Search
  • Follow NativePlanet
Share
» »ಅದ್ಭುತ ನವರಾತ್ರಿ ಪ್ರವಾಸ...ಎಲ್ಲಿ, ಹೇಗೆ?

ಅದ್ಭುತ ನವರಾತ್ರಿ ಪ್ರವಾಸ...ಎಲ್ಲಿ, ಹೇಗೆ?

By Vijay

ಸಂಸ್ಕೃತದಿಂದ ಬಂದ ನವರಾತ್ರಿ ಎಂಬ ಪದಕ್ಕೆ ಅರ್ಥ ಒಂಭತ್ತು ರಾತ್ರಿಗಳು ಎಂದಾಗುತ್ತದೆ. ಅಂದರೆ ಶಕ್ತಿ ರೂಪಿಣಿಯಾದ, ಸ್ತ್ರೀ ಶಕ್ತಿಯ ಸಂಕೇತವಾದ ದುರ್ಗಾ ಮಾತೆಯನ್ನು ಒಂಭತ್ತು ದಿನಗಳ ಕಾಲ ಒಂಭತ್ತು ರೂಪದಲ್ಲಿ ಪೂಜಿಸುವುದೆ ನವರಾತ್ರಿ ಉತ್ಸವವಾಗಿದೆ. ಹತ್ತನೆಯ ದಿನ ವಿಜಯದಶಮಿ ಅಥವಾ ದಸರಾ ಹಬ್ಬವಾಗಿ ವೈಭವದಿಂದ ಆಚರಿಸಲ್ಪಡುತ್ತದೆ.

ಮೂಲತಃ ನವರಾತ್ರಿಗಳಲ್ಲಿ ಐದು ವಿಧಗಳ ನವರಾತ್ರಿಗಳಿದ್ದು ಅವುಗಳಲ್ಲಿ ಶರದ್ ನವರಾತ್ರಿಯು ಪ್ರಮುಖವಾದ ನವರಾತ್ರಿ ಉತ್ಸವವಾಗಿದೆ. ವಸಂತ ಕಾಲ ಹಾಗೂ ಶರತ್ಕಾಲದ ಪ್ರಾರಂಭಗಳನ್ನು ವಾತಾವರಣದ ಮೇಲೆ ಪರಿಣಾಮ ಬೀರುವ ಪ್ರಮುಖ ಘಟ್ಟಗಳೆಂದು ಪರಿಗಣಿಸಲಾಗುತ್ತದೆ. ಈ ಎರಡು ಋತುಗಳನ್ನು ದುರ್ಗಾ ಮಾತೆಯ ಪೂಜೆಗೆ ಲಭಿಸುವ ಪವಿತ್ರ ಅವಕಾಶಗಳೆಂದು ತಿಳಿಯಲಾಗಿದೆ.

ವಿಶೇಷ ಲೇಖನ : ಮೈಸೂರು ದಸರೆಯ ಶಿಸ್ತಿನ ತಯಾರಿ

ಆದ್ದರಿಂದ ಈ ಸಂದರ್ಭದಲ್ಲಿ ಬರುವ ಶರದ್ ನವರಾತ್ರಿ ಉತ್ಸವವನ್ನು ಪ್ರಮುಖವಾಗಿ ನವರಾತ್ರಿ, ದುರ್ಗಾ ಪೂಜಾ ಉತ್ಸವ ಎಂದೆಲ್ಲ ಕರೆಯಲಾಗಿದೆ. ಇನ್ನೂ ಈ ಉತ್ಸವವು ಭಾರತದಲ್ಲಿ ಆಚರಿಸಲ್ಪಡುವ ಪ್ರಮುಖ ಉತ್ಸವ, ಹಬ್ಬಗಳ ಪೈಕಿ ಒಂದಾಗಿದ್ದು ತನ್ನದೆ ಆದ ವಿಶಿಷ್ಟ ಆಚರಣೆಗಳನ್ನು ದೇಶದ ನಾನಾ ಭಾಗಗಳಲ್ಲಿ ಹೊಂದಿದೆ. ಆಯಾ ಸ್ಥಳಗಳಿಗೆ ಭೇಟಿ ನೀಡಿ ಈ ಹಬ್ಬದ ವಿಶಿಷ್ಟ ಅನುಭೂತಿಯನ್ನು ಪ್ರವಾಸಿಗರು ಪಡೆಯಬಹುದು.

