» »ಹಲವು ಅದ್ಬುತಗಳ ಮುದುಮಲೈ ಅರಣ್ಯ

ಹಲವು ಅದ್ಬುತಗಳ ಮುದುಮಲೈ ಅರಣ್ಯ

Written By:

ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಅಭಯಾರಣ್ಯ ನಿಜವಾಗಿಯೂ ಸಂತಸ ನೀಡುವ ಒಂದು ಸುಂದರ ರಾಷ್ಟ್ರೀಯ ಉದ್ಯಾನವಾಗಿದೆ. ಇಲ್ಲಿ ಭೇಟಿ ನೀಡಿದಾಗ ಮಾತ್ರವೆ ಆ ಸಂತಸದ ಅನುಭೂತಿಯಾಗುವುದು ಖಂಡಿತ. ಅಲ್ಲದೆ, ಇದು ಸ್ಥಿತವಾಗಿರುವ ಸ್ಥಳವನ್ನು ಗಮನಿಸಿದಾಗ, ಇದು ಎಂತಹ ರೋಚಕ ಜಾಗದಲ್ಲಿ ನೆಲೆಸಿದೆ ಅನ್ನಿಸುವುದು ಸಹಜ.

ಏಕೆಂದರೆ, ಈ ರಕ್ಷಿತ ಅಭಯಾರಣ್ಯದ ಉತ್ತರಕ್ಕೆ ಕರ್ನಾಟಕದ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಗಳಿದ್ದರೆ, ಪಶ್ಚಿಮಕ್ಕೆ ಕೇರಳದ ವಯನಾಡ್ ಅಭಯಾರಣ್ಯ, ದಕ್ಷಿಣಕ್ಕೆ ಮುಕ್ರುತಿ ಹಾಗೂ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನಗಳು ಸ್ಥಿತಗೊಂಡಿವೆ. ಅಷ್ಟೆ ಅಲ್ಲ, ಪೂರ್ವಕ್ಕೆ ಸಿಗೂರ್ ಪ್ರಸ್ಥಭೂಮಿಯಿದ್ದು ಸತ್ಯಮಂಗಲಂ ಅರಣ್ಯಕ್ಕೆ ಸಂಪರ್ಕ ಬೆಸೆಯುತ್ತದೆ.

ಹಲವು ಪ್ರಾಣಿ-ಪಕ್ಷಿ, ಜೀವ-ಜಂತು ಹಾಗೂ ಸಸ್ಯ ಸಂಪತ್ತನ್ನೊಳಗೊಂಡ, ಪಶ್ಚಿಮಘಟ್ಟ ಹಾಗೂ ಪೂರ್ವಘಟ್ಟ ಒಂದಕ್ಕೊಂದು ಭೇಟಿ ಮಾಡುವ ಸ್ಥಳದಲ್ಲಿ ನೆಲೆಸಿರುವ, 1932 ರಲ್ಲಿ ಸ್ಥಾಪಿಸಲ್ಪಟ್ಟಿರುವ ಮುದುಮಲೈ ಅಭಯಾರಣ್ಯದ ಪ್ರವಾಸವನ್ನು ಈ ಲೇಖನದ ಮೂಲಕ ಮಾಡುವುದಲ್ಲದೆ ಅಲ್ಲಿ ಕಂಡು ಬರುವ ಮನಮೋಹಕ ಪರಿಸರ, ಹಲವು ವೈವಿಧ್ಯಮಯ ಪ್ರಾಣಿ-ಪಕ್ಷಿಗಳನ್ನು ನಿಮ್ಮ ಕಂಪ್ಯೂಟರ್ ಪರದೆಯ ಮೂಲಕ ನೋಡಿ ಆನಂದಿಸಿ.

ವೈವಿಧ್ಯಮಯ ವಿವಿಧ ಪ್ರವಾಸಿ ಲೇಖನಗಳನ್ನು ಓದಿರಿ.

