Search
  • Follow NativePlanet
Share
ಮುಖಪುಟ » ಸ್ಥಳಗಳು» ಝಾನ್ಸಿ

ಝಾನ್ಸಿ : ವೀರ ನಾರಿಯ ಹೆಮ್ಮೆಯ ತಾಣ

22

ಝಾನ್ಸಿಯು ಇದು ಉತ್ತರ ಪ್ರದೇಶ ರಾಜ್ಯದ ಬುಂದೇಲಖಂಡ ಪ್ರದೇಶದ ಮಹಾದ್ವಾರ ಎಂದೇ ಪರಿಗಣಿಸಲ್ಪಡುತ್ತದೆ. ಇದು ಚಂದೇಲರ ಅವಧಿಯಲ್ಲಿ ವೈಭವದ ತುತ್ತುತುದಿಗೇರಿತು. ಆದರೆ ಸುಮಾರು ಹನ್ನೊಂದನೇ ಶತಮಾನದಲ್ಲಿ ಇವರ ಸಾಮ್ರಾಜ್ಯವು ಅವನತಿ ಕಂಡ ನಂತರ ಇದು ತನ್ನ ತೇಜಸ್ಸನ್ನು ಕಳೆದುಕೊಂಡಿತು. 17 ನೇ ಶತಮಾನದಲ್ಲಿ ರಾಜ ಬೀರ ಸಿಂಗ ದೇವ ಅವರ ಕಾಲಾವಧಿಯಲ್ಲಿ ಈ ಪ್ರದೇಶದ ವೈಭವವು ಮತ್ತೆ ತುತ್ತು ತುದಿಗೇರಿತು.  ರಾಜ ಬೀರ ಸಿಂಗ ದೇವನು ಜಹಾಂಗೀರನಿಗೆ ಆಪ್ತನಾಗಿದ್ದನು.

ಝಾನ್ಸಿ ಎಂದ ತಕ್ಷಣ ನಮ್ಮ ನೆನೆಪಿಗೆ ಬರುವುದು ವೀರ ಮಹಿಳೆ ರಾಣಿ ಲಕ್ಷ್ಮಿ ಬಾಯಿ. ಈಕೆ 1857 ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಪ್ರಮುಖ ಪಾತ್ರವನ್ನು ವಹಿಸಿದ್ದಳು. ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಈಕೆ ಕೆಲವು ಪಡೆಗಳ ನೇತ್ರತ್ವವನ್ನು ವಹಿಸಿದ್ದಳು. ಝಾನ್ಸಿಯ ಮಹಾರಾಜನಾಗಿದ್ದ ರಾಜ ಗಂಗಾಧರನನ್ನು ವಿವಾಹವಾಗಿದ್ದಳು. ಈ ದಂಪತಿಗಳಿಗೆ ಯಾವುದೇ ಮಕ್ಕಳಿರಲಿಲ್ಲ. ರಾಜ ಗಂಗಾಧರನ ಮರಣದ ನಂತರ ಬ್ರಿಟಿಷರು ಝಾನ್ಸಿಯ ಮಹಾರಾಣಿ ಲಕ್ಷ್ಮಿಯನ್ನು ಮಕ್ಕಳಿಲ್ಲದ ಕಾರಣಕ್ಕೆ ಶೋಷಣೆಗೆ ಒಳಪಡಿಸಿ, ದತ್ತು ಮಕ್ಕಳಿಗೆ ಅವಕಾಶವಿಲ್ಲ ಎಂದು ಹೇಳಿದರು. ಝಾನ್ಸಿಯ ಸಿಂಹಾಸನವನ್ನು ತಮಗೆ ಬಿಟ್ಟು ಕೊಡಬೇಕು ಎಂದು ಒತ್ತಡ ಹೇರಿದರು.

ಇದನ್ನು ರಾಣಿ ಲಕ್ಷ್ಮಿ ಬಾಯಿಯು ಒಪ್ಪಲಿಲ್ಲ. ಬ್ರಿಟಿಷರು ಝಾನ್ಸಿಯ ಕೋಟೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ಆಕೆ ಅದಕ್ಕೆ ತೀವೃ ಪ್ರತಿರೋಧವನ್ನು ಒಡ್ಡಿದಳು. 1857 ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಬ್ರಿಟಿಷರ ಸೈನ್ಯ ಪಡೆ ಶಕ್ತಿಶಾಲಿಯಾಗಿತ್ತು. ಕೊನೆಗೆ ಆಕೆ ರಣರಂಗದಿಂದ ತನ್ನ ದತ್ತು ಮಗನೊಂದಿಗೆ ಪಲಾಯನಗೈದು ಗ್ವಾಲಿಯರನಲ್ಲಿ ಇನ್ನೊಂದು ಪಡೆಯೊಂದಿಗೆ ಸೇರಿಕೊಂಡಳು. ಆದರೆ ದುರದೃಷ್ಟವಶಾತ ಅಲ್ಲಿ ಅವಳಿಗಾಗಿ ಸಾವು ಕಾದು ಕುಳಿತಿತ್ತು. ರಣರಂಗದಲ್ಲಿ ಹೋರಾಡುತ್ತಲೇ ಆಕೆ ವೀರ ಮರಣವನ್ನು ಅಪ್ಪಿದಳು. ಈಕೆ “ಭಾರತದ ಜೋನ ಆಫ ಆರ್ಕ” ಎಂದೇ ಪ್ರಸದ್ದಿಯನ್ನು ಪಡೆದಿದ್ದಾಳೆ. ಝಾನ್ಸಿಯು ಇತಿಹಾಸದ ಹೊರತಾಗಿಯೂ ಈಗ ಝಾನ್ಸಿ ಉತ್ಸವದ ಕಾರಣದಿಂದಾಗಿ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಝಾನ್ಸಿ ಉತ್ಸವವು ಪ್ರತಿವರ್ಷ ಫೆಬ್ರುವರಿ – ಮಾರ್ಚನಲ್ಲಿ ಜರುಗುತ್ತದೆ.