ಪ್ರಸ್ತುತ ಲೇಖನದಲ್ಲಿ ದೇಶದ ಕೆಲವು ಭಾಗಗಳಲ್ಲಿ ವಿಶಿಷ್ಟವಾಗಿ ನವರಾತ್ರಿ ಉತ್ಸವವು ಯಾವ ರೀತಿಯಲ್ಲಿ ಆಚರಿಸಲ್ಪಡುತ್ತವೆ ಎಂಬುದರ ಕುರಿತು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ನೀವು ಈ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರೆ ಈ ಉತ್ಸವದಲ್ಲಿ ಭಾಗಿಯಾಗಲು ಮರೆಯದಿರಿ. ಇಲ್ಲವೆ ನಿಮಗಿಷ್ಟವಾದ ಯಾವುದಾದರೊಂದು ಈ ಕೆಳಗಿನ ಸ್ಥಳಕ್ಕೆ ಪ್ರವಾಸ ಮಾಡಿ ಹಾಗೂ ಹಬ್ಬದ ವಿಶೇಷ ಆನಂದವನ್ನು ಪಡೆಯಿರಿ.

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ನವರಾತ್ರಿ ಹಬ್ಬವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಆಯಾ ಸಂಸ್ಕೃತಿ - ಸಂಪ್ರದಾಯಗಳಿಗನುಸಾರವಾಗಿ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವವನ್ನು ಬಲು ಅದ್ದೂರಿಯಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರಮುಖವಾಗಿ ಆಚರಿಸಲ್ಪಡುತ್ತವೆ. ಕೋಲಾಟ, ಗರ್ಬಾ ನೃತ್ಯ, ರಾವಣ ದಹನ ಹೀಗೆ ತರಹೇವಾರಿ ಆಚರಣೆಗಳನ್ನು ಉತ್ತರ ಭಾರತದಲ್ಲಿ ಕಾಣಬಹುದು.

ಚಿತ್ರಕೃಪೆ: Ranveig

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಹಿಮಾಚಲ ಪ್ರದೇಶ ರಾಜ್ಯದ ಕುಲ್ಲುವಿನಲ್ಲಿ ಆಚರಿಸಲಾಗುವ ವಿಜಯದಶಮಿ ಅಥವಾ ದಸರಾ ಉತ್ಸವವು ವಿಶೀಷ್ತವಾಗಿರುತ್ತದೆ. ಏಕೆಂದರೆ ಭಾರತದ ಇತರೆ ಭಾಗಗಳಲ್ಲಿ ನವರಾತ್ರಿಯ ಕೊನೆಯ ಭಾಗವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಆದರೆ ಇಲ್ಲಿ ಕೊನೆಯ ದಿನದಿಂದ ಮುಂದಿನ ಏಳು ದಿನಗಳ ಕಾಲ ಉತ್ಸವವು ಅದ್ದೂರಿಯಾಗಿ ನಡೆಯುತ್ತದೆ. ಕಣಿವೆಯ ಪ್ರಮುಖ ದೇವ, ದೇವತೆಯರಾದ ರಘುನಾಥ ಹಾಗೂ ಹಡಿಂಬೆಯರ ಅದ್ದೂರಿ ರಥೋತ್ಸವವು ಜರುಗುತ್ತದೆ.

ಚಿತ್ರಕೃಪೆ: Kondephy

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಈ ಉತ್ಸವಕ್ಕೆಂದೆ ಮನಾಲಿಯಿಂದ ಹಡಿಂಬಾ ದೇವಿಯು ಹಾಗೂ ರಘುನಾಥಪುರದಿಂದ ರಘುನಾಥ ದೇವರು ವಿಗ್ರಹಳ ರೂಪದಲ್ಲಿ ಕುಲ್ಲುವಿನ ಧಲಪುರಕ್ಕೆ ಆಗಮಿಸುತ್ತಾರೆ. ಅವರನ್ನು ಅಲ್ಲಿನ ವಾಸಿಗಳು ಸಡಗರದಿಂದ ಸ್ವಾಗತಿಸುತ್ತಾರೆ. ರಥವನ್ನು ಎಳೆಯಲಾಗುತ್ತದೆ. ಹೊಸ ಉಡುಗೆ ತೊಡುಗೆಗಳನ್ನು ತೊಟ್ಟು ಕಣಿವೆಯ ಜನರು ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಕುಲ್ಲು ಕಣಿವೆಯಲ್ಲಿ ಅಕ್ಷರಶಃ ಜಾತ್ರೆಯ ವಾತಾವರಣ ಏರ್ಪಟ್ಟಿರುತ್ತದೆ. ಸುಂದರವಾದ ಪ್ರಕೃತಿಯೊಡನೆ ಬೆರೆತ ಈ ತಾಣದಲ್ಲಿ ಸಡಗರದ ವಾತಾವರಣವನ್ನು ನೋಡುವುದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಅಲ್ಲದೆ ದೇಶದ ವಿವಿಧ ಭಾಗಗಳಿಂದ ಹಲವಾರು ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಮಾರಲು ಮಳಿಗೆಗಳನ್ನು ತೆರೆದಿರುತ್ತಾರೆ.

