನೇ ಶತಮಾನಗಳಷ್ಟು ಹಳೆಯದಾಗಿದ್ದು ಆಗ ರಜಪೂತರು ಬುಂದೇಲ್ ಖಂಡ ಪ್ರದೇಶವನ್ನು ಆಳುತ್ತಿದ್ದರು. ಚತುರ್ಭುಜ ದೇವಾಲಯದ ಅಭಿವೃದ್ದಿಯ ಕಥೆಯು ಆಸಕ್ತಿದಾಯಕವಾದುದಾಗಿದೆ.

ಮಧುಕರ್ ಷಹಾ ಅವರ ಪತ್ನಿ ಗಣೇಶ್ ಕುವಾರಿ ಅವರಿಗೆ ಕನಸಿನಲ್ಲಿ ರಾಮ ದೇವರು ತಮ್ಮ ದೇವಾಲಯವನ್ನು ಕಟ್ಟಿಸಲು ಆದೇಶ ಮಾಡಿದುದರ ಪರಿಣಾಮವಾಗಿ ಈ ದೇವಾಲಯದ ನಿರ್ಮಾಣವನ್ನು ಪ್ರಾರಂಭ ಮಾಡಲಾಯಿತು ಎನ್ನಲಾಗುತ್ತದೆ. ಈ ನಿರ್ಮಾಣವು ಪ್ರಾರಂಭಿಸಿದ ನಂತರ ರಾಣಿ ಗಣೇಶ್ ಕುವಾರಿಯವರು ರಾಮ ದೇವರ ಪ್ರತಿಮೆಯನ್ನು ತರಲು ಮತ್ತು ಈ ದೇವಾಲಯದಲ್ಲಿ ಸ್ಥಾಪಿಸಲು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.

ದೇವಾಲಯದ ಕೆಲಸವು ಪೂರ್ಣಗೊಂಡು ಉದ್ಘಾಟನೆಯಾಗುವವರೆಗೆ ಈ ದೇವರ ಪ್ರತಿಮೆಯನ್ನು ರಾಣಿಯು ತನ್ನೊಂದಿಗೆ ಅರಮನೆಯಲ್ಲಿಯೇ ಇರಿಸಿಕೊಂಡರು ಆದರೆ ಆಶ್ಚರ್ಯವೆನ್ನುವಂತೆ ಈ ಪ್ರತಿಮೆಯು ಇಟ್ಟ ಜಾಗದಿಂದ ಕದಲಿಸಲಾಗದೇ ಇರುವ ಕಾರಣದಿಂದ ಅದು ಅರಮನೆಯಲ್ಲಿಯೇ ಉಳಿದುಕೊಂಡಿತು. ಇಂದಿಗೂ ರಾಮನ ಅದೇ ಪ್ರತಿಮೆಯು ಅರಮನೆಯ ಒಳಗೆ ಇರುವುದರಿಂದ ಈ ಅರಮನೆಯು ರಾಮ್ ರಾಜಾ ದೇವಾಲಯವೆಂದು ಕರೆಯಲ್ಪಡುತ್ತದೆ.

ಚತುರ್ಭುಜ ದೇವಾಲಯವು ಅನೇಕ ವರ್ಷಗಳವರೆಗೆ ಯಾವುದೇ ದೇವರ ಮೂರ್ತಿ ಇಲ್ಲದೆ ಖಾಲಿಯಾಗಿತ್ತು. ಆದರೆ ಇಂದು ಈ ಭವ್ಯವಾದ ದೇವಾಲಯದಲ್ಲಿ ಇಲ್ಲಿ ರಾಧಾಕೃಷ್ಣರ ಮೂರ್ತಿಯನ್ನು ಪೂಜಿಸಲಾಗುತ್ತದೆ.

