Search
  • Follow NativePlanet
Share
» »ಮೈಸೂರಿನ ಸುತ್ತಮುತ್ತಲಿರುವ ಈ ಆಫ್ಬೀಟ್ ಬೇಸಿಗೆ ತಾಣಗಳಿಗೆ ಪ್ರವಾಸ ಹೊರಡಲು ತಯಾರಾಗಿ!

ಮೈಸೂರಿನ ಸುತ್ತಮುತ್ತಲಿರುವ ಈ ಆಫ್ಬೀಟ್ ಬೇಸಿಗೆ ತಾಣಗಳಿಗೆ ಪ್ರವಾಸ ಹೊರಡಲು ತಯಾರಾಗಿ!

ಮೈಸೂರಿನ ಸುತ್ತಮುತ್ತಲಿರುವ ಈ ಆಫ್ಬೀಟ್ ಬೇಸಿಗೆ ತಾಣಗಳಿಗೆ ಪ್ರವಾಸ ಹೊರಡಲು ತಯಾರಾಗಿ!

ಭಾರತದ ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ಪ್ರವಾಸಿ ಸ್ಥಳಗಳಲ್ಲಿ ಮೈಸೂರು ಕೂಡಾ ಅತೀ ಪ್ರಮುಖವಾದುದಾಗಿದೆ. ಈ ಐತಿಹಾಸಿಕ ಸೌಂದರ್ಯತೆ ಇರುವ ನಗರವು ಸುಂದರವಾದ ಕೋಟೆಗಳ ರೂಪದಲ್ಲಿಯ ಸ್ಮಾರಕಗಳು ಮತ್ತು ಭವ್ಯವಾದ ಅರಮನೆಗಳು ಮತ್ತು ಇನ್ನಿತರ ಐತಿಹಾಸಿಕ ಮಹತ್ವವುಳ್ಳ ಕಟ್ಟಡಗಳನ್ನು ಹೊಂದಿದ್ದು, ಇವುಗಳನ್ನು ವೀಕ್ಷೀಸಲು ಲಕ್ಷಾಂತರ ಜನ ಪ್ರವಾಸಿಗರು ಮತ್ತು ಪ್ರಯಾಣಿಕರು ದೇಶ ವಿದೇಶದಿಂದ ಭೇಟಿ ನೀಡುತ್ತಾರೆ.

ಪ್ರಕೃತಿ ಪ್ರಿಯರಿಗೆ ಮತ್ತು ಸ್ಥಳೀಯ ಪ್ರವಾಸಿಗರಿಗೆ ಅದರ ಗಡಿಯನ್ನು ಮೀರಿ ಪ್ರಯಾಣಿಸಲು ಆದ್ಯತೆ ನೀಡುವ, ವಿಶೇಷವಾಗಿ ಬೇಸಿಗೆಯ ಅವಧಿಯಲ್ಲಿ ಇದು ಕನಿಷ್ಠ ಪರಿಶೋಧಿಸಲಾದ ತಾಣವಾಗಿ ಉಳಿದಿದೆ. ಈಗಾಗಲೇ ಬೇಸಿಗೆ ಸಮೀಪಿಸುತ್ತಿರುವುದರಿಂದ, ನಿಮ್ಮ ದೇಹ ಹಾಗೂ ಮನಸ್ಸಿನ ವಿಶ್ರಾಂತಿಗೆ ಸೂಕ್ತವಾಗಿರುವ ಹಾಗೂ ಆರಾಮದಾಯಕವಾಗಿರುವ ಬೇಸಿಗೆಯ ತಾಣಗಳಿಗೆ ಭೇಟಿ ಕೊಡುವುದನ್ನು ಆಯೋಜಿಸಬಾರದೇಕೆ?