ಚಿತ್ರಕೃಪೆ: Kondephy

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ರಾತ್ರಿಗಳಂತೂ ಇನ್ನೂ ಮನಮೋಹಕವಾಗಿರುತ್ತವೆ. ಕೊರೆಯುವ ಚಳಿಯಲ್ಲೂ ವಿವಿಧ ತಿಂಡಿತಿನಿಸುಗಳ ಮಳಿಗೆಗಳು, ಬಿಸಿ ಬಿಸಿಯಾದ ಚಹಾ ಅಂಗಡಿಗಳು, ಬಣ್ಣ ಬಣ್ಣದ ಲೈಟುಗಳಿಂದ ಜಗಮಗಿಸುವ ವಾತಾವರಣ ನಿಮ್ಮನ್ನು ಮತ್ತಷ್ಟು ರೋಮಾಂಚನಗೊಳಿಸುತ್ತವೆ. ನೀವೇನಾದರೂ ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಪ್ರವಾಸ ಮಾಡುತ್ತಿದ್ದರೆ ಖಂಡಿತವಾಗಿಯೂ ಕುಲ್ಲುವಿನ ದಸರಾ ಉತ್ಸವದ ಮೆರುಗನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲು ಮರೆಯಬೇಡಿ.

ಚಿತ್ರಕೃಪೆ: Candice and Jarrett

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಗುಜರಾತ್ ರಾಜ್ಯದಲ್ಲಿ ನವರಾತ್ರಿಯನ್ನು ಇನ್ನೊಂದು ರೀತಿಯಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಕೋಲಾಟ, ನೃತ್ಯ ಮುಂತಾದವುಗಳು ಹೆಚ್ಚಾಗಿ ನಡೆಯುತ್ತವೆ. ನೃತ್ಯದ ಒಂದು ವಿಶಿಷ್ಟವಾದ ಪ್ರಕಾರವಾದ ಗರ್ಬಾ ನೃತ್ಯವು ಗುಜರಾತಿನೆ ಹೆಗ್ಗುರುತಾಗಿದೆ. ಪುರುಷ ಮಹಿಳೆಯರು ಸುಂದರವಾದ ಉಡುಗೆ ತೊಡುಗೆಗಳನ್ನು ತೊಟ್ಟು ಲವ ಲವಿಕೆಯಿಂದ, ಸಂತಸ ಸಡಗರದಿಂದ ಈ ನೃತ್ಯವನ್ನು ಮಾಡುತ್ತಾರೆ.

ಚಿತ್ರಕೃಪೆ: Kashif Mardani

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಒಂಬತ್ತು ದಿನಗಳವರೆಗೆ ರಾಜ್ಯದ ಎಲ್ಲ ನಗರಗಳ ಹಲವಾರು ಸಂಘಟನೆಗಳು ಕೋಲಾಟವನ್ನು ಆಯೋಜಿಸುತ್ತವೆ. ಈ ಕೋಲಾಟದಲ್ಲಿ ಕಿರಿಯರಿಂದ ಹಿಡಿದು ಹಿರಿಯರೆಲ್ಲರೂ ಒಂದೆ ಉಲ್ಲಾಸ, ಉತ್ಸಾಹಗಳಿಂದ ಭಾಗವಹಿಸುತ್ತಾರೆ. ಹೀಗೆ ಗುಜರಾತ್ ರಾಜ್ಯದ ಪ್ರವಾಸದಲ್ಲಿದ್ದಾಗ ಈ ಸಂದರ್ಭದಲ್ಲಿ ನೀವು ಎಂದಿಗೂ ಮರೆಯಲಾರದ ಅನುಭವ ಪಡೆಯಬಹುದು.

