Search
  • Follow NativePlanet
Share
ಮುಖಪುಟ » ಸ್ಥಳಗಳು» ಯೇರ್ಕಾಡ್

ಯೇರ್ಕಾಡ್- ಅಪರೂಪದ ನಿಸರ್ಗಧಾಮ

15

ತಮಿಳುನಾಡು ಉತ್ತಮ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವಂತಹ ರಾಜ್ಯ. ಇಲ್ಲಿರುವಂತಹ ಗಿರಿಶಿಖರಗಳು, ಬೆಟ್ಟಗಳು ಒಂದಕ್ಕಿಂತ ಒಂದು ಸುಂದರ. ಅದ್ಭುತ ಪ್ರಾಕೃತಿಕ ಸೌಂದರ್ಯದ ಹಿನ್ನೆಲೆಯಲ್ಲಿ ತಮಿಳುನಾಡು ಇಂದು ಪ್ರಪಂಚದಾದ್ಯಂತ ಜನಾಕರ್ಷಣೆಯನ್ನು ಹೊಂದಿದೆ. ತಮಿಳುನಾಡಿಲ್ಲಿ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ತಾಣಗಳು ಬಹಳಷ್ಟಿವೆ. ಆದರೆ ಎಲ್ಲವೂ ಅಷ್ಟೊಂದು ಚಿರಪರಿಚಿತವಾಗಿಲ್ಲ. ಕೆಲವೊಂದು ಗಿರಿಧಾಮಗಳು, ನೈಸರ್ಗಿಕ ತಾಣಗಳು ಸೈಲೆಂಟ್ ಆಗಿಯೇ ಇದ್ದುಕೊಂಡು, ನಿಧಾನವಾಗಿ ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತಾ ಬಂದಿವೆ. ಇಂತಹ ಗಿರಿಧಾಮಕ್ಕೊಂದು ಉದಾಹರಣೆ ತಮಿಳುನಾಡಿನ ’ಯೇರ್ಕಾಡ್ ಗಿರಿಧಾಮ’.

’ಯೇರ್ಕಾಡ್’ ಅತ್ಯಂತ ವೇಗವಾಗಿ ಜನಮನ್ನಣೆ ಪಡೆದುಕೊಳ್ಳುತ್ತಿರುವ ತಮಿಳುನಾಡಿನ ನೈಸರ್ಗಿಕ ಧಾಮಗಳಲ್ಲೊಂದು. ತಮಿಳುನಾಡಿನ ಶಿವರಾಯ್ ಬೆಟ್ಟಗಳ ತಪ್ಪಲಿನಲ್ಲಿ, ಸಮುದ್ರ ಮಟ್ಟದಿಂದ ಸುಮಾರು 1515 ಮೀ. ಎತ್ತರದಲ್ಲಿದ್ದು, ಮೈಮೇಲೆ ಬೆಚ್ಚಗೆ ಹಸಿರು ಹೊದ್ದುಕೊಂಡು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಯೇರ್ಕಾಡ್.  

’ಯೇರ್ಕಾಡ್’ ಎನ್ನುವುದು ’ಯೇರಿ’ ಮತ್ತು ’ಕಾಡು’ ಎನ್ನುವ ಎರಡು ತಮಿಳು ಪದಗಳ ಸಂಯುಕ್ತ ರೂಪ. ಯೇರಿ ಅಂದರೆ ಸರೋವರ ಮತ್ತು ಕಾಡು ಎಂದರೆ ಅರಣ್ಯ ಎಂದರ್ಥ. ಹೀಗೆ ಎರಡು ಪದಗಳ ಅರ್ಥದಂತೆಯೇ ಸರೋವರ ಮತ್ತು ಸುಂದರ ಕಾಡನ್ನು ಒಳಗೊಂಡಿರುವ ಗಿರಿಧಾಮವಿದು. ಈ ಪ್ರದೇಶದ ಇತಿಹಾಸದ ಬಗ್ಗೆ ಇತ್ತೀಚೆಗಷ್ಟೇ ತಿಳಿದುಬಂದಿದೆ. ಈ ಪ್ರದೇಶದ ಜನರ ನಂಬಿಕೆಯ ಪ್ರಕಾರ, ತೆಲುಗು ರಾಜರ ಆಳ್ವಿಕೆಯ ಕಾಲದಲ್ಲಿ ಇದು ಮೊದಲ ಆದ್ಯತೆಯನ್ನು ಹೊಂದಿದ್ದ ಪ್ರದೇಶವಾಗಿತ್ತು. ಅಂದಹಾಗೆ ಈ ತಾಣವು ಅಧಿಕೃತವಾಗಿ ಅನ್ವೇಷಣೆಯಾದುದು 1842 ರಲ್ಲಿ. ಭಾರತದಲ್ಲಿ ಬ್ರಿಟೀಷ್ ಆಡಳಿತ ಇದ್ದ ಸಮಯದಲ್ಲಿ, ಮದ್ರಾಸ್ ಪ್ರಾಂತ್ಯದ ಗವರ್ನರ್ ಆಗಿದ್ದಂತಹ ಸರ್ ಥಾಮಸ್ ಮುರೇ ಎಂಬಾತ ಇಂತಹ ಅದ್ಭುತ ಪ್ರಾಕೃತಿಕ ತಾಣವೊಂದನ್ನು ಲೋಕಮುಖಕ್ಕೆ ಪರಿಚಯಿಸಿದರು.  

