Search
  • Follow NativePlanet
Share
» »ಚಳಿಗಾಲದ ಮಜಾ ಸವಿಯಲು ಭಾರತದ ಈ ರಸ್ತೆಗಳ ಮೂಲಕ ಪ್ರವಾಸದ ಅನುಭವ ಪಡೆಯಿರಿ!

ಚಳಿಗಾಲದ ಮಜಾ ಸವಿಯಲು ಭಾರತದ ಈ ರಸ್ತೆಗಳ ಮೂಲಕ ಪ್ರವಾಸದ ಅನುಭವ ಪಡೆಯಿರಿ!

ನಿಮ್ಮ ಮನ ಸೂರೆಗೊಳಿಸುವಂತಹ ಹಾಗೂ ಚಳಿಗಾಲದಲ್ಲಿ ಪ್ರವಾಸ ಮಾಡಲು ಯೋಗ್ಯವಾದ ಭಾರತದ 8 ಅತ್ಯುತ್ತಮ ರಸ್ತೆ ಮಾರ್ಗಗಳು

ಭಾರತವು ವಿಶಾಲವಾದ ಹಾಗೂ ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದಿರುವಂತಹ ದೇಶವಾಗಿದೆ. ಭಾರತದಲ್ಲಿ ಕೆಲವು ಅತ್ಯಂತ ಪರಿಣಾಮಕಾರಿ ಹಾಗೂ ಅದ್ಬುತ ಭೌಗೋಳಿಕ ಸ್ಥಳಗಳನ್ನು ಕಾಣಬಹುದಾಗಿದ್ದು, ಇವು ಒಂದಕ್ಕಿಂತ ಇನ್ನೊಂದು ತಮ್ಮದೇ ಆದ ರೀತಿಯಲ್ಲಿ ಆಯಾಯ ಹವಾಮಾನಗಳಿಗನುಗುಣವಾಗಿ ವಿಭಿನ್ನ ವಾಗಿರುವುದು ಸಹಜ ವಿಷಯವಾಗಿದೆ. ಹಿಮಾಚ್ಛಾದಿತ ಬೆಟ್ಟಗಳು, ಹೆದ್ದಾರಿಗಳು ಮತ್ತು ಬಯಲು ಪ್ರದೇಶಗಳ ಸಮೃದ್ಧಿಯೊಂದಿಗೆ, ರಸ್ತೆ ಪ್ರವಾಸವು ಎಲ್ಲವನ್ನೂ ಅನ್ವೇಷಿಸಲು ಉತ್ತಮ ಪ್ರಯಾಣ ಮಾರ್ಗವಾಗಿದೆ.

ಬೇಸಿಗೆಗೆ ಕಾಯುವುದರ ಹೊರತಾಗಿ ಚಳಿಗಾಲದಲ್ಲಿ ರಸ್ತೆ ಮೂಲಕ ಪ್ರಯಾಣ ಮಾಡುವುದೇ ಎಂದು ನೀವು ಅಚ್ಚರಿ ಪಡುತ್ತಿರುವಿರಾ? ಹೌದು, ಬೇಸಿಗೆ ಕಾಲವು ಅದೂ ನೀವು ಕುಟುಂಬದ ಜೊತೆ ರಸ್ತೆ ಪ್ರಯಾಣ ಮಾಡುವವರಾಗಿದ್ದಲ್ಲಿ, ಯಾವಾಗಲೂ ಉತ್ತಮವಾಗಿರಬೇಕೆಂದೇನು ಇಲ್ಲ. ಚಳಿಗಾಲವು ಅಸಾಂಪ್ರದಾಯಿಕವಾಗಿದ್ದರೂ ಕೂಡಾ, ಪ್ರಕೃತಿಯ ಆನಂದವನ್ನು ನಿಜವಾದ ರೀತಿಯಲ್ಲಿ ಅನುಭವಿಸುವ ಋತುಗಳಲ್ಲಿ ಚಳಿಗಾಲವೂ ಒಂದಾಗಿದೆ.

