Search
  • Follow NativePlanet
Share
» »ಶಬರಿಮಲೆ ಪ್ರಸಾದದಿಂದ ಈಗ್ಲೇ 35 ಕೋಟಿ ರೂ. ಆದಾಯ ಬರುತ್ತಂತೆ, ಇನ್ನು ಎಷ್ಟು ಬರುತ್ತೋ !

ಶಬರಿಮಲೆ ಪ್ರಸಾದದಿಂದ ಈಗ್ಲೇ 35 ಕೋಟಿ ರೂ. ಆದಾಯ ಬರುತ್ತಂತೆ, ಇನ್ನು ಎಷ್ಟು ಬರುತ್ತೋ !

ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿಯಾಗಿದೆ. ಈ ವರೆಗೆ ಶಬರಿಮಲೆಗೆ ಬರೀ ಪುರುಷರು ಇಲ್ಲವಾದಲ್ಲಿ ೧೦ ವರ್ಷದ ಒಳಗಿನ ಮಕ್ಕಳು ೫೦ ವರ್ಷ ದಾಟಿದ ಮಹಿಳೆಯರಿಗಷ್ಟೇ ಪ್ರವೇಶವಿತ್ತು. ಆದರೆ ಇದೀಗ ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆ ಮೆಟ್ಟಿಲು ಹತ್ತಬಹುದು ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ತೀರ್ಪನ್ನು ಎತ್ತಿ ಹಿಡಿದಿರೋದು ನಿಮಗೆಲ್ಲ ಗೊತ್ತೇ ಇದೆ.

ಶಬರಿಮಲೈ

ಶಬರಿಮಲೈ

ಶಬರಿಮಲವನ್ನು ಶಬರಿಮಲೈ ಎಂದು ಸಹ ಕರೆಯಲಾಗುತ್ತದೆ. ಮಲೈ ಎಂದರೆ ಬೆಟ್ಟ ಪ್ರದೇಶ. ಅಯ್ಯಪ್ಪನು ಬೆಟ್ಟದ ಮೇಲೆ ಇರುವುದರಿಂದ ಇದನ್ನು ಶಬರಿಮಲೆ ಎಂದು ಕರೆಯಲಾಗುತ್ತದೆ. ಪರ್ವತ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿದೆ. ಅಯ್ಯಪ್ಪ ದೇವಸ್ಥಾನ ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿದೆ.

18 ಬೆಟ್ಟಗಳಿವೆ

18 ಬೆಟ್ಟಗಳಿವೆ

PC:Kandukuru Nagarjun

ಅಯಪ್ಪ ದೇವಸ್ಥಾನದಲ್ಲಿರುವ ಬೆಟ್ಟದ ಹತ್ತಿರ 18 ಬೆಟ್ಟಗಳಿವೆ. ಅಯ್ಯಪ್ಪ ದೇವಸ್ಥಾನಕ್ಕೆ ಪ್ರಯಾಣವು ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಜನವರಿಯಲ್ಲಿ ಕೊನೆಗೊಳ್ಳುತ್ತದೆ. ದಕ್ಷಿಣದ ರಾಜ್ಯಗಳ ಭಕ್ತರಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು

ಇತರ ರಾಜ್ಯಗಳಿಂದಲೂ ಬರುತ್ತಾರೆ.

ಮಕರ ಜ್ಯೋತಿ

ಮಕರ ಜ್ಯೋತಿ

PC:Praveenp

ಮಂಡಲ ಪೂಜೆ ಮತ್ತು ಮಕರ ಬೆಳಕು ಸಂದರ್ಭ ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ. ಜನವರಿ 14 ರಂದು ಮಕರ ಜ್ಯೋತಿ ಕಾಣಿಸಿಕೊಳ್ಳುತ್ತಾನೆ. ಸಾಮಾನ್ಯವಾಗಿ ಅಯ್ಯಪ್ಪ ದೇವಸ್ಥಾನವು ಮಕರ ಸಂಕ್ರಾಂತಿಗೆ ಮಾತ್ರ ತೆರೆದಿರುತ್ತದೆ ಎಂದು ಬಹಳಷ್ಟು ಜನರು ನಂಬಿದ್ದಾರೆ.

