Search
  • Follow NativePlanet
Share
» »ಶಂಕರರು ನಮೂದಿಸಿದ 18 ಶಕ್ತಿ ಪೀಠಗಳು

ಶಂಕರರು ನಮೂದಿಸಿದ 18 ಶಕ್ತಿ ಪೀಠಗಳು

By Vijay
Shkati Peethas of Sri Shanakaracharya

ಹಿಂದೂ ಧರ್ಮಗ್ರಂಥಗಳ ಪ್ರಕಾರವಾಗಿ ಶಿವನ ಮಡದಿಯಾದ ಸತಿ ದೇವಿಯು ಯಜ್ಞವೊಂದರಲ್ಲಿ ಅಗ್ನಿಗೆ ಸ್ವಯಂಆಹುತಿಯಾಗಿ ಪ್ರಾಣ ತ್ಯಾಗ ಮಾಡುತ್ತಾಳೆ. ಇದರಿಂದ ಮನನೊಂದ ಶಿವನು ಸತಿಯ ದೇಹವನ್ನು ಹಿಡಿದುಕೊಂಡು ದುಖ, ವೈರಾಗ್ಯಗಳಿಂದ ನರ್ತಿಸತೊಡಗುತ್ತಾನೆ.

ಹೀಗೆ ಸತಿಯ ದೇಹ ಶಿವನ ಕೈಗಳಲ್ಲಿರುವವರೆಗೂ ಶಿವನ ಕೋಪ, ದುಖ ತಣಿಯಲಾರದೆ ಲೋಕವೆ ಸಂಕಷ್ಟಕ್ಕೆ ಸಿಲುಕಬಹುದೆಂದು ದೇವತೆಗಳೆಲ್ಲರು ಅರಿತು ವಿಷ್ಣುವಿನ ಮೊರೆ ಹೋಗುತ್ತಾರೆ.

ಇದರ ಬಾಧ್ಯತೆಗಳನ್ನರಿತ ವಿಷ್ಣುವು, ಸತಿಯ ದೇಹವನ್ನೆ ಅದೃಶ್ಯಮಾಡುವ ಉದ್ದೇಶದಿಂದ ತನ್ನ ಸುದರ್ಶನ ಚಕ್ರಕ್ಕೆ ಸತಿಯ ದೇಹಗಳನ್ನು ಒಂದೊಂದು ಭಾಗಗಳಲ್ಲಿ ತುಂಡರಿಸಿ ವಿಸರ್ಜಿಸಲು ಆಜ್ಞಾಪಿಸುತ್ತಾನೆ. ಈ ರೀತಿ ನರ್ತಿಸುತ್ತಿರುವಾಗ ಸತಿಯ ದೇಹದ ಒಂದೊಂದು ಭಾಗಗಳು ಒಂದೊಂದು ಸ್ಥಳಗಳಲ್ಲಿ ಕಳಚಿ ಬೀಳಲಾರಂಭಿಸುತ್ತವೆ.

ಹೀಗೆ ಸತಿಯ ದೇಹದ ನಾನಾ ಭಾಗಗಳು ಬಿದ್ದ ಸ್ಥಳಗಳೆಲ್ಲವು ಇಂದು ಶಕ್ತಿ ಪೀಠಗಳಾಗಿ, ಶಕ್ತಿ ದೇವಿಯು ಉಪಸ್ಥಿತಿ ಅಲ್ಲಿದ್ದು ಭಕ್ತಿಯಿಂದ ಬೇಡಿ ಬಂದವರ ಬಯಕೆಯನ್ನು ತೀರಿಸುತ್ತಿರುವ ಪುಣ್ಯ ಕ್ಷೇತ್ರಗಳಾಗಿವೆ. ಹಿಂದೂ ಸಂಪ್ರದಾಯದಲ್ಲಿ ಹಲವಾರು ಗ್ರಂಥ, ಪುರಾಣಗಳಿಗನುಸಾರವಾಗಿ 4, 64, 52, 51 ಪೀಠಗಳಿವೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಪೀಠಗಳು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾ ಮುಂತಾದ ಸ್ಥಳಗಳಲ್ಲಿವೆ ಎಂದು ಹೇಳಲಾಗುತ್ತದೆ.

ವಿಶೇಷ ಲೇಖನ : ದೇವಿಗೆಂದೆ ಮುಡಿಪಾದ ಕರ್ನಾಟಕದ ಸುಂದರ ದೇವಾಲಯಗಳು

ಮತ್ತೊಂದು ವಿಷಯವೆಂದರೆ ಆದಿಗುರು ಶ್ರೀ ಶಂಕರಾಚಾರ್ಯ ರಚಿತ ಅಷ್ಟ ದಶ ಶಕ್ತಿ ಪೀಠ ಸ್ತೋತ್ರದಲ್ಲಿ ಅವರು 18 ಶಕ್ತಿ ಪೀಠಗಳ ಕುರಿತು ಸುಂದರವಾಗಿ ವಿವರಿಸಿರುವುದನ್ನು ಕಾಣಬಹುದು. ಪ್ರಸ್ತುತ ಲೇಖನದ ಮೂಲಕ ಶಂಕರರು ಹೇಳಿದ ಆ 18 ಶಕ್ತಿ ಪೀಠಗಳು ಯಾವುವು ಹಾಗೂ ಅವುಗಳಿರುವುದು ಎಲ್ಲೆಲ್ಲಿ ಎಂಬುದರ ಕುರಿತು ತಿಳಿಯಿರಿ.

ಓದುಗರ ಜ್ಞಾನ ಜಿಜ್ಞಾಸೆಗಾಗಿ ಆದಿ ಶಂಕರರು ರಚಿಸಿದ 18 ಕ್ಷೇತ್ರಗಳ ಮಹಾ ಶಕ್ತಿಪೀಠಗಳ ಅಷ್ಟದಶ ಸ್ತೋತ್ರ ಹೀಗೆ ಸಾಗುತ್ತದೆ :

