Search
  • Follow NativePlanet
Share
» »ವಾಸ್ಕೊ ಡ ಗಾಮಾ ಕಾಲೂರಿದ್ದ ಕೋಳಿಕೋಡ್

ವಾಸ್ಕೊ ಡ ಗಾಮಾ ಕಾಲೂರಿದ್ದ ಕೋಳಿಕೋಡ್

By Vijay

ಹಿಂದೆ ಕೋಲಂಬಸ್ ಎಂಬಾತ ಅನ್ವೇಷಕನು ಭಾರತಕ್ಕೆ ಮೊದಲ ಬಾರಿಗೆ ಸಮುದ್ರ ಮಾರ್ಗ ಕಂಡುಹಿಡಿದ ಕೀರ್ತಿಗೆ ಪಾತ್ರನಾಗಬೇಕೆಂದು ಬಯಸಿ, ಶ್ರಮ ವಹಿಸಿ, ನೌಕೆ ನಡೆಸಿ ಕಡೆಗೆ ಅಮೇರಿಕ ತಲುಪಿದ ಕತೆ ಎಲ್ಲರಿಗೂ ಗೊತ್ತೆ ಇದೆ. ಹಾಗಾದರೆ ಭಾರತಕ್ಕೆ ಯುರೋಪ್ ನಿಂದ ಸಮುದ್ರದ ಮೂಲಕ ಪ್ರಪ್ರಥಮವಾಗಿ ತಲುಪಿದ ಮಹಾನುಭಾವನಾರು? ಹೌದು ಆತನೆ ಪೋರ್ಚುಗಲ್ ಅನ್ವೇಷಕ ವಾಸ್ಕೊ ಡಾ ಗಾಮಾ.

ಉಚಿತ ಕೂಪನ್ನುಗಳು : ಪ್ರವಾಸ ಹಾಗೂ ಹೋಟೆಲು ದರಗಳ ಮೇಲೆ 70% ರಷ್ಟು ಕಡಿತ

ಈ ಅನ್ವೇಷಕ ಯುರೋಪ್ ಮಾರ್ಗವಾಗಿ ಏಷಿಯಾ ಖಂಡದ ಭಾರತ ದೇಶಕ್ಕೆ ತಲುಪಿದಾಗ ಮೊದಲು ಕಾಲಿಟ್ಟಿದ್ದು ಕೇರಳದ ಕೋಳಿಕೋಡ್ (ಕೇರಳೇತರರು ಇದನ್ನು ಕೊಜಿಕೊಡೆ ಎಂತಲೂ ಕರೆಯುತ್ತಾರೆ) ನಗರಕ್ಕೆ. ಅಂದು ಇದು ಕ್ಯಾಲಿಕಟ್ ಅಥವಾ ಕಲ್ಲಿಕೋಟೆ ಎಂಬ ಹೆಸರುಗಳಿಂದಲೂ ಸಹ ಕರೆಯಲ್ಪಡುತ್ತಿತ್ತು. ಇಂದು ಕೇರಳದ ಪ್ರಮುಖ ಪಟ್ಟಣಗಳ ಪೈಕಿ ಒಂದಾಗಿರುವ ಕೋಳಿಕೋಡ್ ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿದೆ.