ಮುದುಮಲೈ:

ಮುದುಮಲೈ:

321 ಚ.ಕಿ.ಮೀ ವಿಸ್ತೀರ್ಣ ಪ್ರದೇಶದಲ್ಲಿ ಚಾಚಿರುವ ಮದುಮಲೈ ಅರಣ್ಯವು ಸಮುದ್ರ ಮಟ್ಟದಿಂದ 960 ಮೀ ಗಳಿಂದ ಹಿಡಿದು 1266 ಮೀ ಗಳವರೆಗೆ ಎತ್ತರದಲ್ಲಿದೆ. ಇದು ಸವನ್ನಾ ಮಾದರಿಯ ವಾತಾವರಣವನ್ನು ಹೊಂದಿದೆ.

ಚಿತ್ರಕೃಪೆ: Rakesh Dogra

ಮುದುಮಲೈ:

ಮುದುಮಲೈ:

ಇದು ಹುಲಿ ರಕ್ಷಿತ ಅಭಯಾರಣ್ಯವೂ ಸಹ ಆಗಿದ್ದು, 40 ಕ್ಕೂ ಅಧಿಕ ಹುಲಿಗಳು ಇಲ್ಲಿ ಸ್ವೆಚ್ಛಂದವಾಗಿ ವಿಹರಿಸುವುದನ್ನು ಕಾಣಬಹುದು. ಎಪ್ರಿಲ್ 2007 ರಲ್ಲಿ ತಮಿಳುನಾಡು ಸರ್ಕಾರವು ಇದನ್ನು ಹುಲಿ ಮೀಸಲು ಪ್ರದೇಶವನ್ನಾಗಿ ಘೋಷಿಸಿದೆ.

ಚಿತ್ರಕೃಪೆ: Srihari Kulkarni

ಮುದುಮಲೈ:

ಮುದುಮಲೈ:

ಹುಲಿ ಮೀಸಲು ಎಂದು ಘೋಷಿಸುವುದಕ್ಕಿಂತ ಮೊದಲು, ಇಲ್ಲಿ ಸುಮಾರು 350 ಕುಟುಂಬಗಳು ವಾಸಿಸುತ್ತಿದ್ದವು. ನಂತರ ಆ ಕುಟುಂಬಗಳಿಗೆ ಸೂಕ್ತ ಪರಿಹಾರ ಧನವನ್ನು ಒದಗಿಸಿ ಇಲ್ಲಿಂದ ಸ್ಥಳಾಂತರಿಸಲಾಯಿತು. ಆದರೆ ಇಂದಿಗೂ ಸಹ ಈ ಪ್ರದೇಶದ ಐದು ಕಿ.ಮೀ ಸುತ್ತಳತೆಯಲ್ಲಿ ಇನ್ನೂ ಹಲವರು ವಾಸಿಸುತ್ತಿದ್ದಾರೆ.

ಚಿತ್ರಕೃಪೆ: babi krishna

ಮುದುಮಲೈ:

ಮುದುಮಲೈ:

ಆದರೆ ಇವರು ಪ್ರಸ್ತುತ, ಅರಣ್ಯದ ಮಾರ್ಗದರ್ಶಕರಾಗಿ, ಪಹರೆಗಾರರಾಗಿ ಭೇಟಿ ನೀಡುವ ಪ್ರವಾಸಿಗರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಂದ ಪರಿಸರ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ದೊರೆಯುತ್ತಿದೆ.

ಚಿತ್ರಕೃಪೆ: Prince Roy

ಮುದುಮಲೈ:

ಮುದುಮಲೈ:

ಈ ಅರಣ್ಯದಲ್ಲಿ ಪ್ರಮುಖವಾಗಿ ಮೂರು ಘಟ್ಟಗಳಿದ್ದು, ಪ್ರತಿ ಘಟ್ಟಗಳು ವಿಭಿನ್ನವಾದ ವಾತಾವರಣವನ್ನು ಹೊಂದಿರುವುದು ಇದರ ವಿಶೇಷ. ಆದ್ದರಿಂದ ಒಂದು ಭಾಗದಲ್ಲಿ ಒಂದು ಪ್ರಮಾಣದಲ್ಲಿ ಮಳೆಯಾದರೆ ಇನ್ನೊಂದು ಭಾಗದಲ್ಲಿ ಮತ್ತೊಂದು ಪ್ರಮಾಣದಲ್ಲಿ ಮಳೆ ಬೀಳುವುದು ಸಾಮಾನ್ಯ.