ಲಂಕಾಯಂ ಶಂಕರಿ ದೇವಿ, ಕಾಮಾಕ್ಷಿ ಕಂಚಿಕಪುರೆ, ಪ್ರದ್ಯುಮ್ನೆ ಶೃಂಖಲಾ ದೇವಿ, ಚಾಮುಂಡ ಕ್ರೌಂಚ ಪಟ್ಟಣೆ
ಆಲಂಪುರೆ ಜೋಗುಳಾಂಬಾ, ಶ್ರೀಶೈಲೆ ಭ್ರಮಾರಾಂಬಿಕ, ಕೊಲ್ಹಾಪುರೆ ಮಹಾಲಕ್ಷ್ಮಿ, ಮಹುರ್ಯೆ ಏಕವೀರಿಕಾ
ಉಜ್ಜೈನ್ಯಂ ಮಹಾ ಕಾಳಿ, ಪ್ರೀತಿಕಾಯಂ ಪುರುಹುಟಿಕಾ, ಒದ್ಯಾನೆ ಗಿರಿಜಾದೇವಿ, ಮಾಣಿಕ್ಯ ದಕ್ಷ ವಾಟಿಕೆ
ಹರಿ ಕ್ಷೇತ್ರೆ ಕಾಮರೂಪಿ, ಪ್ರಯಾಗೆ ಮಾಧವೇಶ್ವರಿ, ಜ್ವಾಲಾಯಂ ವೈಷ್ಣವಿದೇವಿ, ಗಯಾ ಮಾಂಗಲ್ಯ ಗೌರಿಕಾ
ವಾರಣಾಸ್ಯಂ ವಿಶಾಲಾಕ್ಷಿ, ಕಾಶ್ಮೀರೆ ತು ಸರಸ್ವತಿ, ಅಷ್ಟದಶಾ ಶಕ್ತಿಪೀಠಾಣಿ, ಯೋಗಿನಮಾಪಿ ದುರ್ಲಭಂ
ಸಾಯಂಕಾಲೆ ಪಠೆ ನಿತ್ಯಂ ಸರ್ವ ಶತ್ರು ವಿನಾಶನಂ, ಸರ್ವ ರೋಗ ಹರಂ ದಿವ್ಯಂ, ಸರ್ವ ಸಂಪತ್ಕರಂ ಶುಭಂ

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಪುರಾಣಗಳ ಪ್ರಕಾರ, ಪ್ರಾಣ ತ್ಯಾಗ ಮಾಡಿದ ಸತಿಯ ದೇಹವನ್ನು ಶಿವನು ಎತ್ತಿಕೊಂಡು ವೈರಾಗ್ಯ, ದುಖಗಳಿಂದ ನರ್ತಿಸುತ್ತಿರುವಾಗ ದೇಹದ ಒಂದೊಂದು ಭಾಗಗಳು ಒಂದೊಂದು ದಿಕ್ಕಿಗಳಲ್ಲಿ ಕಳಚಿ ಬಿದ್ದು ಆ ಸ್ಥಳಗಳು ಪ್ರಭಾವಶಾಲಿಯಾದ ಶಕ್ತಿಪೀಠಗಳಾಗಿ ರೂಪಗೊಂಡಿವೆ.

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

1. ಕಂಚಿ ಕಾಮಾಕ್ಷಿ : ತಮಿಳುನಾಡು ರಾಜ್ಯದಲ್ಲಿರುವ ಕಾಂಚಿಪುರಂನಲ್ಲಿರುವ ಕಾಮಾಕ್ಷಿ ಅಮ್ಮನವರ ದೇವಸ್ಥಾನ ಒಂದು ಶಕ್ತಿ ಪೀಠವಾಗಿದೆ. ಇದನ್ನು ಕಂಚಿ ಕಾಮಕೋಟಿ ಪೀಠಂ ಎಂತಲೂ ಸಹ ಕರೆಯಲಾಗಿದೆ. ಸತಿಯ ಅಕ್ಷಿ ಅಂದರೆ ಕಣ್ಣುಗಳು ಈ ಭಾಗದಲ್ಲಿ ಬಿದ್ದಿತ್ತೆನ್ನಲಾಗಿದ್ದು ಆ ಸ್ಥಳದಲ್ಲಿಯೆ ಕಾಮಾಕ್ಷಿ ದೇವಿಯು ನೆಲೆಸಿದ್ದಾಳೆನ್ನಲಾಗಿದೆ.

ಚಿತ್ರಕೃಪೆ: SINHA

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಇಲ್ಲಿನ ಮೂರ್ತಿಯ ವಿಶೇಷವೆಂದರೆ ದೇವಿ ಕಾಮಾಕ್ಷಿಯು, ಸಾಮಾನ್ಯವಾಗಿ ಕಂಡುಬರುವ ನಿಂತಿರುವ ಭಂಗಿಯಲ್ಲಿರುವ ದೇವಿಯಂತಿರದೆ ಬದಲಾಗಿ ಯೋಗ ಮುದ್ರೆಯಲ್ಲಿ ಗಂಭೀರ ಹಾಗೂ ಅಷ್ಟೆ ಶಾಂತಳಾಗಿ ಕುಳಿತಿರುವುದನ್ನು ಕಾಣಬಹುದು. ಪಾರ್ವತಿಯ ಅವತಾರವಾದ ಕಾಮಾಕ್ಷಿಯು ಹಿಂದೂಗಳಲ್ಲಿ ಜನಪ್ರೀಯ ದೇವಿ. ಇಷ್ಟಾಗಿಯೂ ಕಾಂಚಿಪುರಂ ನಗರದಲ್ಲಿ ಪಾರ್ವತಿ ದೇವಿಗೆ ಮುಡಿಪಾದ ಏಕೈಕ ದೇವಾಲಯ ಇದಾಗಿದೆ.

ಚಿತ್ರಕೃಪೆ: SINHA

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

2. ಚಾಮುಂಡೇಶ್ವರಿ ದೇವಿ, ಮೈಸೂರು : ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಕರೆಸಿಕೊಳ್ಳುವ ಹಾಗೂ ಪ್ರವಾಸಿ ಪ್ರಖ್ಯಾತಿಯ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಪುರಾಣಗಳ ಕಾಲದಲ್ಲಿ ಈ ಕ್ಷೇತ್ರವು ಕ್ರೌಂಚಪುರಿ ಎಂದು ಗುರುತಿಸಲ್ಪಡುತ್ತಿತ್ತು ಹಾಗಾಗಿ ಇದನ್ನು ಕ್ರೌಂಚಪೀಠ ಎಂಬ ಹೆಸರಿನಿಂದಲೂ ಸಹ ಕಲ್ರೆಯಲಾಗುತ್ತದೆ.

