Search
  • Follow NativePlanet
Share
» »ಸಪ್ತಪುರಿಗಳ ಯಾತ್ರೆ, ವಿಶೇಷತೆ ಗೊತ್ತೆ?

ಸಪ್ತಪುರಿಗಳ ಯಾತ್ರೆ, ವಿಶೇಷತೆ ಗೊತ್ತೆ?

By Vijay

ಅಖಂಡ ಭಾರತದ ವಿವಿಧ ಸ್ಥಳಗಳಲ್ಲಿ ನೆಲೆಸಿರುವ ಅತಿ ಪ್ರಮುಖವಾದ ಪುಣ್ಯ ಕ್ಷೇತ್ರಗಳನ್ನು ಸಪ್ತಪುರಿಗಳೆಂದು ಕರೆಯುತ್ತಾರೆ. ನಂಬಿಕೆಯಂತೆ ಮನುಷ್ಯನು ತನ್ನ ಜೀವನದ ಅಂತ್ಯ ಕಾಲದಲ್ಲಿ ಈ ಸಪ್ತ ಅಂದರೆ ಏಳು ಪುಣ್ಯ ಸ್ಥಳಗಳ ದರ್ಶನ ಮಾಡಿದರೆ ಅವನ ಎಲ್ಲ ಪಾಪ ಕರ್ಮಗಳು ನಶಿಸಿ, ಅಗಾಧ ಪ್ರಮಾಣದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಪ್ರತೀತಿಯಂತೆ ಹಿಂದೆ ಪಾಂಡವರೂ ಸಹ ಮಹಾಭಾರತ ಯುದ್ದ್ಧದ ತರುವಾಯ ರಣಭೂಮಿಯಲ್ಲಿ ತಮ್ಮಿಂದಾಗಿರುವ ಹತ್ಯಾ ಪಾಪಗಳನ್ನು ನಿವಾರಿಸಿಕೊಳ್ಳಲು ಈ ಪವಿತ್ರವಾದ ಏಳು ಸ್ಥಳಗಳಿಗೆ ತೆರಳಿ ಅಲ್ಲಿರುವ ಪ್ರಮುಖ ದೇವರುಗಳ ದರ್ಶನ ಪಡೆದು ತಮ್ಮೆಲ್ಲ ಪಾಪ-ಕರ್ಮಗಳಿಂದ ಮುಕ್ತರಾಗಿ ಸ್ವರ್ಗಕ್ಕೆ ಪ್ರಯಾಣಿಸಿದರೆನ್ನಲಾಗಿದೆ.

ಮೂಲತಃ ಈ ಸಪ್ತ ಅಂದರೆ ಏಳು ಪುರಿಗಳು ಅಥವಾ ಕ್ಷೇತ್ರಗಳು ವಿಷ್ಣುವಿನ ವಿವಿಧ ಅವತಾರಗಳು ಜನ್ಮವೆತ್ತಿದ ಹಾಗೂ ಉಚ್ಛ ಮಟ್ಟದ ದೈವಿ ಪ್ರಭಾವವನ್ನು ಪ್ರತಿನಿಧಿಸುವ ಪರಮ ಪಾವನ ಕ್ಷೇತ್ರಗಳಾಗಿವೆ. ಹಿಂದು ಧಾರ್ಮಿಕ ಭಕ್ತರಲ್ಲಿ ವಿಶೇಷವಾದ ಆಕರ್ಷಣೆಯನ್ನುಂಟು ಮಾಡುವ ಈ ಕ್ಷೇತ್ರಗಳಿಗೆ ತೆರಳಲು ಸಾಕಷ್ಟು ಬೆಡಿಕೆಯಿದ್ದು ಅದಕ್ಕಾಗಿ ಹಲವಾರು ಪ್ರವಾಸಿ ಸಂಸ್ಥೆಗಳು ಈ ಯಾತ್ರೆಯನ್ನು ಆಯೋಜಿಸುತ್ತಿರುತ್ತವೆ.

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಯಾವೆಲ್ಲ ಕ್ಷೇತ್ರಗಳು ಸಪ್ತಪುರಿ ಕ್ಷೇತ್ರಗಳಾಗಿವೆ ಹಾಗೂ ಅವುಗಳ ಮಹತ್ವ ಏನು ಎಂಬುದರ ಕುರಿತು ತಿಳಿಯಿರಿ.

