Search
  • Follow NativePlanet
Share
» »ನಡುಗದಿರಿ! ಮಧ್ಯರಾತ್ರಿಯಲಿ ಅಷ್ಟಭೈರವರ ಪೂಜೆ!

ನಡುಗದಿರಿ! ಮಧ್ಯರಾತ್ರಿಯಲಿ ಅಷ್ಟಭೈರವರ ಪೂಜೆ!

By Vijay

ಹಿಂದುಗಳು ಪಾಲಿಸುವ ದೇವತೆಗಳಲ್ಲಿ ಕೆಲವು ದೇವರುಗಳು ಅತ್ಯಂತ ಶಕ್ತಿಶಾಲಿ, ಪ್ರಭಾವಶಾಲಿ ಹಾಗೂ ರುದ್ರಭಯಂಕರ ರೂಪಗಳಲ್ಲಿರುತ್ತವೆ. ಭದ್ರಕಾಳಿ, ಪ್ರತ್ಯಂಗಿರಾ ದೇವಿ, ರುದ್ರದೇವರು ಹಾಗೂ ಕಾಳಭೈರವನಂತೆಹ ದೇವತೆಗಳು ಕೇವಲು ನೋಡಲು ಮಾತ್ರ ಉಗ್ರವಾಗಿರುವುದಲ್ಲದೆ ಕಾಮನೆಗಳನ್ನು ಘಳಿಗೆಗಳಲ್ಲಿ ಪೂರೈಸಬಹುದಾದಂತಹ ಶಕ್ತಿಯನ್ನು ಹೊಂದಿರುವರೆಂದು ನಂಬಲಾಗುತ್ತದೆ.

ಹಾಗಾಗಿ, ಇಂತಹ ದೇವರುಗಳನ್ನು ಪ್ರಸನ್ನಗೊಳಿಸಲು ಇರುವ ಪೂಜೆ ಪುನಸ್ಕಾರಗಳೂ ಸಹ ಚಿತ್ರ ವಿಚಿತ್ರವಾಗಿರುತ್ತವೆ. ಸಾಮಾನ್ಯವಾಗಿ ಸಾತ್ವಿಕ ಮಾರ್ಗಕ್ಕಿಂತಲೂ ಹೆಚ್ಚಾಗಿ ವಾಮಮಾರ್ಗಗಳ ಮುಲಕವೆ ಹೆಚ್ಚಾಗಿ ಈ ದೇವತೆಗಳನ್ನು ಆರಾಧಿಸಲಾಗುತ್ತದೆ. ಇದರಿಂದ ಫಲ ಶೀಘ್ರ ಪ್ರಾಪ್ತಿ ಎಂಬ ನಂಬಿಕೆಯಿದೆ.

ಒಂದೊಂದು ಕಡೆ, ಒಂದೊಂದು ರೂಪ! ನೋಡಬೇಕೆ?

ಅದೇನೇ ಇರಲಿ, ರುದ್ರ ಸ್ವರೂಪದ ದೇವತೆಗಳಲ್ಲಿ ಭೈರವನನ್ನೂ ಸಹ ಆರಾಧಿಸಲಾಗುತ್ತದೆ. ಅದಕ್ಕೂ ಮುಂಚೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶವೆಂದರೆ ಭೈರವರಲ್ಲಿ ಅಷ್ಟ ಅಂದರೆ ಎಂಟು ಜನ ಭೈರವರಿದ್ದು ಎಲ್ಲರೂ ಪ್ರತ್ಯೇಕವಾದ ಗುಣಲಕ್ಷಣಗಳ ಹೊಂದಿರುತ್ತಾರೆ ಎಂದು ವೇದ, ಪುರಾಣಾದಿಗಳಿಂದ ತಿಳಿದುಬರುತ್ತದೆ.

ಅಂತಹ ಒಂದು ಅದ್ಭುತ ಭೈರವರಿರುವ ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ವಿಶೇಷವೆಂದರೆ ಈ ದೇವಾಲಯವಿರುವುದು ದಕ್ಷಿಣ ಭಾರತದಲ್ಲಿ.