ಚಳಿಗಾಲದಲ್ಲಿ ರಸ್ತೆಗಳ ಮೂಲಕ ಪ್ರವಾಸ ಮಾಡಲು ನೀವು ಒಪ್ಪಿರುವಿರಾದಲ್ಲಿ, ಭಾರತದ ಈ ಎಂಟು ಪ್ರಮುಖ ರಸ್ತೆಗಳ ಮೂಲಕ ಪ್ರವಾಸ ಮಾಡಿ

ನಾರ್ಕಂಡದಿಂದ ಸಾಂಗ್ಲಾ

ನಾರ್ಕಂಡದಿಂದ ಸಾಂಗ್ಲಾ

ನಾರ್ಕಂಡದಿಂದ ಸಾಂಗ್ಲಾ ಅತ್ಯಂತ ಕಡಿಮೆ ಗುರುತಿಸಲ್ಪಟ್ಟ ಭಾರತದ ರಸ್ತೆಗಳಲ್ಲಿ ಒಂದಾಗಿದೆ. ಮತ್ತು ಈ ರಸ್ತೆಗಳು ಬೆಳಕಿಗೆ ಬರಲು ಅರ್ಹವಾದವುಗಳಾಗಿವೆ. ಈ ರಸ್ತೆಮಾರ್ಗದ ಕೆಲವು ಭಾಗಗಳು ಪಾರದರ್ಶಕ ಮಂಜುಗಡ್ಡೆಯಿಂದ ಆವೃತವಾಗಿದ್ದರೂ, ನೀಲಿ ಆಕಾಶ, ಹೊಗೆಯಾಡುವ ಪರ್ವತಗಳು ಮತ್ತು ಅಂತ್ಯವಿಲ್ಲದ ಹಿಮದ ನೋಟವು ನಿಮ್ಮ ಪ್ರವಾಸವನ್ನು ಯೋಗ್ಯವಾಗಿಸುತ್ತದೆ! ರಸ್ತೆಗಳು ವರ್ಷಪೂರ್ತಿ ತೆರೆದಿರುತ್ತವೆ, ಅಕ್ಟೋಬರ್‌ನಲ್ಲಿ ಹಿಮವು ಪ್ರಾರಂಭವಾಗುತ್ತದೆ. ನೀವು ಪ್ರಕೃತಿ ಪ್ರೇಮಿಯಾಗಿದ್ದರೆ, ಭಾರತದಲ್ಲಿ ಈ ಆಕರ್ಷಕ ಚಳಿಗಾಲದ ರಸ್ತೆ ಪ್ರವಾಸಗಳನ್ನು ತಪ್ಪಿಸಿಕೊಳ್ಳಬೇಡಿ.

ಶಿಮ್ಲಾದಿಂದ ಕಲ್ಕಾ

ಶಿಮ್ಲಾದಿಂದ ಕಲ್ಕಾ

ಹನಿಮೂನ್ ಹೋಗುವವರ ಸ್ವರ್ಗ ಎಂದೆ ಪ್ರಸಿದ್ದಿಯಾಗಿರುಅ ಶಿಮ್ಲಾವು ಅದ್ಬುತಗಳನ್ನೊಳಗೊಂಡ ಭೂಮಿಯಾಗಿದೆ. ಶಿಮ್ಲಾದಿಂದ ಕಲ್ಕಾಗೆ ಸುಮಾರು 70 ಕಿ.ಮೀಗಳ ಪ್ರಯಾಣವಿದೆ. ಮರಗಳಿಂದ ಕೂಡಿದ ಪರ್ವತದ ತುದಿಗಳು ಮತ್ತು ಬೆರಗುಗೊಳಿಸುವ ಭೂದೃಶ್ಯಗಳಿಗೆ ಧನ್ಯವಾದಗಳನ್ನು ಹೇಳುತ್ತಾ ಈ ರಸ್ತೆ ಮಾರ್ಗವು ಪ್ರಕೃತಿಯ ಅತ್ಯುತ್ತಮ ಕಲಾಕೃತಿಯನ್ನು ಪ್ರದರ್ಶಿಸುವುದಕ್ಕಾಗಿ ಹೆಸರುವಾಸಿಯಾಗಿದೆ.

ಯಾವುದಕ್ಕೂ ಸಾಟಿಯಿಲ್ಲದ ಪರ್ವತ ದೃಶ್ಯಗಳಿಂದ ಹಿಡಿದು ಪರ್ವತಗಳ ಮೂಲಕ ಹಾದುಹೋಗುವ ತಣ್ಣನೆಯ ಗಾಳಿಯವರೆಗೆ ಶಿಮ್ಲಾದ ಉದ್ದಕ್ಕೂ ಕಲ್ಕಾಗೆ ರಸ್ತೆ ಪ್ರವಾಸವು ನಿಮಗೆ ಭಾರತದಲ್ಲಿ ಅತ್ಯುತ್ತಮ ಚಳಿಗಾಲದ ರಸ್ತೆ ಪ್ರವಾಸದ ಅನುಭವವನ್ನು ನೀಡುತ್ತದೆ.