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

1. ಅಯೋಧ್ಯೆ: ರಾಮಜನ್ಮ ಭೂಮಿ ಎಂದೆ ಪ್ರಸಿದ್ಧವಾದ ಅಯೋಧ್ಯೆ ವಿಷ್ಣುವಿನ ಅವತಾರವಾದ ಶ್ರೀರಾಮಂಚಂದ್ರನು ಹುಟ್ಟಿದ ಪುಣ್ಯ ಕ್ಷೇತ್ರವಾಗಿದೆ. ಹಿಂದೆ ಸಾಕೇತ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಅಯೋಧ್ಯೆ ರಾಮಾಯಣ ಮಹಾಕಾವ್ಯಕ್ಕೆ ಹಿನ್ನಿಲೆ ಒದಗಿಸಿದ ಪವಿತ್ರ ಕ್ಷೇತ್ರವಾಗಿದೆ.

ಚಿತ್ರಕೃಪೆ: Vishwaroop2006

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಸ್ಕಂದ ಪುರಾಣದಲ್ಲಿ ಅಯೋಧ್ಯೆಯನ್ನು ಏಳು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿ ಉಲ್ಲೇಖಿಸಲಾಗಿದೆ. ಅಲ್ಲದೆ ಅಥರ್ವ ವೇದವು ಅಯೋಧ್ಯೆಯನ್ನು ದೇವರು ನಿರ್ಮಿಸಿದ ನಗರ ಎಂದು ವರ್ಣಿಸಿದೆ. ಹಾಗಾಗಿ ಇಂದು ಅಯೋಧ್ಯೆಯು ಧಾರ್ಮಿಕವಾಗಿ ಹೆಚ್ಚಿನ ಮಹತ್ವಗಳಿಸಿರುವ ಪುಣ್ಯ ಕ್ಷೇತ್ರವಾಗಿದ್ದು ವರ್ಷಪೂರ್ತಿ ಸಾಕಷ್ಟು ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಸರಯು ನದಿಗೆ ನಿರ್ಮಿಸಲಾದ ರಾಮ ಪೈದಿ ಎಂಬ ಸ್ನಾನದ ಘಾಟುಗಳು.

ಚಿತ್ರಕೃಪೆ: Ramnath Bhat

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಹಿಂದೆ ಕೋಸಲ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿದ್ದ ಅಯೋಧ್ಯೆಯು ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯಲ್ಲಿರುವ ಪಟ್ಟಣವಾಗಿದೆ. ಪುಣ್ಯದಾಯಕ ಸರಯು ನದಿಯ ತಟದಲ್ಲಿ ನೆಲೆಸಿರುವ ಅಯೋಧ್ಯೆಯು ಫೈಜಾಬಾದ್ ನಗರ ಕೇಂದ್ರದಿಂದ ಸುಉಮಾರು ಎಂಟು ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲ್ಲು ಬಸ್ಸುಗಳು ದೊರೆಯುತ್ತವೆ. ಸಾಕಷ್ಟು ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Vishwaroop2006

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

2. ದ್ವಾರಕಾ : ಸಪ್ತಪುರಿಗಳಲ್ಲೊಂದಾಗಿದೆ ದ್ವಾರಕಾ. ಇದು ವಿಷ್ಣುವಿನ ದಶಾವತಾರಗಳಲ್ಲೊಂದಾದ ಶ್ರೀಕೃಷ್ಣನು ಮಥುರಾ ತೊರೆದ ನಂತರ ನೂರು ವರ್ಷಗಳ ಕಾಲ ವಾಸವಿದ್ದ ಪುಣ್ಯ ಸ್ಥಳವಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Jigneshgohel