ಚಿತ್ರಕೃಪೆ: Tashiya Mirando

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಹೀಗೊಂದು ನವರಾತ್ರಿಯ ಸಂದರ್ಭದಲ್ಲಿ ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರದಲ್ಲಿ ಅದ್ಭುತವಾಗಿ ಆಯೋಜಿಸಲಾಗಿರುವ ಗರ್ಬಾ ನೃತ್ಯೋತ್ಸವದ ನೋಟ.

ಚಿತ್ರಕೃಪೆ: Hardik jadeja

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ನವರಾತ್ರಿ ಉತ್ಸವವನ್ನು ಪಶ್ಚಿಮ ಬಂಗಾಳದಲ್ಲಿ ಅದರಲ್ಲೂ ವಿಶೇಷವಾಗಿ ಕೊಲ್ಕತ್ತಾದಲ್ಲಿ ದುರ್ಗಾ ಪೂಜಾ ಎಂಬ ಹೆಸರಿನಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಇದರ ಖ್ಯಾತಿ ಎಷ್ಟಿದೆ ಎಂದರೆ ಭಾರತದಲ್ಲಿ ದುರ್ಗಾ ಪೂಜೆ ಅಥವಾ ನವರಾತ್ರಿ ಎಂದರೆ ಎಲ್ಲರೂ ಮೊದಲಿಗೆ ಕೊಲ್ಕತ್ತಾ ಎಂತಲೆ ಹೇಳುತ್ತಾರೆ.

ಚಿತ್ರಕೃಪೆ: Probin

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಸಾಮಾನ್ಯವಾಗಿ ಎಲ್ಲೆಡೆ ಜರುಗುವ ನವರಾತ್ರಿಯ ಆರನೆಯ ದಿನದಿಂದ ಹತ್ತನೆಯ ದಿನದವರೆಗೆ ಕೊಲ್ಕತ್ತಾದಲ್ಲಿ ಅತಿ ವೈಭವದ ಶಾರದೋತ್ಸವ/ದುರ್ಗೋತ್ಸವ ಎಂತಲೂ ಕರೆಯಲ್ಪಡುವ ನವರಾತ್ರಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪಟ್ಟನಗಳ, ನಗರಗಳೆ ವಿವಿಧೇಡೆಗಳಲ್ಲಿ, ದೇವಾಲಯಗಳಲ್ಲಿ ಅದ್ಭುತವಾಗಿ ನಿರ್ಮಿಸಲಾಗುವ ದುರ್ಗಾ ದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದನ್ನು ಕಾಣಬಹುದು.

ಚಿತ್ರಕೃಪೆ: Khushilove

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಕೊಲ್ಕತ್ತಾ ನಗರ ಒಂದರಲ್ಲೆ 2000 ಕ್ಕೂ ಅಧಿಕ ದುರ್ಗಾ ಮಂಟಪಗಳನ್ನು ಈ ಸಂದರ್ಭದಲ್ಲಿ ನಿರ್ಮಿಸಲಾಗುತ್ತದೆ. ಹೇಗೆ ಮುಂಬೈನಲ್ಲಿ ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಅದ್ಭುತ ಮಂಟಪಗಳನ್ನು ಮಾಡಿ ಪ್ರತಿಷ್ಠಾಪಿಸಲಾಗುತ್ತದೊ ಅದೆ ರೀತಿಯಲ್ಲಿ ಕೊಲ್ಕತ್ತಾದಲ್ಲಿ ದುರ್ಗೆಯನ್ನು ಪ್ರತಿಷ್ಠಾಪಿಸಿ ಕೊನೆಯದಾಗಿ ಆ ವಿಗ್ರಹವನ್ನು ನದಿಯಲ್ಲಿ ವಿಸರ್ಜಿಸಲಾಗುತ್ತದೆ.

ಚಿತ್ರಕೃಪೆ: Ekabhishek

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಕೊಲ್ಕತ್ತಾ ನಗರದ ತುಂಬೆಲ್ಲ ಈ ಸಂದರ್ಭದಲ್ಲಿ ಸುತ್ತಾಡಿದಾಗ ಒಂದಕ್ಕಿಂತ ಒಂದು ಭಿನ್ನವಾದ, ವೈಭವೋಪೇತವದ ದುರ್ಗಾ ಮಂಟಪಗಳು ನಿಮ್ಮನ್ನು ಆಕರ್ಷಿಸುತ್ತವೆ. ಹೀಗೆ ವಿಶಿಷ್ಟವಾಗಿ ಆಚರಿಸಲಾಗುವ ಕೊಲ್ಕತ್ತಾದ ನವರಾತ್ರಿ ಉತ್ಸವವೂ ಸಹ ಒಂದು ಮರೆಯಲಾಗದ ಅನುಭವ.