ನೀವು ಕಡಿಮೆ ಜನಸಂದಣಿಯ ಸ್ಥಳಗಳನ್ನು ಇಷ್ಟ ಪಡುವವರಲ್ಲಿ ಒಬ್ಬರಾಗಿದ್ದು ಅಲ್ಲಿ ಇರಬಯಸುವವರಾಗಿದ್ದಲ್ಲಿ, ನಾವು ನಿಮಗೆ ಮೈಸೂರಿನ ಸುತ್ತಮುತ್ತಲಿರುವ ಬೇಸಿಗೆ ತಾಣಗಳ ಪಟ್ಟಿ ನೀಡುತ್ತಿದ್ದೇವೆ. ಈ ಸ್ಥಳಗಳ ವಿಶೇಷತೆಗಳು ಮತ್ತು ಮೈಸೂರಿನಿಂದ ಆಯಾ ಸ್ಥಳಗಳ ದೂರಗಳ ಬಗ್ಗೆ ವಿವರವಾಗಿ ತಿಳಿಯಲು ಮುಂದೆ ಓದಿ.

ವೈತಿರಿ

ವೈತಿರಿ

ಮೈಸೂರಿನಿಂದ ಅಂತರ- 150 ಕಿ.ಮೀ

ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ವೈತಿರಿ ಒಂದು ಸುಪ್ತ ಸೌಂದರ್ಯತೆಯನ್ನು ತನ್ನಲ್ಲಿ ಹೊಂದಿರುವ ತಾಣವೆಂದರೆ ತಪ್ಪಾಗಲಾರದು ಈ ಸ್ಥಳವು ತನ್ನಲ್ಲಿಯ ಸೊಂಪಾದ ಹಸಿರು, ವರ್ಣಮಯ ತೋಟಗಳು ಮತ್ತು ದಟ್ಟವಾದ ಕಾಡುಗಳಿಗೆ ಗುರುತಿಸಲ್ಪಟ್ಟಿದ್ದು ವಿಶ್ರಾಂತಿ ಮತ್ತು ಶಾಂತಿಯುತ ವಾತಾವರಣವನ್ನು ಮತ್ತು ಕಡಿಮೆ ಜನಸಂದಣಿಯಲ್ಲಿ ತಮ್ಮ ಸಮಯವನ್ನು ಕಳೆಯಲು ಬಯಸಿ ಬರುವ ಆಫ್ಬೀಟ್ ಪ್ರಯಾಣಿಕರಿಗೆ ಸೂಕ್ತವಾದ ಸ್ಥಳವೆನಿಸಿದೆ. ಇಲ್ಲಿಯ ಕೊಳದಲ್ಲಿ ವಿಶ್ರಾಂತಿ ಪಡೆಯುವುದರಿಂದ ಹಿಡಿದು ಬೆಟ್ಟಗಳ ಮೇಲೆ ಟ್ರಕ್ಕಿಂಗ್ ಮಾಡುವವರೆಗೆ ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಯುವುದರಿಂದ ಹಿಡಿದು ತಂಪಾದ ಪರಿಸರದಲ್ಲಿ ಅಡ್ಡಾಡುವವರೆಗೆ ಎಲ್ಲವೂ ವೈತಿರಿಯ ಗಡಿಯಲ್ಲಿ ಕಾಣಬಹುದಾಗಿದೆ. ಇಲ್ಲಿಯ ಪ್ರಮುಖ ಸ್ಥಳಗಳಲ್ಲಿ ನಂತರ ನೀವು ಚೈನ್ ಟ್ರೀ ಅನ್ನು ಸಹ ಭೇಟಿ ಮಾಡಬಹುದು, ಇದು ಆ ಪ್ರದೇಶದಲ್ಲಿ ಹಲವಾರು ಅಪಘಾತಗಳಿಗೆ ಕಾರಣವಾದ ಒಂದು ಬುಡಕಟ್ಟು ಯುವಕರ ಚೈತನ್ಯವನ್ನು ಬಂಧಿಸುವ ಸ್ಥಳವೆಂದು ನಂಬಲಾಗಿದೆ. ಆದ್ದರಿಂದ, ವೈತಿರಿಯಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಮತ್ತು ನಿಮ್ಮ ಆತ್ಮ ಮತ್ತು ದೇಹವನ್ನು ಪುನರ್ ಚೇತನಗೊಳಿಸಿಕೊಂಡರೆ ಹೇಗಿರಬಹುದು?