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಗುಜರಾತ್ ರಾಜ್ಯದ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಬರುವ ದ್ವಾರಕಾ ಕೇಂದ್ರವು ಗೋಮತಿ ನದಿ ತಟದ ಬಲ ದಂಡೆಯ ಮೇಲೆ ನೆಲೆಸಿದ್ದು ಓಖಮಂಡಲ್ ಕಡಲ ಕರಾವಳಿಯಲ್ಲಿ ಸ್ಥಿತವಿದೆ. ದ್ವಾರಕಾಧೀಶನ ದೇವಾಲಯ, ರುಕ್ಮಣಿಯ ದೇವಾಲಯ ಹಾಗೂ ಶಾರದಾಪೀಠಗಳಿಂದ ಸಾಕಷ್ಟು ಧಾರ್ಮಿಕ ಮಹತ್ವಗಳಿಸಿದೆ ದ್ವಾರಕಾ. ದ್ವಾರಕಾಧೀಶನ ದೇವಾಲಯ.

ಚಿತ್ರಕೃಪೆ: Scalebelow

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಎಂಟನೇಯ ಶತಮಾನದ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿರುವ ನಾಲ್ಕು ಜಗತ್ಪೀಠಗಳ ಪೈಕಿ ಒಂದಾಗಿರುವ ಪಶ್ಚಿಮ ಶಾರದಾಪೀಠವು ದ್ವಾರಕಾದಲ್ಲೆ ಇರುವುದರಿಂದಲೂ ಸಹ ದ್ವಾರಕೆಗೆ ಹೆಚ್ಚಿನ ಮಹತ್ವ ಬಂದಿದೆ. ದ್ವಾರಕಾದಲ್ಲಿರುವ ರುಕ್ಮಿಣಿದೇವಿ ದೇವಾಲಯ.

ಚಿತ್ರಕೃಪೆ: Poonam.agarwal,s

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಹಿಂದೆ ಗುಜರಾತ್ ರಾಜ್ಯದ ರಾಜಧಾನಿ ಪಟ್ಟಣವಾಗಿ ಮೆರೆದಿದ್ದ ದ್ವಾರಕಾದ ಮೂಲಾರ್ಥವೆ ಮೋಕ್ಷಕ್ಕೆ ದಾರಿ ಎಂದಾಗುತ್ತದೆ. ಸಂಸ್ಕೃತದಲ್ಲಿ ದ್ವಾರ ಎಂದರೆ ಪ್ರವೇಶ ಎಂತಲೂ ಕಾ ಎಂದರೆ ಪರಬ್ರಹ್ಮನ ಸನ್ನಿಧಿ ಎಂತಲೂ ಅರ್ಥ ಬರುತ್ತದೆ. ಹಾಗಾಗಿ ಪೌರಾಣಿಕವಾಗಿಯೆ ವಿವರಿಸಿರಲಾಗಿರುವಂತೆ ದ್ವಾರಕಾ ಮೋಕ್ಷಕ್ಕೆ ಪ್ರವೇಶ ದ್ವಾರ ಎಂದಾಗುವುದರಿಂದ ಸಪ್ತ ಪುರಿಗಳಲ್ಲೊಂದಾಗಿದೆ. ಗೋಮತಿ ನದಿಯಲ್ಲಿ ಸ್ನಾನ ಮಾಡುತ್ತ ನಮಸ್ಕರಿಸುತ್ತಿರುವ ಭಕ್ತ.

ಚಿತ್ರಕೃಪೆ: nevil zaveri

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

3. ಮಥುರಾ : ಸಪ್ತಪುರಿಗಳಲ್ಲೊಂದಾಗಿದೆ ಶ್ರೀಕೃಷ್ಣ ಜನ್ಮಭೂಮಿ ಎಂದೆ ಜನಜನಿತವಾದ ಮಥುರಾ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ. ಕಾರಣ ಈ ಸ್ಥಳವು ಶ್ರೀಕೃಷ್ಣ ಭಗವಾನನ ಜನ್ಮ ಸ್ಥಳವಾಗಿರುವುದರಿಂದ ಸಾಕಷ್ಟು ಪಾವಿತ್ರ್ಯತೆ ಪಡೆದಿದೆ.