ಚಿತ್ರಕೃಪೆ: Kumar83

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಮಹಾರಾಷ್ಟ್ರದಲ್ಲಿ ನವರಾತ್ರಿಯನ್ನು ವಿಶಿಶ್ಃತವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಘಟಸ್ಥಾಪನೆಯ ಆಚರಣೆಯು ಆಕರ್ಷಕವಾಗಿರುತ್ತದೆ. ಮಣ್ಣಿನ ಪಾತ್ರೆಯಲ್ಲಿ ಧಾನ್ಯಗಳ ಬೀಜಗಳನ್ನು ತುಂಬಿ ಅದರ ಮೇಲೆ ಜೋಳದ ತೆನೆಗಳನ್ನು ಇಡಲಾಗುತ್ತದೆ. ಇದನ್ನೆ ಘಟ ಎನ್ನಲಾಗುತ್ತದೆ. ನಂತರ ಆ ಮಡಕೆಯನ್ನು ಅದರೊಳಗಿನ ಬೀಜಗಳು ಮೊಳಕೆಯೊಡೆದು ಬರುವವರೆಗೂ ಸತತವಾಗಿ ಒಂಭತ್ತು ದಿನಗಳ ಕಾಲ ಭಕ್ತಿಯಿಂದ ಪೂಜಿಸಲಾಗುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: DoshiJi

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಕರ್ನಾಟಕದಲ್ಲಿಯೂ ಸಹ ನವರಾತ್ರಿಯನ್ನು ಎಲ್ಲೆಡೆ ಭಕ್ತಿ ಶೃದ್ಧೆಗಳಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ಒಂಭತ್ತನೆಯ ದಿನವನ್ನು ಆಯುಧ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿರುವ ಪುಸ್ತ್ಕಗಳು, ಕಂಪ್ಯೂತರ್ ಗಳು, ಕಾರುಗಳು, ಮೋಟಾರು ವಾಹನಗಳು, ಅಡಿಗೆ ಮನೆಯ ಪರಿಕರಗಳು, ಕಾರ್ಖಾನೆ ಹೊಂದಿರುವವರು ಯಂತ್ರಗಳು ಹೀಗೆ ತಮ್ಮ ಜೀವ ನಿರ್ವಹಣೆಗೆ ಮಹತ್ತರ ಪಾತ್ರವಹಿಸುವ ಸಾಧನಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇದರ ತಾತ್ಪರ್ಯ ಇಷ್ಟೆ ಪ್ರತಿ ನೀರ್ಜೀವ ವಸ್ತುಗಳಲ್ಲೂ ಸಹ ಭಗವಂತನ ಅಂಶವನ್ನು ಕಾಣಬೇಕೆಂಬುದಾಗಿದೆ ಹಾಗೂ ಅವುಗಳಿಗೂ ಸಹ ಗೌರವ ನೀಡುವುದಾಗಿದೆ.

ಚಿತ್ರಕೃಪೆ: Nvvchar

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಆಯುಧ ಪೂಜೆ ಒಂದು ವಿಧವಾಗಿ ಜ್ಞಾನ, ಬುದ್ಧಿಯ ದೇವತೆಯಾದ ಸರಸ್ವತಿಯ ಪೂಜೆಯಾಗಿಯೂ ಉತ್ತರ ಕರ್ನಾಟಕದ ಭಾಗದಲ್ಲಿ ಆಚರಿಸಲ್ಪಡುತ್ತದೆ. ಮಕ್ಕಳು ಸಾಮಾನ್ಯವಾಗಿ ಪುಸ್ತಕಗಳನ್ನು ದೇವಿಯ ಮುಂದಿರಿಸಿ ಪೂಜೆ ಗೈಯುತ್ತಾರೆ. ಅಲ್ಲದೆ ವಾದ್ಯೋಪಕರಣಗಳನ್ನು ಸಹ ಪೂಜೆಯಲ್ಲಿ ಇಟ್ಟಿರುವುದು ಸಾಮಾನ್ಯ.

