Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋತಗಿರಿ » ಹವಾಮಾನ

ಕೋತಗಿರಿ ಹವಾಮಾನ

ಕೋತಗಿರಿಗೆ ಭೇಟಿ ನೀಡಲು ಬೇಸಿಗೆಯೇ ಉತ್ತಮ ಕಾಲ. ಈ ಕಾಲದಲ್ಲಿ ತಾಪಮಾನವು ಲಘುವಾಗಿದ್ದು ವಾತಾವರಣವು ತಂಪಾಗಿರುತ್ತದೆ. ಬೇಸಿಗೆಯು ಮಾರ್ಚ್ ನಿಂದ ಮೇ  ವರಗೆ ಇರುತ್ತದೆ.

ಬೇಸಿಗೆಗಾಲ

ಬೇಸಿಗೆಯೇ ಕೋತಗಿರಿಗೆ ಭೇಟಿ ನೀಡಲು ಉತ್ತಮವಾದ ಕಾಲ. ಬೇಸಿಗೆಯಲ್ಲಿ ಮಂಜಿರದ ಕಾರಣ ಕೋತಗಿರಿಯ ಸೌಂದರ್ಯವನ್ನು ಅಡ್ಡಿಯಿಲ್ಲದೆ ವೀಕ್ಷಿಸಬಹುದು. ಬೇಸಿಗೆಯು ಮಾರ್ಚ್ ತಿಂಗಳಿಂದ ಮೇ ತಿಂಗಳವರಗೆ ಇರುತ್ತದೆ ಹಾಗು ಬೇಸಿಗೆಯಲ್ಲಿ 15 ರಿಂದ 20 ಡಿಗ್ರೀ ಸೆಲ್ಷಿಯಸ್ ವರೆಗಿನ ತಾಪಮಾನ ಇರುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಭೇಟಿ ನೀಡುವುದು ಸರಿಯಲ್ಲ. ಆದರೆ ಕ್ಯಾಥರೀನ್ ಮತ್ತು ಎಲ್ಕ್ ಜಲಪಾತಗಳನ್ನು ನೋಡಲು ಮಳೆಗಾಲದಲ್ಲೇ ಸರಿಯಾದ ಸಮಯ. ತಾಪಮಾನವು ಸರಾಸರಿ 15 ಡಿಗ್ರೀ ಸೆಲ್ಷಿಯಸ್ ಇರುತ್ತದೆ ಆದರೆ ರಾತ್ರಿಯಲ್ಲಿ 2 ಡಿಗ್ರೀಯನ್ನೂ ತಲುಪಬಹುದು.

ಚಳಿಗಾಲ

ಚಳಿಗಾಲದಲ್ಲಿ (ಡಿಸೆಂಬರ್ ನಿಂದ ಫೆಬ್ರವರಿ) ಸರಾಸರಿ 12 ಡಿಗ್ರೀ ಸೆಲ್ಷಿಯಸ್ ತಾಪಮಾನವು ಇರುತ್ತದೆ. ರಾತ್ರಿಯಲ್ಲಿ 0 ಡಿಗ್ರೀಯನ್ನೂ ತಲುಪಬಹುದು.