ಚಿತ್ರಕೃಪೆ: Aleksandr Zykov

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಈ ಹೆಸರು ಬರಲು ಕಾರಣವೇನೆಂದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ಇಲ್ಲೆ ತನ್ನ ಬಾಲ್ಯದ ದಿನಗಳನ್ನು ಗೋಪಿಕಾ ಸ್ತ್ರೀಯರ ಜೊತೆ ತುಂಟಾಟವಾಡುತ್ತ, ನರ್ತಿಸುತ್ತ, ನಕ್ಕು ನಲಿಯುತ್ತ ಮಧುರವಾಗಿ ಕಳೆದಿದ್ದರಿಂದಲೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Abhi Sharma

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಮಥುರಾದ ಬೀದಿ ಬೀದಿಗಳು ಸಾಕಷ್ಟು ವೈವಿಧ್ಯತೆಯಿಂದ ಕೂಡಿದ್ದು ಭೇಟಿ ನೀಡುವವರಿಗೆ ಮನ ಪುಳಕಿತಗೊಳ್ಳುವಂತಹ ಅನುಭವವನ್ನು ಕರುಣಿಸುತ್ತದೆ. 16ನೇ ಶತಮಾನದಲ್ಲಿ ಈ ಪಟ್ಟಣವನ್ನು ಮರುಶೋಧಿಸುವವರೆಗೆ ಕಾಲ್ಪನಿಕ ಕಥೆಯ ಭಾಗವೆಂದೇ ಪರಿಗಣಿಸಲಾಗಿತ್ತು. ಮಥುರಾದ ವಿಶ್ರಾಮ್ ಘಾತ್ ಚಿತ್ರ.

ಚಿತ್ರಕೃಪೆ: Hemant Shesh

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಉತ್ತರ ಪ್ರದೇಶ ರಾಜ್ಯದಲ್ಲಿರುವ ಮಥುರಾ ಆಗ್ರಾ ಹಾಗೂ ದೆಹಲಿಗಳಿಂದ ಕ್ರಮವಾಗಿ 57 ಮತ್ತು 162 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಈ ಎರಡೂ ನಗರಗಳಿಂದ ಬಸ್ಸುಗಳ ಸಾಕಷ್ಟು ಅನುಕೂಲವಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಇಲ್ಲಿ ಅತ್ಯಂತ ಸಡಗರ ಹಾಗೂ ವೈಭವಗಳಿಂದ ಆಚರಿಸಲಾಗುತ್ತದೆ.

ಚಿತ್ರಕೃಪೆ: Poco a poco

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

4. ಉಜ್ಜಯಿನಿ : ಮಧ್ಯ ಪ್ರದೇಶ ರಾಜ್ಯದ ಉಜ್ಜಯಿನಿ ಜಿಲ್ಲೆಯ ಉಜ್ಜಯಿನಿ ನಗರವು ಪವಿತ್ರವಾದ ಸಪ್ತ ಪುರಿಗಳಲ್ಲಿ ಒಂದಾಗಿದೆ. ಕ್ಷಿಪ್ರಾ (ಶಿಪ್ರಾ ಎಂತಲೂ ಸಹ ಕರೆಯಲ್ಪಡುತ್ತದೆ) ನದಿಯ ಪೂರ್ವ ತಟದಲ್ಲಿ ನೆಲೆಸಿರುವ ಈ ಪುರಾತನ ನಗರಿಯು ಶೈವ, ವೈಷ್ಣವ ಹಾಗೂ ಶಾಕ್ತರಿಗೆ ಪವಿತ್ರ ತೀರ್ಥಯಾತ್ರಾ ಕೇಂದ್ರವಾಗಿದೆ.

ಚಿತ್ರಕೃಪೆ: Bernard Gagnon

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಮಹಾಕಾಲೇಶ್ವರ, ಕಾಳಭೈರವ, ಚಿಂತಾಮಣಿ ಗಣೇಶ, ಗೋಪಾಲ ಮಂದಿರದಂತಹ ಪ್ರಮುಖ ದೇವಾಲಯಗಳಿಂದ ತುಂಬಿರುವ ಉಜ್ಜಯಿನಿ ಸಾಕಷ್ಟು ಮಹತ್ವ ಪಡೆದಿದೆ. ಅದರಲ್ಲೂ ವಿಶೇಷವಾಗಿ ಮಹಾಕಾಲೇಶ್ವರ ದೇವಾಲಯವು ಶಿವನಿಗೆ ಮುಡಿಪಾದ ದೇವಾಲಯವಾಗಿದ್ದು ಶಿವನ ಹನ್ನೆರಡು ಪ್ರಮುಖ ಜ್ಯೋತಿರ್ಲಿಂಗಗಳಲ್ಲೊಂದಾಗಿದೆ.

