• Follow NativePlanet
Share
» »ಇದು ಅಷ್ಟಾದಶ ಶಕ್ತಿ ಪೀಠಗಳಿರುವ ಸ್ಥಳಗಳು ಹಾಗು ಸ್ಥಳ ಪುರಾಣ

ಇದು ಅಷ್ಟಾದಶ ಶಕ್ತಿ ಪೀಠಗಳಿರುವ ಸ್ಥಳಗಳು ಹಾಗು ಸ್ಥಳ ಪುರಾಣ

Written By:

ಅಷ್ಟಾದಶ ಶಕ್ತಿ ಪೀಠಗಳನ್ನು ನಮ್ಮ ಹಿಂದೂ ಧರ್ಮದಲ್ಲಿ ಅತ್ಯಂತ ಭಕ್ತಿ-ಭಾವದಿಂದ ಪೂಜಿಸುತ್ತಾರೆ. ಸಾಕ್ಷಾತ್ ಆ ಆದಿಪರಾಶಕ್ತಿಯ ಶಕ್ತಿ ರೂಪಗಳೇ ಈ ಅಷ್ಟಾದಶ ಶಕ್ತಿ ಪೀಠಗಳಾಗಿವೆ. ಶಕ್ತಿ ಪೀಠಗಳ ಉದ್ಭವದ ಹಿಂದೆ ಒಂದು ಕಥೆ ಇರುವುದರ ಬಗ್ಗೆ ನಿಮಗೆ ಗೊತ್ತೆ? ಅಖಂಡ ಭಾರತ ದೇಶದಲ್ಲಿ ವ್ಯಾಪಿಸಿರುವ ಆ ಅಷ್ಟಾದಶ ಪೀಠಗಳು ಸಾಕ್ಷಾತ್ ಸತಿ ದೇವಿಯ ಶರೀರ ಭಾಗಗಳೇ ಆಗಿವೆ ಎಂದು ಪುರಾಣಗಳು ಹೇಳುತ್ತವೆ.

ಬ್ರಹ್ಮದೇವನ ಪುತ್ರರಲ್ಲಿ ಒಬ್ಬನಾದ ದಕ್ಷ ಪ್ರಜಾಪತಿಗೆ 53 ಕುಮಾರಿಗಳಿದ್ದರು. ಅವರಲ್ಲಿ 28 ಮಂದಿಯರನ್ನು ಚಂದ್ರನಿಗೆ, 13 ಮಂದಿಯನ್ನು ಕಶ್ಯಪ ಮಹರ್ಷಿಗೆ, 10 ಮಂದಿಗೆ ಧರ್ಮಕ್ಕೆ, ಒಬ್ಬಳನ್ನು ಪಿತ್ರರಿಗೆ, ಮತ್ತೊಬ್ಬಳಿಗೆ ಅಗ್ನಿಗೆ ನೀಡಿ ಮದುವೆಯನ್ನು ಮಾಡಿದನು. ಉಳಿದ ಮಗಳೇ ಸತಿ ದೇವಿ. ಈಕೆ ಸಾಕ್ಷಾತ್ ಆ ಆದಿಪರಾಶಕ್ತಿ ಅಂಶವಾಗಿದ್ದಳು.