ಝಾನ್ಸಿ - ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಝಾನ್ಸಿಯಲ್ಲಿ ಕಂಡು ಬರುವ ಬಹುತೇಕ ಪ್ರವಾಸಿ ಸ್ಥಳಗಳು ಐತಿಹಾಸಿಕ ಸ್ವರೂಪವುಳ್ಳವುಗಳಾಗಿವೆ. ಝಾನ್ಸಿಯ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿರುವ ಭವ್ಯವಾದ ಕೋಟೆ. ಇದು ರಾಣಿ ಲಕ್ಷ್ಮಿ ಬಾಯಿ ಮತ್ತು ಬ್ರಿಟಿಷರ ನಡುವೆ ನಡೆದ ಕಾಳಗಕ್ಕೆ ಸಾಕ್ಷಿಯಾಗಿದೆ. ನೀವು ಪರಿಚ್ಚಾ ಎಂಬ ರಮಣೀಯವಾದ ಆಣೆಕಟ್ಟು ಉಳ್ಳ ಪ್ರದೇಶಕ್ಕೆ ಭೇಟಿ ನೀಡಬಹುದು. ಜಿಲ್ಲೆಯಲ್ಲಿ ಇದೊಂದು ವಸಾಹುತ ಸ್ಥಳದ ಹೆಸರಾಗಿದ್ದು,ಇಲ್ಲಿ ಪ್ರಸಿದ್ಧವಾದ ದೇವಸ್ಥಾನಗಳು, ಮಸೀದಿಗಳು ಮತ್ತು ಭೌದ್ಧ ಸಂನ್ಯಾಸಿಗಳ ಮಠಗಳಿವೆ.

ಝಾನ್ಸಿಯಲ್ಲಿರುವ ವಸ್ತು ಸಂಗ್ರಹಾಲಯಕ್ಕೆ ನೀವು ಭೇಟಿ ನೀಡಿದರೆ, ನಿಮಗೆ ಅಲ್ಲಿ ಭೂತಕಾಲದ ಅದ್ಭುತ ಲೋಕವೇ ತೆರೆಯುತ್ತದೆ. ಹೆಸರೇ ಸೂಚಿಸುವಂತೆ ರಾಣಿ ಮಹಲ್ ಎಂದರೆ ರಾಣಿ ಲಕ್ಷ್ಮಿ ಬಾಯಿಯು ವಾಸಿಸುತ್ತಿದ್ದ ಅರಮನೆ. ಇದು ಇತಿಹಾಸದ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಹಲವರು ರಾಣಿ ಲಕ್ಷ್ಮಿ ಬಾಯಿಯನ್ನು ಇದೇ ಅರಮನೆಯಲ್ಲಿ ಭೇಟಿಯಾಗುತ್ತಿದ್ದರು. ಝಾನ್ಸಿ ನಗರದಲ್ಲಿ ನೀವು ಬರುವಾ ಸಾಗರ ಸರೋವರವನ್ನು ನೋಡಬಹುದು. ಇದು ಬೇತ್ವಾ ನದಿಯ ತೀರದ ಮೇಲೆ ನೆಲೆಗೊಂಡಿದೆ.