ಇಲ್ಲಿಗೆ ಪ್ರಪಂಚದ ನಾನಾ ಭಾಗಗಳಿಂದ ಎಲ್ಲಾ ವರ್ಗದ, ಎಲ್ಲಾ ಸ್ತರದ ಜನರು ಭೇಟಿ ಕೊಡುತ್ತಾರೆ. ಈ ಯೇರ್ಕಾಡ್  ಅನ್ನು ’ಬಡವರ ಊದಕಮಂಡಲ’ ಎಂದೂ ಕೂಡಾ ಕರೆಯುತ್ತಾರೆ. ಇದಕ್ಕೆ ಕಾರಣ ಸ್ಥಳೀಯ ನಿಸರ್ಗಧಾಮವಾದ ಊಟಿಗೆ ಹೋಲಿಸಿದರೆ ಇಲ್ಲಿ ಸೌಲಭ್ಯಗಳು, ಸ್ವತ್ತುಗಳು ಕಡಿಮೆ ಬೆಲೆಗೆ ದೊರೆಯುತ್ತಿರುವುದು. ’ಊಟಿ’ಗೆ ತಾನೇನೂ ಕಮ್ಮಿ ಇಲ್ಲ ಎನ್ನುವಂತೆ ಪರಿಸರ ಸೌಂದರ್ಯದ ಮೂಲಕ ಪೈಪೋಟಿ ನೀಡುತ್ತಿದೆ ಈ ಯೇರ್ಕಾಡ್ ಗಿರಿಧಾಮ.

ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ಯೇರ್ಕಾಡು ತನ್ನ ನೈಸರ್ಗಿಕ ಸೌಂದರ್ಯದ ಜೊತೆಗೆ ತೋಟಗಾರಿಕಾ ಬೆಳೆಗಳಿಗಾಗಿ ಕೂಡಾ ಪ್ರಸಿದ್ಧಿ ಪಡೆದಿದೆ. ಮುಖ್ಯವಾಗಿ ಈ ಪ್ರದೇಶದಲ್ಲಿ ಬೆಳೆಯುವಂತಹ ಪ್ರಮುಖ ತೋಟಗಾರಿಕಾ ಬೆಳೆಗಳೆಂದರೆ ಕಾಫಿ, ಕಿತ್ತಳೆ, ಹಲಸಿನ ಹಣ್ಣು, ಸೀಬೆಹಣ್ಣು, ಲವಂಗ ಮತ್ತು ಕಾಳು/ಕರಿಮೆಣಸು. ಕಾಫಿ ಇಲ್ಲಿನ ಪ್ರಮುಖ ಉತ್ಪನ್ನ. ಅಂದಹಾಗೆ ಕಾಫಿ ಈ ಪ್ರದೇಶಕ್ಕೆ ಪರಿಚಯವಾದುದು 1820 ರಲ್ಲಿ. ಸ್ಕಾಟಿಷ್ ಕಲೆಕ್ಟರ್ ಎಂ. ಡಿ ಕಾಕ್‌ಬರ್ನ್ ಎನ್ನುವವರು ಆಫ್ರಿಕಾದಿಂದ ಕಾಫಿಯನ್ನು ತಂದು, ಮೊದಲ ಬಾರಿ ಇಲ್ಲಿ ಬೆಳೆಸಿದರು. ಇದು ಮುಂದುವರೆದು ಇದೀಗ ಕಾಫಿಯೇ ಇಲ್ಲಿನ ಪ್ರಮುಖ ಬೆಳೆಯಾಗಿ ಮಾರ್ಪಟ್ಟಿದೆ. ಹೇಳಿದಂತೆ ಇದು ಕೇವಲ ವನ್ಯಧಾಮ ಮಾತ್ರವಲ್ಲ ರಕ್ಷಿತಾರಣ್ಯ/ಅಭಯಾರಣ್ಯ ಕೂಡಾ ಹೌದು. ಅಳಿವಿನಂಚಿನಲ್ಲಿರುವ ಹಲವಾರು ಸಸ್ಯಸಂಕುಲ, ಪ್ರಾಣಿಸಂಕುಲಗಳು ಈ ಯೇರ್ಕಾಡಿನ ರಕ್ಷಣೆಯಲ್ಲಿ ಹಾಯಾಗಿವೆ.

