India
Search
  • Follow NativePlanet
Share
» »ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!

ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!

ಹಿಂದೂ ಧರ್ಮದ ದೇವರುಗಳಲ್ಲಿ ತಿಮೂರ್ತಿಗಳೆಂದು ಕರೆಯಲ್ಪಡುವ ಬ್ರಹ್ಮ ಮತ್ತು ಶಿವ ದೇವರ ಜೊತೆಗೆ ವಿಷ್ಣು ದೇವರೂ ಒಂದಾಗಿದ್ದು, ಈ ದೇವರನ್ನು ಲೋಕರಕ್ಷಕನೆಂದೂ ಕರೆಯಲಾಗುತ್ತದೆ ಹಾಗೂ ಪ್ರಪಂಚದಾದ್ಯಂತ ಪೂಜಿಸಲ್ಪಸಲಾಗುತ್ತದೆ. ದೇಶದ ಅತ್ಯಂತ ಹಳೇಯ ಪ್ರದೇಶಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಭವ್ಯ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ. ಆದುದರಿಂದ ಕರ್ನಾಟಕದ ಪರಿಧಿಯಲ್ಲಿ ವಿಷ್ಣು ದೇವರನ್ನು ಪೂಜಿಸುವ ಹಲವಾರು ಹಳೆಯ ಹಾಗೂ ಹೊಸದಾಗಿ ನಿರ್ಮಾಣಗೊಂಡ ದೇವಾಲಯಗಳನ್ನು ಕಾಣಬಹುದಾಗಿದೆ. ಕರ್ನಾಟಕಲ್ಲಿಯ ಆಧ್ಯಾತ್ಮಿಕತೆ ಮತ್ತು ವಿಷ್ಣುದೇವರಿಗಿರುವ ಪ್ರಾಮುಖ್ಯತೆಗಳ ಬಗ್ಗೆ ತಿಳಿಯುವ ಕುತೂಹಲವಿದ್ದಲ್ಲಿ, ಈ ಕೆಳಗಿನ ದೇವಾಲಯಗಳಿಗೆ ಖಂಡಿತವಾಗಿಯೂ ಭೇಟಿ ನೀಡಲೇ ಬೇಕು ಇವುಗಳ ಸ್ಥಳ, ಇತಿಹಾಸ ಮತ್ತು ಧಾರ್ಮಿಕ ಪ್ರಾಮುಖ್ಯತೆಗಳ ವಿವರಗಳನ್ನು ಓದಿ ತಿಳಿಯಿರಿ.

cheluvanarayanatemple

1) ಚೆಲುವನಾರಾಯಣ ಸ್ವಾಮಿ ದೇವಾಲಯ - ಮೇಲುಕೋಟೆ

ಮೈಸೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿ ಹಾಗೂ ಕಲ್ಲಿನ ಬೆಟ್ಟದ ಮೇಲಿರುವ ಚೆಲುವನಾರಾಯಣ ಸ್ವಾಮಿ ದೇವಾಲಯವು ಮೇಲುಕೋಟೆಯಲ್ಲಿ ನೆಲೆಸಿದೆ. ಈ ದೇವಾಲಯವು ಕೇವಲ ಧಾರ್ಮಿಕ ಪ್ರಾಮುಖ್ಯತೆಗೆ ಮಾತ್ರವಲ್ಲದೆ ತನ್ನಲ್ಲಿಯ ವಾಸ್ತುಶಿಲ್ಪ ಸೌಂದರ್ಯತೆಗೂ ಹೆಸರುವಾಸಿಯಾಗಿದ್ದು, ಇಲ್ಲಿಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ.
ಹೌದು, ಈ ದೇವಾಲಯವು ತನ್ನಲ್ಲಿ ಸುಂದರವಾದ ವಿನ್ಯಾಸಗಳು, ಮಾದರಿಗಳು ಮತ್ತು ಅದ್ಬುತವಾದ ಕೆತ್ತನೆಗಳನ್ನು ಒಳಗೊಂಡಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, ಈ ದೇವಾಲಯವನ್ನು 16 ಮತ್ತು 17 ನೇ ಶತಮಾನದ ನಡುವೆ ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಹಾಗೂ ದಂತಕಥೆ ಯ ಪ್ರಕಾರ ಈ ದೇವಾಲಯವು ಭಗವಂತನಿಂದಲೇ ನಿರ್ಮಿತವಾದುದಾಗಿದೆ. ಎಂದು ಸ್ಥಳೀಯರಲ್ಲಿ ಜನಪ್ರಿಯವಾಗಿವೆ.

