Search
  • Follow NativePlanet
Share
» »ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

ಒಂದು ಕಾಲದಲ್ಲಿ ಪ್ರವಾಸಿ ಪ್ರದೇಶದಲ್ಲಿನ ಮರೆಯಲಾಗದ ಸಂಘಟನೆಗಳು, ಅಲ್ಲಿನಪ್ರದೇಶಗಳನ್ನು ಸೆರೆ ಹಿಡಿದ ಫೋಟೋಗಳನ್ನು ಬಂಧಿಸಿ ತೆಗೆದುಕೊಂಡು ಬರುತ್ತಿದ್ದರು. ಆಫೋಟೋಗಳನ್ನು ತಮಗೆ ತಿಳಿದಿರುವವರಿಗೆ ಎಲ್ಲರಿಗೂ ಕೂಡ ತೋರಿಸಿ ಅತ್ಯಂತ ಸಂತೋಷಗೊಳ್ಳ

By Sowmyabhai

ಒಂದು ಕಾಲದಲ್ಲಿ ಪ್ರವಾಸಿ ಪ್ರದೇಶದಲ್ಲಿನ ಮರೆಯಲಾಗದ ಸಂಘಟನೆಗಳು, ಅಲ್ಲಿನ ಪ್ರದೇಶಗಳನ್ನು ಸೆರೆ ಹಿಡಿದ ಫೋಟೋಗಳನ್ನು ಬಂಧಿಸಿ ತೆಗೆದುಕೊಂಡು ಬರುತ್ತಿದ್ದರು. ಆ ಫೋಟೋಗಳನ್ನು ತಮಗೆ ತಿಳಿದಿರುವವರಿಗೆ ಎಲ್ಲರಿಗೂ ಕೂಡ ತೋರಿಸಿ ಅತ್ಯಂತ ಸಂತೋಷಗೊಳ್ಳುತ್ತಿದ್ದರು. ಆದರೆ ಎಲ್ಲಾ ರಂಗದಲ್ಲೂ ಮಾರ್ಪಟು ಬಂದ ಹಾಗೆ ಪ್ರವಾಸಿ ರಂಗದಲ್ಲಿಯೂ ಕೂಡ ಪರಿರ್ವತನೆಗಳು ಆಗಿವೆ. ಇತ್ತೀಚೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಸಲುವಾಗಿಯೇ ಟೂರ್‍ಗಳಿಗೆ ತೆರಳುತಿರುವವರು ಇದ್ದಾರೆ. ಇನ್ನು ಭಾರತ ದೇಶದ ವಿಭಿನ್ನಸಂಸ್ಕøತಿ ಸಂಪ್ರದಾಯವನ್ನು ಹೊಂದಿದೆ. ಅಷ್ಟೇ ಅಲ್ಲದೇ ನಮ್ಮ ಭಾರತ ದೇಶದ ಭೂಭಾಗದಲ್ಲಿ ಅನೇಕ ಸುಂದರವಾದ ಬೆಟ್ಟಗಳಿಂದ ಅವೃತವಾಗಿದೆ.

ಎಲ್ಲಿ ನೋಡಿದರು ಕೂಡ ಹಚ್ಚ ಹಸಿರಿನಿಂದ ಕಂಗೊಳಿಸುವ ಆಹ್ಲಾದಕರವಾದ ವಾತಾವರಣವು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಈ ಸಲುವಾಗಿ ಫೋಟೋಗ್ರಫಿ ಟೂರಿಸಂ ಅತ್ಯಂತ ಅನುಕೂಲಕರವಾದ ಪ್ರವಾಸಿ ಪ್ರದೇಶಗಳ ವಿವರಗಳ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿದುಕೊಳ್ಳೊಣ.

1.ಅರಣ್ಯ ಜಂತುಗಳು ಭೇಟಿಗಾಗಿ..

1.ಅರಣ್ಯ ಜಂತುಗಳು ಭೇಟಿಗಾಗಿ..