ಚಿತ್ರಕೃಪೆ: Sanjay Acharya

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಮೈಸೂರಿನ ರಾಜವಂಶಸ್ಥರ ಮನೆತನದ ದೇವಿಯಾಗಿ ತಾಯಿ ಚಾಮುಂಡೇಶ್ವರಿಯನ್ನು ಆರಾಧಿಸಲಾಗುತ್ತದೆ. ದೇವಾಲಯದ ಬಳಿ ರಕ್ಕಸ ರಾಜ ಹಾಗೂ ತಾಯಿಯಿಂದ ಹತನಾದ ಮಹಿಷನ ಪ್ರತಿಮೆಯಿರುವುದನ್ನು ಕಾಣಬಹುದು. ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಈ ಶಕ್ತಿಪೀಠದ ಕ್ಷೇತ್ರದಲ್ಲಿ ಸತಿ ದೇವಿಯ ಕೇಶರಾಶಿಯು ಬಿದ್ದಿತ್ತೆನ್ನಲಾಗಿದೆ.

ಚಿತ್ರಕೃಪೆ: Rameshng

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

3. ಜೋಗುಳಾಂಬಾ ದೇವಿ : ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಆಲಂಪೂರದಲ್ಲಿರುವ ಈ ದೇವಿಯ ದೇವಾಲಯವು ಒಂದು ಶಕ್ತಿಪೀಠವಾಗಿದೆ. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ಸಮಾಮದಿಂದಾಗಿ ದಕ್ಷಿಣ ಕಾಶಿ ಎಂತಲೂ ಸಹ ಕರೆಯಲ್ಪಡುವ ಆಲಂಪೂರವು ಕರ್ನೂಲ್ ಪಟ್ಟಣದಿಂದ ಕೇವಲ 27 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: రహ్మానుద్దీన్

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಯೋಗಾಂಬಾ ಅಥವಾ ಜೋಗುಳಾಂಬಾ ಎಂದು ಕರೆಯಲ್ಪಡುವ ಈ ಶಕ್ತಿಪೀಠ ತಾಣದಲ್ಲಿ ಸತಿಯ ಮೇಲ್ಭಾಗದ ಹಲ್ಲುಗಳು ಬಿದ್ದಿತ್ತೆನ್ನಲಾಗಿದೆ. ಇದನ್ನು ಯೋಗಿನಿಪೀಠ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

4. ಭ್ರಮರಾಂಬಾ ದೇವಿ : ಪ್ರಖ್ಯಾತ ಧಾರ್ಮಿಕ ಸ್ಥಳವಾದ ಆಂಧ್ರಪ್ರದೇಶ ರಾಜ್ಯದಲ್ಲಿರುವ ಶ್ರೀಶೈಲಂನ ಭ್ರಮರಾಂಬಾದೇವಿಯ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಶ್ರೀಶೈಲ ಪೀಠಂ ಎಂದು ಕರೆಯಲ್ಪಡುವ ಈ ಕ್ಷೇತ್ರವು ಶಿವನು ಮಲ್ಲಿಕಾರ್ಜುನನ ರೂಪದಲ್ಲಿರುವ ದೇವಾಲಯವನ್ನೂ ಸಹ ಹೊಂದಿದ್ದು 12 ಪವಿತ್ರ ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: sai sreekanth mulagaleti

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ನೆಲ್ಲಮಲ್ಲ ಬೆಟ್ಟಗಳ ಮೇಲೆ ಸ್ಥಿತವಿರುವ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬ ದೇವಿಯ ದೇವಸ್ಥಾನಗಳು ದಕ್ಷಿಣ ಭಾರತದಿಂದ ಸಾಕಷ್ಟು ಭಕ್ತಾದಿಗಳನ್ನು ಸೆಳೆಯುತ್ತದೆ. ಸತಿ ದೇವಿಯ ಕುತ್ತಿಗೆಯ ಭಾಗವು ಈ ಸ್ಥಳದಲ್ಲಿ ಬಿದ್ದಿತ್ತೆನ್ನಲಾಗಿದೆ. ಒಟ್ಟಾರೆಯಾಗಿ ಇದನ್ನು ಭರ್ಮರಾಂಬಾ-ಮಲ್ಲಿಕಾರ್ಜುನ ದೇವಸ್ಥಾನ ಎಂದು ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: sai sreekanth mulagaleti

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

5. ಕೊಲ್ಹಾಪುರ ಮಹಾಲಕ್ಷ್ಮಿ : ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಪ್ರಖ್ಯಾತ ಮಹಾಲಕ್ಷ್ಮಿ ದೇವಾಲಯವು ಜನಪ್ರೀಯ ಶಕ್ತಿಪೀಠವಾಗಿದೆ. ಕೊಲ್ಲಾಪುರಕ್ಕೆ ಬಂದ ತಕ್ಷಣ ಎಲ್ಲರೂ ಮೊದಲು ಭೇಟಿ ನೀಡಲು ಬಯಸುವುದು ಶ್ರೀ ಅಮ್ಮನವರು ದರುಶನ ಕೊಡುವ ಸ್ಥಳ. ಹೌದು ಅದೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ನಗರದ ರೈಲು ಹಾಗೂ ಕೇಂದ್ರ ಬಸ್ಸು ನಿಲ್ದಾಣದಿಂದ ಕ್ರಮವಾಗಿ 4 ಮತ್ತು 3 ಕಿ.ಮೀ ಗಳಷ್ಟು ದೂರದಲ್ಲಿದೆ ಈ ದೇವಸ್ಥಾನ. ಟ್ಯಾಕ್ಸಿ ಹಾಗೂ ರಿಕ್ಷಾಗಳು ಇಲ್ಲಿಂದ ದೇವಸ್ಥಾನಕ್ಕೆ ತೆರಳಲು ಸುಲಭವಾಗಿ ದೊರೆಯುತ್ತವೆ.