ಚಿತ್ರಕೃಪೆ: Srihari Kulkarni

ಮುದುಮಲೈ:

ಮುದುಮಲೈ:

ಮತ್ತೊಂದು ಸಂಗತಿಯೆಂದರೆ ಹಲವು ವಿವಿಧ ಜಾತಿಗಳ ಮರ ಗಿಡಗಳನ್ನು ಈ ಅರಣ್ಯ ಪ್ರದೇಶದಲ್ಲಿ ಕಾಣಬಹುದಾಗಿದೆ. ಅಲ್ಲದೆ ನಾವು ಸಾಮಾನ್ಯವಾಗಿ ಬೆಳೆಯುವ ಅಕ್ಕಿ, ಶುಂಠಿ, ಅರಿಷಿಣ, ದಾಲ್ಚಿನಿ ಮುಂತಾದ ಪದಾರ್ಥಗಳಿಗೆ ದೂರದ ಸಂಬಂಧ ಹೊಂದಿರುವ ಹಲವು ಕಾಡಿನ ಪದಾರ್ಥಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Prateek Rungta

ಮುದುಮಲೈ:

ಮುದುಮಲೈ:

ನಿತ್ಯ ಹರಿದ್ವರ್ಣದ ಕಾಡುಗಳ ಜೊತೆಗೆ ಬೇಸಿಗೆಯಲ್ಲಿ ಎಲೆ ಉದುರುವ ಕಾಡುಗಳೂ ಇದ್ದು, ಇವು ಮತ್ತೆ ವಸಂತ ಮಾಸ ಬಂದಾಗ ಹಸಿರಿನಿಂದ ಚಿಗುರಿ ಕಂಗೊಳಿಸುತ್ತವೆ.

ಚಿತ್ರಕೃಪೆ: Thangaraj Kumaravel

ಮುದುಮಲೈ:

ಮುದುಮಲೈ:

ಜೀವ ಸಂಪತ್ತನು ಪರಿಗಣನೆಗೆ ತೆಗೆದುಕೊಂಡರೆ ಇಲ್ಲಿ ಸಾಕಷ್ಟು ವೈವಿಧ್ಯಮಯ ಪಕ್ಷಿ, ಪ್ರಾಣಿ ಹಾಗೂ ಇತರೆ ವನ್ಯ ಜೀವಿ ಹಾಗೂ ಜಲ ಜೀವಿಗಳನ್ನು ಕಾಣಬಹುದು. ಆದ್ದರಿಂದ ಈ ಅರಣ್ಯವು ಜೈವಿಕವಾಗಿ ವೈವಿಧ್ಯಮಯವೂ, ಆಕರ್ಷಕವೂ ಆಗಿ ಗೋಚರಿಸುತ್ತದೆ.

ಚಿತ್ರಕೃಪೆ: Srihari Kulkarni

ಮುದುಮಲೈ:

ಮುದುಮಲೈ:

ಇಲ್ಲಿ ಸುಮಾರು 50 ಬಗೆಯ ಮೀನುಗಳನ್ನು, 21 ಬಗೆಯ ಉಭಯವಾಸಿಗಳನ್ನು, 34 ಬಗೆಯ ಸರಿಸೃಪಗಳನ್ನು, 227 ಬಗೆಯ ಪಕ್ಷಿಗಳನ್ನು ಹಾಗೂ 55 ಬಗೆಯ ಸಸ್ತನಿಗಳನ್ನು ಕಾಣಬಹುದಾಗಿದೆ. ಭಾರದಲ್ಲಿ ಕಂಡು ಬರುವ ಒಟ್ಟು ಸಸ್ತನಿಗಳ ಪೈಕಿ ಶೇಕಡ 13 ರಷ್ಟು ಸಸ್ತನಿಗಳು ವಾಸಿಸುತ್ತಿರುವುದು ಮುದುಮಲೈ ಅರಣ್ಯದಲ್ಲೆ ಎಂದರೆ ಆಶ್ಚರ್ಯವಾಗಬಹುದು.