Image source

ಬೋನಿನಲ್ಲಿ ಅರಣ್ಯ ಜಂತುಗಳನ್ನು ಕಾಣಬವುದು ಬೇರೆ, ಅವುಗಳನ್ನು ಸಹಜ ಪರಿಸರ ಪ್ರದೇಶಗಳಾದ ಅರಣ್ಯದಲ್ಲಿ ಅವುಗಳ ಆಹಾರವನ್ನು, ಗಂಭೀರವನ್ನು ನೋಡುವುದೇ ಬೇರೆ. ಸಹಜವಾದ ಪರಿಸ್ಥಿತಿಗೆ ಅರಣ್ಯದಲ್ಲಿ ಪ್ರಾಣಿಗಳು ಹೊಂದಿಕೊಂಡಿರುತ್ತದೆ. ಹಾಗಾಗಿಯೇ ಅರಣ್ಯದ ಪ್ರಾಣಿಗಳು ಮುಖ್ಯವಾಗಿ ಸಿಂಹ, ಹುಲಿ ನಂತಹ ಪ್ರಾಣಿಗಳ ಗಂಭೀರವನ್ನು ಹಾಗು ಚಲನವಲನವನ್ನು ಅರಣ್ಯದಲ್ಲಿಯೇ ಕಾಣಬೇಕು. ಅವುಗಳನ್ನು ಕ್ಯಾಮೆರಾ ಕಣ್ಣಿಗೆ ಸೆರೆ ಹಿಡಿದುಕೊಳ್ಳುವುದು ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ. ಇಂತಹ ಫೋಟೋಗಳನ್ನು ತೆಗೆಯುವವರಿಗೆ ವೈಲ್ಡ್ ಲೈಫ್ ಫೋಟೋ ಗ್ರಾಫರ್ಸ್ ಎಂದು ಕರೆಯುತ್ತಾರೆ.

2.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

2.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಇದಕ್ಕಾಗಿಯೇ ಭಾರತ ದೇಶದಲ್ಲಿ ಕೆಲವು ಪ್ರದೇಶಗಳು ಪ್ರವಾಸಿಗರನ್ನು ಆಹ್ವಾನಿಸುತ್ತದೆ. ಮುಖ್ಯವಾಗಿ ಗುಜರಾತ್‍ನಲ್ಲಿನ ಗಿರ್ ಅರಣ್ಯದಲ್ಲಿ ಏಶಿಯಾ ಸಿಂಹಗಳ ನೆಲೆಯಾಗಿದ್ದು, ಅಲ್ಲಿಗೆ ತೆರಳಿದರೆ ಸಿಂಹದ ಆಹಾರದ ಪದ್ಧತಿಯನ್ನು ನಿಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆ ಹಿಡಿಯಬಹುದು.

3.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

3.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಇನ್ನು ಭಾರತ ದೇಶದಲ್ಲಿ ಒಟ್ಟು 39 ಹುಲಿ ಅಭಯಾರಣ್ಯಗಳು ಇವೆ. ಅವುಗಳಲ್ಲಿ ಅತಿ ದೊಡ್ಡದಾದ ನಾಗಾರ್ಜುನ ಸಾಗರ್, ಶ್ರೀಶೈಲಂ ಟೈಗರ್ ರಿಜರ್ವ್ ವೈಲ್ಡ್ ಲೈಫ್ ಟೂರಿಸಂ ಉತ್ತಮವಾದುದು. ಅದೇ ವಿಧವಾಗಿ ದೇಶದಲ್ಲಿನ ಬೇರೆ-ಬೇರೆ ಭೌಗೋಳಿಕ ಪರಿಸ್ಥಿತಿಗಳನ್ನು ಅನುಸರಿಸಿ ಅಲ್ಲಿ ಆನೆಗಳು, ಜಿಂಕೆಗಳು, ಚಿರತೆಗಳಂತಹ ಅನೇಕ ವನ್ಯ ಮೃಗಗಳ ಆಭಯಾರಣ್ಯಗಳು ಕೂಡ ಇವೆ. ಅಲ್ಲಿಗೆ ತೆರಳಿದರೆ ನಮ್ಮ ಜೊತೆಗೆ ನಮ್ಮ ಕ್ಯಾಮೆರಾಗೂ ಕೂಡ ಹಬ್ಬವೇ..ಹಬ್ಬ..