ವಿಶೇಷ ಲೇಖನ : ಮರೆಯಲಾಗದ ತಿರುವನಂತಪುರಂ

ವರ್ಷದ ಎಲ್ಲಾ ಸಮಯದಲ್ಲಿಯೂ ಭೇಟಿ ನೀಡಲು ಕ್ಯಾಲಿಕಟ್‌ ಅಥವಾ ಕೋಳಿಕೋಡ್ ಸೂಕ್ತ ತಾಣ. ಆದರೆ ಜೂನ್, ಜುಲೈಗಳ ಸಂದರ್ಭದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಜಾಸ್ತಿಯೆ ಹಾಗೂ ಬೇಸಿಗೆಯೂ ಸಹ ಉಷ್ಣಮಯವಾಗಿರುತ್ತದೆ. ಆದರೆ ಒಬ್ಬ ಪ್ರವಾಸಪ್ರಿಯ ಪ್ರವಾಸಿಗನಿಗೆ ಈ ಅಂಶಗಳು ಕಟ್ಟಿ ಹಾಕಲು ಸಾಧ್ಯವಿಲ್ಲ ಅಲ್ಲವೆ ತಾನೆ? ಯಾವ ಸಮಯವೆ ಆಗಲಿ ಅವಕಾಶ ದೊರೆತ ಕ್ಷಣ ಹೊರಡುವುದೆ ಆದ್ಯ ಕರ್ತವ್ಯ.

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಕೋಳಿಕೋಡ್ ಅಥವಾ ಕ್ಯಾಲಿಕಟ್ ಎಲ್ಲರಿಗೂ ಚಿರಪರಿಚಿತವಾದ ಹೆಸರು. ಉತ್ತರ ಭಾಗದ ಕೇರಳ ರಾಜ್ಯದಲ್ಲಿರುವ ಈ ಪಟ್ಟಣವು ನಿಖರವಾಗಿ ರಾಜ್ಯದ ವಾಯವ್ಯ ಭಾಗದಲ್ಲಿ ನೆಲೆಸಿದೆ.

ಚಿತ್ರಕೃಪೆ: Bidhunkrishna

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಕೋಳಿಕೋಡ್ ಈ ಜಿಲ್ಲೆಯ ಜಿಲ್ಲಾ ಕೇಂದ್ರವೂ ಸಹ ಆಗಿದೆ. ಈ ಜಿಲ್ಲೆಯು ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಸುತ್ತುವರಿದಿದ್ದು, ಕಡಲ ಪ್ರದೇಶವಾಗಿದ್ದರೆ, ಪೂರ್ವ ಭಾಗವು ಪ್ರಮುಖ ವಾಣಿಜ್ಯ ಹಾಗೂ ವ್ಯಾಪಾರ ಕೇಂದ್ರವಾಗಿ ಜನಪ್ರಿಯವಾಗಿದೆ.

ಚಿತ್ರಕೃಪೆ: Bidhunkrishna

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಐತಿಹಾಸಿಕ ವಿಷಯ ತಜ್ಞರ ಪ್ರಕಾರ, ಕ್ಯಾಲಿಕಟ್‌ ಹಿಂದೆ ಸಾಂಬಾರು ಪದಾರ್ಥ ಹಾಗೂ ಸಿಲ್ಕ್‌ಗೆ ಅತ್ಯಂತ ಜನಪ್ರಿಯತೆ ಪಡೆದುಕೊಂಡ ತಾಣವಾಗಿತ್ತು. ಇದರಿಂದಾಗಿಯೇ ಈ ಭಾಗವು ಸಮುದ್ರ ಮಾರ್ಗದ ಮೂಲಕ ಅನೇಕ ರಾಷ್ಟ್ರಗಳ ಜತೆ ಉತ್ತಮ ವಾಣಿಜ್ಯ ಸಂಪರ್ಕವನ್ನು ಹೊಂದಿತ್ತು.

ಚಿತ್ರಕೃಪೆ: Shafeekbsb

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಇಂದಿಗೂ ನಗರವು ಸದೃಢ ವಾಣಿಜ್ಯೋದ್ಯಮ ಸಂಪರ್ಕವನ್ನು ಆಫ್ರಿಕಾದ ಹಲವು ರಾಷ್ಟ್ರ, ಏಷ್ಯಾ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಹೊಂದಿದೆ. ಈ ಮೂಲಕ ಕೋಳಿಕೋಡ್ ವಾಣಿಜ್ಯ ಹಬ್‌ ಆಗಿ ಪರಿವರ್ತನೆಗೊಂಡಿದ್ದು, ಸುವರ್ಣ ದಿನಗಳನ್ನು ಅನುಭವಿಸುತ್ತಿದೆ ಎಂತಲೇ ಹೇಳಬಹುದು.

