Search
  • Follow NativePlanet
Share
» »ತಮಿಳುನಾಡಿನ ಕೆಲವು ಅದ್ಭುತ ರಥಗಳು!

ತಮಿಳುನಾಡಿನ ಕೆಲವು ಅದ್ಭುತ ರಥಗಳು!

ದೇವಾಲಯಗಳ ರಾಜ್ಯವೆಂದೆ ಕರೆಯಾಲಾಗುವ ತಮಿಳುನಾಡಿನಲ್ಲಿ ಸಹಸ್ರಾರು ದೇವಾಲಯಗಳಿದ್ದು ನೂರಾರು ಸಂಖ್ಯೆಯಲ್ಲಿ ರಥಗಳಿರುವುದನ್ನು ಗಮನಿಸಬಹುದಾಗಿದೆ

By Vijay

ರಥಗಳು ಅಥವಾ ತೇರುಗಳು ಭಾರತದ ಹಿಂದು ಧಾರ್ಮಿಕ ಸಂಸ್ಕೃತಿಯಲ್ಲಿ ಕಂಡುಬರುವ ವಿಶೇಷ ವಾಹನಗಳು. ಪುರಾಣ-ಗ್ರಂಥಗಳಾದಿಗಳಲ್ಲಿ ರಥಗಳ ಕುರಿತು ಸಾಕಷ್ಟು ಉಲ್ಲೇಖವಿದೆ. ಸೂರ್ಯ ದೇವರು ಅಶ್ವಗಳು ನಡೆಸುವ ರಥವೇರಿ ಪ್ರತಿ ದಿನ ಭೂಮಿಗೆ ಹೊಸ ಹುರುಪನ್ನು, ಶಕ್ತಿಯನ್ನು ಧಾರೆ ಎರೆಯುತ್ತಾನೆ ಎಂದೂ ಸಹ ನಂಬಲಾಗುತ್ತದೆ.

ಹಿಂದೆ ರಾಜರು-ಮಹಾರಾಜರುಗಳು ತಮ್ಮದೆ ಆದ ಸ್ವರ್ಣ ಖಚಿತ, ಬೆಳ್ಳಿಯಿಂದ ಕೂಡಿದ ಅಥವಾ ವಿವಿಧ ಆಭರಣಾದಿಗಳಿಂದ ಕೂಡಿರುವ ರಥಗಳನ್ನು ಬಳಸುತ್ತಿದ್ದರು ಎಂಬುದನ್ನು ನಾವು ಕಥೆಯ ಮುಲಕ ಕೇಳೇ ಕೇಳಿರುತ್ತವೆ. ಅದರಂತೆ ಕೆಲವು ಪ್ರಖ್ಯಾತ ಹಾಗೂ ಮಹತ್ವವಾದ ದೇವಾಲಯಗಳಿಗೂ ಸಹ ರಥಗಳಿರುವುದನ್ನು ಕಾಣಬಹುದು.

ಕರ್ನಾಟಕದ ಕೆಲವು ದೇಗುಲ ರಥಗಳ ಯಾತ್ರೆ

ವರ್ಷಕ್ಕೊಮ್ಮೆ ಆಚರಿಸಲಾಗುವ ದೇವರ ಉತ್ಸವದ ಸಂದರ್ಭದಲ್ಲಿ ಈ ರಥಗಳು ಅಥವಾ ತೇರುಗಳು ಬಳಸಲ್ಪಡುತ್ತವೆ. ಇದರಲ್ಲಿ ದೇವರ ಉತ್ಸವ ಮೂರ್ತಿಯನ್ನು ಭಕ್ತಾದಿಗಳು ಅದ್ದೂರಿಯಾಗಿ ಮೆರವಣಿಗೆ ಮಾಡಿ ತಮ್ಮ ಭಕ್ತಿ, ಶಋದ್ಧೆಗಳನ್ನು ಮೆರೆಯುತ್ತಾರೆ.

ಹೀಗೆ ರಥಗಳು ತಮ್ಮದೆ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಅದೆಷ್ಟೊ ಜನರು ದೇವಾಲಯಗಳ ವಿಶಿಷ್ಟ ರಥಗಳನ್ನು ನೋಡಲು ಬಯಸುತ್ತಾರೆ. ಹಾಗಾಗಿ ಇವೂ ಸಹ ಒಂದು ರೀತಿಯಲ್ಲಿ ಪ್ರವಾಸಿ ಆಕರ್ಷಣೆಗಳೆಂದರೂ ಸಹ ತಪ್ಪಾಗಲಾರದು. ಇನ್ನೂ ಇವು ವರ್ಷದ ಮಿಕ್ಕ ಸಮಯ ಒಂದೆಡೆ ನೆಲೆಸಿದ್ದು ಸಾಮಾನ್ಯವಾಗಿ ಆ ರಸ್ತೆಯು ರಥ ಬೀದಿಗಳೆಂದೆ ಹೆಸರುವಾಸಿಯಾಗಿರುತ್ತವೆ.

