Search
  • Follow NativePlanet
Share
» »ನವರಾತ್ರಿ ಸಂಭ್ರಮ ಯಾವ ರಾಜ್ಯದಲ್ಲಿ ಹೇಗೆ ನಡೆಯುತ್ತದೆ?

ನವರಾತ್ರಿ ಸಂಭ್ರಮ ಯಾವ ರಾಜ್ಯದಲ್ಲಿ ಹೇಗೆ ನಡೆಯುತ್ತದೆ?

ನವರಾತ್ರಿ ಸಂಭ್ರಮ 9 ದಿನಗಳ ಕಾಲ ವಿಜೃಂಬಣೆಯಿಂದ ದೇಶದಲ್ಲಿಯೇ ಆಚರಿಸಲಾಗುತ್ತದೆ. ಎಲ್ಲಾ ದೇವಾಲಯಗಳಲ್ಲಿಯೂ 9 ದಿನಗಳ ಕಾಲ ಹಬ್ಬದ ವಾತಾವರಣವನ್ನು ಕಾಣಬಹುದು. ಒಂದೊಂದು ದಿನ ಒಂದೊಂದು ಅಲಂಕಾರದಿಂದ ಕಂಗೊಳಿಸುವ ದೇವತೆಗಳು ನೋಡಲು 2 ಕಣ್ಣು ಸಾಲದು.

ನವರಾತ್ರಿ ಸಂಭ್ರಮ 9 ದಿನಗಳ ಕಾಲ ವಿಜೃಂಬಣೆಯಿಂದ ದೇಶದಲ್ಲಿಯೇ ಆಚರಿಸಲಾಗುತ್ತದೆ. ಎಲ್ಲಾ ದೇವಾಲಯಗಳಲ್ಲಿಯೂ 9 ದಿನಗಳ ಕಾಲ ಹಬ್ಬದ ವಾತಾವರಣವನ್ನು ಕಾಣಬಹುದು. ಒಂದೊಂದು ದಿನ ಒಂದೊಂದು ಅಲಂಕಾರದಿಂದ ಕಂಗೊಳಿಸುವ ದೇವತೆಗಳು ನೋಡಲು 2 ಕಣ್ಣು ಸಾಲದು. ಕೇವಲ ದಕ್ಷಿಣ ಭಾರತದಲ್ಲಿಯೇ ಅಲ್ಲದೇ ದೇಶದ ಮೂಲೆ ಮೂಲೆಗಳಲ್ಲಿಯೂ ಈ ಹಬ್ಬವನ್ನು ಅತ್ಯಂ ಭಕ್ತಿ, ನಿಷ್ಟೆಯಿಂದ ಆಚರಿಸಲಾಗುತ್ತದೆ. ಸ್ತ್ರೀ ಶಕ್ತಿಯಾದ ದುರ್ಗಿಯನ್ನು ವಿವಿಧ ಅಲಂಕಾರದಿಂದ ನಮಗೆ ದರ್ಶನ ಭಾಗ್ಯವನ್ನು ನೀಡುವ ಸಮಯವೇ ಈ ನವರಾತ್ರಿ ಸಂಭ್ರಮ.

ಪ್ರಸ್ತುತ ಲೇಖನದಲ್ಲಿ ಯಾವೆಲ್ಲಾ ಭಾಗಗಳಲ್ಲಿ ಹೇಗೆಲ್ಲಾ ವಿಶೇಷವಾಗಿ ನವರಾತ್ರಿ ಆಚರಣೆ ಮಾಡುತ್ತಾರೆ ಎಂಬುದನ್ನು ತಿಳಿಯೋಣ.

ಆಂಧ್ರ ಪ್ರದೇಶ

ಆಂಧ್ರ ಪ್ರದೇಶ

ಇನ್ನು ಆಂಧ್ರ ಪ್ರದೇಶ ಹಾಗು ತೆಲಂಗಾಣದಲ್ಲಿ ನವರಾತ್ರಿಯನ್ನು ಬತುಕಮ್ಮ ಪಂಡಗ ಎಂದು ಕರೆದು ಅತ್ಯಂತ ವಿಶೇಷವಾಗಿ, ವಿಜೃಂಬಣೆಯಾಗಿ ಆಚರಿಸಲಾಗುತ್ತದೆ. ಇಲ್ಲಿಯೂ ಕೂಡ ಸತತ 9 ದಿನಗಳ ಕಾಲ ವಿಜೃಬಣೆಯಾಗಿ ಉತ್ಸವಕ್ಕೆ ಭಕ್ತರು ಪಾಲ್ಗೋಳ್ಳುತ್ತಾರೆ. ಈ ಉತ್ಸವವನ್ನು ಮಹಾಲಯ ಅಮಾವಸ್ಯೆಯ ದಿನ ಪ್ರಾರಂಭವಾಗಿ 9 ನೇ ದಿನದಂದು ಬತುಕಮ್ಮ ಹಬ್ಬ ಆಚರಿಸಲಾಗುತ್ತದೆ.

