Search
  • Follow NativePlanet
Share
» »ತೆಕ್ಕಡಿ : ಪ್ರಾಕೃತಿಕ ಸೂರಿನಡಿ ಒಂದು ಪಯಣ

ತೆಕ್ಕಡಿ : ಪ್ರಾಕೃತಿಕ ಸೂರಿನಡಿ ಒಂದು ಪಯಣ

By Vijay

ಕೇರಳ ರಾಜ್ಯವು ಮೊದಲೆ ಪ್ರವಾಸಿ ಆಕರ್ಷಣೆಗಳಿಂದ ತುಂಬು ತುಳುಕುತ್ತಿರುವ ರಾಜ್ಯ. ರಾಜ್ಯದ ಬಹುಭಾಗವು ಪಶ್ಚಿಮ ಘಟ್ಟಗಳ ವನಸಿರಿಗೆ ಒಳಪಡುವುದರಿಂದ ಇಲ್ಲಿ ಹಸಿರಿನ ಮೈಸಿರಿಯು ಎಲ್ಲೆಡೆ ಗೋಚರಿಸುತ್ತದೆ. ರಾಜ್ಯದ 14 ಜಿಲ್ಲೆಗಳ ಪೈಕಿ ಒಂದಾಗಿರುವ ಇಡುಕ್ಕಿ ಜಿಲ್ಲೆಯ ತೆಕ್ಕಡಿ ಪ್ರದೇಶವು ಪ್ರವಾಸಿ ಮಹತ್ವವುಳ್ಳ ಪ್ರದೇಶವಾಗಿದೆ. [ಹೋಗಲು ಮನ ಚಡ ಪಡಿಸುವ ಇಡುಕ್ಕಿ]

ಇಲ್ಲಿರುವ ಪೆರಿಯಾರ್ ವನ್ಯಮೃಗಧಾಮವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಆಕರ್ಷಿಸುತ್ತದೆ. ಚಾರಣ ಇಷ್ಟ ಪಡುವವರು, ನಿಸರ್ಗ ಪ್ರೇಮಿಗಳು, ವನ್ಯಜೀವಿಗಳ ಕುರಿತು ಆಸಕ್ತಿ ಇರುವವರು, ಸಾಹಸ ಪ್ರೀಯರು ಹಾಗೂ ಛಾಯಾಚಿತ್ರ ಪ್ರೇಮಿಗಳು ತೆಕ್ಕಡಿಗೆ ಭೇಟಿ ನೀಡಬಹುದು. ತೆಕ್ಕಡಿಯು ತಮಿಳುನಾಡು ಗಡಿಗೆ ಬಹಳ ಹತ್ತಿರದಲ್ಲಿ ಸ್ಥಿತವಿದ್ದು, ಎರಡೂ ರಾಜ್ಯಗಳ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಇಲ್ಲಿ ಕಾಣಬಹುದಾಗಿದೆ.

ತೆಕ್ಕಡಿಯ ಅಂದ ಚೆಂದ, ಹಸಿರಿನ ಮೈಸಿರಿ, ವನ್ಯಜೀವಿ ಸಂಪತ್ತು ಮುಂತಾದವುಗಳನ್ನು ಆಸ್ವಾದಿಸಲೆಂದೆ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ತಾಣಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತಾರೆ. ಬನ್ನಿ ಪ್ರಸ್ತುತ ಲೇಖನದ ಮೂಲಕ ತೆಕ್ಕಡಿಯ ಸೌಂದರ್ಯವನ್ನು ಚಿತ್ರಗಳ ಮೂಲಕ ಸವಿಯಿರಿ ಹಾಗೂ ಅವಕಾಶ ಸಿಕ್ಕಾಗ ಭೇಟಿ ನೀಡಲು ಮರೆಯದಿರಿ.