ಚಿತ್ರಕೃಪೆ: Christina Kundu

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ವಿಶೇಷವಾಗಿ ಮೈಸೂರು ನವರಾತ್ರಿ ಮುಗಿದ ನಂತರ ಬರುವ ವಿಜಯದಶಮಿ/ದಸರಾ ಹಬ್ಬಕ್ಕೆ ಹೆಸರುವಾಸಿಯಾಗಿದೆ. ಇದನ್ನು ನಾಡಹಬ್ಬವನ್ನಾಗಿಯೂ ಸಹ ಆಚರಿಸಲಾಗುತ್ತದೆ. ವಿಶ್ವ ವಿಖ್ಯಾತಿಯನ್ನು ಪಡೆದಿರುವ ಮೈಸೂರು ದಸರಾ ಉತ್ಸವಕ್ಕೆ ಶ್ರೀಮಂತ ಇತಿಹಾಸವನ್ನು ಹೊಂದಿದೆ. ನವರಾತ್ರಿಗಳ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ನಿತ್ಯ ಜರುಗುತ್ತಿರುತ್ತವೆ. ಅವುಗಳಲ್ಲೊಂದಾಗಿದೆ. ಬೊಂಬೆ ಹಬ್ಬ. ಬಣ್ಣ ಬಣ್ಣದ ಅಂದ ಚೆಂದದ ತರಹೇವಾರಿ ಬೊಂಬೆಗಳನ್ನು ಶಿಸ್ತುಬದ್ಧವಾಗಿ ಇಟ್ಟು ಅಲಂಕರಿಸಲಾಗುತ್ತದೆ. ಇದು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಚಿತ್ರಕೃಪೆ: GoDakshin

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ನವರಾತ್ರಿ ಹಾಗೂ ದಸರಾ ಉತ್ಸವವು ಅದ್ದೂರಿಯಾಗಿ ಆಚರಿಸಲ್ಪಡುತ್ತದೆ. ನಗರದ ಕುದ್ರೋಳಿ ಮಂಜುನಾಥನ ದೇವಸ್ಥಾನ ಹಾಗೂ ಮಂಗಳಾದೇವಿಯರ ದೇವಸ್ಥಾನವು ಅತ್ಯಾಕರ್ಷಕವಾಗಿ ಅಲಂಕೃತಗೊಳ್ಳುತ್ತವೆ. ಕುದ್ರೋಳಿ ದೇವಸ್ಥಾನ ನವರಾತ್ರಿಯ ಸಂದರ್ಭದಲ್ಲಿ.

ಚಿತ್ರಕೃಪೆ: Karunakar Rayker

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಉತ್ಸವದ ಹತ್ತು ದಿನಗಳ ಕಾಲ ನಗರವು ಅಲಂಕಾರ, ಪ್ರಕಾಶಮಾನವಾದ ಜಗಮಗಿಸುವ ಬೆಳಕಿನಿಂದ ಭೂಷಿತವಾಗಿರುತ್ತದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಬೀದಿ ಬೀದಿಗಳು ಜಾತ್ರೆಯ, ಸಂತೆಯಂತಹ ವಾತಾವರಣದ ಕಳೆ ಪಡೆದಿರುತ್ತವೆ.

ಚಿತ್ರಕೃಪೆ: alexrudd

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಮೆರವಣಿಗೆ ಹಾಗೂ ಸ್ಥಳೀಯವಾಗಿ ಮಾಡಲಾಗುವ ಹುಲಿ ವೇಷದ ಕುಣಿತವು ಹಬ್ಬದ ಪ್ರಮುಖ ಆಕರ್ಷಣೆಯಾಗಿರುತ್ತದೆ.

ಚಿತ್ರಕೃಪೆ: alexrudd

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಹುಲಿ ವೇಷ, ಮಂಗಳೂರು ದಸರೆಯ ಒಂದು ಪ್ರಮುಖ ಆಕರ್ಷಣೆ.