ಚಿತ್ರಕೃಪೆ: kolhapurtourism

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಶ್ರೀಪೀಠ ಎಂತಲೂ ಸಹ ಕರೆಯಲ್ಪಡುವ ಈ ಕ್ಷೇತ್ರದಲ್ಲಿ ಸತಿ ದೇವಿಯ ಎಡಗೈ ಬಿದ್ದಿತ್ತೆನ್ನಲಾಗಿದೆ. ಮತ್ತೊಮ್ದು ಹಿನ್ನಿಲೆಯ ಪ್ರಕಾರ, ಪೌರಾಣಿಕ ಹಿನ್ನಿಲೆಯ ಪ್ರಕಾರ, ಹಿಂದೆ ಕೊಲಾಸುರನೆಂಬ ಅಸುರನು ದೇವತೆಗಳಿಗೆ ಬಲು ಕಷ್ಟ ನೀಡುತ್ತಿದ್ದನು. ಅವನ ಕ್ರೌರ್ಯತೆಯಿಂದ ಪಾರು ಮಾಡುವಂತೆ ದೇವತೆಗಳು ಮೊರೆಯಿಟ್ಟಾಗ ದೇವಿಯು ಭೂಮಿಗೆ ಬಂದು ಆತನನ್ನು ವಧಿಸಿದಳು ಹಾಗೂ ವಧಿಸಿದ ಸ್ಥಳವೆ ತೀರ್ಥವಾಗಿ ರೂಪಗೊಂಡಿತು. ನಂತರ ದೇವಿಯು ಸ್ಥಿರವಾಗಿ ಇಲ್ಲಿಯೆ ನೆಲೆಸಿದಳು ಹಾಗೂ ಈ ಸ್ಥಳಕ್ಕೆ ಕೊಲ್ಲಾಪುರ ಎಂಬ ಹೆಸರು ಬಂದಿತು.

ಚಿತ್ರಕೃಪೆ: kolhapurtourism

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

6. ಮಾಹೂರು ರೇಣುಕಾದೇವಿ : ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮಾಹೂರು ಅಥವಾ ಮಾಹೂರ್ಗಡ್ ಎಂಬ ಪಟ್ಟಣದಲ್ಲಿರುವ ರೇಣುಕಾ ದೇವಿಯ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಇದನ್ನು ರೇಣುಕಾಪೀಠ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: V.narsikar

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಈ ಶಕ್ತಿ ದೇವಿಯನ್ನು ಆರಾಧಿಸುವವರು ಮಹಾರಾಷ್ಟ್ರದ ತುಂಬೆಲ್ಲ ಕಂಡುಬರುತ್ತಾರೆ ಅಲ್ಲದೆ ದೇಶದ ವಿವಿಧ ಭಾಗಗಳಿಂದಲೂ ಸಹ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಸತಿಯ ಹಿಂದಿನ ಭಾಗವು ಬಿದ್ದಿತ್ತೆನ್ನಲಾದ ಈ ಸ್ಥಳವಾಗಿದ್ದು ರೇಣುಕಾದೇವಿಯು ಹಲವಾರು ಮನೆತನಗ ಕುಲದೇವಿಯಾಗಿಯೂ ಪೂಜಿಸಲ್ಪಡುತ್ತಾಳೆ.

ಚಿತ್ರಕೃಪೆ: Yogid77

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

7. ಮಹಾಕಾಳಿ ದೇವಿ : ಮಧ್ಯಪ್ರದೇಶ ರಾಜ್ಯದ ಉಜ್ಜಯಿನಿಯಲ್ಲಿರುವ ಮಹಾಕಾಳಿ ದೇವಾಲಯವು ಒಂದು ಹದಿನೆಂಟು ಶಕ್ತಿಪೀಠಗಳ ಪೈಕಿ ಒಂದಾಗಿದ್ದು ಉಜ್ಜೈನಿಪೀಠ ಎಂದು ಕರೆಯಲ್ಪಡುತ್ತದೆ. ಆದರೆ ಇಲ್ಲಿ ಮಹಾ ಕಾಳಿ ದೇವಿಯು ಹೆಚ್ಚಾಗಿ ಹರ ಸಿದ್ಧಿ ಮಾತಾ ಎಂದೆ ಹೆಸರುವಾಸಿಯಾಗಿದ್ದಾಳೆ. ಹೀಗಾಗಿ ಇಲ್ಲಿನ ಜನರು ಈ ದೇವಸ್ಥಾನವನ್ನು ಹರಸಿದ್ಧಿ ಮಾತಾ ದೇವಾಲಯ ಎಂತಲೆ ಗುರುತಿಸುತ್ತಾರೆ.

ಚಿತ್ರಕೃಪೆ: Bernard Gagnon

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಸತಿ ದೇವಿಯ ನಾಲಿಗೆಯು ಈ ಭಾಗದಲ್ಲಿ ಬಿದ್ದಿತ್ತೆನ್ನಲಾಗಿದೆ. ಹಿಂದೆ ವಿಕ್ರಮಾದಿತ್ಯ ರಾಜನು ಹರಸಿದ್ಧಿ ಮಾತಾಳ ಅತಿ ಪರಮ ಭಕ್ತನಾಗಿದ್ದನು ಹಾಗೂ ಹನ್ನೊಂದು ಸಲ ತನ್ನ ಶಿರವನ್ನು ಕಡಿದುಕೊಂಡು ದೇವಿಗೆ ಸಮರ್ಪಿಸಿದ್ದನು. ಆದರೆ ವಿಚಿತ್ರ ಎಂಬಂತೆ ಇವನ ಭಕ್ತಿಗೆ ಮೆಚ್ಚಿ ಪ್ರತಿ ಬಾರಿಯು ಆತ ಶಿರವನ್ನು ಕಡಿದುಕೊಂಡಾಗ ಅದು ತನ್ನಿಂದ ತಾನಾಗಿಯೆ ಮುಂಡದೊಂದಿಗೆ ಜೋಡಿಸಲ್ಪಡುತ್ತಿತ್ತು. ಹೀಗಾಗಿ ದೇವಿಯ ದೇವಾಲಯದಲ್ಲಿ ರಾಜಾ ವಿಕ್ರಮಾದಿತ್ಯನ ಚಿತ್ರವನ್ನೂ ಸಹ ಕಾಣಬಹುದಾಗಿದೆ. ಎಲ್ಲ ಬೇಡಿಕೆಗಳನ್ನು ನೆರೆವೆರಿಸುವುದರಿಂದ ಈಕೆಗೆ ಹರಸಿದ್ಧಿ ಮಾತಾ ಎಂದು ಕರೆಯಲಾಗಿದೆ.