ಚಿತ್ರಕೃಪೆ: Choosetocount

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಕೊಂಚ ಇತಿಹಾಸವನ್ನು ಕೆದಕಿದಾಗ ತಿಳಿದು ಬರುವ ವಿಷಯವೆಂದರೆ ಹಿಂದೆ ಕೋಳಿಕೋಡ್ ನಿರ್ವಹಣೆಯು ಬ್ರಿಟೀಷ್ ಈಸ್ಟ್‌ ಇಂಡಿಯಾ ಕಂಪನಿ ಆಡಳಿತದಲ್ಲಿ ಮದ್ರಾಸ್‌ ಅಧ್ಯಕ್ಷರ ಅಧೀನದಲ್ಲಿತ್ತು. ಕ್ಯಾಲಿಕಟ್‌ ವಿಶ್ವ ಇತಿಹಾಸದಲ್ಲಿಯೂ ಸಹ ಪ್ರಮುಖ ಸ್ಥಾನ ಪಡೆದಿದೆ.

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಕೋಳಿಕೋಡ್ ನಿಂದ 18 ಕಿ.ಮೀ ದೂರದಲ್ಲಿರುವ "ಕಾಪ್ಪಾಡ್‌" ಕಡಲ ತೀರವು ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಏಕೆಂದರೆ ವಾಸ್ಕೊ ಡಾ ಗಾಮನು1498 ರಲ್ಲಿ ಮೊದಲ ಬಾರಿಗೆ ಸಮುದ್ರ ಮಾರ್ಗದ ಮೂಲಕ ಭಾರತ ಪ್ರವೇಶಿಸಿದಾಗ ಕಾಲೂರಿದ ಮೊದಲ ಕಡಲ ತೀರವೆ ಇದಾಗಿದೆ. ಅಂದು ಈತ ಬಂದಿಳಿದ ನೆನಪಿನಾರ್ಥವಾಗಿ ನಿರ್ಮಿಸಿದ ಸ್ಮಾರಕ ಇಂದು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದ್ದು ಜನ ಹುಡುಕಿ ಬರುವ ಸ್ಥಳವೆಂದು ಇದು ಗುರುತಾಗಿದೆ.

ಚಿತ್ರಕೃಪೆ: PP Yoonus

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಕೋಳಿಕೋಡ್ ತನ್ನ ಅತ್ಯುತ್ತಮ ಸಂಸ್ಕೃತಿ ಹೊಂದಿದ್ದು ಪ್ರವಾಸಿಗರ ಆದರಾತಿಥ್ಯದಲ್ಲಿ ಸಾಧಿಸಿದ ಹಿರಿಮೆ ದೊಡ್ಡದು. ಕೇವಲ ಪ್ರವಾಸಿಗರಲ್ಲದೆ ಇತಿಹಾಸ ತಜ್ಞರು, ಸಂಶೋಧಕರು ಹಾಗೂ ಇತರೆ ಕೆಲಸದ ನಿಮಿತ್ತ ಇಲ್ಲಿಗೆ ಬರುವವರನ್ನು ಇದು ಬಹುವಾಗಿ ಮೆಚ್ಚಿಸುತ್ತದೆ. ವಿಶ್ವ ಪ್ರಸಿದ್ಧ ಗಾಯಕ ವಡಕ್ಕನ್‌ ಪಟ್ಟುಕ್ಕಲ್‌ರ ಜನ್ಮಸ್ಥಳವೂ ಸಹ ಇದಾಗಿದೆ.