ಚಿತ್ರಕೃಪೆ: Rakesh Dogra

ಮುದುಮಲೈ:

ಮುದುಮಲೈ:

ಇರುವ 15 ಬೆಕ್ಕಿನ ಜಾತಿಯ ಪ್ರಾಣಿಗಳ ಪೈಕಿ ನಾಲ್ಕು ಜಾತಿಗಳಿರುವುದು ಮುದುಮಲೈ ಅರಣ್ಯದಲ್ಲೆ. ಬಂಗಾಳ ಹುಲಿ, ಭಾರತೀಯ ಚಿರತೆ, ಕಾಡು ಬೆಕ್ಕು ಪ್ರಮುಖವಾದವುಗಳು.

ಚಿತ್ರಕೃಪೆ: Vinoth Chandar

ಮುದುಮಲೈ:

ಮುದುಮಲೈ:

ಅಲ್ಲದೆ, ದೇಶದಲ್ಲೆ ಅತಿ ಹೆಚ್ಚಿನ ಸಂಖ್ಯೆಗಳಲ್ಲಿ ಹುಲಿಗಳಿರುವುದು ಮುದುಮಲೈ ಅಭಯಾರಣ್ಯದಲ್ಲಿ. ಪ್ರಸ್ತುತ, ಸುಮಾರು 9 ಚ.ಕಿ.ಮೀ ಪ್ರದೇಶಕ್ಕೆ ಕನಿಷ್ಠ ಒಂದು ಹುಲಿಯಿದೆ.

ಚಿತ್ರಕೃಪೆ: Vinoth Chandar

ಮುದುಮಲೈ:

ಮುದುಮಲೈ:

ಇನ್ನು ಇಲ್ಲಿರುವ ಪಕ್ಷಿ ಕುಲವನ್ನು ಪರಿಗಣನೆಗೆ ತೆಗೆದುಕೊಂಡರೆ, ಭಾರತದಲ್ಲಿ ಕಂಡುವರುವ ಒಟ್ಟಾರೆ ಪಕ್ಷಿಗಳ ಪೈಕಿ ಶೇಕಡ 8 ರಷ್ಟು ಪಕ್ಷಿಗಳು ಮುದುಮಲೈನ ಸುಂದರಮಯ ಕಾಡುಗಳಲ್ಲಿ ಕಂಡುಬರುತ್ತವೆ. ಸುಮಾರು 227 ಬಗೆಯ ಪಕ್ಷಿಗಳನ್ನು ಈ ಅರಣ್ಯದಲ್ಲಿ ವೀಕ್ಷಿಸಬಹುದಾಗಿದೆ.

ಚಿತ್ರಕೃಪೆ: Marcus Sherman

ಮುದುಮಲೈ:

ಮುದುಮಲೈ:

ಕಾಡಿನ ತುಂಬೆಲ್ಲ ಹಲವು ಆಕರ್ಷಕ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ವೀಕ್ಷಣಾ ಗೋಪುರ, ಸಫಾರಿ, ಒಂಬೆಟ್ಟ ಕೆರೆ, ವರ್ತುಲ ರಸ್ತೆ, ಮರಳಿನ ರಸ್ತೆ, ಕಾರ್ಗುಡಿಯ ವೀಕ್ಷಣಾ ಕೇಂದ್ರ ಹೀಗೆ ಹತ್ತು ಹಲವಾರು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.

ಚಿತ್ರಕೃಪೆ: Praveen Ankireddy

ಮುದುಮಲೈ:

ಮುದುಮಲೈ:

ಮೋಯಾರ್ ಕಾಡಿನಲ್ಲಿ ಹರಿದಿರುವ ಒಂದು ಸುಂದರ ನದಿಯಾಗಿದ್ದು, ಕಾಡು ಪ್ರಾಣಿಗಳು ಇಲ್ಲಿಗೆ ನೀರು ಕುಡಿಯಲು ಸಾಮಾನ್ಯವಾಗಿ ಬರುತ್ತಿರುತ್ತವೆ. ಹೀಗೆ ಅವು ನೀರು ಕುಡಿಯಲು ಬರುವ ಪ್ರಸಂಗಗಳು ರೋಚಕಮಯವಾಗಿರುತ್ತದೆ.