ಚಿತ್ರಕೃಪೆ: Bernard Gagnon

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

8. ಪುರುಹುಟಿಕಾ ದೇವಿ : ಪುಷ್ಕರಿಣಿ ಪೀಠ ಎಂದು ಕರೆಯಲ್ಪಡುವ ಈ ದೇವಾಲಯವು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಪಿತಾಪುರಂ ಎಂಬ ಪಟ್ಟಣದಲ್ಲಿದೆ. ಈ ಪಟ್ಟಣದಲ್ಲಿರುವ ಶಿವನಿಗೆ ಮುಡಿಪಾದ ಕುಕ್ಕುಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈಶಾನ್ಯದಲ್ಲಿ ಪುರುಹುಟಿಕಾ ದೇವಿಯ ದೇವಾಲಯವಿದೆ. ಪುರುಹುಟಿಕಾ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು ಅವುಗಳಲ್ಲಿ ಪ್ರತ್ಯೇಕವಾಗಿ ಕಮಲದ ಹೂವು, ಕೊಡಲಿ, ಮಧು ಪಾತ್ರೆ, ಧಾನ್ಯದ ಬೀಜಗಳನ್ನು ಹಿಡಿದಿರುತ್ತಾಳೆ ಹಾಗೂ ಈಕೆಯ ಹಿನ್ನಿಲೆಯೂ ಸಹ ಅತಿ ರೋಚಕತೆಯಿಂದ ಕೂಡಿದೆ. ಇಂದ್ರನಿಂದ ಪೂಜಿಸಲ್ಪಡುವ ಈ ದೇವತೆಯ ಕುರಿತು ಇರುವ ಕುತೂಹಲಕಾರಿ ಕಥೆಯನ್ನು ಮುಂದಿನ ಸ್ಲೈಡಿನಲ್ಲಿ ಓದಿರಿ.

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಒಮ್ಮೆ ಇಂದ್ರನು ಗೌತಮ ಮಹರ್ಷಿಗಳ ಮಡದಿಯಾದ ಅಹಲ್ಯಾಳ ಸೌಂದರ್ಯಕ್ಕೆ ಮಾರು ಹೋಗಿ ಅವಳನ್ನು ಕೂಡಬೇಕೆಂದು ಯೋಜಿಸಿ ಋಷಿಗಳು ಇಲ್ಲದ ಸಮಯ ಸಾಧಿಸಿ ಗೌತಮ ಮಹರ್ಷಿಗಳ ವೇಷದಲ್ಲಿಯೆ ಮನೆಗೆ ಬಂದು ಅಹಲ್ಯಳನ್ನು ಸೇರುತ್ತಾನೆ. ಈ ವಿಷಯ ಮುನಿಗಳಿಗೆ ತಿಳಿದು ಕೋಪದಿಂದ ಇಂದ್ರನಿಗೆ ಶಾಪ ಕೊಡುತ್ತಾರೆ. ಅದರ ಪ್ರಕಾರವಾಗಿ ಇಂದ್ರನ ವೃಷಣಗಳು ಮಾಯವಾಗಿ ದೇಹದ ಮೇಲೆಲ್ಲ ಕೇವಲ ಯೋನಿಗಳು ಕಂಡುಬರುತ್ತವೆ. ಇದರಿಂದ ಸಂಕಟಪಟ್ಟ ಇಂದ್ರ ಬಹುವಾಗಿ ಕ್ಷಮೆ ಕೇಳಿ ಕೊನೆಗೆ ಪುರುಹುಟಿಕಾ ದೇವಿ ಕುರಿತು ಕಠಿಣ ತಪಸ್ಸು ಮಾಡುತ್ತಾನೆ. ಇದರಿಂದ ಪ್ರಸನ್ನಳಾದ ದೇವಿ ಅವನಿಗೆ ಮೊದಲಿನ ಆರೋಗ್ಯವನ್ನು ಕರುಣಿಸುತ್ತಾಳೆ.

ಚಿತ್ರಕೃಪೆ: GS Darshan

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

9. ಬಿರಾಜ ಅಥವಾ ಗಿರಿಜಾ ದೇವಾಲಯ : ಒಡಿಶಾ ರಾಜ್ಯದ ಭುವನೇಶ್ವರ ನಗರದಿಂದ ಸುಮಾರು 125 ಕಿ.ಮೀ ಗಳಷ್ಟು ದೂರದಲ್ಲಿರುವ ಜಜಪುರ ಎಂಬಲ್ಲಿ ಬಿರಾಜ/ವಿರಾಜ/ಗಿರಿಜಾ ಎಂದು ಕರೆಯಲ್ಪಡುವ ದುರ್ಗಾ ದೇವಿಯ ಈ ದೇವಾಲಯವಿದೆ. ಇದೊಂದು ಶಕ್ತಿ ಪೀಠವಾಗಿದ್ದು ಜಜಪುರಕ್ಕೆ ಬಿರಾಜಕ್ಷೇತ್ರ ಎಂದೂ ಕರೆಯಲಾಗಿದೆ.

ಚಿತ್ರಕೃಪೆ: Nayansatya

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಕೃಷ್ಣ ಪಕ್ಷ ಅಷ್ಟಮಿಯಂದು ಶಾರದೀಯ ದುರ್ಗಾ ಪೂಜೆಯನ್ನು ಈ ಕ್ಷೇತ್ರದಲ್ಲಿ ಅತ್ಯಂತ ಸಡಗರದಿಂದ ಮಾಡಲಾಗುತ್ತದೆ. ಸುಮಾರು 16 ದಿನಗಳ ಕಾಲ ಶೋಡಶ ಪೂಜೆಯು ನಡೆಯುತ್ತದೆ. ಸಿಂಹಧ್ವಜ ಎಂಬ ದೇವಿಯ ತೇರನ್ನು ಸಹ ಈ ಸಂದರ್ಭದಲ್ಲಿ ಎಳೆಯಲಾಗುತ್ತದೆ. ಈ ಶಕ್ತಿಪೀಠವನ್ನು ಒಡ್ಡಾಯನಪೀಠ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Odisha1

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

10. ಮಾಣಿಕ್ಯಾಂಬಾ ದೇವಿ ದೇವಾಲಯ : ಆಂಧ್ರಪ್ರದೇಶದ ಪಂಚರಾಮಂ ಕ್ಷೇತ್ರಗಳ ಪೈಕಿ ಒಂದಾದ ದ್ರಕ್ಷರಾಮಂನಲ್ಲಿರುವ ದ್ರಕ್ಷರಾಮದ ದೇವಾಲಯ ಸಂಕೀರ್ಣದಲ್ಲಿ 18 ಶಕ್ತಿಪೀಠಗಳ ಪೈಕಿ ಒಂದಾದ ಮಾಣಿಕ್ಯಾಂಬಳ ದೇವಸ್ಥಾನವಿದೆ. ಇಲ್ಲಿರುವ ಮುಖ್ಯ ದೇವಾಲಯವು ಶಿವನಿಗೆ ಮುಡಿಪಾಗಿದ್ದು ಶಿವನು ಇಲ್ಲಿ ಭೀಮೇಶ್ವರ ಸ್ವಾಮಿಯಾಗಿ ನೆಲೆಸಿದ್ದಾನೆ ಹಾಗೂ ಅವನ ಮಡದಿಯಾಗಿ ಮಾಣಿಕ್ಯಾಂಬಾ ದೇವಿಯು ನೆಲೆಸಿದ್ದಾಳೆ. ಈ ಕ್ಷೇತ್ರದಲ್ಲಿ ಸತಿ ದೇವಿಯ ನಾಭಿ ಬಿದ್ದಿತ್ತೆನ್ನಲಾಗಿದೆ.

