Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಾಮಾರ್ಗ್ » ಹವಾಮಾನ

ಸೋನಾಮಾರ್ಗ್ ಹವಾಮಾನ

ಮೇ ಮತ್ತು ಅಕ್ಟೋಬರ್ ಹಾಗು ನವೆಂಬರ್ ಮತ್ತು ಏಪ್ರಿಲ್ ತಿಂಗಳುಗಳ ನಡುವಿನ ಅವಧಿಯಲ್ಲಿ ಸೋನಾಮಾರ್ಗಕ್ಕೆ ಭೇಟಿ ನೀಡುವುದು ಉತ್ತಮ. ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಇಲ್ಲಿನ ಹವಾಮಾನ ಸಾಕಷ್ಟು ಆರಾಮದಾಯಕವಾಗಿರುತ್ತದೆ ಮತ್ತು ಗುಡ್ಡಗಾಡು ಪ್ರದೇಶಗಳ ಭೇಟಿಗೂ ಇದು ಅತ್ಯುತ್ತಮ  ಸಮಯವಾಗಿದೆ. ಹಿಮಪಾತವನ್ನು ಆನಂದಿಸಲು ಬಯಸುವ ಪ್ರವಾಸಿಗರು ನವೆಂಬರ್ ನಿಂದ ಏಪ್ರಿಲ್ ತಿಂಗಳ ಒಳಗೆ ಈ ಸ್ಥಳಕ್ಕೆ ಭೇಟಿ ನೀಡಬಹುದು.

ಬೇಸಿಗೆಗಾಲ

(ಮೇ ತಿಂಗಳಿನಿಂದ ಅಕ್ಟೋಬರ್) : ಸೋನಾಮಾರ್ಗ್ ಪ್ರದೇಶದ ಹವಾಮಾನ ಬೇಸಿಗೆ ಕಾಲದಲ್ಲಿ ಸಾಕಷ್ಟು ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ. ಈ ಸ್ಥಳದ ಸರಾಸರಿ ತಾಪಮಾನ 14 ಡಿ.ಸೆ. ಈ ಸಮಯ ತೀರ್ಥಯಾತ್ರೆಗೆ ಉತ್ತಮ ಅವಧಿಯಾಗಿದೆ.

ಮಳೆಗಾಲ

ಸೋನಾಮರ್ಗ್ ಪ್ರದೇಶದಲ್ಲಿ ಮಳೆಯು ವರ್ಷದ ಯಾವುದೇ ಸಮಯದಲ್ಲಿ ಉಂಟಾಗಬಹುದು. ಈ ಸಮಯದಲ್ಲಿ ಚಾರಣ ಮಾರ್ಗಗಳು ಜಾರುವ ಕಾರಣ ಸ್ವಲ್ಪ ಅಪಾಯಕಾರಿಯಾಗಿರುತ್ತವೆ. ಈ ಸಮಯದಲ್ಲಿ ಪ್ರವಾಸಿಗರು ಚಾರಣ ಹೋಗುವುದು ಸರಿಯಲ್ಲ.

ಚಳಿಗಾಲ

(ನವೆಂಬರ್ ನಿಂದ ಏಪ್ರಿಲ್) : ಚಳಿಗಾಲದಲ್ಲಿ ಸೋನಾಮಾರ್ಗ್ ಸ್ಥಳದ ತಾಪಮಾನವು ಉಪ ಶೂನ್ಯ ಮಟ್ಟಕ್ಕೆ ಇಳಿಯುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಭಾರೀ ಹಿಮಪಾತವು ಸಂಭವಿಸುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಹಿಮದಿಂದ ಆವೃತವಾದ ಪರ್ವತಗಳು ಮತ್ತು ಹೆಪ್ಪುಗಟ್ಟಿದ ಕೆರೆಗಳ ಸೌಂದರ್ಯವನ್ನು ಆನಂದಿಸಬಹುದು.