4.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

4.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಇನ್ನೊಂದು ಭಾಗದಲ್ಲಿ ವಿವಿಧ ಬಗೆಯ ಪಕ್ಷಿಗಳು ಅತ್ಯಂತ ವಿಶೇಷವಾದ ಜಾತಿಗಳನ್ನು ಕೂಡ ಕಾಣಬೇಕು ಎಂದು ಅಂದುಕೊಳ್ಳುವವರು ಬರ್ಡ್ ಫೋಟೋಗ್ರಫಿ ಟೂರಿಸಂ ಆಹ್ವಾನಿಸುತ್ತದೆ. ಇಂತಹ ಪಕ್ಷಿ ಪ್ರೇಮಿಗಳು ಹೆಚ್ಚಾಗಿ ರಾಜಸ್ಥಾನದಲ್ಲಿನ ತಾಲ್ ಚಾಪರ್‍ಗೆ ತೆರಳುತ್ತಿರುತ್ತಾರೆ. ಇದು ಅತಿ ಹೆಚ್ಚು ಪ್ರಚಾರವನ್ನು ಹೊಂದಿಲ್ಲದ್ದಿದ್ದರು ಒಮ್ಮೆ ಇಲ್ಲಿಗೆ ತೆರಳಿದರೆ ಮತ್ತೇ-ಮತ್ತೇ ಭೇಟಿ ನೀಡಬೇಕು ಎಂದು ಆಸೆ ಉಂಟಾಗುವುದಂತು ಖಂಡಿತ. ಇನ್ನು ಕರ್ನಾಟಕದಲ್ಲಿಯೂ ಕೂಡ ರಂಗನತಿಟ್ಟು ಸಹ ಅನೇಕ ಪ್ರದೇಶಗಳಲ್ಲಿ ಪಕ್ಷಿ ಪ್ರೇಮಿಗಳ ಜೊತೆ ಅವುಗಳನ್ನು ತಮ್ಮ ಜೊತೆ ಪ್ರೇಮದಿಂದ ಬಂಧಿಸಬೇಕು ಎಂದು ಅಂದುಕೊಳ್ಳುವವರಿಗೆ ಆಹ್ವಾನಿಸುತ್ತದೆ.

5.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

5.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಪ್ರಕೃತಿಯ ಫೋಟೋಗ್ರಾಫಿ ಇತ್ತೀಚೆಗೆ ಅತ್ಯಂತ ಪ್ರಚಾರದಲ್ಲಿರುವ ಫೋಟೋಗ್ರಾಫಿ ಟೂರಿಸಂ. ಈ ವಿಧಾನದಲ್ಲಿ ಅತ್ಯಂತ ಸುಂದರವಾದ ಪ್ರಕೃತಿಯ ಅಪೂರ್ವ ದೃಶ್ಯವನ್ನು ಕ್ಯಾಮೆರಾದಿಂದ ಸೆರೆ ಹಿಡಿಯಬಹುದಾಗಿದೆ. ಇದರಲ್ಲಿ ಸಪ್ತವರ್ಣಗಳ ಇಂದ್ರ ಧನಸ್ಸು ಕೂಡ ಸೆರೆ ಹಿಡಿಯಬಹುದು. ನೀರಿನ ಬೋಟು, ಸುಂದರವಾದ ವೃಕ್ಷಗಳು, ಪರಿಸರಗಳು, ಮನೋಹರವಾದ ಬೆಟ್ಟಗಳು ಆಹಾ ಪ್ರಕೃತಿಯ ಸೊಬಗೇ ಅದ್ಭುತ ಅಲ್ಲವೇ? ಆದರೆ ಇದರಲ್ಲಿ ಆ ಪ್ರದೇಶದ ಭೌಗೋಳಿಕ ಸ್ವರೂಪದ ಮೇಲೆ ಪೂರ್ತಿಯಾಗಿ ಅವಗಹನೆ ಇದ್ದರೆ ಮಾತ್ರವೇ ನಾವು ಫೋಟೋಗಳನ್ನು ತೆಗೆಯಲು ಸಾಧ್ಯ.