ಆಕೆಗೆ ಚಿಕ್ಕ ವಯಸ್ಸಿನಿಂದಲೂ ಶಿವನ ಮೇಲೆ ಇದ್ದ ಪ್ರೇಮದಿಂದಾಗಿ ಆಕೆಯನ್ನು ಚಂದ್ರನಿಗೆ ನೀಡಿ ವಿವಾಹವನ್ನು ಮಾಡಲಿಲ್ಲ. ಶಿವನನ್ನು ವಿವಾಹ ಮಾಡಿಕೊಂಡಿದ್ದು ದಕ್ಷನಿಗೆ ಇಷ್ಟವಿರಲಿಲ್ಲ. ಯಜ್ಞಕ್ಕೆ ತನ್ನ ಪತಿಗೆ ಕರೆದಿಲ್ಲ ಎಂದು ಪಾರ್ವತಿಯು ತಂದೆಗೆ ಕೇಳಿದಾಗ ಎಲ್ಲರ ಮುಂದೆ ಅವಮಾನ ಮಾಡುತ್ತಾನೆ. ಇದನ್ನು ಸಹಿಸಿಕೊಳ್ಳಲಾರದ ಪಾರ್ವತಿ ದೇವಿ (ಸತಿ ದೇವಿ) ಯಜ್ಞದಲ್ಲಿ ಬಿದ್ದು ಪ್ರಾಣ ಅರ್ಪಣೆ ಮಾಡುತ್ತಾಳೆ. ಶಿವನು ತನ್ನ ಪತ್ನಿ ದೇಹವನ್ನು ಕೊಂಡುಯ್ಯುತ್ತಿರುವಾಗ ವಿಷ್ಣು ಮೂರ್ತಿಯು ತನ್ನ ಸುದರ್ಶನ ಚಕ್ರದಿಂದ 108 ಭಾಗಗಳಾಗಿ ಕತ್ತರಿಸುತ್ತಾನೆ. ಆ ಭಾಗಗಳು ಎಲ್ಲೆಲ್ಲಿ ಇವೆ. ಅಲ್ಲಿನ ಸ್ಥಳ ಪುರಾಣವೇನು? ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ ಬನ್ನಿ.

ಶಂಕರಾಚಾರ್ಯರ ಪ್ರಕಾರ

ಶಂಕರಾಚಾರ್ಯರ ಪ್ರಕಾರ

ಕೆಲವು ಗ್ರಂಥಗಳ ಪ್ರಕಾರ ಸತಿ ದೇವಿಯ ಶರೀರ ಭಾಗವು 108 ಎಂದು ಹೇಳಿದರೆ, ಮತ್ತೆ ಕೆಲವು ಗ್ರಂಥಗಳ ಪ್ರಕಾರ 51 ಎಂದು ವಾದಿಸುತ್ತಾರೆ. ಆದರೆ ಸತಿ ದೇವಿಯ ಶರೀರ ಭಾಗದಲ್ಲಿನ ಪೀಠಗಳು 18 ಎಂದು ಶಂಕರಾಚಾರ್ಯರು ರಚನೆ ಮಾಡಿರುವ ಗ್ರಂಥಗಳ ಉಲ್ಲೇಖದಿಂದ ತಿಳಿದುಕೊಳ್ಳಬಹುದಾಗಿದೆ.

ಶಾಂಕರಿ ದೇವಿ ದೇವಾಲಯ

ಶಾಂಕರಿ ದೇವಿ ದೇವಾಲಯ

ಶಾಂಕರಿ ದೇವಿ ದೇವಾಲಯವು ಮೊದಲನೇ ಶಕ್ತಿ ಪೀಠವಾಗಿದೆ. ಇದು ಶ್ರೀಲಂಕ ದೇಶದ ಟ್ರಿಂಕೋಮಲಿ ಎಂಬ ಪಟ್ಟಣದಲ್ಲಿದೆ. ಇಲ್ಲಿ ಸತಿ ದೇವಿಯ ಕೆಳಭಾಗವು ಬಿದ್ದಿರುವುದಾಗಿ ಪುರಾಣಗಳು ಹೇಳುತ್ತದೆ. ಚೋಳರು, ಪಲ್ಲವರು, ಪಾಂಡ್ಯ ರಾಜರ ಕೈಯಲ್ಲಿ ಅಭಿವೃದ್ಧಿ ಪಡೆದ ಈ ಮಾತಾ ದೇವಾಲಯ ಆ ಕಾಲದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ 1622 ರಲ್ಲಿ ಈ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನ ಮಾಡಿದ ಪೋರ್ಚುಗೀಸರು ಪುರಾತನವಾದ ದೇವಾಲಯವನ್ನು ಧ್ವಂಸ ಮಾಡಿದರು. ಆದರೆ ಆ ದೇವಿ ವಿಗ್ರಹ ಮಾತ್ರ ಏನು ಆಗದೇ ಇದ್ದಿದ್ದರಿಂದ ತದನಂತರ ಹಳೆಯ ದೇವಾಲಯದಂತೆಯೇ ಮತ್ತೊಂದು ದೇವಾಲಯವನ್ನು ನಿರ್ಮಾಣ ಮಾಡಿದರು.