ಶ್ರೀನಗರದಿಂದ ಜವಾಹರ್

ಶ್ರೀನಗರದಿಂದ ಜವಾಹರ್

ಇದು ಭಾರತದ ಇತರ ರಸ್ತೆಮಾರ್ಗಗಳಿಗಿಂತ ವಿಭಿನ್ನವಾದ ರಸ್ತೆ ಪ್ರಯಾಣದ ಅನುಭವವಾಗಿದೆ. ಚಳಿಗಾಲದ ರಸ್ತೆ ಪ್ರವಾಸಗಳಲ್ಲಿ ಇದು ಭಾರತದ ಅತ್ಯುತ್ತಮ ಸುರಂಗಮಾರ್ಗಗಳಲ್ಲಿಯ ಪ್ರಯಾಣ ಮಾರ್ಗಗಳಲ್ಲಿ ಒಂದಾಗಿದೆ. ಎರಡೂ ಕಡೆಗಳಲ್ಲಿ ಅದರ ಹಿಮದಿಂದ ಆವೃತವಾದ ಪರ್ವತಗಳು ಮತ್ತು ಕಾಡುಗಳ ಜೊತೆಗೆ, ಖಾಲಿ ಸುರಂಗದ ಮೂಲಕ ಸವಾರಿ ಮಾಡುವುದು ಭಾರತದಲ್ಲಿ ಚಳಿಗಾಲದ ರಸ್ತೆ ಪ್ರವಾಸಗಳನ್ನು ವಿಭಿನ್ನ ಹಾಗೂ ರೋಚಕಗೊಳಿಸುತ್ತದೆ. ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆಯೇ ಇಲ್ಲಿಯ ಮಾರ್ಗವು ಚಲನಚಿತ್ರಗಳಿಗೆ ಸ್ವರ್ಗವಾಗಿ ರೂಪಾಂತರಗೊಳ್ಳುತ್ತದೆ. ಅಲ್ಲದೆ ಇಲ್ಲಿಯ ಬೆರಗುಗೊಳಿಸುವ ನೋಟಗಳು ಮತ್ತು ದಾರಿಯುದ್ದಕ್ಕೂ ಕೆಲವು ಹುಲ್ಲಿನ ಕಾಟೇಜ್ ಗಳ ಸುಂದರ ನೋಟಗಳನ್ನು ವೀಕ್ಷಿಸುತ್ತಾ ಸಾಗಬಹುದಾಗಿದೆ.

ಸೋನಮಾರ್ಗದಿಂದ ಗುಲ್ ಮಾರ್ಗವರೆಗೆ

ಸೋನಮಾರ್ಗದಿಂದ ಗುಲ್ ಮಾರ್ಗವರೆಗೆ

ಹಿಮಾಚಲದ ದೊಡ್ಡ ಮಂಜಿನ ಪರ್ವತಗಳ ಮಧ್ಯೆ ಇರುವ ವಿಸ್ಮಯಕಾರಿ ಸೌಂದರ್ಯವನ್ನು ಅನುಭವಿಸದಿದ್ದರೆ, ಚಳಿಗಾಲದ ಅನುಭವದ ಅತ್ಯಗತ್ಯ ಭಾಗವನ್ನು ನೀವು ಕಳೆದುಕೊಂಡಿದ್ದೀರಿ ಎಂದೇ ಹೇಳಬಹುದು. ಸೋನಾಮಾರ್ಗ್‌ನಿಂದ ಗುಲ್ಮಾರ್ಗ್‌ಗೆ ರಸ್ತೆ ಪ್ರಯಾಣವು ಬೆರಗುಗೊಳಿಸುವ ಹೊಗೆಯ ಪರ್ವತಗಳು, ಹಚ್ಚ ಹಸಿರಿನ ಹೊದಿಕೆಗಳು ಮತ್ತು ಬಿಳಿ ಭೂದೃಶ್ಯಗಳ ಮೂಲಕ ಹಾದುಹೋಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಕೈಗೊಳ್ಳಬೇಕಾದ ಭಾರತೀಯ ರಸ್ತೆ ಪ್ರವಾಸಗಳಲ್ಲಿ ಇದಕ್ಕೂ ಹೆಚ್ಚಿನ ಬೇಡಿಕೆಯಿದೆ.