ಪ್ರಸ್ತುತ ಲೆಖನದಲ್ಲಿ ತಮಿಳುನಾಡಿನ ರಾಜ್ಯಾದ್ಯಂತ ಕಂಡುಬರುವ ಕೆಲವು ಆಯ್ದ ಪ್ರಮುಖ ದೇವಾಲಯಗಳ ವಿಶಿಷ್ಟ ರಥಗಳ ಯಾತ್ರೆ ಮಾಡಿ.

ಚೆನ್ನೈ

ಚೆನ್ನೈ

ತಿರುವರೂರು ದೇವಾಲಯದ ರಥದಂತೆ ಕೆತ್ತಲಾದ ರಥದ ಸ್ಮಾರಕವಾಗಿದೆ ಇದು. ವಲ್ಲುವರ್ ಕೊಟ್ಟಂ ಎಂದು ಇದನ್ನು ಕರೆಯುತ್ತಾರೆ. ಚೆನ್ನೈ ನಗರ ಕೇಂದ್ರದ ಕೊಡಂಬಕ್ಕಂ ಹೈ ರಸ್ತೆಯಲ್ಲಿ ಇದನ್ನು ಕಾಣಬಹುದು. ತಮಿಳಿನ ಪ್ರಸಿದ್ಧ ಸಂತ ತಿರುವಳ್ಳುವರ್ ಗೆ ಮುಡಿಪಾಗಿದೆ ಇದು.

ಚಿತ್ರಕೃಪೆ: Panoshaf

ಮುರುಗನ್ ದೇವಾಲಯ

ಮುರುಗನ್ ದೇವಾಲಯ

ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಳ್ಯಂನ ಪಚೈ ಮಲೈ ಮುರುಗನ್ ದೇವಾಲಯದ ಸ್ವರ್ಣ ರಥವಾಗಿದೆ ಇದು. ನಂಬಿಕೆಯಂತೆ ಉತ್ಸವದಲ್ಲಿ ಯಾರಿಗೆ ಈ ತೇರನ್ನು ಎಳೆಯುವ ಅವಕಾಶ ಲಭಿಸುತ್ತದೊ ಅವರಿಗೆ ಮುರುಗನ ಕೃಪೆ ಉಂಟಾಗುತ್ತದೆ.

ಚಿತ್ರಕೃಪೆ: Portvp

ಕಾಮಾಕ್ಷಿ ಸನ್ನಿಧಿ

ಕಾಮಾಕ್ಷಿ ಸನ್ನಿಧಿ

ತಮಿಳುನಾಡಿನ ಕಂಚೀಪುರಂ ಕ್ಷೇತ್ರವು ಕಾಮಾಕ್ಷಿ ಅಮ್ಮನವರ ದೇವಾಲಯಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ದೇವಾಲಯಕ್ಕೆ ತನ್ನದೆ ಆದ ವಿಶೇಷ ರಥವಿದ್ದು ಉತ್ಸವದ ಸಂದರ್ಭದಲ್ಲಿ ಬಳಸಲ್ಪಡುತ್ತದೆ.

ಚಿತ್ರಕೃಪೆ: McKay Savage

ಕುಂಭಕೋಣಂ

ಕುಂಭಕೋಣಂ

ತಮಿಳುನಾಡಿನ ದೇವಾಲಯಗಳ ಪಟ್ಟಣವಾದ ಕುಂಭಕೋಣಂನಲ್ಲಿರುವ ಕುಂಬೇಶ್ವರ ದೇವಾಲಯವು ಶಿವನಿಗೆ ಮುಡಿಪಾದ ಪ್ರಸಿದ್ಧ ದೇವಾಲಯವಾಗಿದ್ದು ತನ್ನದೆ ಆದ ರಥವನ್ನು ಹೊಂದಿದೆ. ವಾರ್ಷಿಕವಾಗಿ ಜರುಗುವ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ.

ಚಿತ್ರಕೃಪೆ: Ssriram mt

ರಥ

ರಥ

ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ತಾಣವಾದ ತಿರುವಣ್ಣಾಮಲೈ ದೇವಾಲಯದ ಆಕರ್ಷಕ ರಥವಿದು.

ಚಿತ್ರಕೃಪೆ: A.D.Balasubramaniyan

ಮೈಲಾಪೂರ

ಮೈಲಾಪೂರ

ಚೆನ್ನೈನ ಮೈಲಾಪೂರದಲ್ಲಿರುವ ಪ್ರಸಿದ್ಧ ಕಾಪಾಲೀಶ್ವರನ ದೇವಾಲಯದ ರಥ ಇದಾಗಿದೆ. ಇದರ ವಿಶೇಷತೆ ಎಂದರೆ ಈ ತೇರಿನ ಸಾರಥಿ ಸಾಕ್ಷಾತ್ ಬ್ರಹ್ಮ ದೇವರೆ ಆಗಿರುವುದು.

ಚಿತ್ರಕೃಪೆ: Badri Seshadri

ಆಲ್ವಾರ್ ಕುರುಚ್ಚಿ

ಆಲ್ವಾರ್ ಕುರುಚ್ಚಿ

ತಮಿಳುನಾಡಿನ ತಿರುನೆಲ್ವೇಲಿಯ ಅಲ್ವಾರ್ ಕುರುಚ್ಚಿಯ ಶಿವ ಶೈಲನಾಥರ್ ದೇವಾಲಯದ ತೇರೆಳೆತ. ಸಾಕಷ್ಟು ಪ್ರಸಿದ್ಧಿ ಪಡೆದಿದೆ ಈ ಉತ್ಸವ ಇಲ್ಲಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ.

ಚಿತ್ರಕೃಪೆ: Ramkumaran7

ತಿರುಪೂರು

ತಿರುಪೂರು

ತಿರುಪೂರು ಜಿಲ್ಲೆಯ ತಿರುಮುರುಗನ್ಪೂಂದಿ ಪಂಚಾಯತ್ ಪಟ್ಟಣದ ತಿರುಮುರುಗನ್ ದೇವಾಲಯದ ರಥ.

ಚಿತ್ರಕೃಪೆ: Vishnusri14

ಸುಚೀಂದ್ರಂ

ಸುಚೀಂದ್ರಂ

ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ತಾಣವಾದ ಸುಚೀಂದ್ರಂನಲ್ಲಿರುವ ಪ್ರಸಿದ್ಧ ತನುಮಲಯನ್ ದೇವಾಲಯದ ಸುಂದರ ರಥ.

ಚಿತ್ರಕೃಪೆ: Vinayaraj

ಮೈಲಾಪೂರ

ಮೈಲಾಪೂರ

ಚೆನ್ನೈನ ಮೈಲಾಪೂರದಲ್ಲಿರುವ ಶ್ರೀನಿವಾಸ ಪೆರುಮಾಳನ ದೇವಾಲಯವು ಸಾಕಷ್ಟು ಪ್ರಸಿದ್ಧಿಗಳಿಸಿದೆ. ಶ್ರೀನಿವಾಸನ ಉತ್ಸವ ಮೂರ್ತಿಯನ್ನು ಹೊತ್ತೊಯ್ಯುವ ರಥವಿದು.

ಚಿತ್ರಕೃಪೆ: Bala Subs

ಸೇಲಂ

ಸೇಲಂ

ಸೇಲಂನಲ್ಲಿರುವ ಚಿನ್ನ ತಿರುಪತಿ ಕ್ಷೇತ್ರವು ವೆಂಕಟರಮಣನಿಗೆ ಮುಡಿಪಾದ ದೇವಾಲಯದಿಂದಾಗಿ ಸಾಕಷ್ಟು ಪ್ರಸಿದ್ಧಿಗಳಿಸಿದೆ. ಚಿಕ್ಕ ತಿರುಪತಿ ಎಂದೆ ಕರೆಯಲಾಗುವ ಈ ಕ್ಷೇತ್ರದ ದೇವಾಲಯದ ರಥವೂ ಸಹ ಚಿಕ್ಕದಾಗಿದ್ದರೂ ತನ್ನ ಕಲಾತ್ಮಕತೆಯಿಂದ ಮನಸ್ಸಿನಲ್ಲಿ ದೊಡ್ಡದಾಗಿ ಆಕರ್ಷಿಸುತ್ತದೆ.

ಚಿತ್ರಕೃಪೆ: Thiagupillai

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X