ಕಾಮಾಕ್ಷಿ ಮಾತಾ ದೇವಾಲಯ

ಕಾಮಾಕ್ಷಿ ಮಾತಾ ದೇವಾಲಯ

ಇದು ಎರಡನೇ ಶಕ್ತಿಪೀಠವಾಗಿದೆ. ಈ ಕಾಮಾಕ್ಷಿ ಮಾತಾ ದೇವಾಲಯವು ನಮ್ಮ ದಕ್ಷಿಣ ಭಾರತ ದೇಶದಲ್ಲಿನ ತಮಿಳು ನಾಡು ರಾಜ್ಯದ ಕಂಚಿಯಲ್ಲಿದೆ. ಭಕ್ತರು ಈ ದೇವಿಯನ್ನು ಕಂಚಿ ಕಾಮಾಕ್ಷಿ ಮಾತೆಯಾಗಿ ಕರೆಯುತ್ತಾರೆ. ಈ ಪಟ್ಟಣವನ್ನು ಕಾಂಚಿವರಂ, ಕಂಚಿ ಪುರಂ ಎಂದು ಕರೆಯುತ್ತಿದ್ದರು ಎಂದು ಕೆಲವು ಶಾಸನದ ಪ್ರಕಾರ ತಿಳಿದುಕೊಳ್ಳಬಹುದಾಗಿದೆ.

ಕಾಮಾಕ್ಷಿ ಮಾತಾ ದೇವಾಲಯ

ಕಾಮಾಕ್ಷಿ ಮಾತಾ ದೇವಾಲಯ

ಇಲ್ಲಿ ಸತಿ ದೇವಿಯ ಬೆನ್ನಿನ ಭಾಗ ಬಿದ್ದಿರುವುದಾಗಿ ಗ್ರಂಥಗಳು ಹೇಳುತ್ತವೆ. ಈ ದೇವಾಲಯವನ್ನು ಕೇವಲ ಸಾವಿರ ವರ್ಷಗಳಿಂದಲೂ ದೇವತೆಗಳು ಹಾಗು ಸಾಮಾನ್ಯ ಮಾನವರು ಕೂಡ ಪೂಜಿಸುತ್ತಿದ್ದಾರೆ. ಈ ದೇವಾಲಯವು ನಮ್ಮ ದೇಶದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ.

ಶೃಂಕಲದೇವಿ ದೇವಾಲಯ

ಶೃಂಕಲದೇವಿ ದೇವಾಲಯ

ಇದು ಮೂರನೇ ಶಕ್ತಿ ಪೀಠವಾಗಿದೆ. ಈ ದೇವಾಲಯವು ಪಶ್ಚಿಮ ಬೆಂಗಾಳದ ಪ್ರತ್ಯುನ್ನ ನಗರದಲ್ಲಿದೆ. ಇಲ್ಲಿ ಸತಿ ದೇವಿಯ ಹೊಟ್ಟೆ ಭಾಗವು ಬಿದ್ದಿದೆ ಎಂದು ತಿಳಿಯುತ್ತದೆ. ಈ ದೇವಾಲಯದಲ್ಲಿನ ದೇವಿಯನ್ನು ದರ್ಶನ ಮಾಡಿದವರಿಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಚಾಮುಂಡಿ ದೇವಿ ದೇವಾಲಯ

ಚಾಮುಂಡಿ ದೇವಿ ದೇವಾಲಯ

ಇದು ನಾಲ್ಕನೇ ಶಕ್ತಿ ಪೀಠವಾಗಿದೆ. ಚಾಮುಂಡಿ ದೇವಿ ದೇವಾಲಯವು ನಮ್ಮ ಕರ್ನಾಟಕ ರಾಜ್ಯದಲ್ಲಿನ ಮೈಸೂರಿನಲ್ಲಿದೆ. ಈ ದೇವಿಯನ್ನು ಚಾಮುಂಡೇಶ್ವರಿ ಎಂದೂ, ಚಾಮುಂಡಿ ಎಂದು ಭಕ್ತರು ಕರೆಯುತ್ತಾರೆ. ಮೈಸೂರಿನ ರಾಜ ವಂಶಿಕರ ಕುಲದೇವತೆಯಾಗಿ ಆ ತಾಯಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇಲ್ಲಿ ಸತಿ ದೇವಿಯ ಕೂದಲು ಬಿದ್ದಿದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಈ ದೇವಾಲಯವು ನಮ್ಮ ಭಾರತ ದೇಶದಲ್ಲಿ ಪ್ರಮುಖ ಪುಣ್ಯ ಕ್ಷೇತ್ರವಾಗಿ ಪ್ರಸಿದ್ಧಿಯನ್ನು ಪಡೆದಿದೆ ಎಂದೇ ಹೇಳಬಹುದು.