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಪ್ರಕೃತಿಯು ಸಂಪದ್ಭರಿತವಾಗಿದ್ದು, ಇಲ್ಲಿನ ಅನನ್ಯ ಭೌಗೋಳಿಕ ಮಾದರಿ ಉತ್ತಮ ರಚನೆ ಹೊಂದಿದೆ. ಗಿರಿ ನೆತ್ತಿಯ ಮೇಲೆ ನಿಂತು ನೋಡಿದಾಗ ಸುತ್ತಲಿನ ಕಣಿವೆಗಳು, ಕಣ್ಣು ನೆಟ್ಟಷ್ಟೂ ದೂರ ಕಾಣುವ ಪರ್ವತ ಶ್ರೇಣಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಚಿತ್ರಕೃಪೆ: Rameshng

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯಲ್ಲಿ ಮೂಲವಾಗಿ ಸಾಂಬಾರು ಪದಾರ್ಥಗಳನ್ನು ಬೆಳೆಯಲಾಗುತ್ತದೆ. ಅದರ ಸುವಾಸನೆಯು ವಾತಾವರಣದಲ್ಲಿ ಪಸರಿಸಿರುವುದರಿಂದ ಭೇಟಿ ನೀಡುವ ಪ್ರವಾಸಿಗರಿಗೆ ಎಲ್ಲಿಲ್ಲದ ಸಂತಸವನ್ನು ನೀಡುತ್ತದೆ. ತೆಕ್ಕಡಿಯ ಅಂಕುಡೊಂಕಾದ ಬೆಟ್ಟಗಳ ಸಾಲು ಛಾಯಾಗ್ರಹಣ ಪ್ರಿಯರಿಗೆ ಸ್ವರ್ಗಸದೃಶವಾದದ್ದು.

ಚಿತ್ರಕೃಪೆ: Lian Chang

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ತಂಪಾದ ಹವಾಮಾನ, ತಂಗಲು ಅಥವಾ ಸಮಯ ಕಳೆಯಲು ದೊರೆಯುವ ಗುಣಮಟ್ಟದ ರಿಸಾರ್ಟುಗಳು ಮತ್ತು ಹೋಂಸ್ಟೇಗಳು ಪ್ರವಾಸಿಗರಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸುತ್ತದೆ. ಇನ್ನು ಟ್ರೆಕ್ಕಿಂಗ್ ಇಲ್ಲಿ ಆನಂದಿಸಬಹುದಾದ ಒಂದು ಪ್ರಮುಖ ಚಟುವಟಿಕೆ.

ಚಿತ್ರಕೃಪೆ: Lian Chang

ತೆಕ್ಕಡಿ:

ತೆಕ್ಕಡಿ:

ಹಾಗೆ ಸಾಗುತ್ತಿರುವಾಗ ದಾರಿಯಲ್ಲಿ ಕಾಣಸಿಗುವ ಕ್ರಿಮಿ ಕೀಟಗಳು, ಕಾಡು ಪ್ರಾಣಿಗಳು ಹೊಸತಾದ ಅನುಭವವನ್ನು ಕರುಣಿಸುತ್ತವೆ. ಅಷ್ಟೆ ಅಲ್ಲ, ಬಂಡೆ ಹತ್ತುವುದು, ಬಿದಿರಿನಿಂದ ತಯಾರಿಸಲಾದ ತೆಪ್ಪಗಳಲ್ಲಿ ವಿಹರಿಸುವುದು ತೆಕ್ಕಡಿಯ ಪ್ರವಾಸದ ಒಂದು ಅನನ್ಯ ಭಾಗವಾಗಿದೆ.

ಚಿತ್ರಕೃಪೆ: Jonathanawhite

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯು ತನ್ನಲ್ಲಿರುವ ಪೆರಿಯಾರ್ ವನ್ಯಜೀವಿ ಅಭಯಾರಣ್ಯಕ್ಕೆ ಹೆಚ್ಚು ಖ್ಯಾತಿ ಪಡೆದಿದೆ. ತೆಕ್ಕಡಿ ಅಭಯಾರಣ್ಯದ ದಟ್ಟವಾದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಆನೆ, ಜಿಂಕೆ, ಹುಲಿ, ಕಾಡು ಹಂದಿ, ಸಿಂಹ, ಬಾಲದ ಕೋತಿ, ಮಲಬಾರ್ ಜೈಂಟ್ ಅಳಿಲು ಹೀಗೆ ಮುಂತಾದ ಅಪರೂಪದ ವನ್ಯಪ್ರಾಣಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Ben3john