ಮಲಯಾಳಂ ತಿಂಗಳು

ಮಲಯಾಳಂ ತಿಂಗಳು

ಆದರೆ ಅಯ್ಯಪ್ಪ ದೇವಸ್ಥಾನವು ಪ್ರತಿ ಮಲಯಾಳಂ ತಿಂಗಳಲ್ಲಿ ಮೊದಲ ಐದು ದಿನಗಳವರೆಗೆ ತೆರೆದಿರುತ್ತದೆ. ಶಬರಿಮಲೆ ಯಾತ್ರೆಯು ಒಂದು ಬಾರಿ ಕಠಿಣಕರ ಯಾತ್ರೆಯಾಗಿದ್ದು, ಕಾಲಿಗೆ ಚಪ್ಪಲು ಧರಿಸದೆ ಕಲ್ಲು, ಮುಳ್ಳುಗಳ ದಾರಿಯಲ್ಲಿ ನಡೆಯಬೇಕಾಗುತ್ತದೆ.

ಪುನನಿರ್ಮಾಣ

ಪುನನಿರ್ಮಾಣ

1909 ರಲ್ಲಿ ದೇವಾಲಯದ ಬೆಂಕಿಯು ಸಂಭವಿಸಿತು. ಹೀಗಾಗಿ ಈ ದೇವಾಲಯವನ್ನು 1909-10ರಲ್ಲಿ ಪುನರ್ನಿರ್ಮಾಣ ಮಾಡಲಾಯಿತು. ಕಲ್ಲಿನ ಪ್ರತಿಮೆಗಳ ಬದಲಾಗಿ, ಪಂಚಲೋಹ ಪ್ರತಿಮೆಯನ್ನು ಪುನಃಸ್ಥಾಪಿಸಲಾಗುತ್ತದೆ. ಅಂದಿನಿಂದ, ಈ ವಿಗ್ರಹವನ್ನು ಪೂಜಿಸಲಾಗುತ್ತದೆ.

ಸಹಸ್ರಾರು ಭಕ್ತರು

ಸಹಸ್ರಾರು ಭಕ್ತರು

PC:Avsnarayan

ಶಬರಿಮಲದಲ್ಲಿ ಮುಖ್ಯ ದೇವಸ್ಥಾನದ ಜೊತೆಗೆ ಹಲವು ದೇವಾಲಯಗಳಿವೆ. ಶಬರಿಮಲೈನಲ್ಲಿ ಅಯ್ಯಪ್ಪ ಸನ್ನಿಧಿಯ ಪ್ರತಿ ವರ್ಷ ಸುಮಾರು 5 ಕೋಟಿ ಭಕ್ತರು ಬರುತ್ತಾರೆ ಎನ್ನಲಾಗುತ್ತದೆ . ದೇವಾಲಯದ ಪ್ರಸಾದ ಮಾರಾಟದಲ್ಲಿ 35 ಕೋಟಿ ರೂ. ಆದಾಯ ಬರುತ್ತದೆ ಎನ್ನಲಾಗುತ್ತದೆ.

ಮುಖ್ಯ ಅರ್ಚಕರ ಆಯ್ಕೆ

ಮುಖ್ಯ ಅರ್ಚಕರ ಆಯ್ಕೆ

ಶಬರಿಮಲೆಯಲ್ಲಿ ವಂಶಪಾರಂಪರ್ಯದಿಂದ ಬಂದಿರುವ ಅರ್ಚಕರಿದ್ದಾರೆ ಅವರನ್ನು ತಂತ್ರಿ ಎಂದು ಕರೆಯಲಾಗುತ್ತದೆ. ಇನ್ನು ಇಲ್ಲಿ ಪೂಜೆ ಮಾಡುವ ಮುಖ್ಯ ಅರ್ಚಕರ ಆಯ್ಕೆಯನ್ನು ಲಾಟರಿ ಮುಖಾಂತರ ಮಾಡಲಾಗುತ್ತದೆ. ಹತ್ತು ಜನರನ್ನು ಆಯ್ಕೆ ಮಾಡಿ ಆ ಹೆಸರನ್ನು ಒಂದು ಡಬ್ಬದಲ್ಲಿ ಹಾಕಿ, ಆ ಡಬ್ಬವನ್ನು ಅಯ್ಯಪ್ಪನ ವಿಗ್ರಹದ ಮುಂದಿಟ್ಟು ಸಣ್ಣ ಮಗುವಿನ ಕೈಯಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಲಾಟರಿ ಮೂಲಕ ಆಯ್ಕೆ

