Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಹವಾಮಾನ

ಝಾನ್ಸಿ ಹವಾಮಾನ

ಉತ್ತರ ಭಾರತದ ಅನೇಕ ನಗರಗಳಂತೆ ಝಾನ್ಸಿಗೆ ಭೇಟಿ ಕೊಡುವ ಅತ್ಯುತ್ತಮ ಸಮಯ ಎಂದರೆ ನವಂಬರ ನಿಂದ ಮಾರ್ಚ ತಿಂಗಳು. ಈ ಸಮಯದಲ್ಲಿ ಹವಾಮಾನವು ಶಾಂತ ಮತ್ತು ಅಹ್ಲಾದಕತೆಯಿಂದ ಕೂಡಿರುತ್ತದೆ. ಮತ್ತು ಉಳಿದ ತಿಂಗಳು ಝಾನ್ಸಿ ನಗರವು ಉಷ್ಣತೆ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಈ ನಗರವು ಫೆಬ್ರುವರಿ ಮತ್ತು ಮಾರ್ಚ ತಿಂಗಳಲ್ಲಿ ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಪ್ರಸಿದ್ಧ ಝಾನ್ಸಿ ಮಹೋತ್ಸವವು ಬಹು ವಿಜೃಂಭಣೆಯಿಂದ ಜರುಗುತ್ತದೆ.

ಬೇಸಿಗೆಗಾಲ

ಮಾರ್ಚ ನಿಂದ ಮೇ ವರೆಗೆ ಇಲ್ಲಿ ಬೇಸಿಗೆ ಕಾಲ ಇರುತ್ತದೆ. ಇಲ್ಲಿಯ ತಾಪಮಾನವು ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ನಿಂದ ಗರಿಷ್ಟ  ಸುಮಾರು 40 ಡಿಗ್ರಿ ಸೆಲ್ಸಿಯಸನವರೆಗೆ ತೂಗಾಡುತಿರುತ್ತದೆ. ಮೇ ತಿಂಗಳು ಅತಿಯಾದ ಉಷ್ಣತೆ ಉಳ್ಳ ತಿಂಗಳಾಗಿದೆ. ಈ ಸಮಯದಲ್ಲಿ ಬೀಸುವ ಅತಿಯಾದ ಬಿಸಿಗಾಳಿಯು ನಮ್ಮ ಇಡಿ ದಿನವನ್ನು ಅಸ್ತವಸ್ತ್ಯವನ್ನಾಗಿ ಮಾಡಬಹುದು.

ಮಳೆಗಾಲ

ಜುಲೈ ನಿಂದ ಸಪ್ಟಂಬರನವರೆಗೆ ಇಲ್ಲಿ ಮಳೆಗಾಲ ಇರುತ್ತದೆ. ಈ ಸಮಯದಲ್ಲಿ ನಗರದಲ್ಲಿ ಮೇಲಿಂದ ಮೇಲೆ ಭಾರಿ ಮಳೆ ಬೀಳುತ್ತದೆ. ಆಕಾಶವು ಮೋಡಗಳಿಂದ ತುಂಬಿಕೊಂಡಿರುತ್ತದೆ. ಮತ್ತು ಹವಾಮಾನವು ತೇವ ಮತ್ತು ಆದ್ರ್ರತೆಯಿಂದ ಕೂಡಿರುತ್ತದೆ.

ಚಳಿಗಾಲ

ನವಂಬರನಿಂದ ಫೆಬ್ರುವರಿವರೆಗೂ ಇಲ್ಲಿ ಚಳಿಗಾಲ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು ಶಾಂತ ಮತ್ತು ಅಹ್ಲಾದಕತೆಯಿಂದ ಕೂಡಿರುತ್ತದೆ. ಮತ್ತು ತಾಪಮಾನವು 12 ಡಿಗ್ರಿ ಸೆಲ್ಸಿಯಸ ನಿಂದ 20 ಡಿಗ್ರಿ ಸೆಲ್ಸಿಯಸನವರೆಗೆ ಇರುತ್ತದೆ.