ಚಿತ್ರಕೃಪೆ: Ssriram mt

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

5. ಹರಿದ್ವಾರ : ಉತ್ತರಾಖಂಡ ರಾಜ್ಯದಲ್ಲಿರುವ ಭಾರತದ ಅತಿ ಪುಣ್ಯ ಕ್ಷೇತ್ರಗಳ ಪೈಕಿ ಒಂದಾದ ಹರಿದ್ವಾರವು ಸಪ್ತಪುರಿಗಳಲ್ಲೊಂದಾಗಿದೆ. ಹರಿದ್ವಾರವು ದೆಹಲಿಯಿಂದ 212 ಕಿ.ಮೀ ಗಳಷ್ಟು ದೂರವಿದ್ದು ದೆಹಲಿಯಿಂದ ಶತಾಬ್ದಿ ರೈಲಿನ ಸೇವೆ ಹರಿದ್ವಾರಕ್ಕೆ ತೆರಳಲು ಲಭ್ಯವಿದೆ.

ಚಿತ್ರಕೃಪೆ: Anshul Dabral

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಹರಿದ್ವಾರವು ಒಂದು ಪ್ರಾಚೀನ ನಗರವಾಗಿದ್ದು ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯಲ್ಲಿದೆ. ಪವಿತ್ರ ಗಂಗಾನದಿಯು ಗಂಗೋತ್ರಿ (ಗೋಮುಖ )ಯಲ್ಲಿ ಉದ್ಭವಗೊಂಡು 253 ಕಿ.ಮೀ ಗಳಷ್ಟು ಕ್ರಮಿಸಿ ಉತ್ತರ ಭಾರತದಲ್ಲಿ ಹರಿದ್ವಾರದ ಮೂಲಕ ಪ್ರಥಮವಾಗಿ ಸಮತಟ್ಟಾದ ಪ್ರದೇಶದಲ್ಲಿ ಪ್ರವೇಶಿಸುತ್ತದೆ. ಆದ್ದರಿಂದಲೆ ಈ ನಗರವನ್ನು ಗಂಗಾದ್ವಾರಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಹಿಗಾಗಿ ಸಾಕಷ್ಟು ಮಹತ್ವ ಪಡೆದ ಸ್ಥಳ ಇದಾಗಿದೆ.

ಚಿತ್ರಕೃಪೆ: Livefree2013

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಪೌರಾಣಿಕವಾಗಿ ಹಾಗೂ ಗರುಡ ಪುರಾಣದ ಪ್ರಕಾರ, ಹರಿದ್ವಾರವು ಏಳು ಅತಿ ಪವಿತ್ರ ನಗರಗಳ ಪೈಕಿ ಒಂದಾಗಿದೆ. ಗರುಡ ಪುರಾಣದಲ್ಲಿ ಈ ನಗರವನ್ನು ಮಾಯಾ ಎನ್ನಲಾಗಿದೆ. ಪೌರಾಣಿಕ ಕಥೆಯ ಪ್ರಕಾರ, ಸಮುದ್ರ ಮಂಥನದಿಂದ ಉತ್ಪನ್ನವಾದ ಅಮೃತವನ್ನು ಗರುಡನು ಒಯ್ಯುತ್ತಿರುವಾಗ ಅದರ ನಾಲ್ಕು ಹನಿಗಳು ನಾಲ್ಕು ವಿವಿಧ ಸ್ಥಳಗಳಲ್ಲಿ ಬಿದ್ದು ನಾಲ್ಕು ಪವಿತ್ರ ಸ್ಥಳಗಳಾದವು. ಹರಿದ್ವಾರವೂ ಸಹ ಆ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಮಿಕ್ಕ ಮೂರು ಸ್ಥಳಗಳೆಂದರೆ ಉಜ್ಜಯಿನಿ, ನಾಶಿಕ್ ಹಾಗೂ ಪ್ರಯಾಗ್ (ಅಲಹಾಬಾದ್).

