Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಹವಾಮಾನ

ಕೊಟ್ಟಾಯಂ ಹವಾಮಾನ

ಕೊಟ್ಟಾಯಂಗೆ ಭೇಟಿ ನೀಡಲು ಉತ್ತಮ ಕಾಲವೆಂದರೆ ಅದು ಸೆಪ್ಟೆಂಬರ್ ನಿಂದ ಫೆಬ್ರವರಿವರೆಗೆ. ಈ ಸಮಯದಲ್ಲಿ ಹವಮಾನ ಬಹಳ ಅಹ್ಲಾದಕರ ಹಾಗೂ ಹಿತವಾಗಿರುತ್ತದೆ. ಮಳೆಯ ದಟ್ಟ ಮೋಡಗಳು ಮುಚ್ಚಿಕೊಂಡು ಹವಾಮಾನ ಸ್ವಲ್ಪ ಮಟ್ಟಿಗೆ ಬೆಚ್ಚಗೆ ಇರುತ್ತದೆ.

ಬೇಸಿಗೆಗಾಲ

ಕೊಟ್ಟಾಯಂನಲ್ಲಿ ಶೆಕೆ ಹಾಗೂ ಶುಷ್ಕ ಹವಾಮಾನ ಯಾವಾಗಲೂ ಇರುತ್ತದೆ. ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಅತ್ಯಂತ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ನಿಂದ 38 ಡಿಗ್ರ ಸೆಲ್ಸಿಯಸ್ ವರೆಗೆ ಇರುತ್ತದೆ. ಈ ಸಮಯದಲ್ಲಿ ಕೊಟ್ಟಾಯಂನಲ್ಲಿ ಅತಿ ಹೆಚ್ಚು ಬಿಸಿಲು ಇರುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಕೊಟ್ಟಾಯಂನಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಹೆಚ್ಚಾಗಿರುತ್ತದೆ. ಈ ತಿಂಗಳುಗಳಲ್ಲಿ ಹವಾಮಾನ ಅಹ್ಲಾದಕರವಾಗಿರುತ್ತದೆ, ಆದರೆ ಮಳೆ ಹೆಚ್ಚಾಗಿರುವುದರಿಂದ ಈ ದಿನಗಳಲ್ಲಿ ಕೊಟ್ಟಾಯಂಗೆ ಭೇಟಿ ನೀಡಿಬಹುದೆಂಬ ಸಲಹೆ ಒಳ್ಳೆಯದಲ್ಲ.

ಚಳಿಗಾಲ

ಈ ಪ್ರದೇಶದಲ್ಲಿ ಚಳಿಗಾಲ ಸೆಪೆಂಬರ್ ತಿಂಗಳಿಂದ ಹಿಡಿದು ಫೆಬ್ರವರಿ ಅಂತ್ಯದವರೆಗೂ ಇರುತ್ತದೆ.ಈ ಸಂದರ್ಭದಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ 30 ಡಿಗ್ರಿಯಿಂದ 16 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಇಡೀ ವರ್ಷದಲ್ಲಿ ಜನವರಿ ತಿಂಗಳಲ್ಲಿ ಹೆಚ್ಚು ಚಳಿ ಕಂಡು ಬರುತ್ತದೆ.