Search
  • Follow NativePlanet
Share

ಸೇಲಂ : ಬೆಳ್ಳಿ ಮತ್ತು ಬಂಗಾರದ ನಾಡು

32

ದಕ್ಷಿಣ ಭಾರತದ ಮಧ್ಯ ಉತ್ತರ ಭಾಗದ ತಮಿಳುನಾಡಿನ ಒಂದು ನಗರ ಸೇಲಂ. ರಾಜಧಾನಿ ಚೆನ್ನೈನಿಂದ ಸುಮಾರು 340 ಕಿ.ಮೀ ಅಂತರದಲ್ಲಿದೆ. ಸೇಲಂ ಅನ್ನು ಮಾವಿನ ನಗರ ಎಂದು ಕೂಡ ಕರೆಯಲಾಗಿದೆ. ಇದು ರಾಜ್ಯದಲ್ಲಿಯೇ 5 ನೇಯ ದೊಡ್ಡ ನಗರವಾಗಿದೆ. ಚೆರಂ ಎಂಬುದು ಚೆರಂ ಪ್ರದೇಶದ ಒಂದು ಪ್ರಾಂತ್ಯ. ಈ ಪ್ರಾಂತ್ಯದ ಪುರಾತನ ನಿವಾಸಿಗಳು ಮಹಿಳೆಯರು ಧರಿಸಲು ಸೆಲೈ ಎಂಬ ಬಟ್ಟೆಯ ಉಡುಪನ್ನು ಹೆಣೆಯುತ್ತಿದ್ದರು. ಸೇಲಂ ಹೆಸರು ಚೆರಂ ಎಂಬ ಹೆಸರಿನಿಂದ ಬಂದಿದೆ.

ಸೇಲಂ ತಲುಪುವ ಮಾರ್ಗ? : ಸೇಲಂ ನ ಹತ್ತಿರದ ಪ್ರವಾಸಿ ಸ್ಥಳಗಳು

ಸೇಲಂ ಜನಪ್ರಿಯ ಪ್ರವಾಸಿ ಮತ್ತು ಯಾತ್ರಿಕ ಗಮ್ಯ ಸ್ಥಳವಾಗಿದೆ. ಕೊಟ್ಟೈ ಮರಿಯಮ್ಮನ ದೇವಸ್ಥಾನ, ಥಾರಮಂಗಲಂ ದೇವಸ್ಥಾನ, ಸೇಲಂ ಸುಗವನೇಶ್ವರ ದೇವಸ್ಥಾನ, ಅರುಲ್ಮಿಗಿ ಅಲಗಿರಿನಾಥರ್ ದೇವಸ್ಥಾನ, ಎಲ್ಲೈ ಪೆದರಿ ಅಮ್ಮನ ದೇವಸ್ಥಾನ, ಜುಮ್ಮಾ ಮಸೀದಿ ಇವು ಸೇಲಂ ನ ಹತ್ತಿರದಲ್ಲಿರುವ ಕೆಲವು ಜನಪ್ರಿಯ ಧಾರ್ಮಿಕ ಸ್ಥಳಗಳು. ಜನಪ್ರಿಯ ಪ್ರವಾಸಿ ಸ್ಥಳಗಳಾದ ಯರ್ಕಾಡ್ ಬೆಟ್ಟ , ಕಿಲಿಯೂರು ಜಲಪಾತ, ತಾರಮಂಗಲಂ ಮತ್ತು ಮೆಟ್ಟೂರು ಡ್ಯಾಮ್ ಗಳಿಗೆಲ್ಲ ಸೇಲಂ ಹತ್ತಿರದ ಸ್ಥಳವಾಗಿದೆ.

ಸೇಲಂ ಶಾಪಿಂಗ್ ಸ್ಥಳವಾಗಿಯೂ ಜನಪ್ರಿಯಗೊಂಡಿದೆ. ಇಲ್ಲಿ ತಯಾರಿಸಲಾಗುವ ಬೆಳ್ಳಿ  ಕಡಗ ದೇಶದಲ್ಲೇ ಹೆಸರುವಾಸಿಯಾಗಿದೆ.ಇಲ್ಲಿ ತಯಾರಿಸುವ ರೇಷ್ಮೆ ಮತ್ತು ಹತ್ತಿ ಬಟ್ಟೆಗಳು ಜನಪ್ರಿಯ ಗೊಂಡಿದ್ದು ಜಗತ್ತಿನಾದ್ಯಂತ ರಫ್ತು ಮಾಡಲಾಗುತ್ತದೆ.