ಚಿತ್ರಕೃಪೆ: j.budissin

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಈ ಒಂದು ಘಟನೆಯಿಂದಲೆ ಕುಂಭ ಮೇಳವು ಜಾರಿಗೆ ಬಂದಿತೆನ್ನಲಾಗುತ್ತದೆ. ಅಂತೆಯೆ ಪ್ರತಿ ಸ್ಥಳಗಳಲ್ಲಿ ಮೂರು ವರ್ಷಗಳಿಗೊಮ್ಮೆ ಕುಂಭ ಉತ್ಸವವು ಆಯೋಜನೆಗೊಳ್ಳುತ್ತದೆ. ಹರಿದ್ವಾರದಲ್ಲಿ ಅಮೃತ ಬಿದ್ದ ಸ್ಥಳವನ್ನು ಹರ್ ಕಿ ಪೌರಿ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: -.-Paul-.-

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

6. ವಾರಣಾಸಿ : ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯು ಸಪ್ತಪುರಿಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Davi1974d

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ವಾರಣಾಸಿಯ ಇತಿಹಾಸವು ಪ್ರಸ್ತುತ ಜಗತ್ತಿನ ಕೆಲವು ಪ್ರಮುಖ ಧರ್ಮಗಳಿಗಿಂತಲೂ ಹಿಂದಿನದ್ದಾಗಿದೆ ಎಂದರೆ ನೀವೇ ಊಹಿಸಬಹುದು ಈ ನಗರದ ಪ್ರಾಚೀನತೆಯನ್ನು! ಭಾರತದ ಅತಿ ಪವಿತ್ರ ನದಿಯಾದ ಗಂಗೆಯ ತಟದಲ್ಲಿ ನೆಲೆಸಿರುವ ವಾರಣಾಸಿಯು ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನ ಪಡೆದಿರುವ ಪ್ರಮುಖ ಧಾರ್ಮಿಕ ನಗರವಾಗಿದೆ.

ಚಿತ್ರಕೃಪೆ: Ken Wieland

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಹಿಂದೂ ಸಂಪ್ರದಾಯ ಹಾಗೂ ಇತರೆ ಆಚರಣೆಗಳನ್ನು ಅತಿ ಹತ್ತಿರದಿಂದ ನೋಡಬಯಸುವ ಪ್ರತಿಯೊಬ್ಬನೂ ವಾರಣಾಸಿ ನಗರಕ್ಕೊಮ್ಮೆ ಭೇಟಿ ನೀಡಲೇಬೇಕು. ಅಲ್ಲದೆ, ಋಗ್ವೇದದಲ್ಲಿ ಉಲ್ಲೇಖಿಸಲಾಗಿರುವಂತೆ ಈ ಕ್ಷೇತ್ರವು ಶಿವನ ಅತ್ಯಂತ ನೆಚ್ಚಿನ ತಾಣವಾಗಿದೆ. ಹಾಗಾಗಿ "ಶಿವನ ನಗರ" ಎಂತಲೂ ಸಹ ವಾರಣಾಸಿಯನ್ನು ವರ್ಣಿಸಲಾಗಿದೆ.

ಚಿತ್ರಕೃಪೆ: Ekabhishek

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಕಾಶಿ ವಿಶ್ವನಾಥನು ನೆಲೆಸಿರುವ ಈ ಕ್ಷೇತ್ರವು ಎಷ್ಟೊಂದು ಪುಣ್ಯದಾಯಕವಾಗಿದೆ ಎಂದರೆ ಯಾವೋಬ್ಬ ವ್ಯಕ್ತಿಯು ಇಲ್ಲಿ ಸಾವನ್ನು ಪಡೆದರೆ ಅಥವಾ ಸತ್ತ ವ್ಯಕ್ತಿಯ ಅಂತಿಮ ಕ್ರಿಯೆಯನ್ನು ಇಲ್ಲಿ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ ಮೋಕ್ಷ ಪಡೆಯುತ್ತಾರೆ.

