• Follow NativePlanet
Share
» »ಬಂಗೀ ಜಂಪಿಂಗ್ ಅಂದ್ರೆ ನಿಮಗಿಷ್ಟಾನಾ? ಅಷ್ಟೊಂದು ಧೈರ್ಯ ನಿಮ್ಮಲ್ಲಿದ್ಯಾ?

ಬಂಗೀ ಜಂಪಿಂಗ್ ಅಂದ್ರೆ ನಿಮಗಿಷ್ಟಾನಾ? ಅಷ್ಟೊಂದು ಧೈರ್ಯ ನಿಮ್ಮಲ್ಲಿದ್ಯಾ?

Written By:

ಬಂಗೀ ಜಂಪಿಂಗ್ ಅಂದ್ರೆ ನಿಮಗಿಷ್ಟಾನಾ? ಬಂಗೀ ಜಂಪಿಂಗ್ ಬಗ್ಗೆ ನಿಮಗೆ ಗೊತ್ತಿರಬಹುದು. ಸೇಫ್ಟಿಗೆ ಸೊಂಟಕ್ಕೆ ಒಂದು ಚೈನ್ ಕಟ್ಟಿಕೊಂಡು ಕಟ್ಟಿಕೊಂಡು ಎತ್ತರದ ಸ್ಥಳದಿಂದ ಕೆಳಕ್ಕೆ ಜಿಗಿಯುವುದು. ಈ ಬಂಗೀ ಜಂಪಿಂಗ್ ಯಾವ್ಯಾವ ಸ್ಥಳದಲ್ಲಿದೆ ಅನ್ನೋದನ್ನು ಇಲ್ಲಿ ನೋಡಿ .

ಬೆಂಗ್ಳೂರಿನ ಈ ಸ್ಥಳದಲ್ಲಿ ಲವರ್‌ ಜೊತೆ ಕೈ ಕೈ ಹಿಡಿದು ಸುತ್ತಾಡಿದ್ದೀರಾ ?

ರಿಷಿಕೇಶ್, ಉತ್ತರಖಂಡ

ರಿಷಿಕೇಶ್, ಉತ್ತರಖಂಡ

PC: Don Graham
ರಿಷಿಕೇಶ್ ಮೊದಲೇ ಸಾಹಸಮಯ ಕ್ರೀಡೆ, ಜಲಕ್ರೀಡೆಗೆ ಹೆಸರುವಾಸಿಯಾಗಿದೆ. ಇದನ್ನು ಅಡ್ವೆಂಚರ್ ಟೂರಿಸಂ ಹಬ್ ಎನ್ನಲಾಗುತ್ತದೆ. ಇಲ್ಲಿ ಅತೀ ಎತ್ತರದ ಬಂಗೀ ಜಂಪಿಂಗ್ ಸ್ಪಾಟ್ ಇದೆ.

ಜಂಪಿಂಗ್ ಹೈಟ್ಸ್
83 ಮೀಟರ್
ಬೆಲೆ: 3500

ಲೋನಾವ್‌ಲಾ, ಮಹಾರಾಷ್ಟ್ರ

ಲೋನಾವ್‌ಲಾ, ಮಹಾರಾಷ್ಟ್ರ

ಡೆಲ್ಲಾ ಅಡ್ವೆಂಚರ್ ಲೋನಾವ್‌ಲಾದಲ್ಲಿರುವ ಅತ್ಯಂತ ದೊಡ್ಡ ಸಾಹಸಮಯ ಪಾರ್ಕ್ ಆಗಿದ್ದು, ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬಂಗೀ ಜಂಪಿಂಗ್‌ನ್ನು ಆಯೋಜಿಸಿದ ಕೀರ್ತಿ ಡೆಲ್ಲಾ ಅಡ್ವೆಂಚರ್‌ಗೆ ಸಲ್ಲುತ್ತದೆ.
45ಮೀಟರ್
ಬೆಲೆ: 2500

ಗೋವಾ

ಗೋವಾ

PC: Don Graham
ಗ್ರಾವಿಟಿ ಝೋನ್‌ನಲ್ಲಿ ಬಂಗೀ ಜಂಪಿಂಗ್ ಅಂಜುನಾ ಬೀಚ್‌ನಲ್ಲಿ ಇದೆ. ಇದು ಮೊದಲ ಬಾರಿ ಬಂಗೀ ಜಂಪ್‌ನ್ನು ಟ್ರೈ ಮಾಡುವವರಿಗೆ ಬೆಸ್ಟ್ ತಾಣವಾಗಿದೆ.
25 ಮೀಟರ್
500ರೂ.

ದೆಹಲಿ

ದೆಹಲಿ

ಬಂಗೀ ಜಂಪ್ ಗ್ರೇಟರ್ ಕೈಲಾಶ್‌ನಲ್ಲೂ ಇದೆ. ವಂಡರ್‌ಲಸ್ಟ್ ಎಡ್ವೆಂಚರ್‌ ಸ್ಫೋರ್ಟ್ಸ್ ಕಂಪನಿ ಈ ಬಂಗೀ ಜಂಪ್‌ನ್ನು ದೆಹಲಿಯಲ್ಲಿ ಪರಿಚಯಲಿಸಿದ್ದು.
39 ಮೀಟರ್
1500 ರೂ.

ಬೆಂಗಳೂರು

ಬೆಂಗಳೂರು

PC: Spy007au
ಬೆಂಗಳೂರಿನ ಕಂಠೀರವ ಸ್ಟೇರಿಯಂನಲ್ಲಿ ೮೦ ಫಿಟ್ ಎತ್ತರದಿಂದ ಬಂಗೀ ಜಂಪ್ ಮಾಡಲಾಗುತ್ತದೆ. ಓಝೋನ್ ಎಡ್ವೆಂಚರ್ ಕಂಪನಿ ಇದನ್ನು ಪ್ರಾರಂಭಿಸಿದ್ದು.
25 ಮೀಟರ್
400ರೂ.

ಜಗದಲ್‌ಪುರ, ಚತ್ತೀಸ್‌ಗಡ್‌

ಜಗದಲ್‌ಪುರ, ಚತ್ತೀಸ್‌ಗಡ್‌


PC: Gerhard Grabner
ಚತ್ತೀಸ್‌ಗಡ್‌ನಲ್ಲಿ ಮೊದಲ ಬಾರಿಗೆ ಬಂಗೀ ಜಂಪ್ ಪ್ರಾರಂಭಿಸಿದ್ದು ಜಗದಲ್‌ಪುರ. ಇಲ್ಲಿ 30 ಫೀಟ್ ಎತ್ತರದಿಂದ ಜಂಪ್ ಮಾಡಲಾಗುತ್ತದೆ.

Read more about: bangalore

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