ಸೇಲಂನ ಇತಿಹಾಸ

ಆಧಾರದ ಪ್ರಕಾರ, ಸೇಲಂ ಅಥವಾ ಚೆರುಲಂ ಎಂಬ ಹೆಸರು ಚೆರ ರಾಜವಂಶದ ನಾಯಕ ಚೆರರ್ಣನ್ ಪೆರುಮನ್ ನಿಂದ ಬಂದಿದೆ. ಚೆರಲಮ್ ಪದದ ಅರ್ಥ ಪರ್ವತ ಶ್ರೇಣಿ. ಈ ಪ್ರದೇಶದ ಇತಿಹಾಸ ಪೂರ್ವ ಶಿಲಾಯುಗ ಮತ್ತು ನವ ಶಿಲಾಯುಗದ ಕಾಲದಿಂದಲೂ ಇವೆ ಎಂದು ಪುರಾವೆಗಳು ಹೇಳುತ್ತವೆ.

ಸೇಲಂನಲ್ಲಿ ಸಾಕಷ್ಟು ಸಾಮ್ರಾಜ್ಯಗಳು ಮತ್ತು ರಾಜವಂಶಗಳು ಸೋಲು-ಗೆಲುವುಗಳನ್ನು ಕಂಡಿವೆ. ಇದು ಪಲ್ಲವರು, ಚೋಳರು, ಪಾಂಡ್ಯರು, ಚಾಲುಕ್ಯರು ಮತ್ತು ಹೊಯ್ಸಳ ರಾಜವಂಶದಿಂದ ಆಳಲ್ಪಟ್ಟಿದೆ. ಈ ಪ್ರಾಂತ್ಯದ ಮೊದಲ ನಿವಾಸಿಗರು ಗಂಗರು ಎಂದು ನಂಬಲಾಗಿದೆ. ಇವರು ಗಂಗಾ ಕುಲದವರಾಗಿದ್ದರು. ನಂತರದ ದಿನಗಳಲ್ಲಿ ಪಶ್ಚಿಮ ಗಂಗ ವಂಶದವರು ಈ ಪ್ರಾಂತ್ಯವನ್ನು ಆಳಿದರು.

ತದನಂತರ ಈ ಪ್ರದೇಶವನ್ನು ವಿಜಯನಗರ ರಾಜರಸರ ಮಧುರೈ ನಾಯಕರು ದಂಡೆತ್ತಿ ಬಂದು ಆಕ್ರಮಿಸಿಕೊಂಡರು. ಮಧುರೈ ನಾಯಕರ ನಂತರ ಈ ಪ್ರದೆಶವನ್ನು ಗಟ್ಟಿ ಮುದಲಿಗರು ಆಳ್ವಿಕೆ ನಡೆಸಿದರು.18 ನೇ ಶತಮಾನದ ಮೈಸೂರು ಮತ್ತು ಮಧುರೈ ಯುದ್ದದಲ್ಲಿ ಇದು ಹೈದರಾಲಿಯ ಕೈ ಸೇರಿತು. 1768 ರಲ್ಲಿ ಕರ್ನಲ್ ಮನೆತನದವರು ಇದನ್ನು ವಶಪಡಿಸಿಕೊಂಡರು ಸಹ 1772 ರಲ್ಲಿ ಹೈದರಾಲಿ ಮತ್ತೆ ತನ್ನ ವಶಕ್ಕೆ ತೆಗೆದುಕೊಂಡನು.1799 ರಲ್ಲಿ ಇದು ಲಾರ್ಡ್ ಕ್ಲಿವ್ ಅವರಿಂದ 1861ರ ವರೆಗೆ ಮಿಲಿಟರಿ ತಳಹದಿಯಲ್ಲಿ ನಡೆಸಲ್ಪಟ್ಟಿತು. ಬ್ರಿಟಿಷ್ ಮೈತ್ರಿ ಸೇನೆ ಮತ್ತು ಕೊಂಗು ಸೇನೆಯ ನಡುವಿನ ಯುದ್ಧಕ್ಕೆ ಸೇಲಂ ಮತ್ತು ಶಂಕರಗಿರಿ ಯುದ್ಧ ದೃಶ್ಯವಾಯಿತು.