ಚಿತ್ರಕೃಪೆ: Arian Zwegers

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

7. ಕಾಂಚೀಪುರಂ : ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಕಾಂಚೀಪುರಂ ಸಪ್ತ ಪುರಿಗಳ ಪೈಕಿ ಒಂದಾಗಿರುವ ದಕ್ಷಿಣದಲ್ಲಿರುವ ಏಕೈಕ ಕ್ಷೇತ್ರವಾಗಿದೆ. ಇಲ್ಲಿ ಮುಖ್ಯವಾಗಿ ಕಾಮಾಕ್ಷಿ ದೇವಿಯ ದೇವಾಲಯವನ್ನು ಕಾಣಬಹುದು.

ಚಿತ್ರಕೃಪೆ: SINHA

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಶಿವಶಕ್ತಿಯ ಪ್ರಭಾವವಿರುವ ಈ ಸ್ಥಳ ಒಂದು ಅದ್ಭುತ ಶಕ್ತಿಪೀಠವಾಗಿದೆ. ಏಕೆಂದರೆ ಇತರೆ ಶಕ್ತಿಪೀಠಗಳಂತಲ್ಲ. ಬದಲಾಗಿ ಶಿವನೂ ಸಹ ಶಕ್ತಿಯಲ್ಲಿ ಸಂಯೋಜನೆಗೊಂಡು ಶಿವಶಕ್ತಿಯ ಪ್ರಭಾವವಿರುವ ಶಕ್ತಿಪೀಠ ಇದಾಗಿದೆ. ಕಾಮಾಕ್ಷಿಯ ಇನ್ನೊಂದು ಭಾವಾರ್ಥ ಕಾಮ + ಅಕ್ಷಿ ಅಂದರೆ ಪ್ರೀತಿ + ಕಣ್ಣುಗಳು.

ಚಿತ್ರಕೃಪೆ: SINHA

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರೀತಿಯಿಂದ ಕೂಡಿದ ಕಣ್ಣುಗಳುಳ್ಳ, ಭಕ್ತರನ್ನು ಹರಸುವ, ಸರಸ್ವತಿಯ ಪ್ರಭಾವದಿಂದ ವಿದ್ಯೆ,ಬುದ್ಧಿ ಕರುಣಿಸುವ, ಲಕ್ಷ್ಮಿಯ ಪ್ರಭಾವದಿಂದ ಅಷ್ಟೈಶ್ವರ್ಯ ಹಾಗೂ ಸಂಪತ್ತುಗಳನ್ನು ನೀಡುವ, ಶಿವನ ಪ್ರಭಾವದಿಂದ ಕಷ್ಟಗಳನ್ನು ಹೋಗಲಾಡಿಸುವ ದೇವಿಯಾಗಿ ಕಾಮಾಕ್ಷಿಯನ್ನು ಆರಾಧಿಸಲಾಗುತ್ತದೆ. ಕಾಮಾಕ್ಷಿ ದೇವಿ ಹಾಗೂ ಶ್ರೀಚಕ್ರ, ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Harish Aluru

ಸಪ್ತಪುರಿಗಳ ಯಾತ್ರೆ:

ಸಪ್ತಪುರಿಗಳ ಯಾತ್ರೆ:

ಈ ಕಾಮಾಕ್ಷಿಯು ನೆಲೆಸಿರುವ ಪುಣ್ಯ ಕ್ಷೇತ್ರವೆ ಕಾಂಚೀಪುರಂ/ಕಂಚೀಪುರಂ. ಕಾಂಚೀಪುರಂ ತಮಿಳುನಾಡಿನ ಪ್ರಮುಖ ನಗರಗಳ ಪೈಕಿ ಒಂದಾಗಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಚೆನ್ನೈ ಮಹಾನಗರದಿಂದ ಕೇವಲ 72 ಕಿ.ಮೀ ಗಳಷ್ಟು ದೂರದಲ್ಲಿರುವ ಕಂಚಿಗೆ ತೆರಳಲು ಚೆನ್ನೈ ನಗರ ಕೇಂದ್ರ ಬಸ್ಸು ನಿಲ್ದಾಣದಿಂದ ಸಾಕಷ್ಟು ಬಸ್ಸುಗಳು ದೊರೆಯುತ್ತವೆ

ಚಿತ್ರಕೃಪೆ: McKay Savage

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X