ಇನ್ನು ಯೇರ್ಕಾಡಿನ ಅರಣ್ಯ ಸಂಪತ್ತಿನ ಕಡೆಗೆ ಗಮನಹರಿಸುವುದಿದ್ದರೆ, ಅತ್ಯಂತ ಅಪರೂಪದ ಮರಗಳನ್ನು ಯೇರ್ಕಾಡ್ ತನ್ನ ಒಡಲಿನಲ್ಲಿ ಹೊಂದಿದೆ. ಇಲ್ಲಿರುವ ಪ್ರಮುಖ ಮರಗಳೆಂದರೆ ಶ್ರೀಗಂಧ, ಟೀಕ್ ಮತ್ತು ಸಿಲ್ವರ್ ಓಕ್. ಇನ್ನು ಪ್ರಾಣಿಸಂಕುಲದಲ್ಲಿ ಕಾಡೆಮ್ಮೆ, ಜಿಂಕೆ, ನರಿ, ಮುಂಗುಸಿಗಳು, ಹಾವುಗಳು, ಪುಟಾಣಿ ಅಳಿಲು ಮುಂತಾದ ಸದಸ್ಯರಿದ್ದಾರೆ. ಯೇರ್ಕಾಡಿನಲ್ಲಿ ಉತ್ತಮ ಪಕ್ಷಿಸಂಕುಲಗಳು ಕೂಡಾ ಆಶ್ರಯ ಪಡೆದಿವೆ. ಬುಲ್‌ಬುಲ್ ಹಕ್ಕಿಗಳು, ಕೈಟ್ಸ್ ಮತ್ತು ಗುಬ್ಬಚ್ಚಿಗಳು ಕೂಡಾ ಇಲ್ಲಿ ಕಂಡುಬರುತ್ತವೆ. ಯೇರ್ಕಾಡ್ ಇಷ್ಟೆಲ್ಲಾ ಜೀವವೈವಿಧ್ಯತೆಯನ್ನು ಹೊಂದಿರಲು ಕಾರಣ ಇಲ್ಲಿನ ಹವಾಮಾನ. ಯಾವುದೇ ಕಾಲದಲ್ಲೂ ಅತಿಯಾದ ಉಷ್ಣಾಂಶವನ್ನು ಇದು ದಾಟುವುದಿಲ್ಲ. ಇದು ಪ್ರವಾಸಿಗರಿಗೆ ವರದಾನವಾಗಿರುವ ವಿಷಯ ಕೂಡಾ ಹೌದು. ಯೇರ್ಕಾಡ್‌ಗೆ ಭೇಟಿ ಕೊಡುವ ಪ್ರವಾಸಿಗರಿಗೇನೂ ಕಮ್ಮಿಯಿಲ್ಲ. ಪ್ರಪಂಚದ ನಾನಾ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬಂದು ಪ್ರಕೃತಿ ಸೌಂದರ್ಯದ ಮುಂದೆ ಮೈದೆರೆದುಕೊಳ್ಳುತ್ತಾರೆ. ಪ್ರವಾಸಿಗರಿಗೆ ಮಾತ್ರವಲ್ಲದೆ ಇದು ಚಾರಣಪ್ರಿಯರ ಆಕರ್ಷಣಾ ಕೇಂದ್ರ ಕೂಡಾ ಹೌದು. ಚಾರಣ ಮಾಡಲು ಚಾರಣಪ್ರಿಯರಿಗೆ ನೂರಾರು ಅವಕಾಶಗಳನ್ನು ಯೇರ್ಕಾಡ್ ಹೊಂದಿದೆ. ಜೊತೆಗೆ ಇತಿಹಾಸ ಸಂಶೋಧಕರಿಗೂ ಇಲ್ಲಿ ಇತಿಹಾಸಾತ್ಮಕ ಅನ್ವೇಷಣೆಗಳಿಗೆ ಹಲವಾರು ಅವಕಾಶಗಳಿವೆ.