ಗುವಾಹಟಿಯಿಂದ ತವಾಂಗ್

ಗುವಾಹಟಿಯಿಂದ ತವಾಂಗ್

500 ಕಿ.ಮೀ ಉದ್ದಕ್ಕೂ ವಿಸ್ತರಿಸಿರುವ ಮಾರ್ಗ, ಗುಹಾವಟಿಯಿಂದ ತವಾಂಗ್‌ಗೆ ಹೋಗುವ ಮಾರ್ಗವು ಭಾರತದ ಅತ್ಯುತ್ತಮ ಚಳಿಗಾಲದ ರಸ್ತೆ ಪ್ರಯಾಣವಾಗಿದೆ. ದೃಷ್ಟಿ ಹಾಯಿಸಿದಲ್ಲೆಲ್ಲಾ ರಸ್ತೆಯು ಹಿಮದಿಂದ ಆವೃತವಾದ ನೋಟಗಳನ್ನು ಹೊಂದಿದೆ. ಈ ರಸ್ತೆಯು ಕಡಿಮೆ ಪ್ರಯಾಣದ ಕಾರಣ, ಎಚ್ಚರಿಕೆಯಿಂದ ಯೋಜನೆ ಮತ್ತು ಸೂಕ್ತವಾದ ವಾಹನವನ್ನು ಚಲಾಯಿಸಲು ಸೂಚಿಸಲಾಗುತ್ತದೆ. ಭೂದೃಶ್ಯಗಳ ವಿಹಂಗಮ ನೋಟ, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಅರಣ್ಯದ ಉದ್ದನೆಯ ಪ್ರದೇಶಗಳು ರಸ್ತೆ ಪ್ರವಾಸದಲ್ಲಿ ಸವಾರರು ನಿರೀಕ್ಷಿಸುವ ಚಳಿಗಾಲದ ಅತ್ಯುತ್ತಮ ಅನುಭವವನ್ನು ನೀಡುತ್ತದೆ.

 ಪೆಲ್ಲಿಂಗ್ ನಿಂದ ಡಾರ್ಜಿಲಿಂಗ್ ಗೆ

ಪೆಲ್ಲಿಂಗ್ ನಿಂದ ಡಾರ್ಜಿಲಿಂಗ್ ಗೆ

ಆಟಿಕೆ ರೈಲು ಸವಾರಿಯಿಂದ ಸೈಕ್ಲಿಂಗ್ ವರೆಗೆ ಈ ಚಳಿಗಾಲದಲ್ಲಿಯ ಸ್ವಚ್ಚವಾದ ರಸ್ತೆ ಮಾರ್ಗವು ಸಾರಿಗೆಗೆ ಮುಕ್ತವಾದ ಆಯ್ಕೆಗಳನ್ನು ಇನ್ನಿಲ್ಲದಂತೆ ನೀಡುತ್ತದೆ. ಈಶಾನ್ಯದಲ್ಲಿ ಹಿಮಭರಿತ ಪರ್ವತ ಶ್ರೇಣಿಗಳ ನಡುವೆ ಏಕಾಂತವಾಗಿರುವ ಈ ಅದ್ಭುತ ಮಾರ್ಗವು ತನ್ನದೇ ಆದ ರೀತಿಯಲ್ಲಿ ಸೊಗಸಾದ ಮತ್ತು ಆಕರ್ಷಕವಾಗಿದೆ! ಚಳಿಗಾಲದಲ್ಲಿ ಹಿಮಚ್ಚಾದಿತ ಭೂದೃಶ್ಯದ ರಮಣೀಯ ನೋಟದ ತುಣುಕನ್ನು ಇಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅಥವಾ ಪ್ರವಾಸಿಗರಿಗೆ ಸವಿಯಲು ಸಾಧ್ಯವಾಗುತ್ತದೆ. ಆದುದರಿಂದ ಪೆಲ್ಲಿಂಗ್ ನಿಂದ ಡಾರ್ಜಿಲಿಂಗ್ ವರೆಗಿನ ರಸ್ತೆ ಪ್ರಯಾಣದ ಮಾರ್ಗವು ಭಾರತದ ಅತ್ಯುತ್ತಮ ಚಳಿಗಾಲದಲ್ಲಿ ಪ್ರಯಾಣಿಸಬಹುದಾದಂತಹ ಮಾರ್ಗವಾಗಿದೆ.