sriranganatha temple

2) ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ

ಕಾವೇರಿ ನದಿಯ ಜೊತೆಗೆ ವೈಷ್ಣವ ಪಂಥದವರ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾದ ರಂಗನಾಥಸ್ವಾಮಿ ದೇವಾಲಯವು ಐತಿಹಾಸಿಕ ಪಟ್ಟಣವಾದ ಶ್ರೀರಂಗಪಟ್ಟಣದಲ್ಲಿದೆ ಮತ್ತು ಇದನ್ನು ಪಶ್ಚಿಮ ಗಂಗಾ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಇಂದಿಗೂ, ದೇವಾಲಯವು ಇನ್ನೂ ಪ್ರಬಲವಾಗಿದೆ ಮತ್ತು ಪ್ರತಿ ವರ್ಷ ಸಾವಿರಾರು ಹಿಂದೂ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಈ ದೇವಾಲಯವು ಶ್ರೀರಂಗಪಟ್ಟಣದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದ್ದು, ಅದರ ಪ್ರಾಚೀನ ವೈಭವ ಮತ್ತು ದೈವಿಕತೆಯು ಭೇಟಿ ನೀಡುವವರನ್ನು ಸೆಳೆಯುವುದರ ಜೊತೆಗೆ ಇಲ್ಲಿಯ ಭವ್ಯವಾದ ವಾಸ್ತುಶೈಲಿಯನ್ನು ಅನ್ವೇಷಿಸಲು ಸಹ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಕಲ್ಲಿನ ಕೆತ್ತನೆಗಳಿಂದ ಸುಂದರವಾದ ವಿನ್ಯಾಸಗಳವರೆಗೆ, ದೇವಾಲಯದ ಪ್ರತಿಯೊಂದು ಮೂಲೆಯನ್ನು ನಿಮ್ಮ ಕ್ಯಾಮರಾದಿಂದ ಸೆರೆಹಿಡಿಯಲು ಅರ್ಹವಾಗಿದೆ.

belurchannakeshava temple

3) ಚೆನ್ನಕೇಶವ ದೇವಾಲಯ, ಬೇಲೂರು

ಇಂದು ರಾಜ್ಯಾದ್ಯಂತ ಎಲ್ಲಾ ಜಾತಿ, ಮತ ಮತ್ತು ಧರ್ಮದ ಜನರು ಪದೇಪದೆ ಭೇಟಿ ನೀಡುವ ಕೆಲವೇ ವಿಷ್ಣು ದೇವಾಲಯಗಳಲ್ಲಿ ಒಂದಾದ ಚೆನ್ನಕೇಶವ ದೇವಾಲಯವು 12 ನೇ ಶತಮಾನದ ದೇವಾಲಯವಾಗಿದ್ದು, ಇದನ್ನು ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಮಹಾಭಾರತ ಮತ್ತು ರಾಮಾಯಣದ ದೃಶ್ಯಗಳು ಮತ್ತು ಬರಹಗಳನ್ನು ಬಳಸಿರುವುದು ಖಂಡಿತವಾಗಿಯೂ ಗಮನಾರ್ಹವಾಗಿದೆ. ಬೀಸುವ ಗಾಳಿಯಲ್ಲಿಯೂ ಒಂದು ದೈವಿಕ ಭಾವನೆಯ ಅನುಭವ ಸಿಗುವಂತಹ ಅದ್ಬುತವಾದ ಸ್ಥಳಗಳಲ್ಲಿ ಇದೂ ಒಂದು. ಆದುದರಿಂದ ಕರ್ನಾಟಕದ ಪ್ರತಿಯೊಬ್ಬ ಪ್ರಯಾಣಿಕನು ಯಾವುದಾದರೂ ವಿಷ್ಣುದೇವಾಲಯಕ್ಕೆ ಭೇಟಿ ಕೊಡಲು ತಪ್ಪಿಸಲೇಬಾರದು ಎನ್ನುವ ಸ್ಥಳವೆಂದರೆ ಅದು ಖಂಡಿತವಾಗಿಯೂ ಬೇಲೂರಿನ ಚೆನ್ನಕೇಶವ ದೇವಾಲಯ.