ಕೂನೂರು

ಕೂನೂರು

ಮೈಸೂರಿನಿಂದ ಅಂತರ-145 ಕಿ.ಮೀ

ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ನೆಲೆಸಿರುವ ಕೂನೂರ್ ಹೆಚ್ಚಾಗಿ ಪ್ರಚಲಿತಕ್ಕೆ ಬರದೇ ಇರುವಂತಹ ಗಿರಿಧಾಮವಾಗಿದ್ದು ಸ್ಥಳೀಯರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುತ್ತದೆ. ನಗರದ ಸದ್ದು ಗದ್ದಲದ ಜೀವನದಿಂದ ಬೇಸತ್ತು ಪ್ರಶಾಂತವಾದ ಪರಿಸರವಿರುವ ತಾಣವನ್ನು ಹುಡುಕುತ್ತಿರುವವರಿಗಾಗಿ ಪ್ರಕೃತಿಯ ಕಚ್ಚಾ ಸೌಂದರ್ಯತೆಯನ್ನು ತನ್ನಲ್ಲಿ ಜೀವಂತವಾಗಿ ಉಳಿಸಿಕೊಂಡಿರುವ ಈ ಸ್ಥಳವು ಹೆಚ್ಚು ಸೂಕ್ತವಾದುದಾಗಿದೆ. ಈ ಸ್ಥಳವು ಸುಂದರವಾದ ಚಹಾ ಎಸ್ಟೇಟ್ ಗಳಿಗೆ ಪ್ರಸಿದ್ದವಾಗಿದೆ ಅಲ್ಲದೆ ಕೂನೂರ್ ಸೊಂಪಾದ ಹಸಿರು ಹುಲ್ಲುಗಾವಲುಗಳು ಮತ್ತು ಎತ್ತರವಾದ ಬೆಟ್ಟಗಳಿಂದ ಆವೃತವಾಗಿದೆ. ನೀಲಗಿರಿಯ ಬೆಟ್ಟಗಳಲ್ಲಿ ಟ್ರಕ್ಕಿಂಗ್ ಮಾಡಲು ಬರುವವರಿಗಾಗಿ ಈ ಸ್ಥಳವು ಇದು ಬೇಸ್ ಕ್ಯಾಂಪ್ ಆಗಿ ಕಾರ್ಯನಿರ್ವಹಿಸುತ್ತದೆ . ಇಲ್ಲಿಯ ಆಸಕ್ತಿದಾಯಕ ಸ್ಥಳಗಳಲ್ಲಿ ಸಿಮ್ಸ್ ಪಾರ್ಕ್, ಡಾಲ್ಫಿನ್ಸ್ ನೋಸ್, ಲ್ಯಾಂಬ್ಸ್ ರಾಕ್, ಹೈಫೀಲ್ಡ್ ಟೀ ಫ್ಯಾಕ್ಟರಿ ಮತ್ತು ವೆಲ್ಲಿಂಗ್ಟನ್ ಇತ್ಯಾದಿಗಳು ಸೇರಿವೆ.