ರುದ್ರರೂಪ

ರುದ್ರರೂಪ

ಭೈರವ ಎನ್ನುವುದು ರುದ್ರದೇವರ ಅಂದರೆ ಶಿವನ ಅತ್ಯುಗ್ರ ರೂಪ ಅಥವಾ ಅವತಾರ. ಭೈರವರಲ್ಲಿ ಒಟ್ಟು ಎಂಟು ಜನ ಭೈರವರನ್ನು ಆರಾಧಿಸಲಾಗುತ್ತದೆ. ಇವರು ಎಂಟು ದಿಕ್ಕುಗಳನ್ನು ನಿರ್ವಹಿಸಬಲ್ಲವರಾಗಿರುತ್ತಾರೆ. ಅಲ್ಲದೆ ಪ್ರತಿಯೊಬ್ಬ ಭೈರವನ ಕೆಳಗೆ ಎಂಟು ಉಪಭೈರವರಿರುತ್ತಾರೆ.

ಚಿತ್ರಕೃಪೆ: RAJUKHAN SR RAJESH

ಅಧೀನ

ಅಧೀನ

ಪ್ರತಿಯೊಬ್ಬ ಭೈರವನು ಪ್ರಧಾನವಾದ ಭೈರವನ ಅಧೀನದಲ್ಲಿರುತ್ತಾರೆ. ಪ್ರಧಾನ ಹಾಗೂ ಮುಖ್ಯ ಭೈರವ ಭೈರವರ ಮುಖ್ಯ ನಾಯಕನಾಗಿದ್ದು ಜಗತ್ತಿನ ಕಾಲವನ್ನಾಳುವ ಪರಮ ದಂಡನಾಯಕನಾಗಿರುತ್ತಾನೆ. ಪ್ರತಿಯೊಬ್ಬ ಭೈರವನಿಗೆ ಮೊದಲೆ ಅವನ ನಿರ್ವಹಿಸಬೇಕಾದ (ರಕ್ಷಿಸಬೇಕಾದ) ದಿಕ್ಕು ಹಾಗೂ ಅವನ ವಾಹನವನ್ನು ನಿಗದಿಪಡಿಸಲಾಗಿರುತ್ತದೆ. ಅದರಂತೆ ಆ ಭೈರವ ತನ್ನ ಮಡದಿಯೊಂದಿಗೆ ಕ್ಷೇತ್ರದ ಪಾಲಕನಾಗಿರುತ್ತಾನೆ.

ಚಿತ್ರಕೃಪೆ: RAJUKHAN SR RAJESH

ಅಪರೂಪ

ಅಪರೂಪ

ಸಾಮಾನ್ಯವಾಗಿ ಅಷ್ಟಭೈರವರ ದೇವಾಲಯಗಳಿರುವುದು ಬಲು ಅಪರೂಪ. ಪ್ರತ್ಯೇಕವಾದ ಭೈರವನ ದೇವಾಲಯಗಳು ಕಂಡುಬಂದರೂ ಎಲ್ಲ ಎಂಟೂ ಜನ ಭೈರವರು ಒಂದೆಡೆ ನೆಲೆಸಿರುವುದು ವಿಶೇಷ. ಆದಾಗ್ಯೂ ಎಲ್ಲರೂ ನೆಲೆಸಿರುವ ಅಷ್ಟಭೈರವರ ಸನ್ನಿಧಾನಗಳನ್ನು ಭಾರತದಲ್ಲಿ ಬಹುಶಃ ಎರಡೆ ಎರಡು ಸ್ಥಳಗಳಲ್ಲಿ ಮಾತ್ರವೆ ನೋಡಬಹುದಾಗಿದೆ.