hampi-the-elegant-stone-chariot-1-1656238582.jpg -Properties

4) ವಿಠ್ಠಲ ದೇವಾಲಯ, ಹಂಪೆ

ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ ಅದರ ವಾಸ್ತುಶಿಲ್ಪ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ಮತ್ತೊಂದು ಸುಂದರವಾದ ವಿಷ್ಣು ದೇವಾಲಯವೆಂದರೆ ಅದು ಹಂಪೆಯ ಪ್ರಮುಖವಾದ ಆಕರ್ಷಣೆಗಳಲ್ಲೊಂದಾದ ವಿಠ್ಠಲ ದೇವಾಲಯ. ಹಂಪೆಯು 15ನೇ ಶತಮಾನದಲ್ಲಿ ವಿಜಯನಗರ ಸಾಮ್ರ್ಯಾಜ್ಯದ ಆಳ್ವಿಕೆಯ ಸಮಯದಲ್ಲಿ ರಾಜಧಾನಿಯಾಗಿತ್ತು ಆ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ಇದರ ವಾಸ್ತುಶಿಲ್ಪವು ದ್ರಾವಿಡ ಶೈಲಿಯಲ್ಲಿದೆ.
ಆದ್ದರಿಂದ, ಇದು ಹಿಂದೂಗಳಲ್ಲಿ ಅತ್ಯಂತ ಗೌರವಾನ್ವಿತ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ಇಂದು ಹೆಚ್ಚಾಗಿ ಇತಿಹಾಸ ಪ್ರಿಯರಿಂದ ಭೇಟಿ ನೀಡುತ್ತಿದ್ದರೂ ಸಹ, ಇದು ನಿಸ್ಸಂಶಯವಾಗಿ ಪ್ರಶಾಂತ ಮತ್ತು ಅಲೌಕಿಕ ಸೆಳವು ಹೊಂದಿದ್ದು ಅನ್ವೇಷಣೆಗೆ ಯೋಗ್ಯವಾಗಿದೆ.

5) ಅನಂತಶಯನ ದೇವಾಲಯ, ಕಾರ್ಕಳ

ಉಡುಪಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಅನಂತಶಯನ ದೇವಾಲಯವು ಒಂದೊಮ್ಮೆ ಅಂದರೆ 15ನೇ ಶತಮಾನದಲ್ಲಿ ಜೈನ ಬಸದಿಯಾಗಿತ್ತು. ಆಧ್ಯಾತ್ಮ ಗುರುಗಳಾದ ಶ್ರೀ ನರಸಿಂಹ ಭಾರತಿ ಸ್ವಾಮಿಜಿಯವರು ನಂತರದ ದಿನಗಳಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರಾಜನನ್ನು ಭೇಟಿ ನೀಡಿ ತಾನು ಈ ಪ್ರದೇಶದಲ್ಲಿ ಇರಬೇಕಾದಲ್ಲಿ ಒಂದು ವಿಷ್ಣು ದೇವರ ದೇವಾಲಯವನ್ನು ನಿರ್ಮಿಸಬೇಕಾಗಿ ಕೋರಿಕೊಂಡರು ಅದಕ್ಕಾಗಿ ಇಲ್ಲಿಯ ಬಸದಿಯನ್ನು ವಿಷ್ಣುವಿನ ದೇವಾಲಯವಾಗಿ ಪರಿವರ್ತಿಸಲಾಯಿತು. ಇಂದು ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉಸ್ತುವಾರಿಯಲ್ಲಿದೆ ಮತ್ತು ಇತರ ಜಿಲ್ಲೆಗಳಿಂದಲೂ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಐತಿಹಾಸಿಕ ತಾಣದ ಒಂದು ನೋಟವನ್ನು ನೋಡಿ ಈ ಋತುವಿನಲ್ಲಿ ಇದನ್ನು ಅನ್ವೇಷಿಸಬೇಕೆಂದು ನಿಮಗೆ ಅನಿಸುವುದಿಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X