ಕೊಟಗಿರಿ

ಕೊಟಗಿರಿ

ಮೈಸೂರಿನಿಂದ ಅಂತರ- 155 ಕಿ.ಮೀ

ತಮಿಳು ನಾಡಿನ ನೀಲಗಿರಿ ಬೆಟ್ಟಗಳ ಶ್ರೇಣಿಯಲ್ಲಿರುವ ಇನ್ನೊಂದು ಸ್ವರ್ಗವೆಂದರೆ ಅದು ಕೊಟಗಿರಿ. ಇದೊಂದು ಸಣ್ಣ ಪಟ್ಟಣವಾಗಿದ್ದು ಇದರ ಸುಂದರವಾದ ನೈಸರ್ಗಿಕ ನೆಲೆಯನ್ನು ತನ್ನಲ್ಲಿ ಹೊಂದಿರುವುದಕ್ಕೆ ಜನಪ್ರಿಯವಾಗಿದೆ. ಇದು ಚಹಾ ತೋಟಗಳು, ಕೃಷಿ ಕ್ಷೇತ್ರಗಳು, ಬೆಟ್ಟಗಳು ಮತ್ತು ಅಂಕುಡೊಂಕಾದ ರಸ್ತೆಗಳಿಂದ ನಿರೂಪಿಸಲ್ಪಟ್ಟಿದೆ. ಇಲ್ಲಿ ಟ್ರಕ್ಕಿಂಗ್ ನಿಂದ ಹಿಡಿದು ಛಾಯಾಗ್ರಹಣದವರೆಗೆ ಮತ್ತು ಇಲ್ಲಿಯ ಮನೋಹರ ಭೂದೃಶ್ಯಗಳನ್ನು ಆನಂದಿಸುವುದರಿಂದ ಹಿಡಿದು ನಿಮ್ಮನ್ನು ನೀವು ಇಲ್ಲಿಯ ಪ್ರಶಾಂತ ವಾತಾವರಣದಲ್ಲಿ ವಿಶ್ರಾಂತಿಗೊಳಿಸುವವರೆಗೆ ಅನೇಕ ವಿಷಯಗಳನ್ನು ಇಲ್ಲಿ ಮಾಡಬಹುದಾಗಿದೆ. ಪ್ರಕೃತಿಯ ಜೊತೆಗೆ ಸುಂದರ ಸಮಯವನ್ನು ಕಳೆಯಬಯಸುವಿರಾದಲ್ಲಿ ನೀವು ಮೈಸೂರಿನಿಂದ ಕೊಟಗಿರಿಗೆ ಪ್ರವಾಸವನ್ನು ಹೂಡುವುದು ಸೂಕ್ತ. ಈ ಸ್ಥಳದಲ್ಲಿಯ ಪ್ರಮುಖವಾಗಿ ಭೇಟಿ ಕೊಡಬಹುದಾದ ಸ್ಥಳಗಳಲ್ಲಿ ರಂಗಸ್ವಾಮಿ ಶಿಖರ ಕೊಡ್ನಾಡ್ ವ್ಯೂ ಪಾಯಿಂಟ್ ಮತ್ತು ಎಲ್ಕ್ ಜಲಪಾತಗಳು ಸೇರಿವೆ.

ಬಿ ಆರ್ ಬೆಟ್ಟಗಳು

ಬಿ ಆರ್ ಬೆಟ್ಟಗಳು

ಮೈಸೂರಿನಿಂದ ಅಂತರ- 82 ಕಿ.ಮೀ

ಮೈಸೂರು ಸುತ್ತಮುತ್ತಲಿನ ಬಿಆರ್ ಹಿಲ್ಸ್ ಸಾಮಾನ್ಯವಾಗಿ ವನ್ಯಜೀವಿ ಅಭಯಾರಣ್ಯವಾಗಿದೆ ಮತ್ತು ಇದು ಕರ್ನಾಟಕದ ಅತ್ಯಂತ ಶ್ರೀಮಂತ ತಾಣಗಳಲ್ಲಿ ಒಂದಾಗಿದೆ. ಅದರ ಹಚ್ಚ ಹಸಿರಿನ ಬೆಟ್ಟಗಳಲ್ಲಿ ಶಾಂತಿಯ ಸಾರವನ್ನು ನೀವು ಖಂಡಿತವಾಗಿ ಅನುಭವಿಸಬಹುದು. ಶ್ರೀಮಂತ ಕಾಡುಗಳಿಂದ ಆವೃತವಾಗಿರುವ ಬಯಲು ಪ್ರದೇಶಗಳ ವಿಹಂಗಮ ನೋಟಗಳನ್ನು ಆನಂದಿಸುವುದರ ಜೊತೆಗೆ, ಅದರ ಗಡಿಯೊಳಗೆ ಕೈಗೊಳ್ಳಬಹುದಾದ ಪ್ರಮುಖ ವಿಷಯಗಳಲ್ಲಿ ಕ್ಯಾಂಪಿಂಗ್, ಚಾರಣ ಮತ್ತು ಛಾಯಾಗ್ರಹಣ ಮುಂತಾದವುಗಳು ಸೇರಿವೆ. ಹಾಗಿದ್ದಲ್ಲಿ, ಈ ಋತುವಿನಲ್ಲಿ ಬಿ. ಆರ್ ಬೆಟ್ಟಗಳ ದಾರಿಗಳಲ್ಲಿ ಅಡ್ಡಾಡುತ್ತಾ ಅಲ್ಲಿಯ ವೈವಿಧ್ಯಮಯ ವನ್ಯಜೀವಿಗಳನ್ನು ಗುರುತಿಸುವ ಅನುಭವವನ್ನು ಪಡೆಯಬಾರದೇಕೆ?