ಚಿತ್ರಕೃಪೆ: RAJUKHAN SR RAJESH

ದಕ್ಷಿಣ ಭಾರತ

ದಕ್ಷಿಣ ಭಾರತ

ಒಂದು ದೇವಾಲಯವು ಉತ್ತರ ಪ್ರದೇಶದ ಕಾಶಿ ಅಥವಾ ವಾರಣಾಸಿಯಲ್ಲಿದ್ದರೆ ಇನ್ನೊಂದು ದೇವಾಲಯವು ದಕ್ಷಿಣ ಭಾರತದ ತಮಿಳುನಾಡಿನ ಸೇಲಂನಲ್ಲಿ ಕಂಡುಬರುತ್ತದೆ. ದೂರದ ವಾರಣಾಸಿಗೆ ಹೋಗಲಾಗದ ಭೈರವನ ಭಕ್ತರು ನಿರಾಯಾಸವಾಗಿ ಈ ದೇವಾಲಯಕ್ಕೆ ಭೇಟಿ ನೀಡಬಹುದು.

ಚಿತ್ರಕೃಪೆ: RAJUKHAN SR RAJESH

ಎಂಟು ಜನ

ಎಂಟು ಜನ

ಅಷ್ಟಕ್ಕೂ ತಮಿಳುನಾಡಿನ ದೇವಾಲಯದಲ್ಲಿರುವ ಅಷ್ಟ ಭೈರವರೆಂದರೆ ಅಸಿತಂಗ, ಕಾಲ, ಕಪಾಲ, ಕ್ರೋಧ, ರುದ್ರ, ರುರು, ಸಂಹಾರ ಹಾಗೂ ಉನ್ಮತ್ತ. ಪ್ರತಿ ಅಷ್ಟಮಿಯಂದು ಹುಣ್ಣಿಮೆಯ ನಂತರ ಮಧ್ಯರಾತ್ರಿಯಲ್ಲಿ ವಿಶೇಷವಾದ ಪೂಜೆಯೊಂದು ಜರುಗುತ್ತದೆ.

ಚಿತ್ರಕೃಪೆ: RAJUKHAN SR RAJESH

ಮಧ್ಯರಾತ್ರಿಯ ಸಮಯ

ಮಧ್ಯರಾತ್ರಿಯ ಸಮಯ

ಈ ಪೂಜೆಗೆಂದು ದೂರದೂರುಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ನೆರೆದಿರುತ್ತಾರೆ. ಮಧ್ಯರಾತ್ರಿಯ ಆ ಕಪ್ಪು ರಾತ್ರಿಯ ವಾತಾವರಣವು ನಿಜಕ್ಕೂ ಭಯ ಮೂಡಿಸುವಂತಿರುತ್ತದೆ. ಏಕೆಂದರೆ ಆ ವಿಶೇಷ ಪೂಜೆಯು ಭಯಂಕರ ರೂಪದ ಅಷ್ಟ ಭೈರವರಿಗೆ ಸಲ್ಲುತ್ತಿರುತ್ತದೆ.

ಚಿತ್ರಕೃಪೆ: RAJUKHAN SR RAJESH

ಫಲಿಸುತ್ತವೆ

ಫಲಿಸುತ್ತವೆ

ಜನರು ಹೇಳುವಂತೆ ಅಥವಾ ಈ ದೇವಾಲಯಕ್ಕೆ ಸಂಬಂಧಿಸಿದಂತೆ ನಂಬಿಕೆಯೊಂದ ಪ್ರಚಲಿತದಲ್ಲಿದ್ದು ಅದರ ಪ್ರಕಾರವಾಗಿ ಅಷ್ಟಭೈರವರನ್ನು ನೆನೆದು ಯಾರು ಪೂಜಿಸುತ್ತಾರೊ ಅವರೆಲ್ಲ ಸಮಸ್ಯೆಗಳು ಪರಿಹಾರವಾಗುತ್ತವಂತೆ. ಆರ್ಥಿಕತೆಯ ಸಮಸ್ಯೆಯಿರಲಿ ಅಥವಾ ಆರೋಗ್ಯ ಸಮಸ್ಯೆಯಿರಲಿ ಎಲ್ಲವೂ ಭೈರವರ ಕೃಪೆ ದೊರೆಯಿತೆಂದರೆ ಮಂಗಮಾಯ ಆಗುತ್ತವಂತೆ!