ಚಿತ್ರಕೃಪೆ: Nmkuttiady

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಸಾಂಸ್ಕೃತಿಕ, ಸಾಮಾಜಿಕ ಆಯಾಮದಲ್ಲಿ ವೀಕ್ಷಿಸಿದಾಗ ಮುಸ್ಲಿಮರ ನೃತ್ಯ ರೂಪಕ "ಒಪ್ಪನಾ', ಗೀತೆಯಾದ "ಮಪ್ಪಲಪಟ್ಟುಕಲ್‌' ಹಾಗೂ ಗಜಲ್‌ಗಳು ಇಲ್ಲಿ ಚಾಲ್ತಿಯಲ್ಲಿರುವ ಅತ್ಯಂತ ಜನಪ್ರಿಯ ಇಸ್ಲಾಮಿಕ್‌ ಕಲಾ ಪ್ರಕಾರಗಳಾಗಿವೆ. ಈ ನಗರವು ಸಾಕಷ್ಟು ಪ್ರಗತಿಪರ ಐತಿಹಾಸಿಕ ಘಟನೆಗಳಿಗೂ ಸಹ ಕಾರಣವಾಗಿದೆ. ಇದರ ಪ್ರಭಾವದಿಂದಲೇ ಅನೇಕ ಜನಪ್ರಿಯ ಸ್ಥಳೀಯ ಬರಹಗಾರರು ಇಲ್ಲಿ ಹುಟ್ಟಿಕೊಂಡಿದ್ದಾರೆ.

ಚಿತ್ರಕೃಪೆ: Dhruvaraj S

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಸಾಂಸ್ಕೃತಿಕ ಹಿನ್ನಲೆ ಹೊರತು ಪಡಿಸಿದರೆ ಇಲ್ಲಿನ ನಿವಾಸಿಗಳು ಫುಟ್‌ಬಾಲ್‌ ಪ್ರೇಮಿಗಳು ಹಾಗೂ ಆದರಾತಿಥ್ಯದ ಮನೋಭಾವಕ್ಕೆ ಹೆಸರುವಾಸಿಯಾದವರು. ಇದು ಹಲವು ಸಂಸ್ಕೃತಿಗಳ ಮಿಶ್ರಣವಾಗಿ ಕೂಡ ಕಂಡು ಬರುತ್ತದೆ. ಇಲ್ಲಿ ಅರೇಬಿಕ್‌ ಹಾಗೂ ಚೈನಿಸ್‌ ಸಂಸ್ಕೃತಿಯ ಪ್ರಭಾವವನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Shabeer MP

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ಕೋಳಿಕೋಡ್ ನಗರವು "ಕೋಳಿಕೋಡನ್‌ ಹಲ್ವಾ" (ಹಲವು ಹೂವುಗಳ ಮಿಶ್ರಣದಿಂದ ಸಿದ್ಧಪಡಿಸಿದ ಸಿಹಿತಿಂಡಿ ) ತಯಾರಿಕೆಗೆ ಜನಪ್ರಿಯ. ನೀವೇನಾದರೂ ಈ ನಗರಕ್ಕೆ ಭೇಟಿ ನೀಡಿದರೆ ಅತ್ಯಂತ ರುಚಿಕರವಾದ, ಬಾಯಲ್ಲಿ ನೀರೂರಿಸುವ ಈ ತಿಂಡಿಯನ್ನು ಕೊಳ್ಳಲು ಮಾತ್ರ ಮರೆಯಬೇಡಿ. ಕೋಳಿಕೋಡ್ ನಲ್ಲಿ ತಯಾರಿಸಲಾಗುವ ಇನ್ನೊಂದು ರುಚಿಕರ ಖಾದ್ಯ "ಮಲಬಾರ್‌ ಬಿರ್ಯಾನಿ'.ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Divya Kudua

ಕೋಳಿಕೋಡ್ ನಗರ:

ಕೋಳಿಕೋಡ್ ನಗರ:

ರುಚಿಕರ ಮಲಬಾರ್ ಬಿರ್ಯಾನಿ. ಅದರಲ್ಲೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಇದು ಬಾಯಲ್ಲಿ ನೀರೂರಿಸುವ ತಲಸ್ಸೇರಿ ಬಿರ್ಯಾನಿ.

ಚಿತ್ರಕೃಪೆ: Challiyan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X