Search
  • Follow NativePlanet
Share
» »ಪ್ರಾಚೀನವಾದ ದೇವಾಲಯಗಳಿವು...

ಪ್ರಾಚೀನವಾದ ದೇವಾಲಯಗಳಿವು...

ಭಾರತದೇಶದಲ್ಲಿನ ಆಧ್ಯಾತ್ಮಿಕ ಕೇಂದ್ರಗಳಿಗೆ, ದೇವಾಲಯಗಳಿಗೇನು ಕಡಿಮೆ ಇಲ್ಲ. ಆ ಕಾಲದ ರಾಜರು, ರಾಜವಂಶಿಗರು ಅನೇಕ ದೇವಾಲಯವನ್ನು ನಿರ್ಮಾಣ ಮಾಡಿ ಪೋಷಣಾರ್ಥವಾಗಿ ಭೂಮಿಯನ್ನು ನೀಡುತ್ತಿದ್ದರು. ಆ ದಿನಗಳಲ್ಲಿ ಅತ್ಯಧಿಕ ಸಂಪತ್ತನ್ನು ಹೊಂದಿರುವ ದೇವ

ಭಾರತದೇಶದಲ್ಲಿನ ಆಧ್ಯಾತ್ಮಿಕ ಕೇಂದ್ರಗಳಿಗೆ, ದೇವಾಲಯಗಳಿಗೇನು ಕಡಿಮೆ ಇಲ್ಲ. ಆ ಕಾಲದ ರಾಜರು, ರಾಜವಂಶಿಗರು ಅನೇಕ ದೇವಾಲಯವನ್ನು ನಿರ್ಮಾಣ ಮಾಡಿ ಪೋಷಣಾರ್ಥವಾಗಿ ಭೂಮಿಯನ್ನು ನೀಡುತ್ತಿದ್ದರು. ಆ ದಿನಗಳಲ್ಲಿ ಅತ್ಯಧಿಕ ಸಂಪತ್ತನ್ನು ಹೊಂದಿರುವ ದೇವಾಲಯವಾಗಿಯೂ ಕೂಡ ಇರುತ್ತಿತ್ತು. ಭಾರತದೇಶದಲ್ಲಿನ ದೇವಾಲಯಗಳನ್ನು ಹೆಚ್ಚಾಗಿ ರಾಜವಂಶಿಕರು ನಿರ್ಮಾಣ ಮಾಡಿರುವುದೇ. ಇವುಗಳಲ್ಲಿ ಕೆಲವು ಮಾತ್ರ ಅದ್ಭುತವಾದ ಕಟ್ಟಡಗಳು, ವಿಶ್ವ ಪಾರಂಪರಿಕ ಸಂಪತ್ತಾಗಿ ನಿಂತಿದೆ.

ಹಾಗಾದರೆ ಭಾರತದಲ್ಲಿನ ಆ ಪ್ರಖ್ಯಾತವಾದ ದೇವಾಲಯಗಳು ಯಾವುವು? ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಲೇಖನದ ಮೂಲಕ ತಿಳಿಯೋಣ.

1.ಬ್ರಹ್ಮದೇವ ದೇವಾಲಯ

1.ಬ್ರಹ್ಮದೇವ ದೇವಾಲಯ

PC:Redtigerxyz

ಸೃಷ್ಟಿಕರ್ತ ಬ್ರಹ್ಮನಿಗೆ ದೇವಾಲಯಗಳು ಇರುವುದು ಅಪರೂಪ. ರಾಜಸ್ಥಾನದಲ್ಲಿನ ಪುಷ್ಕರ್ ಅವುಗಳಲ್ಲಿ ಒಂದು. 2000 ವರ್ಷಗಳ ಪುರಾತನವಾದ ಈ ದೇವಾಲಯವು ಕ್ರಿ.ಶ 14 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. 4 ಮುಖವನ್ನು ಹೊಂದಿರುವ ಹಾಗು ಕಮಲದಲ್ಲಿ ಕುಳಿತುಕೊಂಡಿರುವ ಬ್ರಹ್ಮದೇವನಿಗೆ ಒಂದು ಪಕ್ಕದಲ್ಲಿ ಗಾಯತ್ರಿ ದೇವಿ, ಮತ್ತೊಂದು ಭಾಗದಲ್ಲಿ ಸಾವಿತ್ರಿ ದೇವಿಗಳ ಚಿತ್ರವಿದೆ.