ಚಿತ್ರಕೃಪೆ: Harsha K R

ಮುದುಮಲೈ:

ಮುದುಮಲೈ:

ಮುದುಮಲೈ ಬೆಂಗಳೂರಿನಿಂದ ಸುಮಾರು 220 ಕಿ.ಮೀ ಗಳಷ್ಟು ದೂರದಲ್ಲಿದ್ದು, ಬೆಂಗಳೂರು, ಮೈಸೂರು, ನಂಜನಗೂಡು, ಗುಂಡ್ಲುಪೇಟೆ ಹಾಗೂ ಬಂಡೀಪುರ ಮಾರ್ಗವಾಗಿ ಇಲ್ಲಿಗೆ ಸುಲಭವಾಗಿ ತೆರಳಬಹುದಾಗಿದೆ.

ಚಿತ್ರಕೃಪೆ: Rahul Nair

ಮುದುಮಲೈ:

ಮುದುಮಲೈ:

ಬೆಂಗಳೂರಿನಿಂದ ಗುಂಡ್ಲುಪೇಟೆಯವರೆಗೆ ಸಾಕಷ್ಟು ಸರ್ಕಾರಿ ಬಸ್ಸುಗಳು ಲಭ್ಯವಿದ್ದು, ಗುಂಡ್ಲುಪೇಟೆಯಿಂದ ಮುದುಮಲೈವರೆಗೆ ಕೆಲವೆ ಕೆಲವು ಬಸ್ಸುಗಳು ಮಾತ್ರ ದೊರೆಯುತ್ತವೆ.

ಚಿತ್ರಕೃಪೆ: Srihari Kulkarni

ಮುದುಮಲೈ:

ಮುದುಮಲೈ:

ಅಲ್ಲದೆ ಮುದುಮಲೈ ಅಭಯಾರಣ್ಯವನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 67 ರ ಮೂಲಕ ತಲುಪಬಹುದಾಗಿದ್ದು ಈ ಹೆದ್ದಾರಿಯು ಮೈಸೂರಿನಿಂದ 100 ಕಿ.ಮೀ, ಊಟಿಯಿಂದ 39 ಕಿ.ಮೀ ಹಾಗೂ ಗುಡಲೂರಿನಿಂದ 3 ಕಿ.ಮೀ ದೂರವಿದೆ.

ಚಿತ್ರಕೃಪೆ: Harsha K R

ಮುದುಮಲೈ:

ಮುದುಮಲೈ:

ಈ ಅಭಯಾರಣ್ಯಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಊಟಿ. ಇದು ಇಲ್ಲಿಂದ 64 ಕಿ.ಮೀ ದೂರದಲ್ಲಿದೆ. ಊಟಿಯಿಂದ ನೇರವಾಗಿ ಈ ಅಭಯಾರಣ್ಯಕ್ಕೆ ತೆರಳಲು ಬಾಡಿಗೆ ಕಾರುಗಳು ದೊರೆಯುತ್ತವೆ.

ಚಿತ್ರಕೃಪೆ: muscicapa

ಮುದುಮಲೈ:

ಮುದುಮಲೈ:

ಜೂನ್ ನಿಂದ ಡಿಸೆಂಬರ್ ವರೆಗಿನ ಸಮಯವು ಈ ಸುಂದರ ರಾಷ್ಟ್ರೀಯ ಉದ್ಯಾನಕ್ಕೆ ತೆರಳಲು ಯೋಗ್ಯ ಸಮಯವಾಗಿದೆ. ಆದ್ದರಿಂದ ಮುಂಚಿತವಾಗಿ ಹೋಟೆಲುಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿ ಹೋಗುವುದು ಉತ್ತಮ. ಇಲ್ಲಿ ಸಾಕಷ್ಟು ಹೋಟೆಲುಗಳೂ ಸಹ ಇವೆ.

ಚಿತ್ರಕೃಪೆ: muscicapa

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Srihari Kulkarni

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: babi krishna

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Srihari Kulkarni

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Srihari Kulkarni

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: muscicapa

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: muscicapa

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: mdemon

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Ashwin Kumar

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Harsha K R

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Harsha K R

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Aditya Banerjee

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Aditya Banerjee

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Aditya Banerjee

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Harsha K R

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Srihari Kulkarni

ಮುದುಮಲೈ:

ಮುದುಮಲೈ:

ಮುದುಮಲೈ ಕಾಡಿನ ಸುಂದರ ಚಿತ್ರಗಳು.

ಚಿತ್ರಕೃಪೆ: Mahesh Balasubramanian

Please Wait while comments are loading...