ಲಾಟರಿ ಮೂಲಕ ಆಯ್ಕೆ

ಆ ಚೀಟಿಯಲ್ಲಿ ಯಾರ ಹೆಸರು ಬರುತ್ತದೋ ಅವರು ಆ ವರ್ಷ ಶಬರಿಮಲೆಯ ಮುಖ್ಯ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಈ ಸಂಪ್ರದಾಯವು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇರುಮುಡಿ

ಇರುಮುಡಿ

ಅಯ್ಯಪ್ಪ ದರ್ಶನಕ್ಕಾಗಿ ಇರುಮುಡಿ ಹೊತ್ತಿರುವವರು ಮಾತ್ರವೇ ದೇವಸ್ಥಾನ ಹದಿನೆಂಟು ಮೆಟ್ಟಿಲುಗಳನ್ನು ಏರಲು ಅರ್ಹರಾಗಿರುತ್ತಾರೆ. ಅವರನ್ನು ಬಿಟ್ಟು ಹೇಗಾದರೂ, ಅರ್ಚಕರು, ತಿರುವಾಭರಣ ಸಾಗಿಸುವವರು ಇರುಮುಡಿ ಇಲ್ಲದೆಯೇ ೧೮ ಮೆಟ್ಟಿಲುಗಳನ್ನು ಹತ್ತಬಹುದು.

ತಿರುವಾಭರಣಂ

ತಿರುವಾಭರಣಂ

ಶಬರಿಮಲೈನ ತಿರುವಾಭರಣಂನ್ನು ಶಬರಿಮಲೆಯಿಂದ 84 ಕಿ.ಮೀ ದೂರದಲ್ಲಿರುವ ಪಂದಳಂ ಎನ್ನುವಲ್ಲಿ ಸಂರಕ್ಷಿಸಿಡಲಾಗುತ್ತದೆ. ಈ ಆಭರಣಗಳನ್ನು ತರಲು ಭಾಸ್ಕರನ್ ಪಿಳ್ಳೈ ಫ್ಯಾಮಿಲಿ ಇದೆ. ಅವರು ಜನವರಿ 12 ನೇ ಮಧ್ಯಾಹ್ನ 12 ರ ಹೊತ್ತಿಗೆ ಅಲ್ಲಿಂದ ಹೊರಟು, ಬರುವ ದಾರಿಯಲ್ಲಿ ಎರಡು ರಾತ್ರಿ ವಿಶ್ರಾಂತಿ ತೆಗೆದುಕೊಂಡು. ಜನವರಿ ೧೪ರಂದು ಸಂಜೆ ೬ ಗಂಟೆಗೆ ಶಬರಿಮಲೆ ತಲುಪುತ್ತಾರೆ.

ಮಕರ ಜ್ಯೋತಿಯ ದರ್ಶನ

ಮಕರ ಜ್ಯೋತಿಯ ದರ್ಶನ

ತಿರುವಾಭರಣಗಳನ್ನು ಅಯ್ಯಪ್ಪ ಸ್ವಾಮಿಗೆ ಅಲಂಕರಿಸಿದ ನಂತರ ಮಕರ ಜ್ಯೋತಿಯ ದರ್ಶನವಾಗುತ್ತದೆ. ಮತ್ತೆ ಜ. ೨೦ರಂದು ತಿರುವಾಭರಣಗಳಿದ್ದ ಡಬ್ಬಗಳನ್ನು ಮರಳಿ ಪಂದಳಂನಲ್ಲಿ ಭದ್ರವಾಗಿಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more