ಯೇರ್ಕಾಡ್

ಯೇರ್ಕಾಡ್

ಮೈಸೂರಿನಿಂದ ಅಂತರ- 250 ಕಿ.ಮೀ

ತನ್ನಲ್ಲಿಯ ಕಣ್ಸೆಳೆಯುವ ಸ್ಥಳಗಳಿಗಾಗಿ ಯೇರ್ಕಾಡ್ ದಕ್ಷಿಣದ ಆಭರಣವೆಂದು ಕರೆಯಲ್ಪಡುತ್ತದೆ. ಈ ಸ್ಥಳವು ಬೇಸಿಗೆಯಲ್ಲಿ ಸಮಯ ಕಳೆಯಲು ಅತ್ಯಂತ ಸೂಕ್ತವಾದ ತಾಣವಾಗಿದೆ. ಈ ಸ್ಥಳವು ಹೊಂದಿರುವ ನೈಸರ್ಗಿಕ ಸೌಂದರ್ಯತೆಯು ಊಟಿಗೆ ಹೋಲುತ್ತದೆ. ಆದುದರಿಂದ ಇದನ್ನು ಬಡವರ ಊಟಿ ಎಂದೂ ಕೂಡ ಕೆಲವೊಮ್ಮೆ ಕರೆಯುತ್ತಾರೆ. ಹಾಗಿದ್ದಲ್ಲಿ ಊಟಿಗೆ ಹೋಗದೆ ಅಲ್ಲಿಗೆ ಹೋಲುವ ನೈಸರ್ಗಿಕ ಸೌಂದರ್ಯತೆಯಲ್ಲಿ ಕಾಲ ಕಳೆಯುವ ಅನುಭವ ಹೇಗಿರಬಹುದು? ನೀವೇನಾದರೂ ಜನಸಂದಣಿಯಿಂದ ಕೂಡಿರುವ ಗಿರಿಧಾಮಗಳಿಂದ ಬೇಸತ್ತಿದ್ದರೆ, ಈ ಬೇಸಿಗೆಯಲ್ಲಿ ಯೇರ್ಕಾಡ್ ನಿಮಾಗಾಗಿ ಕೈ ಬೀಸಿ ಕರೆಯುತ್ತದೆ. ಯೇರ್ಕಾಡ್ ನಲ್ಲಿ ಭೇಟಿ ಕೊಡಬಹುದಾದ ಸ್ಥಳಗಳಲ್ಲಿ ಯೇರ್ಕಾಡ್ ಸರೋವರ, ಸೇಕ್ರೇಡ್ ಹಾರ್ಟ್ ಚರ್ಚ್, ಪಗೋಡಾ ಪಾಯಿಂಟ್, ಲೇಡೀ'ಸ್ ಸೀಟ್, ಬೊಟಾನಿಕಲ್ ಗಾರ್ಡನ್ ಮತ್ತು ಕಿಲಿಯುರ್ ಜಲಪಾತ ಇತ್ಯಾದಿಗಳು ಒಳಗೊಂಡಿವೆ. ಇನ್ನೇಕೆ ತಡ ! ಈ ಸ್ಥಳಗಳು ಹೆಚ್ಚು ಜನಪ್ರಿಯ ಹಾಗೂ ಸಾಮಾನ್ಯ ಪ್ರವಾಸಿಗರಿಂದ ಭೇಟಿಕೊಡುವ ಮೊದಲು ನೀವು ಒಮ್ಮೆ ಇದರ ನೋಟವನ್ನು ಸವಿಯಲು ತಯಾರಾಗಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X