6.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

6.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಇದರಲ್ಲಿ ವಾಟರ್ ಫಾಲ್ಸ್ ಫೋಟೋಗ್ರಾಫಿ ಅತ್ಯಂತ ಆಕರ್ಷಣೆಯುತವಾದುದು. ಈ ವಿಧಾನದಲ್ಲಿ ಎಷ್ಟೊ ಎತ್ತರದಿಂದ ಅಂದರೆ ಆಕಾಶದಿಂದ ಧರೆಗೆ ಹಾಲಿನ ನೊರೆಯಂತ ಜಲಪಾತದ ರೂಪದಲ್ಲಿ ಬೀಳುತ್ತಿರುವ ದೃರ್ಶಯವನ್ನು ಯಾರೇ ಕಂಡರೂ ಅದರ ಸೌಂದರ್ಯಕ್ಕೆ ಮರುಳಾದಗೇ ಯಾರು ಇರಲಾರರು. ಅಲ್ಲಿನ ಪರಿಸರದಲ್ಲಿನ ಗಿಡಗಳು, ವೃಕ್ಷಗಳು ಎಷ್ಟೊ ಸುಂದರವಾಗಿ ಕಾಣಬಹುದು. ಹೀಗಾಗಿಯೇ ಹೆಚ್ಚಾಗಿ ದೂದ್ ಸಾಗರ್, ಜೋಗ್, ಚಿತ್ರಕೂಟ್ ವಾಟರ್ಸ್ ಫಾಲ್ಸ್ ಸಮೀಪಕ್ಕೆ ತೆರಳಬಹುದು.

7.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

7.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಮತ್ತೊಂದು ಭಾಗದಲ್ಲಿ ಕೇವಿಂಗ್ ಅನ್ನು ಇಷ್ಟ ಪಡುವವರು ಕೂಡ ಅತ್ಯಂತ ವಿಭಿನ್ನವಾದ ಫೋಟೋಗಳನ್ನು ತೆಗೆಯುತ್ತಾರೆ. ಇದರಿಂದಾಗಿಯೇ ಆಂಧ್ರ ಪ್ರದೇಶದಲ್ಲಿನ ಬೋರ್ರಾಗುಹೆಯಂತಹ ಭೂಗರ್ಭ ಸೌಂದರ್ಯವನ್ನು ಕಾಣಲು ಅನೇಕ ಪ್ರವಾಸಿಗಳು ಭೇಟಿ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲ ಅಜಂತಾ, ಎಲ್ಲೊರಾದಂತಹ ಗುಹೆಗಳಿಗೂ ಕೂಡ ಫೋಟೋಗ್ರಫಿ ಟೂರಿಸ್ಟ್‍ಗಳು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ.