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಶಕ್ತಿಪೀಠಗಳ ಪೈಕಿ ದ್ರಕ್ಷರಾಮಂ ಪೀಠ ಎಂದು ಕರೆಯಲ್ಪಡುವ ಮಾಣಿಕ್ಯಾಂಬಾ ದೇವಿಯ ಕುರಿತು ಹಲವು ಸ್ಥಳಪುರಾಣಗಳು ಚಾಲ್ತಿಯಲ್ಲಿವೆ. ಒಂದು ಸ್ಥಳಪುರಾಣದ ಪ್ರಕಾರ, ಬ್ರಾಹ್ಮಣ ವಿಧವೆಯೊಬ್ಬಳು ತನ್ನ ಅಕಾಲಿಕ ಮರಣ ಹೊಂದಿದ ಮಗಳ ನೆನಪಿಗಾಗಿ ಬೊಂಬೆಯೊಂದನ್ನು ಬಂಗಾರದಿಂದ ಮಾಡಿದಳು. ಸ್ವಲ್ಪ ಸಮಯದ ನಂತರ ಆ ಬೊಂಬೆಗೆ ಮಾತನಾಡುವ ಶಕ್ತಿ ಬಂದಿತು. ಇದರಿಂದ ಸಂತೋಷಗೊಂಡು ಅವಳು ಆ ಬೊಂಬೆಗೆ ಮಾಣಿಕ್ಯಗಳಿಂದ ಅಲಂಕರಿಸಿದ್ದಳು. ಮುಂದೆ ಈ ಕ್ಷೇತ್ರಕ್ಕೆ ಬಂದ ರಾಜನು ಆ ಬೊಂಬೆಯನ್ನು ತನ್ನ ಕುಲದೇವತೆಯಾಗಿ ಮಾಡಿಕೊಂಡು ಪೂಜಿಸಹತ್ತಿದನು.

ಚಿತ್ರಕೃಪೆ: Aditya Gopal

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

11. ಕಾಮರೂಪ ದೇವಿ ದೇವಾಲಯ : ಅಸ್ಸಾಂ ರಾಜ್ಯದ ಗುವಾಹಟಿ ನಗರದಲ್ಲಿರುವ ಪ್ರಖ್ಯಾತ ಕಾಮಾಖ್ಯ ದೇವಿಯ ದೇವಾಲಯವೆ ಕಾಮರೂಪ ದೇವಿಯ ದೇವಾಲಯವಾಗಿದ್ದು ಶಕ್ತಿಪೀಠಗಳ ಪೈಕಿ ಒಂದಾಗಿದೆ. ಕಾಮರೂಪ ಪೀಠ ಎಂದು ಕರೆಯಲ್ಪಡುವ ಈ ಶಕ್ತಿಪೀಠದ ಸ್ಥಳದಲ್ಲಿ ಸತಿ ದೇವಿಯ ಯೋನಿ ಬಿದ್ದಿತ್ತೆನ್ನಲಾಗಿದೆ.

ಚಿತ್ರಕೃಪೆ: Kunal Dalui

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಇನ್ನೊಂದು ವಿಶೇಷವೆಂದರೆ ವರ್ಷಕ್ಕೊಮ್ಮೆ ದೇವಿಯ ಋತು ಸ್ರಾವವನ್ನು ಒಂದು ಉತ್ಸವವನ್ನಾಗಿ ಸಡಗರದಿಂದ ಆಚರಿಸುವ ಏಕೈಕ ದೇವಾಲಯ ಇದಾಗಿದೆ. ಈ ಒಂದು ಆಚರಣೆಯನ್ನು "ಅಂಬಾಬುಚಿ ಮೇಳ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕಾಮಾಖ್ಯ ದೇವಾಲಯವು ಒಂದು ಪುರಾತನ ದೇವಾಲಯವಾಗಿದ್ದು ಈ ದೇವಾಲಯಕ್ಕೆ ಹಿಂದೂ ಧರ್ಮದವರು ಅದರಲ್ಲೂ ಪ್ರಮುಖವಾಗಿ ತಂತ್ರ ವಿದ್ಯೆಗಳನ್ನು ಆಚರಿಸುವವರು ನಡೆದುಕೊಳ್ಳುತ್ತಾರೆ. ಪುರಾತತ್ವ ಶಾಸ್ತ್ರಜ್ಞರ ಪ್ರಕಾರ ಹಿಂದೆ ಈ ದೇವಾಲಯ ಬಲಿಯನ್ನು ಕೊಡಲಾಗುವ ತಾಣವಾಗಿತ್ತೆನ್ನಲಾಗಿದೆ.

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

12. ಮಾಧವೇಶ್ವರಿ ದೇವಿ : ಅಲೋಪಿ ಮಾತಾ ಹಾಗೂ ಲಲಿತಾ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ಮಾಧವೇಶ್ವರಿ ದೇವಿಯು ನೆಲೆಸಿರುವ ಈ ಶಕ್ತಿಪೀಠವು ಪವಿತ್ರ ಸ್ಥಳವಾದ ಪ್ರಯಾಗ್ (ಪ್ರಸ್ತುತ ಉತ್ತರ ಪ್ರದೇಶದ ಅಲಹಾಬಾದ್) ನಲ್ಲಿ ನೆಲೆಸಿದೆ. ಪ್ರಯಾಗ್ ಪೀಠಂ ಎಂದು ಕರೆಯಲ್ಪಡುವ ಈ ಶಕ್ತಿಪೀಠ ಸ್ಥಳದಲ್ಲಿ ಸತಿ ದೇವಿಯ ಬೆರಳುಗಳು ಬಿದ್ದಿತ್ತೆನ್ನಲಾಗಿದೆ.