ಜೋಗುಳಾಂಭ ದೇವಾಲಯ

ಜೋಗುಳಾಂಭ ದೇವಾಲಯ

ಇದು ಐದನೇ ಶಕ್ತಿ ಪೀಠವಾಗಿದೆ. ಈ ದೇವಾಲಯವು ತೆಲಂಗಾಣ ರಾಜ್ಯದ ಮೆಹೆಬೂಬ್ ನಗರ ಜಿಲ್ಲೆಯಲ್ಲಿದೆ. ಇಲ್ಲಿ ಸತಿ ದೇವಿಯ ಹಲ್ಲುಗಳು ಬಿದ್ದಿದೆ ಎಂದು ಹೇಳಲಾಗುತ್ತದೆ. ಜೋಗುಳಾಂಭ ನೆಲೆಸಿರುವ ಈ ದೇವಾಲಯವು ಕೆಲವು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಿದ್ದು ಎಂದೂ, ಅಸಲಿನ ದೇವಾಲಯವು 14 ನೇ ಶತಮಾನದಲ್ಲಿ ಬಹುಮನಿ ಸುಲ್ತಾನರ ದಾಳಿಯಿಂದಾಗಿ ಧ್ವಂಸ ಮಾಡಿದರು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಅಂದಿನ ಸ್ಥಳೀಯರ ಒತ್ತಾಯದ ಮೇರೆಗೆ ದೇವಿಯ ವಿಗ್ರಹಗಳ ಜೊತೆ ಜೊತೆಗೆ ಚಂಡಿ-ಮುಂಡಿ ದೇವತೆಗಳ ವಿಗ್ರಹಗಳನ್ನು ಕೂಡ ಆ ದೇವಾಲಯದ ಸಮೀಪದಲ್ಲಿನ ಪರಬ್ರಹ್ಮೇಶ್ವರ ದೇವಾಲಯದಲ್ಲಿ ಭದ್ರವಾಗಿಟ್ಟು ಅಲ್ಲಿಯೇ ಸಾಕಷ್ಟು ವರ್ಷಗಳ ಕಾಲ ಜೋಗುಳಾಂಭ ತಾಯಿಗೆ ಪೂಜೆಗಳನ್ನು ನೇರವೇರಿಸದರಂತೆ.

ಜೋಗುಳಾಂಭ ದೇವಾಲಯ

ಜೋಗುಳಾಂಭ ದೇವಾಲಯ

ಆದೇ ರೀತಿ, ಅಂದರೆ ಪುರಾತನ ದೇವಾಲಯದಂತೆಯೇ ಜೋಗುಳಾಂಭ ದೇವಾಲಯವನ್ನು ಕೆಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತಿದೆ. ಪೂರ್ವ ಈ ದೇವಾಲಯದಲ್ಲಿ ಆದಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿರುವುದಾಗಿ ಪುರಾಣಗಳು ಹೇಳುತ್ತವೆ. ಕೆಲವು ದಾಳಿಗಳ ನಂತರ ಆ ಶ್ರೀ ಚಕ್ರ ಕಾಣದೇ ಹೋಯಿತು ಎನ್ನಲಾಗುತ್ತದೆ.