ಚಿತ್ರಕೃಪೆ: alexrudd

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಮಡಿಕೇರಿ ದಸರಾ : ಕೊಡಗಿನ ಮಡಿಕೇರಿಯಲ್ಲಿ ವಿಶಿಷ್ಟವಾಗಿ ಆಚರಿಸಲಾಗುವ ದಸರಾ ಉತ್ಸವವು ನೂರಕ್ಕೂ ಅಧಿಕ ವರ್ಷಗಳ ಶ್ರೀಮಂತ ಇತಿಹಾಸ ಹೊಂದಿದೆ. ಇಲ್ಲಿ ನವರಾತ್ರಿ ಹಾಗೂ ದಸರಾ ಉತ್ಸವವನ್ನು ಹತ್ತು ದಿನಗಳ ಕಾಲ ಸಡಗರದಿಂದ ಆಚರಿಸಲಾಗುತ್ತದೆ. ಹತ್ತು ಮಂಟಪ ಹಾಗೂ ನಾಲ್ಕು ಕರಗಗಳನ್ನು ಸ್ಥಾಪಿಸಿ ದೇವಿಯು ಅಸುರರನ್ನು ಸಂಹರಿಸಿ ಲೋಕ ಕಲ್ಯಾಣ ಮಾಡುವುದನ್ನು ಮೂರ್ತಿಗಳ ರೂಪದಲ್ಲಿ ಚಿತ್ರಿಸಲಾಗುತ್ತದೆ.

ಚಿತ್ರಕೃಪೆ: Madikerimanju

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಜನಪದ ಕಥೆಯಂತೆ ಹಿಂದೆ ಮಡಿಕೇರಿಯ ಜನರು ಒಮ್ಮೆ ಯಾವುದೋ ಭಯಂಕರ ರೋಗಕ್ಕೆ ಪೀಡಿತರಾಗಿ ರೋಧಿಸತೊಡಗಿದರು. ಆಗ ಮಡಿಕೇರಿಯ ರಾಜನು ಮಾರಿ ಅಮ್ಮಳ ಉತ್ಸವ ಮಾಡುವ ನಿರ್ಣಯ ಮಾಡಿ ಅದರಂತೆ ನೆರವೇರಿಸಿದ. ಈ ಉತ್ಸವವು ಮಹಾಲಯ ಅಮವಾಸ್ಯೆಯ ನಂತರದ ದಿನದಿಂದ ಪ್ರಾರಂಭವಾಗುತ್ತದೆ. ಇದನ್ನು ಮಡಿಕೇರಿ ಕರಗ ಎಂದು ಕರೆಯಲಗುತ್ತದೆ.

ಚಿತ್ರಕೃಪೆ: Madikerimanju

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಪಟ್ಟಣದಲ್ಲಿ ಒಟ್ಟು ನಾಲ್ಕು ಮಾರಿ ಅಮ್ಮನವರ ದೇವಸ್ಥಾನಗಳಿದ್ದು ನಾಲ್ಕು ಕರಗಗಳು ಆಚರಿಸಲ್ಪಡುತ್ತವೆ. ದಂಡಿನ ಮಾರಿ ಅಮ್ಮ, ಕಂಚಿ ಕಾಮಾಕ್ಷಮ್ಮ, ಕುಂದೂರುಮೊಟ್ಟೆ ಶ್ರೀ ಚೌತಿ ಮಾರಿ ಅಮ್ಮ ಹಾಗೂ ಕೋಟೆ ಮಾರಿ ಅಮ್ಮನವರ ದೇವಸ್ಥಾನಗಳು ಮಡಿಕೇರಿಯಲ್ಲಿವೆ.

ಚಿತ್ರಕೃಪೆ: Madikerimanju

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಪ್ರಸ್ತುತ ಮಡಿಕೇರಿಯಲ್ಲಿ ಜರುಗುವ ಅದ್ದೂರಿ ನವರಾತ್ರಿ ಅಥವಾ ದಸರಾ ಉತ್ಸವದ ಹಿಂದೆ ಭೀಮ್ ಸಿಂಗ್ ಎಂಬುವವರ ಅಪಾರವಾದ ಕೊಡುಗೆಯಿದೆ. ಇವರು ಮೂಲತಃ ರಾಜಸ್ಥಾನದವರಾಗಿದ್ದು ಇವರ ತಂದೆ ಮಡಿಕೇರಿಯಲ್ಲಿ ವಲಸೆ ಬಂದು ವಾಸವಾಗಿದ್ದರು. ಮೊದಲು ಭೀಮ್ ಸಿಂಗ್ ಅವರು ತಮ್ಮ ಸ್ವಂತ ಹಣದಲ್ಲೆ ಕಟ್ಟಿಗೆಗಳಿಂದ ವೇದಿಕೆ ಸಿದ್ಧಪಡಿಸಿ ದುರ್ಗೆಯ ಮೂರ್ತಿಯನ್ನು ಅಚ್ಚುಕಟ್ಟಾಗಿ ಕಡಿದು ನವರಾತ್ರಿಯನ್ನು ಪ್ರಾರಂಭಿಸಿದರು. ಕಾಲಕ್ರಮೇಣ ಇದು ಮಡಿಕೇರಿಯ ಅದ್ದೂರಿ ಉತ್ಸವವಾಗಿ ಪರಿವರ್ತಿತವಾಯಿತು.