ಇನ್ನು ಪ್ರವಾಸಿಗರು ಬರುತ್ತಾರೆ ಅಂತ ಪ್ರವಾಸಿಗರಿಗಾಗಿ ಇಲ್ಲಿ ಹಲವಾರು ಮನೋರಂಜನಾ ಕಾರ್ಯಕ್ರಮಗಳನ್ನು ಕೂಡಾ ಆಯೋಜನೆ ಮಾಡಲಾಗುತ್ತದೆ. ಒಂದುವೇಳೆ ಇಲ್ಲಿಗೆ ಬೇಸಿಗೆ ಸಮಯದಲ್ಲಿ ಭೇಟಿ ಕೊಟ್ಟರೆ, ಇಲ್ಲಿ ನಡೆಯುತ್ತಿರುವಂತಹ ಡಾಗ್ ಶೋ, ಬೋಟ್ ರೇಸ್, ಫಲ-ಪುಷ್ಪ ಪ್ರದರ್ಶನಗಳು ಪ್ರವಾಸಿಗರನ್ನು ಮುದಗೊಳಿಸುತ್ತವೆ. ಇನ್ನು ಇಷ್ಟೆಲ್ಲಾ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ ಎಂದಮೇಲೆ ಇಲ್ಲಿ ಪ್ರವಾಸಿಗರಿಗೂ ಉತ್ತಮ ಸೌಲಭ್ಯಗಳು, ಸವಲತ್ತುಗಳು ದೊರೆಯಬೇಕು ಅಲ್ವೇ? ’ಬಡವರ ಊಟಿ’ಯೆಂದೇ ಪ್ರಸಿದ್ಧಿಯಾದ ಯೇರ್ಕಾಡ್‌ನಲ್ಲಿ ಪ್ರವಾಸಿಗರಿಗೆ ಯಾವುದೇ ಕೊರತೆಯಾಗದು.

ಬಡ್ಜೆಟ್ ಹೊಟೆಲ್‌ಗಳಿಂದ ಹಿಡಿದು ಹೋಂಸ್ಟೇಗಳು, ಐಷಾರಾಮಿ ರೆಸಾರ್ಟ್‌ಗಳು ಕೂಡಾ ಇಲ್ಲಿವೆ. ಪ್ರವಾಸಿಗರಿಗೆ ಉತ್ತಮ ಶಾಪಿಂಗ್ ಸೆಂಟರ್‌ಗಳು ಕೂಡಾ ಇಲ್ಲಿವೆ. ಸ್ಥಳೀಯವಾಗಿ ತಯಾರಾದ ನೈಸರ್ಗಿಕ ತೈಲಗಳು, ಸುಗಂಧ ದ್ರವ್ಯಗಳು, ಚರ್ಮ ಆರೈಕೆಯ ಉತ್ಪನ್ನಗಳು, ಮತ್ತು ಸ್ಥಳೀಯ ಕಾಳುಮೆಣಸು, ಲವಂಗ ಮತ್ತು ಕಾಪಿಗಳು ಪ್ಯಾಕೆಟ್‌ನಲ್ಲಿ ಫ್ರೆಶ್ ಆಗಿ ದೊರೆಯುತ್ತವೆ.

ಇನ್ನು ಯೇರ್ಕಾಡ್ ಪಟ್ಟಣವನ್ನು ನೋಡುವುದಿದ್ದರೆ, ಇದು ಬಹಳ ಸುಂದರ ನಗರ. ಸಮುದ್ರ ಮಟ್ಟದಿಂದ ೪೭೦೦ ಅಡಿ ಎತ್ತರದಲ್ಲಿರುವ ಇದನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಸಂಜೆಯ ವೇಳೆ ಸುತ್ತಾಡಿಕೊಂಡು ಕಾಲಕಳೆಯಲು ಹೇಳಿಮಾಡಿಸಿದ ವಾತಾವರಣ ಈ ಪಟ್ಟಣದಲ್ಲಿದೆ. ಈ ಪಟ್ಟಣದ ಎರಡು ಪ್ರಮುಖ ಆಕರ್ಷಣೆಗಳೆಂದರೆ ಸುಂದರವಾಗಿ ನಿರ್ಮಾಣಗೊಂಡ ’ಸೇಕ್ರೆಡ್ ಹಾರ್ಟ್ ಕಾನ್ವೆಂಟ್ ಮತ್ತು ಮೋನ್‌ಫೋರ್ಟ್ ಶಾಲೆ. ಹೀಗೆ ಪ್ರತಿಯೊಂದರಲ್ಲೂ ಸೌಂದರ್ಯವನ್ನು ಹುದುಗಿಸಿಟ್ಟುಕೊಂಡಿರುವ ಯೇರ್ಕಾಡ್‌ನ ಸೌಂದರ್ಯವನ್ನು ಸವಿಯುವುದು ನಿಜಕ್ಕೂ ಒಂದು ಅದ್ಭುತ ಅನುಭವ.