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಅಲೋಪಿ ಎಂದರೆ ಅದೃಶ ಎಂದಾಗುತ್ತದೆ. ಹೆಚ್ಚು ಪ್ರಚಲಿತದಲ್ಲಿರುವ ಸ್ಥಳ ಪುರಾಣದ ಪ್ರಕಾರ, ವಿಷ್ಣುವಿನ ಸುದರ್ಶನ ಚಕ್ರವು ಸತಿ ದೇವಿಯ ದೇಹವನ್ನು ತುಂಡುಗಳಾಗಿ ಮಾಡುತ್ತ ಕೊನೆಯದಾಗಿ ದೇವಿಯ ದೇಹ ಭಾಗವು ಇಲ್ಲಿ ಬಿದ್ದು, ಸತಿಯ ದೇಹವೆ ಅದೃಶವಾಯಿತು. ಅಂತೆಯೆ ಈ ದೇವಿಯನ್ನು ಅಲೋಪಿ ಮಾತಾ ಎಂದು ಕರೆಯಲಾಗುತ್ತದೆ. ಗಂಗಾ, ಯಮುನಾ ಹಾಗೂ ಸರಸ್ವತಿಗಳ ತ್ರಿವೇಣಿ ಸಂಗಮದ ಅತಿ ಪವಿತ್ರ ಸ್ಥಳದಲ್ಲಿ ಈ ಶಕ್ತಿಪೀಠವಿರುವುದರಿಂದ ಹೆಚ್ಚಿನ ಪ್ರಾಮುಖ್ಯತೆಯನ್ನುಗಳಿಸಿದೆ. ಪವಿತ್ರ ತ್ರಿವೇಣಿ ಸಂಗಮ.

ಚಿತ್ರಕೃಪೆ: Puffino

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

13. ಜ್ವಾಲಾಮುಖಿ ದೇವಾಲಯ : 18 ಶಕ್ತಿಪೀಠಗಳ ಪೈಕಿ ಒಂದಾದ, ಜ್ವಾಲಾ ಜಿ ದೇವಿ ಎಂದು ಕರೆಯಲ್ಪಡುವ ಈ ವೈಷ್ಣವಿ ದೇವಿಯ ದೇವಾಲಯವು ಹಿಮಾಚಲಪ್ರದೇಶ ರಾಜ್ಯದ ಕಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎಂಬ ಪಟ್ಟಣದಲ್ಲಿದೆ. ಜ್ವಾಲಾಮುಖಿ ಪೀಠಂ ಎಂದು ಕರೆಯಲ್ಪಡುವ ಈ ಕ್ಷೇತ್ರದಲ್ಲಿ ಸತಿ ದೇವಿಯ ತಲೆ ಭಾಗವು ಬಿದ್ದಿತ್ತೆನ್ನಲಾಗಿದೆ.

ಚಿತ್ರಕೃಪೆ: Guptaele

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

ಕೆಲವು ಪುರಾಣಗಳ ಪ್ರಕಾರ, ಇಲ್ಲಿ ಸತಿ ದೇವಿಯ ನಾಲಿಗೆಯು ಬಿದ್ದಿತ್ತೆನ್ನಲಾಗಿದ್ದರೆ ಇನ್ನೂ ಕೆಲವರ ಪ್ರಕಾರ ಬೆಂಕಿಯಲ್ಲಿ ಊರಿಯುತ್ತಿದ್ದ ಸತಿ ದೇವಿಯ ವಸ್ತ್ರಗಳು ಇಲ್ಲಿ ಬಿದ್ದಿತ್ತನ್ನಲಾಗಿದೆ. ಆ ಕಾರಣದಿಂದ ಆ ಜ್ವಾಲೆಯು ಇಲ್ಲಿನ ಗುಹೆಯೊಂದರಲ್ಲಿ ಇನ್ನೂ ಊರಿಯುತ್ತಿದೆ ಎನ್ನಲಾಗಿದೆ.

ಚಿತ್ರಕೃಪೆ: Nswn03

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

14. ಸರ್ವಮಂಗಳ ದೇವಿ : ಬಿಹಾರದ ಗಯಾ ಪಟ್ಟಣದಲ್ಲಿರುವ ದುರ್ಗಾ ದೇವಿಯ ಅವತಾರ, ಸರ್ವಮಂಗಳಾ ದೇವಿ ಅಥವಾ ಮಹಾಗೌರಿಯ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಪದ್ಮಪುರಾಣ, ವಾಯುಪುರಾಣ, ಅಗ್ನಿಪುರಾಣ ಹಾಗೂ ಇತರೆ ತಂತ್ರ ಶಾಸ್ತ್ರದ ಗ್ರಂಥಗಳಲ್ಲಿ ಈ ದೇವಾಲಯದ ಕುರಿತು ಉಲ್ಲೇಖವಿದೆ. ಗಯಾಪೀಠಂ ಎಂದು ಕರೆಯಲಾಗುವ ಈ ಸ್ಥಳದಲ್ಲಿ ಸತಿ ದೇವಿಯ ಸ್ತನಗಳು ಬಿದ್ದಿತ್ತೆನ್ನಲಾಗಿದೆ. ಮಹಾ ಗೌರಿಯ ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jonoikobangali

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

15. ವಿಶಾಲಾಕ್ಷಿ ದೇವಾಲಯ : ವಾರಣಾಸಿ ಪೀಠಂ ಎಂದು ಕರೆಯಲಾಗುವ ಈ ಪೀಠವು ಆದಿ ಶಂಕರರು ಪಟ್ಟಿ ಮಾಡಿದ 18 ಮಹಾ ಶಕ್ತಿಪೀಠಗಳ ಪೈಕಿ ಒಂದಾಗಿದೆ. ಪುರಾಣಗಳ ಪ್ರಕಾರ ಸತಿ ದೇವಿಯ ಕಿವಿ ಓಲೆಗಳು ಹಾಗೂ ಇನ್ನೂ ಕೆಲವು ಪುರಾಣಗಳಲ್ಲಿ ಹೇಳಿರುವ ಹಾಗೆ ಕಣ್ಣುಗಳು ಇಲ್ಲಿ ಬಿದ್ದಿತ್ತೆನ್ನಲಾಗಿದೆ. ಕಾಶಿ ಅಥವಾ ವಾರಣಾಸಿಯು ಹಿಂದೂ ಧರ್ಮದಲ್ಲಿ ಅತಿ ಪವಿತ್ರ ಸ್ಥಳವೆಂಬ ಖ್ಯಾತಿಗೆ ಪಾತ್ರವಾಗಿದೆ. ಅದರಂತೆ ಇಲ್ಲಿ ಹರಿದಿರುವ ಗಂಗಾ ನದಿಯಲ್ಲಿ ಮಿಂದಾಗ ಪಾಪ ಕರ್ಮಗಳು ನಶಿಸುತ್ತವೆ ಎಂಬ ನಂಬಿಕೆಯಿದೆ. ಆ ಕಾರಣ ಇಲ್ಲಿ ಸಾಕಷ್ಟು ಘಾಟುಗಳನ್ನು ಕಾಣಬಹುದು. ಮೀರ್ ಘಾಟ್ ಬಳಿಯಲ್ಲಿ ವಿಶಾಲಾಕ್ಷಿಯ ಈ ಶಕ್ತಿಪೀಠವು ಸ್ಥಿತವಿದೆ. ಮೀರ್ ಘಾಟ್.