ಸೇಲಂ ಗೆ ತಲುಪುವ ಮಾರ್ಗ :

ಸೇಲಂ ಗೆ ತಲುಪಲು ವಾಯು, ರಸ್ತೆ ಮತ್ತು ರೈಲು ಮಾರ್ಗಗಳಿವೆ. ಸೇಲಂ ನಲ್ಲಿ ದೇಶೀಯ ವಿಮಾನ ನಿಲ್ದಾಣವಿದ್ದು ಚೆನ್ನೈನಿಂದ ತಲುಪಬಹುದು. ಚನ್ನೈ ವಿಮಾನ ನಿಲ್ದಾಣದಿಂದ ದೇಶದ ಒಳಗೆ ಮತ್ತು ಹೊರದೇಶಗಳಿಗೆ ವಿಮಾನದ ವ್ಯವಸ್ಥೆ ಇದೆ. ಸೇಲಂ ರೈಲ್ವೇ ಜಂಕ್ಷನ್ ನಗರದ ಹತ್ತಿರದ ರೈಲ್ವೆ ನಿಲ್ದಾಣ ಆಗಿದ್ದು ನಗರದ ಇತರ ಮುಖ್ಯ ಸ್ಥಳಗಳಿಗೆ ತಲುಪುವ ಸುಲಭ ಮಾರ್ಗವಾಗಿದೆ. ಸೇಲಂ ನಿಂದ ಹತ್ತಿರದ ಸ್ಥಳಗಳಿಗೆ ಮತ್ತು ಚೆನ್ನೈಗೆ ಹೋಗಲು ಕೂಡ ದಿನನಿತ್ಯದ ಬಸ್ಸಿನ ವ್ಯವಸ್ಥೆ ಇದೆ.

ಸೇಲಂ ನ ವಾತಾವರಣ:

ಸೇಲಂ ಉಷ್ಣವಲಯದ ಹವಾಮಾನ ಹೊಂದಿದ್ದು, ವರ್ಷದ ಚಳಿಗಾಲವಾದ ನವೆಂಬರ್ ನಿಂದ ಮಾರ್ಚ್ ಅವಧಿಯು ಇಲ್ಲಿಗೆ ಭೇಟಿ ನೀಡಲು ಉತ್ತಮ ಕಾಲವಾಗಿದೆ.

ಸೇಲಂ ಪ್ರಸಿದ್ಧವಾಗಿದೆ

ಸೇಲಂ ಹವಾಮಾನ

ಉತ್ತಮ ಸಮಯ ಸೇಲಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೇಲಂ

  • ರಸ್ತೆಯ ಮೂಲಕ
    ಸೇಲಂ ಗೆ ಉಳಿದ ರಾಜ್ಯಗಳಿಂದ ಬಸ್ ನಲ್ಲಿ ಪ್ರಯಾಣ ಮಾಡಬಹುದು. ಬೆಂಗಳೂರು ಮತ್ತು ಹೈದರಾಬಾದಿನಿಂದ ಪ್ರತಿದಿನ ಬಸ್ ವ್ಯವಸ್ಥೆ ಇಲ್ಲಿಗಿದೆ. ನಗರವು ಹೊಸ ಬಸ್ ನಿಲ್ದಾಣ ಮತ್ತು ಟೌನ್ ಬಸ್ ನಿಲ್ದಾಣ (ಹಳೆಬಸ್ ನಿಲ್ದಾಣ)ಎಂಬ ಎರಡು ಮುಖ್ಯ ಬಸ್ ನಿಲ್ದಾಣವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೇಲಂ ನಗರವು ತನ್ನದೆ ಆದ ರೈಲು ನಿಲ್ದಾಣವನ್ನು ಹೊಂದಿದೆ. ಈ ನಿಲ್ದಾಣವು ಇತರೆ ಮುಖ್ಯ ಪಟ್ಟಣಗಳು ಮತ್ತು ರಾಜ್ಯಗಳೊಂದಿಗೆ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ತಿರುಚಿನಾಪಳ್ಳಿ ಮತ್ತು ಕೊಯಮತ್ತೂರ್ ಉಳಿದ ರೇಲ್ವೆ ಮಾರ್ಗಗಳಾಗಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸೇಲಂ ವಿಮಾನ ನಿಲ್ದಾಣವು ನಗರದಿಂದ 20 ಕಿ.ಮೀ ದೂರದಲ್ಲಿದ್ದು, ಕಮಲಾಪುರಮ್ ನಲ್ಲಿರುವ ಬೆಂಗಳೂರು ಹೈವೇ ಯಲ್ಲಿದೆ. ಆದರೆ ಈಗ ಈ ಮಾರ್ಗ ಚಾಲನೆಯಲ್ಲಿಲ್ಲ. ಆದದ್ದರಿಂದ ಈಗ 135 ಕಿ.ಮೀ ದೂರದಲ್ಲಿರುವ ತಿರುಚಿನಾಪಳ್ಳಿ ಮತ್ತು 15 ಕಿ.ಮೀ ಇರುವ ಕೊಯಮತ್ತೂರ್ ವಿಮಾನ ನಿಲ್ದಾಣ ಸೇಲಂ ಗೆ ಮುಖ್ಯ ನಿಲ್ದಾಣವಾಗಿದೆ. ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಚನ್ನೈ ಮತ್ತು ಬೆಂಗಳೂರು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat