Search
  • Follow NativePlanet
Share
» »ಕರ್ನಾಟಕದ ಏಳು ಮುಕ್ತಿ ಸ್ಥಳಗಳು ಯಾವ್ಯಾವುವು ಗೊತ್ತಾ?

ಕರ್ನಾಟಕದ ಏಳು ಮುಕ್ತಿ ಸ್ಥಳಗಳು ಯಾವ್ಯಾವುವು ಗೊತ್ತಾ?

ಉಡುಪಿ, ಕೊಲ್ಲೂರು, ಸುಬ್ರಹ್ಮಣ್ಯ, ಕುಂಬಾಶಿ, ಕೊಡೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ ಕರ್ನಾಟಕದ ಏಳು ಮುಕ್ತಿ ಸ್ಥಳಗಳೆನ್ನಲಾಗುತ್ತದೆ. ಈ ಎಲ್ಲಾ ದೇವಾಲಯಗಳನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ. ಇಲ್ಲಿನ ಭೂಮಿಯು ಪರಶುರಾಮದಿಂದ ಸೃಷ್ಟಿಯಾಗಿದ್ದು ಎನ್ನಲಾಗುತ್ತದೆ. ಈ ಎಲ್ಲಾ ದೇವಾಲಯಗಳು ಕರ್ನಾಟಕದ ಕರಾವಳಿ ಪ್ರದೇಶದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿವೆ ಮತ್ತು ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ಕೊಲ್ಲೂರು ಮೂಕಾಂಬಿಕೆ

ಕೊಲ್ಲೂರು ಮೂಕಾಂಬಿಕೆ

PC:Premkudva

ಕೊಲ್ಲೂರಿನ ಮೂಕಾಂಬಿಕಾ ದೇವಿ ದೇವಸ್ಥಾನವು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಜನರಿಗೆ ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳ ಪೈಕಿ ಒಂದೆನಿಸಿದೆ. ಸುಮಾರು 1200 ವರ್ಷಗಳಷ್ಟು ಹಿಂದೆಯೇ ಆದಿ ಶಂಕರಾಚಾರ್ಯರು ಈ ದೇವಸ್ಥಾನದಲ್ಲಿ ದೇವತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಮೂಕಾಂಬಿಕಾ ದೇವಿಯ ದೇವಸ್ಥಾನವು ಕರ್ನಾಟಕದಲ್ಲಿನ 'ಸಪ್ತ ಮುಕ್ತಿಸ್ಥಳ' ತೀರ್ಥಯಾತ್ರಾ ತಾಣಗಳ ಪೈಕಿ ಒಂದಾಗಿದೆ. ಕೊಡಚಾದ್ರಿಯ ತಪ್ಪಲಿನಲ್ಲಿ ಶಿವ ಮತ್ತು ಶಕ್ತಿ ಈ ಇಬ್ಬರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಈ ದೇವತೆಯು ಕಂಡುಬರುತ್ತಾಳೆ.

ಉಡುಪಿ ಶ್ರೀ ಕೃಷ್ಣ

ಉಡುಪಿ ಶ್ರೀ ಕೃಷ್ಣ

PC: Ravikiranr

ಉಡುಪಿ ನಗರವು ಸುಂದರವಾದ ಕರಾವಳಿ ಪಟ್ಟಣವಾಗಿದ್ದು, ದೇವಾಲಯಗಳು ಮತ್ತು ಅನನ್ಯ ಪಾಕಪದ್ಧತಿಗಳಿಗೆ ಹೆಸರುವಾಸಿಯಾಗಿದೆ. ಉಡುಪಿ ಶ್ರೀ ಕೃಷ್ಣ ಮಾತಾ ಎಂದೂ ಕರೆಯಲ್ಪಡುವ ಕೃಷ್ಣ ದೇವಾಲಯ ಈ ಪಟ್ಟಣದ ಪ್ರಮುಖ ದೇವಾಲಯವಾಗಿದೆ. ದೇವಾಲಯದ ದೈನಂದಿನ ಸೇವೆಗಳನ್ನು ನಿರ್ವಹಿಸುವ ಎಂಟು ಮಠಗಳಿವೆ. ಪರ್ಯಯವು ಜನವರಿ ತಿಂಗಳಲ್ಲಿ ನಡೆಯುವ ದೊಡ್ಡ ವಾರ್ಷಿಕ ಉತ್ಸವವಾಗಿದ್ದು, ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಉಡುಪಿಯ ರುಚಿಕರವಾದ ತಿನಿಸು ಮತ್ತು ಕಾಪ್ ಬೀಚ್, ಮಲ್ಪೆ ಬೀಚ್, ಸೇಂಟ್ ಮೇರೀಸ್ ದ್ವೀಪ ಮುಂತಾದ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯದಿರಿ.

ಕುಕ್ಕೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ

PC:Sarvagnya

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ನಾಗ ದೋಷ ಪರಿಹಾರಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಈಶ್ವರ ಪುತ್ರ ಷಣ್ಮುಖ ದೇವರನ್ನು ಇಲ್ಲಿ ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ದೇಶದ ಮೂಲೆಮೂಲೆಗಳಿಂದ ನಾಗಾರಧಕರು ಇಲ್ಲಿಗೆ ಆಗಮಿಸುತ್ತಾರೆ. ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಪವಿತ್ರ ಕುಮಾರಧಾರ ತೀರ್ಥ ಸ್ನಾನದಿಂದ ಮತ್ತು ಮಡೆಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ, ಧರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ.

ಕುಂಬಾಶಿ ಗಣಪತಿ

ಕುಂಬಾಶಿ ಗಣಪತಿ

PC:Raghavendra Nayak Muddur

ಉಡುಪಿ ಜಿಲ್ಲೆಯ ಪ್ರಸಿದ್ಧ ಗಣೇಶ ದೇವಾಲಯಗಳಲ್ಲಿಆನೆಗುಡ್ಡೆಯ ಶ್ರೀ ಮಹಾ ಗಣಪತಿಯೂ ಒಂದು. ಕರಾವಳಿ ಕರ್ನಾಟಕದ ಏಳು 'ಮುಕ್ತಿ ಸ್ಥಳಗಳು' , ಪರಶುರಾಮ ಕ್ಷೇತ್ರದಲ್ಲಿ ಅನೆಗುಡ್ಡೆ ಕೂಡ ಸೇರಿದೆ. ಈ ಪುರಾತನ ಯಾತ್ರಾ ಕೇಂದ್ರದಲ್ಲಿ ಗಣೇಶನು ನಿಂತಿರುವ ಭಂಗಿಯಲ್ಲಿ ಇದ್ದಾನೆ. ದೇವಾಲಯದ ತೊಟ್ಟಿಯು ಮಧ್ಯದಲ್ಲಿ ಒಂದು ಸಣ್ಣ ದೇವಾಲಯವನ್ನು ಹೊಂದಿದೆ. ಅದರಲ್ಲಿ ಒಂದು ಭಾಗವೆಂದರೆ ಸೂರ್ಯ ಪುಷ್ಕರಿಣಿ ಮತ್ತು ಇನ್ನೊಂದು ಚಂದ್ರ ಪುಷ್ಕರಿಣಿ. ಹರಿ, ಹರಾ ಮತ್ತು ಗೌತಮ ಮುನಿಯ ಕಮಂಡಲಾ ಚಿತ್ರಗಳು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.

ಕೋಟೇಶ್ವರ

ಕೋಟೇಶ್ವರ

PC:Nischitha H S

ಕೋಟೇಶ್ವರ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿದೆ. ಇದು ಕರ್ನಾಟಕ ಯಾತ್ರಾ ಸ್ಥಳದ ಏಳು ಮುಕ್ತಿ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಲಾರ್ಡ್ ಪರಶುರಾಮ ಕ್ಷೇತ್ರ ಎಂದೂ ಕರೆಯುತ್ತಾರೆ. ತೆಕ್ಕಟ್ಟೆ, ಕೊಮೆ, ಕೊರೋಡಿ, ಕುಂಭಾಶಿ, ಗೋಪಾಡಿ, ಮೂಡಗೋಪಾಡಿ, ಬೀಜಾಡಿ, ಹೊದ್ರಾಳಿ, ಕುಂಬ್ರಿ, ಬಡಾಕೆರೆ, ಮೂಡಹಂಗಳೂರು, ಹಂಗಳೂರು, ಕೋಣಿ, ಕಟ್ಗೆರೆಗಳೆಂಬ ಹದಿನಾಲ್ಕು ಗ್ರಾಮಗಳ ಒಕ್ಕೂಟವನ್ನು ಕೋಟೇಶ್ವರವೆಂದು ಕರೆಯಲಾಗುತ್ತದೆ. ನಾಲ್ಕುವರೆ ಎಕರೆ ಸ್ಥಳವನ್ನು ಕ್ರಮಿಸಿರುವ ಕೋಟಿತೀರ್ಥವಿದೆ. ಶಿವನು ಕೋಟಿಲಿಂಗಳಲ್ಲಿ ಐಕ್ಯನಾಗಿದ್ದರಿಂದ ಇಲ್ಲಿನ ಶಿವನನ್ನು ಶ್ರೀ ಕೋಟಿಲಿಂಗೇಶ್ವರನೆಂದು ಕರೆಯುತ್ತಾರೆ.

ಶಂಕರನಾರಾಯಣ

ಶಂಕರನಾರಾಯಣ

PC:youtube

ಇದು ಬಹಳ ಪ್ರಾಚೀನ ದೇವಾಲಯವಾಗಿದೆ. ಕೆರೆಯ ನಡುವೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿರುವ ಈ ದೇವಾಲಯವು ಕ್ರೋಡ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಟಿಪ್ಪು ಸುಲ್ತಾನನು ದಾನ ನೀಡಿದ ದೊಡ್ಡ ಗಾತ್ರದ ಗಂಟೆ ದೇವಾಲಯದ ಪ್ರಾಂಗಣದಲ್ಲಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇದೆ ಎನ್ನಲಾಗುತ್ತದೆ.

ಗೋಕರ್ಣ

ಗೋಕರ್ಣ

PC :Sbblr geervaanee

ಉತ್ತರ ಕರ್ನಾಟಕದ ಕುಮ್ಟಾ ತಾಲೂಕಿನಲ್ಲಿರುವ ಗೋಕರ್ಣವು ಇತಿಹಾಸ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿನ ಮುಖ್ಯ ದೇವರು ಶಿವ. ಇಲ್ಲಿ ಶಿವನನ್ನು ಮಹಾಬಲೇಶ್ವರ ಎಂದೂ ಕರೆಯುತ್ತಾರೆ. ಗೋಕರ್ಣದಲ್ಲಿ ಸುಂದರ ಬೀಚ್‌ಗಳೂ ಇವೆ. ಇದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಹಾಬಲೇಶ್ವರ ದೇವಸ್ಥಾನವು 'ಆತ್ಮಲಿಂಗ' ವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more