Randhirreddy

ಕರ್ನಾಟಕ

ಕರ್ನಾಟಕ

ಕರ್ನಾಟಕ ರಾಜ್ಯದಲ್ಲಿ ಎಲ್ಲೆಡೆ ಭಕ್ತಿ, ಶ್ರದ್ಧೆಯಿಂದ ನವರಾತ್ರಿಯನ್ನು ಆಚರಿಸಲಾಗುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ ಇದಕ್ಕೆ ನಿದರ್ಶನ ಮೈಸೂರಿನ ದಸರಾ. ಈ ದಸರಾ ಉತ್ಸವಕ್ಕೆ ದೇಶದ ಮೂಲೆ ಮೂಲೆಗಳಿಂದ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುತ್ತಾರೆ. ಆಯುಧ ಪೂಜೆಯಂದು ಪ್ರತಿಯೊಂದು ನಿರ್ಜೀವ ವಸ್ತುಗಳಲ್ಲಿಯೂ ದೈವತ್ವವನ್ನು ಕಂಡು ವಿಜೃಂಬಣೆಯಿಂದ ಆಚರಿಸಲಾಗುತ್ತದೆ.


alexrudd

ಮಹಾರಾಷ್ಟ್ರ

ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ನವರಾತ್ರಿಯನ್ನು ಅತ್ಯಂತ ವೈಭವವಾಗಿ ಆಚರಿಸಲಾಗುತ್ತದೆ. ಇಲ್ಲಿ ಮಣ್ಣಿನ ಪಾತ್ರೆಯಲ್ಲಿ ಧ್ಯಾನಗಳ ಬೀಜಗಳನ್ನು ತುಂಬಿ ಅದರ ಮೇಲೆ ಜೋಳದ ತೆನೆಗಳನ್ನು ಇಡಲಾಗುತ್ತದೆ. ಇದನ್ನೆ ಘಟ ಎಂದು ಕರೆಯಲಾಗುತ್ತದೆ. ನಂತರ ಆ ಮಡಕೆಯನ್ನು ಅದರೊಳಗಿನ ಬೀಜಗಳು ಮೊಳಕೆಯೊಡೆದು ಬರುವವರೆಗೂ ಸತತವಾಗಿ 9 ದಿನಗಳ ಕಾಲ ಭಕ್ತಿಯಿಂದ ಪೂಜಿಸಲಾಗುತ್ತದೆ.


DoshiJi

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ನವರಾತ್ರಿ ಉತ್ಸವವನ್ನು ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಅದ್ಭುತವಾಗಿ ಆಚರಿಸಲಾಗುತ್ತದೆ. ಏಕೆಂದರೆ ಇವರು ದುರ್ಗಾ ಆರಾಧಕರಾಗಿರುವುದರಿಂದ ಅತ್ಯಂತ ವೈಭವವಾಗಿ ಆಚರಿಸುತ್ತಾರೆ. ಭಾರದಲ್ಲಿ ದುರ್ಗಾ ಪೂಜೆ ಅಥವಾ ನವರಾತ್ರಿ ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದೇ ಕೊಲ್ಕತ್ತಾ.


Khushilove

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಕೊಲ್ಕತ್ತಾ ನಗರ ಒಂದರಲ್ಲೇ 2000 ಕ್ಕೂ ಅಧಿಕ ದುರ್ಗಾ ಮಂಟಪಗಳನ್ನು ಈ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗುತ್ತದೆ. ನವರಾತ್ರಿಯ 6 ದಿನದಿಂದ 10 ನೇ ದಿನದವರೆಗೆ ಕೋಲ್ಕತ್ತಾದಲ್ಲಿ ಅತ್ಯಂತ ವೈಭವದಿಂದ ದುರ್ಗೋತ್ಸವ ನಡೆಸಲಾಗುತ್ತದೆ.


Probin

ಗುಜಾರತ್

ಗುಜಾರತ್

ಗುಜರಾತ್ ರಾಜ್ಯದಲ್ಲಿ ನವರಾತ್ರಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲಿ ಕೋಲಾಟ, ನೃತ್ಯ ಮುಂತಾದವುಗಳು ಮಾಡಲಾಗುತ್ತದೆ. ಇಲ್ಲಿನ ವಿಶಿಷ್ಟವಾದ ನೃತ್ಯವನ್ನು ಗರ್ಬಾ ಎಂದು ಕರೆಯಲಾಗುತ್ತದೆ. ಪುರುಷರು ಮತ್ತು ಮಹಿಳೆಯರು ಬಣ್ಣ ಬಣ್ಣದ ಬಟ್ಟೆಯನ್ನು ತುಟ್ಟು ಸಂತಸ ಸಡಗರದಿಂದ ನೃತ್ಯವನ್ನು ಮಾಡುತ್ತಾ ನವರಾತ್ರಿಯನ್ನು ಆಚರಿಸುತ್ತಾರೆ.


Hardik jadeja

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಆಚರಿಸಲಾಗುವ ಈ ವಿಜಯದಶಮಿ ಅಥವಾ ದಸರಾ ಉತ್ಸವವು ಅತ್ಯಂತ ವಿಶೇಷವಾಗಿರುತ್ತದೆ. ಇಲ್ಲಿ ಕೊನೆಯ ದಿನದಿಂದ ಮುಂದಿನ ಏಳು ದಿನಗಳ ಕಾಲ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ನಡೆಸಲಾಗುತ್ತದೆ. ಇಲ್ಲಿ ವಿಶೇಷವಾಗಿ ರಘುನಾಥ ಹಾಗು ಹಡಿಂಬೆಯರ ಅದ್ಧೂರಿ ರಥೋತ್ಸವವನ್ನು ನಡೆಸಲಾಗುತ್ತದೆ.


Kondephy

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

ಈ ಸಂಭ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಹಲವಾರು ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸೇರುತ್ತಾರೆ. ಇದೊಂದು ದೊಡ್ಡದಾದ ಜಾತ್ರೆ ಎಂದೇ ಹೆಳಬಹುದು. ಬಣ್ಣ ಬಣ್ಣದ ಲೈಟುಗಳಿಂದ ಜಗಮಗಿಸುವ ವಾತಾವರಣ ನಿಮ್ಮನ್ನು ಮತ್ತಷ್ಟು ರೋಮಾಂಚನಕಾರಿಗೊಳಿಸದೇ ಇರದು.

Kumar83

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X