ಪ್ರಸಿದ್ಧ ಕವಿಯಾದ ಮೈಥಿಲಿ ಶರಣ ಗುಪ್ತರ ಜನ್ಮ ಸ್ಥಳವು ಚೀರಗಾಂವ ಹತ್ತಿರದಲ್ಲಿದೆ. ಓರ್ಚಾ ಇದು ತನ್ನ ಕೋಟೆಗೆ ಪ್ರಸಿದ್ಧಿಯನ್ನು ಪಡೆದಿದೆ. ಝಾನ್ಸಿಯ ಸಿವಿಲ್ ಲೇನ್‍ಗಳ ಮೇಲೆ ಇರುವ ಸೆಂಟ್ ಜ್ಯೂಡ್ ಚರ್ಚು ಇದು ಕೂಡ ಪ್ರಸಿದ್ದ ಪ್ರವಾಸಿ ಕೇಂದ್ರವಾಗಿದ್ದು, ಕ್ಯಾಥೋಲಿಕ್ ಕ್ರಿಶ್ಚಿಯನರಿಗೆ ಒಂದು ಪವಿತ್ರ ಸ್ಥಳವಾಗಿದೆ. ಝಾನ್ಸಿಯಲ್ಲಿ ನೀವು ಇನ್ನು  ಅನೇಕ ಆಕರ್ಷಣೆಗಳನ್ನು ಕಾಣಬಹುದು. ಮಹಾರಾಜ ಗಂಗಾಧರರವರ ಛತ್ತರಿ, ಗಣೇಶ ಮಂದಿರ, ಮತ್ತು ಮಹಾಲಕ್ಷ್ಮಿ ದೇವಸ್ಥಾನ ಇನ್ನು ಮುಂತಾದ ಅನೇಕ ಆಕರ್ಷಣೆಗಳು ಇಲ್ಲಿವೆ. ಇಲ್ಲಿ ನಡೆಯುವ ಝಾನ್ಸಿ ಮಹೋತ್ಸವದಲ್ಲಿ ನೀವು ಈ ಪ್ರದೇಶದ ಸುಂದರವಾದ ಕಲೆ ಮತ್ತು ಕರಕುಶಲ ವಸ್ತುಗಳನ್ನು ನೋಡಿ ಆನಂದ ಪಡೆಯುವ ಅವಕಾಶವನ್ನು ಪಡೆಯಬಹುದು. ಝಾನ್ಸಿಯನ್ನು ತಲುಪುವುದು ಹೇಗೆ?

ಝಾನ್ಸಿಯನ್ನು ನೀವು ರಸ್ತೆ, ರೇಲ್ವೆ ಮತ್ತು ವಿಮಾನ ಯಾನದ ಮೂಲಕ ತಲುಪಬಹುದು. ಝಾನ್ಸಿಗೆ ಹತ್ತಿರ ಇರುವ ವಿಮಾನ ನಿಲ್ದಾಣ ಎಂದರೆ ಗ್ವಾಲಿಯರ.

ಝಾನ್ಸಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ ಯಾವುದು?

ನವಂಬರ ನಿಂದ ಮಾರ್ಚನವರೆಗೆ ಝಾನ್ಸಿಗೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ.

ಝಾನ್ಸಿ ಪ್ರಸಿದ್ಧವಾಗಿದೆ

ಝಾನ್ಸಿ ಹವಾಮಾನ

ಉತ್ತಮ ಸಮಯ ಝಾನ್ಸಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಝಾನ್ಸಿ

  • ರಸ್ತೆಯ ಮೂಲಕ
    ಝಾನ್ಸಿಯು ಉತ್ತರ ಪ್ರದೇಶದ ಪ್ರಮುಖ ನಗರಗಳು ಮತ್ತು ದೇಶದ ಇತರ ಪ್ರಮುಖ ನಗರಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ 25 ಮತ್ತು 26 ರ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಝಾನ್ಸಿ ನಗರವು ಭಾರತದ ಇತರ ಪ್ರಮುಖ ನಗರಗಳೊಂದಿಗೆ ಉತ್ತಮ ರೇಲ್ವೆ ಸೌಲಭ್ಯದ ಮೂಲಕ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ಝಾನ್ಸಿ ಕಂಟೋನ್ಮೆಂಟ ರೇಲ್ವೆ ಸ್ಟೇಷನ ಝಾನ್ಸಿಗೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ಇಲ್ಲಿ ಶತಾಬ್ದಿ ಎಕ್ಸಪ್ರೆಸ್ಸ ಸೇರಿದಂತೆ ಭಾರತದ ಹಲವಾರು ವೇಗಯುತವಾದ ಐಷರಾಮಿ ರೈಲುಗಳ ಸೌಲಭ್ಯ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಝಾನ್ಸಿಗೆ ಹತ್ತಿರ ಇರುವ ವಿಮಾನ ನಿಲ್ದಾಣ ಎಂದರೆ ಗ್ವಾಲಿಯರ್ ವಿಮಾನ ನಿಲ್ದಾಣ. ಇದು ಝಾನ್ಸಿ ಇಂದ 98 ಕೀಲೋ ಮೀಟರ ದೂರದಲ್ಲಿದೆ. ನೀವು ಇಲ್ಲಿಂದ ಸಾರ್ವಜನಿಕ ಸಾರಿಗೆ ಬಸ್ ಮುಖಾಂತರ ಝಾನ್ಸಿಯನ್ನು ಸುಲಭವಾಗಿ ತಲುಪಬಹುದು. ಆಥವಾ ಖಾಸಗಿ ಟ್ಯಾಕ್ಸಿಯನ್ನು ಸಹ ಬಳಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City