ತೆಕ್ಕಡಿ:

ತೆಕ್ಕಡಿ:

1978 ರಲ್ಲಿ ಪೆರಿಯಾರ್ ವನ್ಯಜೀವಿಗಳ ಅಭಯಾರಣ್ಯವು ಹುಲಿ ಮೀಸಲು ಪ್ರದೇಶ ಮತ್ತು ರಾಷ್ಟ್ರೀಯ ಉದ್ಯಾನ ಎಂದು ಅಧಿಕೃತ ಸ್ಥಾನಮಾನವನ್ನು ಪಡೆಯಿತು. ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಂದು ಕೃತಕ ಸರೋವರವು ಒಂದು ಅತ್ಯುತ್ತಮ ಬೋಟಿಂಗ್ ಸೌಲಭ್ಯ ಒದಗಿಸುವುದಲ್ಲದೆ ಪ್ರವಾಸಿಗರು ಆನೆ ಹಿಂಡುಗಳ ಅಪರೂಪದ ದೃಷ್ಟಿ ಛಾಯಾಚಿತ್ರ ವೀಕ್ಷಿಸುತ್ತಾ ಸರೋವರದಲ್ಲಿ ಕಾಲ ಕಳೆಯಬಹುದು. ಇದು ಮುಳ್ಳಪೆರಿಯಾರ್ ಅಣೆಕಟ್ಟು ಎಂಬ ಹೆಸರಿನಿಂದ ಖ್ಯಾತಿ ಪಡೆದಿದೆ.

ಚಿತ್ರಕೃಪೆ: Bernard Gagnon

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯಲ್ಲಿನ ಹಿತಕರ ಹಾಗೂ ತಂಪಾದ ಹವಾಮಾನವು ಇದನ್ನು ಒಂದು ಉತ್ತಮ ರಜಾ ಸ್ಥಳವನ್ನಾಗಿ ಪರಿವರ್ತಿಸಿದೆ. ತೆಕ್ಕಡಿಗೆ ಮದುರೈ, ಕುಂಭಕೋಣಮ್, ಕೊಚ್ಚಿ (165 ಕಿಮೀ), ಕೊಟ್ಟಾಯಂ (120 ಕಿಮೀ), ಎರ್ನಾಕುಲಂ ಮತ್ತು ತಿರುವನಂತಪುರಂ (250 ಕಿಮೀ) ಸೇರಿದಂತೆ ಅನೇಕ ಸ್ಥಳಗಳಿಂದ ಬಸ್ ಸೌಲಭ್ಯ ಲಭ್ಯವಿದೆ. ತೆಕ್ಕಡಿ ಪ್ರವಾಸಿ ಹಾಟ್ಸ್ಪಾಟ್ ಎಂದು ಪ್ರಖ್ಯಾತಿ ಪಡೆದಿದೆ. ಇಲ್ಲಿ ವಸತಿ ಸೌಕರ್ಯಕ್ಕೆ ಬಜೆಟ್ ಹೋಟೆಲ್ಲುಗಳು ಅವರವರ ಬಜೆಟ್ಟಿಗೆ ತಕ್ಕಂತೆ ಲಭ್ಯವಿದೆ.

ಚಿತ್ರಕೃಪೆ: Kir360

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Edukeralam

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: nevil zaveri

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Appaiah

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Sumeet Jain

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Appaiah

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Thierry Leclerc

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Appaiah

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Appaiah

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Appaiah

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Appaiah

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Thierry Leclerc

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Lian Chang

ತೆಕ್ಕಡಿ:

ತೆಕ್ಕಡಿ:

ತೆಕ್ಕಡಿಯ ಮನಮೋಹಕ ಸೌಂದರ್ಯವನ್ನು ತೆರೆದಿಡುವ ಚಿತ್ರಗಳು.

ಚಿತ್ರಕೃಪೆ: Lian Chang

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X