ಚಿತ್ರಕೃಪೆ: RAJUKHAN SR RAJESH

ಶಿವನ ತಪಸ್ಸು

ಶಿವನ ತಪಸ್ಸು

ಅಲ್ಲದೆ ಸ್ಥಳ ಪುರಾಣದಂತೆ, ಈ ಒಂದು ಸ್ಥಳದಲ್ಲೆ ಮನ್ಮಥನು ತನ್ನ ಕಾಮ ಬಾಣದಿಂದ ಶಿವನ ತಪಸ್ಸನ್ನು ಭಂಗಗೊಳಿಸಿದ್ದೆಂದು ಹೇಳಲಾಗುತ್ತದೆ. ಹಾಗಾಗಿ ಪ್ರಮುಖವಾಗಿ ಹೇಳಬೇಕೆಂದರೆ ಶಿವನು ಮುಖ್ಯ ದೇವನಾಗಿ ನೆಲೆಸಿರುವ ದೇವಾಲಯ ಇದಾಗಿದ್ದು ಇದನ್ನು ಕಾಮನದೀಶ್ವರ ದೇವಾಲಯ ಅಥವಾ ಕಾಮನದೀಶ್ವರರ್ ದೇವಾಲಯ ಎಮ್ದು ಕರೆಯಲಾಗುತ್ತದೆ.

ಚಿತ್ರಕೃಪೆ: RAJUKHAN SR RAJESH

ಈ ದೇವಾಲಯವಿದೆ

ಈ ದೇವಾಲಯವಿದೆ

ಕಾಶಿಯನ್ನು ಹೊರತುಪಡಿಸಿದರೆ, ಈ ದೇವಾಲಯದಲ್ಲಿ ಮಾತ್ರವೆ ಅಷ್ಟಭೈರವರು ಒಂದೆಡೆ ನೆಲೆಸಿರುವುದನ್ನು ಕಾಣಬಹುದು. ಹಾಗಾಗಿ ವಸಿಷ್ಠ ನದಿಯ ತಟದ ಮೇಲೆ ನೆಲೆಸಿರುವ ಈ ಶಿವನ ದೇವಾಲಯವು ಸಾಕಷ್ಟು ಮಹತ್ವ ಪಡೆದಿರುವ ದೇವಾಲಯವಾಗಿ ದಕ್ಷಿಣ ಭಾರತದ ಜನರ ಗಮನಸೆಳೆಯುತ್ತದೆ.

ಚಿತ್ರಕೃಪೆ: RAJUKHAN SR RAJESH

ವಿಶೇಷ ಪೂಜೆ

ವಿಶೇಷ ಪೂಜೆ

ಶ್ರೀ ಕಾಮನದೀಶ್ವರರ್ ದೇವಾಲಯದಲ್ಲಿ ಹುಣ್ಣಿಮೆಯಾದ ಎಂಟನೇಯ ದಿನ ಮಧ್ಯರಾತ್ರಿಯ ಸಂದರ್ಭದಲ್ಲಿ ಅಷ್ಟಭೈರವರ ಪೂಜೆಯನ್ನು ಬಲು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ. ಭೈರವನಿಗೆ ಈ ರೀತಿ ಪೂಜೆ ಮಾಡಲಗುವ ಪ್ರಾಯಶಃ ದಕ್ಷಿಣ ಭಾರತದ ಇದೊಂದೆ ದೇವಾಲಯವಾಗಿದೆ ಎಂದು ಹೇಳಬಹುದು.