ಚಿತ್ರಕೃಪೆ: Madikerimanju

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ನವರಾತ್ರಿಯ ಸಂದರ್ಭದಲ್ಲಿ ಗೋಲುಬೊಮ್ಮೈ ಕೋಲು ಅಥವಾ ಬೊಂಬೆ ಹಬ್ಬ ತಮಿಳುನಾಡು ಹಾಗೂ ಕೇರಳದಲ್ಲಿಯೂ ಸಹ ಆಚರಿಸಲ್ಪಡುತ್ತದೆ. ತಮಿಳುನಾಡಿನಲ್ಲಿ ಬೊಮ್ಮೈ ಕೋಲು ಎಂದರೆ ದೈವದ ಉಪಸ್ಥಿತಿ ಎಂದು ಅರ್ಥೈಸಲಾಗುತ್ತದೆ. ಇದು ನವರಾತ್ರಿಯಲ್ಲಿ ಜರುಗುವ ಬೊಂಬೆಗಳ ಉತ್ಸವವಾಗಿದೆ.

ಚಿತ್ರಕೃಪೆ: Vijayakrishnan

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ನವರಾತ್ರಿಯ ಮೊದಲನೆಯ ದಿನ ಗಣೇಶನ ಪೂಜೆ ಪ್ರಥಮವಾಗಿ ನೆರವೇರಿಸಿ ನಂತರ ಪಾರ್ವತಿ, ಸರಸ್ವತಿ ಹಾಗೂ ಲಕ್ಷ್ಮಿಯರನ್ನು ಪೂಜಿಸಲಾಗುತ್ತದೆ. ನಂತರ ಕಟ್ಟಿಗೆಯ ಮೆಟ್ಟಿಲುಗಳ ರೂಪದಲ್ಲಿ ವೇದಿಕೆಯನ್ನು ಸಿದ್ಧಗೊಳಿಸಿ ಪ್ರತಿ ಸಾಲಿನಲ್ಲೂ ಆಕಾರ, ಗಾತ್ರಕ್ಕೆ ಅನುಗುಣವಾಗಿ ದೇವ, ದೇವತೆಯರ ಹಲವಾರು ಸುಂದರ ಬೊಂಬೆಗಳನ್ನು ಇಡಲಾಗುತ್ತದೆ.

ಚಿತ್ರಕೃಪೆ: Vinoth Chandar

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಇನ್ನೂ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನವರಾತ್ರಿಯ ರೀತಿಯಲ್ಲಿ ಬತುಕಮ್ಮ ಎಂಬ ವಿಶಿಷ್ಟ ಉತ್ಸವವನ್ನು ಒಂಭತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಉತ್ಸವ ಮಹಾಲಯ ಅಮವಾಸ್ಯೆಯ ದಿನ ಪ್ರಾರಂಭವಾಗಿ ಒಂಭತ್ತನೆಯ ದಿನ ಸದ್ದುಲ ಬತುಕಮ್ಮದ ಆಚರಣೆಯ ಮೂಲಕ ಸಂಪನ್ನಗೊಳ್ಳುತ್ತದೆ.

ಚಿತ್ರಕೃಪೆ: Frankloogan

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ಭಾರತದ ವಿವಿಧ ಭಾಗಗಳಲ್ಲಿ ನವರಾತ್ರಿ:

ತೆಲುಗು ಭಾಷೆಯಲ್ಲಿ ಬತುಕಮ್ಮ ಎಂದರೆ ದೇವಿ ಮಾತೆ ಪ್ರತ್ಯಕ್ಷಳಾದ ಘಳಿಗೆ ಎಂದು ಅರ್ಥೈಸಬಹುದಾಗಿದೆ. ಮೂಲತಃ ಈ ಆಚರಣೆಯಲ್ಲಿ ವಿಶೀಷ್ಟ ರೀತಿಯ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ವಿವಿಧ ಹೂವುಗಳನ್ನು ಗುಂಪಿನಲ್ಲಿರಿಸುವುದಾಗಿದೆ. ಇದು ಸ್ತ್ರೀತನವನ್ನು ಸಂಭ್ರಮಿಸುವ ಉತ್ಸವವಾಗಿದೆ.

ಚಿತ್ರಕೃಪೆ: Randhirreddy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X