ಚಿತ್ರಕೃಪೆ: Eric Laurent

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

16. ಶೃಂಖಲಾ ದೇವಿ : ಪಶ್ಚಿಮ ಬಂಗಾಳ ರಾಜ್ಯದ ಹೂಗ್ಲಿ ಜಿಲ್ಲೆಯಲ್ಲಿರುವ ಪಂಡುವಾ ಎಂಬ ಚಿಕ್ಕ ಪಟ್ಟಣವೊಂದರಲ್ಲಿ ಪ್ರದ್ಯುಮ್ನ ಪೀಠಂ ಎಂದು ಕರೆಯಲ್ಪಡುವ ಈ ಮಹಾ ಶಕ್ತಿಪೀಠವಿದೆ. ಶೃಂಖಲಾ ದೇವಿಗೆ ಮುದಿಪಾದ ಈ ತಾಣದಲ್ಲಿ ಸತಿ ದೇವಿಯ ಹೊಟ್ಟೆಯ ಭಾಗ ಬಿದ್ದಿತ್ತೆನ್ನಲಾಗಿದೆ. ವಿಚಿತ್ರವೆಂದರೆ ಪ್ರಸ್ತುತ ಇಲ್ಲಿ ದೇವಾಲಯ ಕಂಡುಬರುವುದಿಲ್ಲ ಬದಲಾಗಿ ಒಂದು ಮಿನಾರ್ ಅಥವಾ ಸ್ತೂಪವೊಂದನ್ನು ಮಾತ್ರ ಕಾಣಬಹುದಾಗಿದೆ. ಕೆಲವರ ಪ್ರಕಾರ, ಶೃಂಖಲಾ ದೇವಿಯ ದೇವಾಲಯವು ಆದಿನಾಥ ಕ್ಷೇತ್ರದ ಗಂಗಾಸಾಗರದಲ್ಲಿದೆ ಎಂದಾಗಿದ್ದರೆ, ಇನ್ನೂ ಹಲವರ ಪ್ರಕಾರ, ಕರ್ನಾಟಕದ ಶೃಂಗೇರಿಯಲ್ಲಿರುವ ಶಾರದಾಪೀಠವು ಆ ದೇವಾಲಯವಾಗಿದೆ ಎನ್ನಲಾಗುತ್ತದೆ. ಶೃಂಗೇರಿ ಶಾರದಾಂಬೆಯ ಸುಂದರ ಭಾವಚಿತ್ರ.

ಚಿತ್ರಕೃಪೆ: Hvadga

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

17. ಸರಸ್ವತಿ ದೇವಾಲಯ : ಪುರಾಣಗಳ ಪ್ರಕಾರ, ಸತಿಯ ತುಟಿಗಳು ಬಿದ್ದಿತ್ತೆನ್ನಲಾದ ಸ್ಥಳವೆ ಸರಸ್ವತಿ ಪೀಠವಾಗಿದ್ದು ಹದಿನೆಂಟು ಶಕ್ತಿಪೀಠಗಳ ಪೈಕಿ ಒಂದಾಗಿದೆ. ಪ್ರಸ್ತುತ ಪಾಕಿಸ್ತಾನ ಕಾಶ್ಮೀರ ಭಾಗದ, ಗಡಿ ರೇಖೆಯ ಬಳಿಯಿರುವ ಶಾರದಾ ಎಂಬ ಹಳ್ಳಿಯಲ್ಲಿ ಈ ದೇವಾಲಯ ತಾಣವಿದೆ. ಇದು ಪಾಕಿಸ್ತಾನದ ವ್ಯಾಪ್ತಿಯಲ್ಲಿರುವುದರಿಂದ ಇಲ್ಲಿಗೆ ಭೇಟಿ ನೀಡಲು ಬಲು ಕಷ್ಟ. ಅಲ್ಲದೆ ದೇವಾಲಯವು ಹೆಚ್ಚುಕಡಿಮೆ ನಾಶಗೊಂಡಿದ್ದು ಕೇವಲ ಅವಶೇಷಗಳನ್ನು ಮಾತ್ರವೆ ಕಾಣಬಹುದು.

ಚಿತ್ರಕೃಪೆ: Irfan Ahmed

ಶಂಕರರ 18 ಶಕ್ತಿಪೀಠಗಳು:

ಶಂಕರರ 18 ಶಕ್ತಿಪೀಠಗಳು:

18. ಶಂಕರಿ ದೇವಿ : ಶಂಕರಿ ಪೀಠಂ ಎಂದು ಕರೆಯಲ್ಪಡುವ ಈ ಶಕ್ತಿಪೀಠವು ಶ್ರೀಲಂಕಾ ದೇಶದಲ್ಲಿ ಸ್ಥಿತವಿದೆ. ಈ ಕ್ಷೇತ್ರದಲ್ಲಿ ಸತಿ ದೇವಿಯ ಹೃದಯ ಭಾಗವು ಬಿದ್ದಿತ್ತೆನ್ನಲಾಗಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಶಂಕರಿ ದೇವಿಯ ದೇವಾಲಯವು ಬೆಟ್ಟದ ತುದಿಯೊಂದರ ಮೇಲೆ ನೆಲೆಸಿತ್ತೆನ್ನಲಾಗಿದೆ. ಹಿಂದೆ ವಿದೇಶಿಯರ ಆಕ್ರಮಣದಿಂದ ಆ ದೇವಾಲಯ ನಾಶ ಹೊಂದಿದರೂ ಮೂಲ ದೇವಿ ಪ್ರತಿಮೆಯನ್ನು ಇಂದು ಕಂಡುಬರುವ ದೇವಸ್ಥಾನದಲ್ಲಿರಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X