ಚಿತ್ರಕೃಪೆ: RAJUKHAN SR RAJESH

ಪಂಗುಣಿ ಉತ್ತಿರಂ

ಪಂಗುಣಿ ಉತ್ತಿರಂ

ಮಾರ್ಚ್-ಎಪ್ರಿಲ್ ಸಮಯದಲ್ಲಿ ಬರುವ ಪಂಗುಣಿ ಉತ್ತಿರಮ್ ದಿನದ ಹಿಂದಿನ ದಿನದಂದು ಸೂರ್ಯನ ಮೊದಲ ರಷ್ಮಿಯು ಈ ದೇವಾಲಯದಲ್ಲಿರುವ ಶಿವಲಿಂಗದ ಮೇಲೆ ಬಿಳುವುದು ವಿಶೇಷ. ಈ ಒಂದು ವಿಶೆಷವನ್ನು ಸ್ಥಳೀಯವಗಿ ಹಲವಾರು ಜನರಿಂದ ಆರಾಧಿಸಲ್ಪಡುತ್ತದೆ.

ಚಿತ್ರಕೃಪೆ: RAJUKHAN SR RAJESH

ಇತರೆ ಸನ್ನಿಧಿಗಳು

ಇತರೆ ಸನ್ನಿಧಿಗಳು

ಹದಿಮೂರನೇಯ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯ ಇದಾಗಿದ್ದು ಮೂರು ಸ್ತರಗಳ ಗೋಪುರವನ್ನು ಹೊಂದಿದೆ. ಕಾಪಾಲ ಭೈರವನು ಗೋಪುರದ ಮೆಲೆ ನೆಲೆಸಿರುವುದನ್ನು ಕಾಣಬಹುದು. ಅಲ್ಲದೆ ಗಜಲಕ್ಷ್ಮಿ ಹಾಗೂ ಲಕ್ಷ್ಮಿ ದೇವಿಯರಿಗೆ ಮುಡಿಪಾದ ಎರಡು ಸನ್ನಿಧಿಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: RAJUKHAN SR RAJESH

ಸೇಲಂ

ಸೇಲಂ

ಸಾಕಷ್ಟು ವಿಶೇಷತೆಯನ್ನು ಹೊಂದಿರುವ ಕಾಮನದ ಈಶ್ವರ ಅಥವಾ ಕಾಮನದೀಶ್ವರನ ದೇವಾಲಯವು ಪ್ರಸ್ತುತ ತಮಿಳುನಾಡಿನ ಸೇಲಂ ಜಿಲ್ಲೆಯ ಅರಳಗೂರು ಎಂಬ ಊರಿನಲ್ಲಿದೆ. ಅರಳಗೂರು ತಲೈವಸಲ್ ಪಟ್ಟಣದಿಂದ ಕೇವಲ ಏಳು ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: RAJUKHAN SR RAJESH

ತಲುಪುವ ಬಗೆ

ತಲುಪುವ ಬಗೆ

ಸೇಲಂ ನಗರ ಕೇಂದ್ರದಿಂದ 75 ಕಿ.ಮೀ ಗಳಷ್ಟು ದೂರದಲ್ಲಿ ಅರಳಗೂರು ನೆಲೆಸಿದ್ದು ಈ ದೇವಾಲಯವನ್ನು ತಲುಪಲು ಮೊದಲಿಗೆ ಸೇಲಂನಿಂದ ತಲೈವಸಲ್ ಪಟ್ಟಣಕ್ಕೆ ಬಂದು ಅಲ್ಲಿಂದ ಸಿಗುವ ಮಿನಿ ಬಸ್ಸುಗಳ ಮೂಲಕ ಸುಲಭವಾಗಿ ಅರಳಗೂರನ್ನು ತಲುಪಬಹುದು. ಹತ್ತಿರದಲ್ಲಿರುವ ರೈಲು ನಿಲ್ದಾಣ ಅತ್ತೂರು ಹಾಗೂ ಸೇಲಂ ಮತ್ತು ವಾಯು ನಿಲ್ದಾಣ ತಿರುಚಿರಾಪಳ್ಳಿ ಹಾಗೂ ಕೋಯಮತ್ತೂರು.

ಚಿತ್ರಕೃಪೆ: RAJUKHAN SR RAJESH

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more