ದೇವಾಲಯದ ಕಟ್ಟಡ ವಿನ್ಯಾಸ ಶೈಲಿ

ದೇವಾಲಯದ ಕಟ್ಟಡ ವಿನ್ಯಾಸ ಶೈಲಿ

PC- Manuel Menal

ಇದರ ನಿರ್ಮಾಣದ ಹಿಂದೆ ಇರುವ ಮಹಾಕಾವ್ಯದ ಕಥೆಗಳಲ್ಲದೆ, ಚತುರ್ಭುಜ ದೇವಾಲಯವು ಅದರ ಅತ್ಯುತ್ತಮವಾದ ವಾಸ್ತುಶಿಲ್ಪವನ್ನು ಹೊಂದಿದೆ. ಈ ಅರಮನೆಯು ದೋಷರಹಿತ ದೇವಾಲಯ ಮತ್ತು ಕೋಟೆಗಳನ್ನೊಳಗೊಂಡ ಮಿಶ್ರಣವಾಗಿದೆ. ಚತುರ್ಭುಜ ದೇವಾಲಯವು ತನ್ನ ಅಪ್ರತಿಮ ರಚನೆ ಆಕರ್ಷಣೀಯ ವಿನ್ಯಾಸಗಳಿಂದಾಗಿ ಒರಛಾ ದಲ್ಲಿರುವ ಈ ದೇವಾಲಯವು ಹೆಚ್ಚು ಭೇಟಿ ಕೊಡಲ್ಪಡುವ ತಾಣಗಳಲ್ಲೊಂದಾಗಿದೆ.

ಕಮಲದ ಚಿಹ್ನೆಗಳಿಂದ ಅಲಂಕರಿಸಲ್ಪಟ್ಟ ಮತ್ತು ಒಂದು ಜಾತಿಯ ಮಾದರಿಗಳನ್ನು ಪ್ರದರ್ಶಿಸುವ, ಚತುರ್ಭುಜ ದೇವಾಲಯವು ಒಂದು ಎತ್ತರದ ವೇದಿಕೆ ಮೇಲೆ ಕಟ್ಟಲಾದ ಬಾಸಲಿಕಾ ಮಾದರಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದು 105-ಮೀಟರ್ ಎತ್ತರದ, ಬಹು-ಮಹಡಿ ಕಟ್ಟಡವಾಗಿದೆ.ಈ ವಿಸ್ಮಯಕಾರೀ ದೇವಾಲಯದ ವೈಶಿಷ್ಟ್ಯವೆಂದರೆ , ಇದು ಅನೇಕ ದೊಡ್ಡದಾದ ಕೋಣೆಗಳು , ಆಕಾಶದೆತ್ತರದ ಗೋಪುರಗಳು, ಅಂಕುಡೊಂಕಾದ ಮೆಟ್ಟಿಲುಗಳು, ಕಲ್ಲಿನ ಗೋಡೆಗಳು ಮತ್ತು ಇನ್ನೂ ಹಲವಾರು ಅದ್ಬುತವಾದ ಭಾಗಗಳನ್ನೊಳಗೊಂಡಿದೆ. ನೀವು ಈ ವರೆಗೆ ಕೋಟೆ ದೇವಾಲಯಕ್ಕೆ ಭೇಟಿ ನೀಡಿಲ್ಲವಾದಲ್ಲಿ ಚತುರ್ಭುಜ ದೇವಾಲಯವು ಖಚಿತವಾಗಿಯೂ ನೀವು ಹೋಗಬಯಸುವ ಸ್ಥಳವಾಗಿದೆ.

ಚತುರ್ಭುಜ ದೇವಾಲಯದ ಸುತ್ತಲೂ ಭೇಟಿ ಕೊಡಬಹುದಾದ ಸ್ಥಳಗಳು

ಚತುರ್ಭುಜ ದೇವಾಲಯದ ಸುತ್ತಲೂ ಭೇಟಿ ಕೊಡಬಹುದಾದ ಸ್ಥಳಗಳು

PC- Brian Gratwicke

ಒರಛಾ ನಗರವು ತನ್ನ ಸುತ್ತ ಮುತ್ತಲೂ ಅನೇಕ ಐತಿಹಾಸಿಕ ಅರಮನೆಗಳು ಮತ್ತು ದೇವಾಲಯಗಳನ್ನೊಳಗೊಂಡಿದೆ. ಚತುರ್ಭುಜ ದೇವಾಲಯಕ್ಕೆ ಭೇಟಿ ಕೊಡುವುದಲ್ಲದೆ, ನೀವು ಇಲ್ಲಿ ಜಹಾಂಗೀರ್ ಮಹಲ್, ಲಕ್ಷ್ಮಿ ದೇವಾಲಯ, ರಾಮ್ ರಾಜಾ ದೇವಾಲಯ ಮತ್ತು ಇನ್ನೂ ಅನೇಕ ಪ್ರಾಚೀನ ಕಟ್ಟಡಗಳನ್ನು ಒರಛಾದಲ್ಲಿ ಕಾಣಬಹುದಾಗಿದೆ.