ಗ್ಯಾಂಗ್ಟಾಕ್ ಟು ಜುಲುಕ್

ಗ್ಯಾಂಗ್ಟಾಕ್ ಟು ಜುಲುಕ್

ಈ ಲೂಪಿ ಮಾರ್ಗವು ವಿಶೇಷವಾಗಿ ಚಳಿಗಾಲದಲ್ಲಿ ಪ್ರವಾಸ ಮಾಡಲು ಸಂತೋಷವನ್ನು ನೀಡುತ್ತದೆ, ಏಕೆಂದರೆ ಇದು ಪ್ರಕೃತಿಯ ಅತ್ಯುತ್ತಮ ನೋಟವನ್ನು ಒದಗಿಸುತ್ತದೆ. ಇದು ಕಡಿಮೆ ಪ್ರಯಾಣ ಮತ್ತು ಕಡಿಮೆ ಜನಸಂದಣಿಯನ್ನು ಹೊಂದಿರುವ ಕಾರಣ, ಈ ಹಿಮ ರಸ್ತೆ ಮಾರ್ಗವನ್ನು ಭೇಟಿ ಮಾಡುವುದು ಹೆಚ್ಚು ಸ್ಮರಣೀಯವಾಗಿಸುತ್ತದೆ. ಈ ಚಳಿಗಾಲದ ರಸ್ತೆ ಪ್ರವಾಸದ ಸಮಯದಲ್ಲಿ, ನೀವು ಹಿಮದಿಂದ ಆವೃತವಾದ ಕಣಿವೆಗಳು, ಹೆಪ್ಪುಗಟ್ಟಿದ ಸರೋವರಗಳು ಮತ್ತು ಸಸ್ಯ ಮತ್ತು ಪ್ರಾಣಿಗಳನ್ನೊಳಗೊಂಡ ವಿಶಾಲವಾದ ಅರಣ್ಯವನ್ನು ನಿರೀಕ್ಷಿಸಬಹುದು.

 ಮನಾಲಿಯಿಂದ ಲೇಹ್ ವರೆಗೆ

ಮನಾಲಿಯಿಂದ ಲೇಹ್ ವರೆಗೆ

ಮಹಾನ್ ಹಿಮಾಲಯದ ನಡುವೆ 16,600 ಅಡಿ ಎತ್ತರದಲ್ಲಿ ಡ್ರೈವ್ ಮಾಡುವುದು ನಿಜವಾಗಿಯೂ ವಿಸ್ಮಯಕಾರಿ ಅನುಭವವೆನ್ನಲು ಅರ್ಹವಾಗಿದೆ.ಇದು ಭಾರತದಲ್ಲಿ ಚಳಿಗಾಲದಲ್ಲಿ ಹೆಚ್ಚು ಪ್ರಯಾಣಿಸುವ ರಸ್ತೆಗಳಲ್ಲಿ ಒಂದಾಗಿದೆ, ಏಕೆಂದರೆ ಅನೇಕ ಪ್ರವಾಸಿ ತಾಣಗಳು ಮತ್ತು ಗೆಟ್‌ವೇಗಳನ್ನು ದಾರಿಯಲ್ಲಿ ಹೊಂದಿದ್ದು, ಇಲ್ಲಿಯ ಹಿಮದ ಹೊದಿಕೆಯು ಈ ನೈಸರ್ಗಿಕ ಅದ್ಭುತವನ್ನು ಪರಿಪೂರ್ಣ ವಿಹಾರಕ್ಕೆ ಪರಿವರ್ತಿಸುತ್ತದೆ. ಮತ್ತು ಇದು ಭಾರತದಲ್ಲಿ ಹೆಚ್ಚು ಇನ್‌ಸ್ಟಾಗ್ರಾಮ್ ನಲ್ಲಿ ಪ್ರದರ್ಶಿಸಲಾದ ಮತ್ತು ಛಾಯಾಗ್ರಹಣ ಮಾಡಲಾದ ರಸ್ತೆಮಾರ್ಗಗಳಲ್ಲಿ ಒಂದಾಗಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X