8.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

8.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಮತ್ತೊಂದು ಭಾಗದಲ್ಲಿ ಸಾಗರಗರ್ಭದಲ್ಲಿ ಅಡಗಿರುವ ಜೀವರಾಶಿಗಳನ್ನು ಅತ್ಯಂತ ಅದ್ಭುತವಾಗಿ ಫೋಟೋ ಕ್ಲಿಕ್ಕಿಸಬೇಕು ಎಂದು ಅಂದುಕೊಳ್ಳುವವರು ಭಾರತ ದೇಶದಲ್ಲಿನ ಅನೇಕ ಸಮುದ್ರ ತೀರ ಪ್ರದೇಶಗಳ ಜೊತೆಗೆ ಅಂಡಮಾನ್, ನಿಕೋಬಾರ್, ಲಕ್ಷದ್ವೀಪ ನಂತಹ ದ್ವೀಪಗಳು ಆಹ್ವಾನಿಸುತ್ತವೆ. ಸಮುದ್ರ ಗರ್ಭದ ಒಳಗೆ ತೆರಳಿ ಫೋಟೋಗಳನ್ನು ಕ್ಲಿಕ್ಕಿಸುವುದಕ್ಕೆ ಕೆಲವು ಪ್ರತ್ಯೇಕವಾದ ಅನುಮತಿಯನ್ನು ತಪ್ಪದೇ ತೆಗೆದುಕೊಳ್ಳಬೇಕು.

9.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

9.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಕೇವಲ ಪ್ರಕೃತಿಗೆ ಸಂಬಂಧಿಸಿದ ವಿಷಯಗಳೇ ಅಲ್ಲದೇ ಪಟ್ಟಣೀಕರಣ ಅದರಲ್ಲಿಯೂ ಲಾಭಗಳು, ನಷ್ಟಗಳು ತಮ್ಮ ಫೋಟೋಗಳ ಮೂಲಕ ಕೊಂಡುಕೊಳ್ಳುವವರು ಕೂಡ ಎಷ್ಟೊ ಮಂದಿ ಇರುತ್ತಾರೆ. ಅಂತಹವರಿಗೆ ಬೆಂಗಳೂರಿನಿಂದ ಮುಂಬೈವರೆಗೆ ಅನೇಕ ಪಟ್ಟಣಗಳು ಆಹ್ವಾನಿಸುತ್ತವೆ. ಇಲ್ಲಿ ಮೆಟ್ರೊದಂತಹ ಆಧುನಿಕ ಸಾರಿಗೆ ಸೌಕರ್ಯ ಹೊಂದಿರುವ ಪ್ರಯೋಜನ ಕೂಡ ಇಲ್ಲಿವೆ.

10.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

10.ನಿಮ್ಮ ಕಣ್ಣು ಕ್ಯಾಮೆರಾ ಕಣ್ಣಾದರೆ... ಈ ಪ್ರದೇಶಗಳು ನಿಮಗೆ ಆಹ್ವಾನಿಸುತ್ತವೆ...

Image source

ಭಾರತ ದೇಶದ ಸಂಸ್ಕøತಿ, ಸಂಪ್ರದಾಯಗಳಿಗೆ ವಿವಿಧ ಸ್ಥಳಗಳಲ್ಲಿರುವ ದೇವಾಲಯಗಳಲ್ಲಿರುವ ಶಿಲ್ಪಗಳೇ ನಿದರ್ಶನ. ಈ ಶಿಲ್ಪಗಳನ್ನು ಅಷ್ಟೇ ಸುಂದರವಾಗಿ ತಮ್ಮ ಕ್ಯಾಮೆರಾ ಕಣ್ಣಿನಿಂದ ಬಂದಿಸಲು ಅನೇಕ ಮಂದಿ ವಿದೇಶಿಯರು ಕೂಡ ಭಾರತ ದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಂತಹವರಿಗೆ ಹಂಪಿ ವಿರೂಪಾಕ್ಷ ದೇವಾಲಯವು ಒಂದು ಉತ್ತಮವಾದ ನಿದರ್ಶನವೇ ಆಗಿದೆ. ಆದರೆ ಕೆಲವು ದೇವಾಲಯಗಳಲ್ಲಿ ದೇವತೆಗಳ ವಿಗ್ರಹಗಳನ್ನು ತೆಗೆಯಲು ಪ್ರತ್ಯೇಕವಾದ ಅನುಮತಿಯನ್ನು ತಪ್ಪದೇ ತೆಗೆದುಕೊಳ್ಳಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X