ಯೇರ್ಕಾಡ್‌ನಲ್ಲಿರುವ ಪ್ರವಾಸಿತಾಣಗಳು

ಯೇರ್ಕಾಡ್‌ನಲ್ಲಿರುವ ಪ್ರವಾಸಿ ತಾಣಗಳು ಒಂದೆರಡಲ್ಲ. ಹಲವಾರು ಇತಿಹಾಸಪ್ರಸಿದ್ಧ ದೇವಾಲಯಗಳು, ಪುರಾತನ ಗುಹಾಲಯಗಳು, ಜಲಪಾತಗಳು, ಭಯಾನಕ ಕಣಿವೆಗಳು ಹೀಗೇ ಹೇಳುತ್ತಾ ಹೋದರೆ ಇಲ್ಲಿನ ತಾಣಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಅಪೂರ್ವ ಭೌಗೋಳಿಕ ವಾತಾವರಣವನ್ನು ಹೊಂದಿರುವ ಯೇರ್ಕಾಡ್ ಪ್ರವಾಸಿಗರ ಮನಸ್ಸಿನಲ್ಲಿ ಮಂದಹಾಸ ಮೂಡಿಸುತ್ತದೆ. ಇಲ್ಲಿನ ಜನಾಕರ್ಷಕ ತಾಣಗಳ ಪಟ್ಟಿಯಲ್ಲಿರುವುದೆಂದರೆ ಯೇರ್ಕಾಡ್‌ನ ಬೆಟ್ಟಗಳ ಮೇಲಿರುವ ಲೇಡೀಸ್ ಸೀಟ್, ಜೆಂಟ್ಸ್ ಸೀಟ್, ಮತ್ತು ಚಿಲ್ಡನ್ಸ್ ಸೀಟ್ ಎನ್ನುವ ನೈಸರ್ಗಿಕ ಆಕರ್ಷಕ ಬಂಡೆಗಳ ಗುಂಪು, ಕರಡಿಯ ಗುಹೆಗಳು, ಅಣ್ಣಾ ಪಾರ್ಕ್, ಬೊಟಾನಿಕಲ್ ಗಾರ್ಡನ್, ಮತ್ತು ಶಿವರಾಯನ್ ದೇವಾಲಯ, ಶ್ರೀ ರಾಜರಾಜೇಶ್ವರಿ ದೇವಾಲಯ, ಮತ್ತು ತಿಪ್ಪರಾರಿ ವಿಕ್ಷಣಾ ತಾಣ.

ಈ ಬೆಟ್ಟಗಳ ಮೇಲಿರುವ ಬಂಡೆಗಳ ಸಮೂಹದಲ್ಲೊಂದಾದ ಬಂಡೆಗೆ ಲೇಡಿಸ್ ಸೀಟ್, ಎನ್ನುವ ಹೆಸರು ಬರಲು ಕಾರಣ ಕುರ್ಚಿಗಳಂತಿರುವ ಅವುಗಳ ರಚನೆಗಳು. ಹಿಂದೆ ಆಂಗ್ಲ ಮಹಿಳೆಯೋರ್ವಳು ಬೆಟ್ಟಗಳ ಮೇಲಿನ ಈ ಬಂಡೆಯಲ್ಲಿ ಕುಳಿತು, ಬಿಸಿಲುಕಾಯಿಸುತ್ತಾ ಯೇರ್ಕಾಡ್‌ನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಳು. ಇದೇ ಮುಂದಕ್ಕೆ ಈ ಬಂಡೆಗೆ ’ಲೇಡಿಸ್ ಸೀಟ್’ ಎನ್ನುವ ಹೆಸರು ಬರಲು ಕಾರಣವಾಯಿತು. ಇತ್ತೀಚೆಗೆ ಇದು ಅಭಿವೃದ್ಧಿಗೊಂಡಿದ್ದು, ಇಲ್ಲಿ ಬರುವ ಪ್ರವಾಸಿಗರಿಗೆ ಉತ್ತಮ ಪ್ರಕೃತಿ ಸೌಂದರ್ಯವನ್ನು ಸವಿಯುವಂತಾಗಲು ಇಲ್ಲಿ ದೂರದರ್ಶಕದ ವ್ಯವಸ್ಥೆ ಮಾಡಲಾಗಿದೆ.