ಬ್ರಹ್ಮರಾಂಬ ದೇವಾಲಯ

ಬ್ರಹ್ಮರಾಂಬ ದೇವಾಲಯ

6 ನೇ ಶಕ್ತಿ ಪೀಠವೆಂದರೆ ಅದು ಆಂಧ್ರ ಪ್ರದೇಶದ ಶ್ರೀ ಶೈಲದಲ್ಲಿದೆ. ಇಲ್ಲಿನ ದೇವಿಯನ್ನು ಬ್ರಹ್ಮರಾಂಬ ದೇವಾಲಯವಾಗಿ ಕರೆಯುತ್ತಾರೆ. ಇಲ್ಲಿ ಸತಿ ದೇವಿಯ ಕತ್ತಿನ ಭಾಗ ಬಿದ್ದಿದೆ ಎಂದು ಸ್ಥಳ ಪುರಾಣ ಹೇಳುತ್ತದೆ. ನಲ್ಲಮಲ ಅರಣ್ಯದ ಮಧ್ಯೆ ಕೃಷ್ಣ ನದಿಯ ತೀರದಲ್ಲಿನ ಶ್ರೀ ಶೈಲ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಇಲ್ಲಿ ಸಾಕ್ಷಾತ್ ಮಹಾಶಿವನು ಜ್ಯೋತಿರ್‍ಲಿಂಗದ ಸ್ವರೂಪಿಯಾಗಿ ಮಲ್ಲಿಕಾರ್ಜುನ ಸ್ವಾಮಿಯಾಗಿ ನೆಲೆಸಿದ್ದಾನೆ.

ಬ್ರಹ್ಮರಾಂಬ ದೇವಾಲಯ

ಬ್ರಹ್ಮರಾಂಬ ದೇವಾಲಯ

ಲಕ್ಷಾಂತರ ಚರಿತ್ರೆಯನ್ನು ಹೊಂದಿರುವ ಈ ದೇವಾಲಯವು ಅತ್ಯಂತ ಪುರಾತನವಾದ ಶೈವ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿ ನೆಲೆಸಿದ ಬ್ರಹ್ಮರಾಂಭಿಕ ದೇವಿ ಅಷ್ಟಾದಶ ಶಕ್ತಿ ಪೀಠಗಳಲ್ಲಿ ಒಂದೇ ಅಲ್ಲದೇ ಶಕ್ತಿ ಪೀಠ, ಜ್ಯೋತಿರ್‍ಲಿಂಗ ಒಂದೇ ಸ್ಥಳದಲ್ಲಿ ನೆಲೆಸಿರುವುದರಿಂದ ಈ ದೇವಾಲಯವು ಹಲವಾರು ವರ್ಷಗಳಿಂದ ದೇವ, ದಾನವ, ಗಂಥರ್ವರಿಂದ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರುವ ಮಹಿಮಾನ್ವಿತವಾದ ದೇವಾಲಯವಾಗಿದೆ.

ಕೊಲ್ಲಾಪುರ ದೇವಾಲಯ

ಕೊಲ್ಲಾಪುರ ದೇವಾಲಯ

7 ನೇ ಶಕ್ತಿಪೀಠವಾದ ಕೊಲ್ಲಾಪುರ್ ಮಹಾಲಕ್ಷ್ಮೀ ದೇವಾಲಯ. ಇದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದೆ. ಇಲ್ಲಿನ ದೇವಿಯನ್ನು ಮಹಾಲಕ್ಷ್ಮೀ ದೇವಿಯಾಗಿ ಪೂಜಿಸುತ್ತಾರೆ. ಅಲ್ಲಿನ ಸ್ಥಳೀಯರು ಆಕೆಯನ್ನು ಅಂಭಾಬಾಯಿ ಎಂದು ಕರೆಯುತ್ತಾರೆ. ಇಲ್ಲಿ ಸತಿ ದೇವಿಯ ಕಣ್ಣು ಬಿದ್ದಿದೆ ಎಂದು ಪುರಾಣಗಳು ಹೇಳುತ್ತವೆ. ಇಲ್ಲಿ ಈ ತಾಯಿ ನೆಲೆಸಿ ಎಷ್ಟೂ ಸಾವಿರ ವರ್ಷಗಳು ಕಳೆದಿದೆ.

ಕೊಲ್ಲಾಪುರ ದೇವಾಲಯ

ಕೊಲ್ಲಾಪುರ ದೇವಾಲಯ

ಆದರೆ 7 ನೇ ಶತಮನಾದಲ್ಲಿ ಚಾಲುಕ್ಯರ ಕೈಯಲ್ಲಿ ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಯಿತು. ತದನಂತರ ಹಲವಾರು ರಾಜ ಮನೆತನದವರು ದೇವಾಲಯವನ್ನು ಅಭಿವೃದ್ಧಿ ಮಾಡಿದರು. ಸಾಧಾರಣವಾಗಿ ಎಲ್ಲಾ ದೇವಾಲಯದಲ್ಲಿನ ಮೂಲ ವಿಗ್ರಹವು ಪೂರ್ವ ಅಥವಾ ಉತ್ತರಾಭಿಮುಖವಾಗಿ ನೆಲೆಸಿದ್ದರೆ. ಇಲ್ಲಿ ದೇವಿಯ ವಿಗ್ರಹವು ಪಶ್ಚಿಮ ದಿಕ್ಕಿಗೆ ನೆಲೆಸಿದೆ.

ಏಕ ವೀರಿಕಾ ದೇವಿ ದೇವಾಲಯ

ಏಕ ವೀರಿಕಾ ದೇವಿ ದೇವಾಲಯ

8 ನೇ ಅಷ್ಟಾದಶ ಶಕ್ತಿ ಪೀಠವು ಮಹಾರಾಷ್ಟ್ರದ ಮಾಹೂರ್‍ನಲ್ಲಿದೆ. ಇಲ್ಲಿ ದೇವಿಯನ್ನು ಏಕ ವೀರಿಕಾ ದೇವಿ ಎಂದು ಪೂಜಿಸುತ್ತಾರೆ. ಈ ಪ್ರದೇಶದಲ್ಲಿ ಸತಿ ದೇವಿಯ ಬಲ ಭುಜ ಬಿದ್ದಿದೆ ಎಂದು ಪುರಾಣಗಳು ತಿಳಿಸುತ್ತವೆ. ಆದರೆ ಇಲ್ಲಿ ರೇಣುಕ ದೇವಿಯನ್ನು ಎಂದು ಹೆಚ್ಚಾಗಿ ಆರಾಧಿಸುತ್ತಾರೆ. ಕೆಲವರ ಹೇಳಿಕೆಗಳ ಪ್ರಕಾರ ಏಕ ವೀರಿಕಾ ದೇವಿ ಮತ್ತು ರೇಣುಕ ದೇವಿ ಒಬ್ಬರೇ ಎಂದು ಹಾಗು ಪಿತೃ ಪಾಲಕನಾದ ಪರಶುರಾಮನು ತನ್ನ ತಾಯಿಯ ತಲೆಯನ್ನು ಕತ್ತರಿಸಿ ಆ ತಲೆಯು ದೂರದಲ್ಲಿ ಬಿದ್ದು, ಜೀವವನ್ನು ಹೊಂದಿ ಏಕ ವಿರೀಕಾ ದೇವಿಯಾದಳು ಎಂದು ಹೇಳುತ್ತಾರೆ. ಹಾಗಾಗಿಯೇ ಆ ದೇವಾಲಯದಲ್ಲಿ ಆ ತಾಯಿಯ ತಲೆ ಮಾತ್ರ ಅತ್ಯಂತ ದೊಡ್ಡದಾಗಿದೆ. ಇದು ಅಷ್ಟಾದಶ ಶಕ್ತಿ ಪೀಠಗಳಲ್ಲಿರುವ 8 ಶಕ್ತಿ ಪೀಠಗಳಾಗಿವೆ.

ಇನ್ನು ಉಳಿದ 10 ಶಕ್ತಿ ಪೀಠಗಳ ಬಗ್ಗೆ ಮತ್ತೊಂದು ಲೇಖನದ ಮೂಲಕ ತಿಳಿಯೊಣ.

ಈ ಸುರಂಗದಲ್ಲಿ ಹೋದವರು ಮತ್ತೆ ಎಂದಿಗೂ ಹಿಂದಿರುಗಿಲ್ಲ.....

ಈ ದೇವಾಲಯದ ಪ್ರಾಂಗಣದಲ್ಲಿ ನಿದ್ರಿಸಿದರೆ ಸಾಕು ಮಕ್ಕಳ ಭಾಗ್ಯ ಲಭಿಸುತ್ತದೆ ಎಂತೆ...

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