ಚತುರ್ಭುಜ ದೇವಾಲಯದ ಸುತ್ತಮುತ್ತಲೂ ಅನೇಕ ಮಾರ್ಗಗಳು ಪ್ರಾಚೀನ ದಂತಕತೆಯ ನಾಡಿಗೆ ಕರೆದೊಯ್ಯುತ್ತದೆ. ಇದು ಬುಂದೇಲ್ ಖಂಡ ಪ್ರ್ಯಾಂತ್ಯದಲ್ಲಿರುವ ಪ್ರಾಚೀನ ಹಿಂದೂ ರಜಪೂತರ ರಾಜವಂಶಸ್ಥರ ರಾಜ್ಯವಾಗಿತ್ತು. ಈ ಪಟ್ಟಣದ ಹಿಂದಿನ ಹೆಮ್ಮೆಯ ಕಥೆಗಳು ಈಗಲೂ ಇದರ ಸುತ್ತ ಸುತ್ತುತ್ತಿದೆ. ಆದ್ದರಿಂದ, ಅತ್ಯಾಕರ್ಷಕ ಸೆಳೆತವನ್ನು ಹೊಂದಿರುವ ಈ ಅದ್ಭುತ ಸ್ಥಳಕ್ಕೆ ಏಕೆ ಭೇಟಿ ನೀಡಬಾರದು?

ಚತುರ್ಭುಜ ದೇವಾಲಯಕ್ಕೆ ತಲುಪುವುದು ಹೇಗೆ ವಿವರವಾದ ಮಾಹಿತಿಗಾಗಿ ಇಲ್ಲಿಯ ನಕ್ಷೆ ಪರಿಶೀಲಿಸಿ.

ಚತುರ್ಭುಜ ದೇವಾಲಯಕ್ಕೆ ತಲುಪುವುದು ಹೇಗೆ ವಿವರವಾದ ಮಾಹಿತಿಗಾಗಿ ಇಲ್ಲಿಯ ನಕ್ಷೆ ಪರಿಶೀಲಿಸಿ.

ವಾಯುಮಾರ್ಗ ಮೂಲಕ : ನೀವು ಖುಜರಾಹೋ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಪ್ರಯಾಣಿಸಬಹುದು ಈ ವಿಮಾನ ನಿಲ್ದಾಣದಿಂದ ಚತುರ್ಭುಜ ದೇವಾಲಯವು ಸುಮಾರು 170 ಕಿ.ಮೀ ಅಂತರದಲ್ಲಿದೆ. ನೀವು ಇಲ್ಲಿಂದ ಬಸ್ಸು ಮೂಲಕ ಅಥವಾ ಕ್ಯಾಬ್ ಮೂಲಕ ಒರಛಾಗೆ ಪ್ರಯಾಣಿಸಬಹುದಾಗಿದೆ.

ರೈಲು ಮಾರ್ಗ: ಚತುರ್ಭುಜ ದೇವಾಲಯಕ್ಕೆ ಹತ್ತಿರವಿರುವುದ ರೈಲು ನಿಲ್ದಾಣ ಝಾನ್ಸಿ ಯಾಗಿದ್ದು ಇದು 17 ಕಿ.ಮೀ ದೂರದಲ್ಲಿದೆ. ನೀವು ಝಾನ್ಸಿ ರೈಲು ನಿಲ್ದಾಣದಿಂದ ರೈಲು ಹತ್ತಿ ಒರಛಾ ತಲುಪಬಹುದು.

ರಸ್ತೆಯ ಮೂಲಕ: ಓರಛಾದಲ್ಲಿರುವ ಚತುರ್ಭುಜ್ ದೇವಾಲಯವು ರಸ್ತೆ ಮೂಲಕ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ, ಆದ್ದರಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