2.ಸೂರ್ಯ ದೇವಾಲಯ

2.ಸೂರ್ಯ ದೇವಾಲಯ

PC:Tetraktys

ಭುವನೇಶ್ವರಕ್ಕೆ 60 ಕಿ.ಮೀ ದೂರದಲ್ಲಿರುವ ಕೊಣಾರ್ಕ್ ಸ್ಮಾರಕ ಕಟ್ಟಡಗಳು ಇರುವ ಸುಂದರವಾದ ಪಟ್ಟಣ. ಇಲ್ಲಿನ ಅತ್ಯಂತ ಆಕರ್ಷಣೀಯವಾದ ಸೂರ್ಯ ದೇವಾಲಯವನ್ನು ನೋಡುವುದಕ್ಕೆ ಪ್ರಪಂಚ ವ್ಯಾಪಕವಾಗಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇದನ್ನು ಕ್ರಿ. ಶ13 ನೇ ಶತಮಾನದಲ್ಲಿ ನರಸಿಂಹ ದೇವ ನಿರ್ಮಾಣ ಮಾಡಿದರು.

3.ಬಾದಾಮಿ ಗುಹೆ

3.ಬಾದಾಮಿ ಗುಹೆ

PC:Nilmoni Ghosh

ಬಾದಾಮಿ ಕರ್ನಾಟಕ ರಾಜ್ಯದಲ್ಲಿನ ಒಂದು ಪುರಾತನವಾದ ಪಟ್ಟಣ. ಚಾಳುಕ್ಯರು ಈ ಪ್ರದೇಶವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದರು. ಬಾದಾಮಿ ಹಾಗು ಅದರ ಗುಹೆಗಳು ಪ್ರಸಿದ್ಧಿ ಹೊಂದಿದೆ. ಇದರಲ್ಲಿ ಒಟ್ಟು 4 ಗುಹೆಗಳು ಇವೆ.

4.ಬೃಹದೀಶ್ವರ ದೇವಾಲಯ

4.ಬೃಹದೀಶ್ವರ ದೇವಾಲಯ

PC:Nara J

ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯವನ್ನು ಚೋಳ ರಾಜನಾದ ರಾಜರಾಜ ಚೋಳನು ಕ್ರಿ.ಶ 1002 ರಲ್ಲಿ ನಿರ್ಮಾಣ ಮಾಡಿದನು. ಇದರಲ್ಲಿ ಪ್ರಧಾನವಾದ ದೈವವೆಂದರೆ ಮಹಾಶಿವನು. ಈ ದೇವಾಲಯವು ಅಷ್ಟದೀಪ ಕಲ್ಪಗಳ ವಿಗ್ರಹವನ್ನು ಹೊಂದಿರುವ ದೇವಾಲಯಗಳಲ್ಲಿ ಒಂದು. ಈ ಸುಂದರವಾದ ದೇವಾಲಯವು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಕೊಂಡಿದೆ.

5.ಚೆನ್ನಕೇಶವ ದೇವಾಲಯ

5.ಚೆನ್ನಕೇಶವ ದೇವಾಲಯ

PC:Dineshkannambadi

ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ಧಿಯನ್ನು ಹೊಂದಿರುವ ಚೆನ್ನಕೇಶವ ದೇವಾಲಯವು ಬೇಲೂರಿನಲ್ಲಿದೆ. ಈ ದೇವಾಲಯವನ್ನು ಮೃದುವಾದ ಕಲ್ಲನ್ನು ಉಪಯೋಗಿಸಿ ನಿರ್ಮಾಣ ಮಾಡಿದ್ದಾರೆ. ಹೊಯ್ಸಳ ವಿಷ್ಣುವರ್ಧನನು ಕ್ರಿ.ಶ 11 ನೇ ಶತಮಾನದಲ್ಲಿ ನಿರ್ಮಾಣ ಮಾಡಿದನು. ವಿಜಯನಗರ ಕಾಲದಲ್ಲಿಯೇ ದೇವಾಲಯದ ರಾಜಗೋಪುರಗಳು ನಿರ್ಮಾಣ ಮಾಡಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X