ಯೇರ್ಕಾಡ್ ಪ್ರಸಿದ್ಧವಾಗಿದೆ

ಯೇರ್ಕಾಡ್ ಹವಾಮಾನ

ಉತ್ತಮ ಸಮಯ ಯೇರ್ಕಾಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಯೇರ್ಕಾಡ್

  • ರಸ್ತೆಯ ಮೂಲಕ
    ತಮಿಳುನಾಡಿನ ಬಹುತೇಕ ನಗರಗಳಿಂದ ಯೇರ್ಕಾಡ್‌ಗೆ ರಸ್ತೆಗಳ ಸಂಪರ್ಕವಿದೆ. ನಿಯಮಿತವಾಗಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ವ್ಯವಸ್ಥೆಯಿದ್ದು, ತಮಿಳುನಾಡಿನ ಪ್ರಮುಖ ನಗರವಾದ ಸೇಲಂನಿಂದ ದಿನಂಪ್ರತಿ ನೂರಾರು ಬಸ್‌ಗಳು ಯೇರ್ಕಾಡ್‌ಗೆ ತೆರಳುತ್ತವೆ. ಇಷ್ಟೇ ಅಲ್ಲದೆ ನೆರೆರಾಜ್ಯಗಳಿಂದ ಕೂಡಾ ಇಲ್ಲಿಗೆ ಸಾರಿಗೆ ವ್ಯವಸ್ಥೆಯಿದೆ. ಕರ್ನಾಟಕದ ಬೆಂಗಳೂರಿನಿಂದ, ಕೇರಳದ ಕೊಯಮತ್ತೂರಿನಿಂದ, ಹಾಗೂ ಚೆನ್ನೈನಿಂದ ಇಲ್ಲಿಗೆ ಬಸ್ ಸೌಕರ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರಸ್ತೆ, ವಾಯುಮಾರ್ಗಗಳಿಗೆ ಹೋಲಿಸಿದರೆ ಇಲ್ಲಿಗೆ ತೆರಳಲು ರೈಲುಮಾರ್ಗವೇ ಸೂಕ್ತ ಎನ್ನುವುದು ಕೆಲ ಪ್ರವಾಸಿಗರ ಅಭಿಪ್ರಾಯ. ಯೇರ್ಕಾಡ್‌ಗೆ ಹತ್ತಿರದ ರೈಲು ನಿಲ್ದಾಣವಾದ ಸೇಲಂಗೆ ಇಲ್ಲಿಂದ ಇರುವುದು ಕೇವಲ 35 ಕಿ.ಮೀ ಅಷ್ಟೇ. ಮಂಗಳೂರು, ಕೊಚ್ಚಿನ್, ಈರೋಡ್, ತಿರುವನಂತಪುರಂ ಮೂಲಕ ಸಾಗುವ ರೈಲುಗಳು ಸೇಲಂ ಮೂಲಕವೇ ಹಾದುಹೋಗುತ್ತವೆ. ಇನ್ನು ಇಲ್ಲಿರುವ ಇನ್ನೊಂದು ಪಕ್ಕದ ರೈಲು ನಿಲ್ದಾಣವೆಂದರೆ ಜೋಲಾರ್‌ಪೆಟೆ. ಇದು ಯೇರ್ಕಾಡ್‌ನಿಂದ 20 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವಾಯುಮಾರ್ಗದ ಮೂಲಕ ಸಂಚರಿಸುವುದಿದ್ದರೆ, ನಿಮ್ಮ ತಾಣದಿಂದ ಹೊರಟರೆ ಯೇರ್ಕಾಡ್‌ನಿಂದ 163 ಕಿ.ಮೀ ದೂರದಲ್ಲಿರುವ ತ್ರಿಚಿ/ತಿರುಚಿರಾಪಳ್ಳಿ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕು. ಮತ್ತೆ ಟ್ಯಾಕ್ಸಿ ಮೂಲಕ ಸಾಗಿದರೆ ನಿಮ್ಮ ಕನಸಿನ ತಾಣ ಯೇರ್ಕಾಡ್ ಅನ್ನು ಸುಲಭವಾಗಿ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat