• Follow NativePlanet
Share
Menu
» »ಲಕ್ನೋದ ಈ ತಾಣಗಳ ಕಡೆಗೆ ಪ್ರಯಾಣ

ಲಕ್ನೋದ ಈ ತಾಣಗಳ ಕಡೆಗೆ ಪ್ರಯಾಣ

Posted By: manjula balaraj

ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋ, ಅನೇಕ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಗೆ ನೆಲೆಯಾಗಿರುವ ಒಂದು ಬಹುಮುಖ ನಗರವಾಗಿದೆ. ಶತಮಾನಗಳ ಹಿಂದೆ ಹಲವು ರಾಜವಂಶಗಳು ಮತ್ತು ನವಾಬರ ಸ್ಥಾನವಾಗಿದ್ದರಿಂದ, ನೀವು ಈಗಲೂ ಕಲಾತ್ಮಕತೆ ಮತ್ತು ಹಿಂದಿನ ಕಾಲದ ಸಾಂಪ್ರದಾಯಿಕ ಪ್ರಭಾವಗಳನ್ನು ನೋಡಬಹುದು.ಇಲ್ಲಿರುವ ತುಂಡೆ ಕೆ ಕಬಾಬ್ ಅನ್ನು ಒಂದು ಸಲ ಪ್ರಯತ್ನಿಸದಿದ್ದಲ್ಲಿ ನೀವು ಪಾಪ ಮಾಡಿದಂತೆ!
ಇಂತಹ ಸುಂದರ ಮತ್ತು ಹೆಮ್ಮೆಯ ನಗರದಲ್ಲಿ ಜೀವಿಸುವ ಅನುಭವವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.

ಒಂದೇ ಪಟ್ಟಣದಲ್ಲಿ ಬಹಳ ಸಮಯವಿದ್ದು ಬೇಜಾರಾಗಿದ್ದರೆ ಬದಲಾವಣೆಗಾಗಿ ಇಂತಹ ನಗರಕ್ಕೆ ತಮ್ಮ ರಜಾದಿನಗಳನ್ನು ಅಥವಾ ವಾರಾಂತ್ಯಗಳನ್ನು ಖುಷಿಯಿಂದ ಕಳೆಯಲು ಲಕ್ನೋದ ಹತ್ತಿರವಿರುವ ಕೆಲವು ಜಾಗಗಳಿಗೆ ಭೇಟಿ ಮಾಡಿ ನಿಮ್ಮ ಎಲ್ಲಾ ಕಡು ಬಯಕೆಗಳನ್ನು ಕೊನೆಗೊಳಿಸಿ!

ನವಾಬ್ ಗಂಜ್ ಪಕ್ಷಿಧಾಮ

ನವಾಬ್ ಗಂಜ್ ಪಕ್ಷಿಧಾಮ

ಲಕ್ನೋದಿಂದ ಕೇವಲ 45 ಕಿ.ಮೀ ದೂರದಲ್ಲಿರುವ ನವಾಬ್ ಗಂಜ್ ಪಕ್ಷಿ ಧಾಮದಲ್ಲಿ ಸುಮಾರು 250 ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು. ಹಕ್ಕಿಗಳು ವಿಶ್ವದ ವಿವಿಧ ಭಾಗಗಳಿಂದ ನವಾಬ್ ಗಂಜ್ ಪಕ್ಷಿಧಾಮಕ್ಕೆ ವಲಸೆ ಹೋಗುತ್ತವೆ.

ಈ ಸ್ಥಳದಲ್ಲಿ ವಾಸಿಸುವ ಅನೇಕ ಹಕ್ಕಿಗಳನ್ನು ಕೆಂಪು-ಕ್ರೆಸ್ಟೆಡ್ ಪೊಚಾರ್ಡ್, ಶಿಳ್ಳೆ ಹಕ್ಕಿ, ತೆರೆದ ಬಿಲ್ಲು ಕೊಕ್ಕರೆ, ನೇರಳೆ ಮೊರ್ಹನ್ ಮುಂತಾದವುಗಳನ್ನು ನೀವು ಗುರುತಿಸಬಹುದು. ಪಕ್ಷಿಗಳ ಹೊರತಾಗಿ, ಇದು ಜಿಂಕೆ ಉದ್ಯಾನವನದ ನೆಲೆಯಾಗಿದೆ. ಅಲ್ಲದೆ ಇಲ್ಲಿ ಸುಂದರವಾದ ಕೆರೆ ಇರುವುದರಿಂದ ಇಲ್ಲಿ ಬೋಟಿಂಗ್ ಗೆ ಅನುಮತಿ ನೀಡಲಾಗಿದೆ.
PC: Rajeev

ಅಯೋಧ್ಯಾ

ಅಯೋಧ್ಯಾ

ಪ್ರಸಿದ್ಧ ಮತ್ತು ಪುರಾತನ ನಗರವಾದ ಅಯೋಧ್ಯಾವು ಭಗವಂತ ರಾಮನ ಜನ್ಮಸ್ಥಳ ಮತ್ತು ಹಿಂದೂ ಮಹಾಕಾವ್ಯ, ರಾಮಾಯಣ ನಡೆದ ಸ್ಥಳವಾಗಿದೆ. ಲಕ್ನೋ ದಿಂದ 135 ಕಿ.ಮೀ. ದೂರದಲ್ಲಿರುವ ಅಯೋಧ್ಯೆಯನ್ನು 2-3 ಗಂಟೆಗಳಲ್ಲಿ ತಲುಪಬಹುದು.

ರಾಮಕೋಟ್, ನಾಗೇಶ್ವರನಾಥ ದೇವಸ್ಥಾನ, ಹನುಮಾನ್ ಗರ್ಹಿ ಕೋಟೆ ಮತ್ತು ಇತರ ದೇವಾಲಯಗಳಂತಹ ಸ್ಥಳಗಳಿಗೆ ಕೂಡ ಈ ಸಮಯದಲ್ಲಿ ಭೇಟಿ ನೀಡಬಹುದು. ಅಯೋಧ್ಯೆಯಿಂದ ಕೇವಲ ಏಳು ಕಿ.ಮೀ ದೂರದಲ್ಲಿರುವ ಫೈಜಾಬಾದಿನಲ್ಲಿ ಕಂಡುಬರುವ ಅನೇಕ ಮಸೀದಿಗಳನ್ನು ಸಹ ನೀವು ಭೇಟಿ ಮಾಡಬಹುದು
PC: Swaminathan

 ಚಿತ್ರಕೂಟ್

ಚಿತ್ರಕೂಟ್

ಚಿತ್ರಕೂಟ ಉತ್ತರ ಪ್ರದೇಶದ ಒಂದು ವಿಚಿತ್ರವಾದ ಪಟ್ಟಣವಾಗಿದ್ದು, ಇದು ಹಲವಾರು ಆಸಕ್ತಿಯ ವಿಷಯವನ್ನು ಹೊಂದಿದೆ. ಲಕ್ನೋದಿಂದ 220 ಕಿ.ಮೀ ದೂರದಲ್ಲಿರುವ ಚಿತ್ರಕೂಟ್ ಪರಿಪೂರ್ಣವಾದ ವಾರಾಂತ್ಯದಲ್ಲಿ ವಿಹರಿಸಬಹುದಾದ ತಾಣವಾಗಿದೆ. ಎಲ್ಲಾದಕ್ಕಿಂತ ಹೆಚ್ಚಾಗಿ, ಈ ಪಟ್ಟಣದಲ್ಲಿ ದೀಪಾವಳಿ, ರಾಮ ನವಮಿ ಮತ್ತು ಮಕರ ಸಂಕ್ರಾಂತಿ ಮುಂತಾದ ಹಿಂದೂ ಉತ್ಸವಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ರಾಮಯಣದಿಂದ ರಾಮ, ಸೀತಾ ಮತ್ತು ಲಕ್ಷ್ಮಣ್ ತಮ್ಮ 14 ವರ್ಷಗಳ ವನವಾಸವನ್ನು ಚಿತ್ರಕೂಟದ ಕಾಡುಗಳಲ್ಲಿ ಕಳೆದಿದ್ದರು ಎಂದು ನಂಬಲಾಗಿದೆ. ರಾಮಘಾಟ್, ಭಾರತ್ ಮಿಲಾಪ್ ದೇವಾಲಯ, ಜಾನಕಿ ಕುಂಡ್, ಪಂಪಪುರ್, ಇತ್ಯಾದಿ.ಚಿತ್ರಕೂಟದಲ್ಲಿ ಭೇಟಿ ನೀಡಬಹುದಾದ ಕೆಲವು ಸ್ಥಳಗಳು.
PC: vaticanus

ವಾರಣಾಸಿ

ವಾರಣಾಸಿ

ವಾರಣಾಸಿ, ಕಾಶಿ ಎಂದೂ ಕರೆಯಲ್ಪಡುವ ಹಿಂದೂ ಪವಿತ್ರ ಯಾತ್ರಾ ಸ್ಥಳವಾಗಿದೆ. ಇದು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ರೋಮಾಂಚಕ ನಗರಗಳಲ್ಲಿ ಒಂದಾಗಿದೆ. ದೇಶಾದ್ಯಂತದ ಯಾತ್ರಾರ್ಥಿಗಳು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ವಾರಣಾಸಿಗೆ ಭೇಟಿ ನೀಡುತ್ತಾರೆ ಮತ್ತು ಗಂಗಾ ನದಿಯ ಪವಿತ್ರ ನೀರಿನಲ್ಲಿ ತಮ್ಮ ಎಲ್ಲಾ ಪಾಪಗಳನ್ನು ತೊಳೆದುಕೊಳ್ಳುತ್ತಾರೆ.

ವಾರಣಾಸಿ ಲಕ್ನೋದಿಂದ 320 ಕಿ.ಮೀ ದೂರದಲ್ಲಿದೆ, ಇಲ್ಲಿಗೆ ಹೋಗಲು ಸುಮಾರು 6 ಗಂಟೆಗಳ ಕಾಲ ಬೇಕಾಗುತ್ತದೆ. ಈ ವಾರಣಾಸಿಯ ಅನೇಕ ಘಟ್ಟಗಳಲ್ಲಿ ಸಮಯ ಕಳೆದರೆ ಪವಿತ್ರತೆ ಯ ಭಾವನೆ ಬರುವಲ್ಲಿ ಸಂಶಯವಿಲ್ಲ. ರಾಮನಗರ ಕೋಟೆ, ದೇವಾಲಯಗಳು ಮತ್ತು ಮಸೀದಿಗಳು, ಕಾಶಿ ವಿಶ್ವನಾಥ್ ದೇವಸ್ಥಾನ, ದುರ್ಗಾ ಕುಂಡ್ ದೇವಾಲಯ, ಅಲಮಗಿರಿ ಮಸೀದಿ ಮುಂತಾದವುಗಳು ಇಲ್ಲಿ ಭೇಟಿ ಕೊಡಬಹುದಾದ ಸ್ಥಳಗಳು.
PC: Juan Antonio Segal

ಆಗ್ರಾ

ಆಗ್ರಾ

ಆಗ್ರಾವು ಲಕ್ನೋದಿಂದ 335 ಕಿ.ಮೀ ದೂರದಲ್ಲಿದೆ ಆಗ್ರಾ ತಲುಪಲು ಸುಮಾರು 4-5 ಗಂಟೆಗಳ ಅವಧಿ ಬೇಕಾಗುತ್ತದೆ. ಆಗ್ರಾ ಕೂಡ ಪರಿವಾರದ ಜೊತೆ ವಾರಾಂತ್ಯ ಕಳೆಯಲು ಒಂದು ಉತ್ತಮವಾದ ಸ್ಥಳವಾಗಿದೆ. ಈ ಸುಂದರವಾದ ನಗರವು ಯಮುನಾ ನದಿಯ ತಟದಲ್ಲಿದೆ. ಅದ್ಭುತವಾದ ಸ್ಮಾರಕಗಳನ್ನು ಹೊಂದಿರುವ ಈ ಜಾಗವು ಭೇಟಿ ನೀಡಲೇ ಬೇಕಾದುದಾಗಿದೆ.

ಈ ಪ್ರಮುಖ ಪ್ರವಾಸಿ ತಾಣವು ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಗೆ ನೆಲೆಯಾಗಿದೆ. ತಾಜ್ ಮಹಲ್ ಗೆ ಅಡ್ದಲಾಗಿ ಜಾಮಾ ಮಸೀದಿಯಿದೆ ಇವಲ್ಲದೆ ಆಗ್ರಾ ಕೋಟೆ, ಫ಼ತೇಪುರ್ ಸಿಕ್ರಿ ಈ ಎಲ್ಲಾ ಸ್ಮಾರಕಗಳು ಮೊಘಲ್ ಸಾಮ್ರಾಜ್ಯದ ವಾಸ್ತುಶಿಲ್ಪದ ಮಹತ್ವಕ್ಕೆ ಸಾಕ್ಷಿಯಾಗಿವೆ.
PC: Arian Zwegers

ಖಜುರಾಹೊ

ಖಜುರಾಹೊ

ಖಜುರಾಹೊ ಸ್ಮಾರಕಗಗಳು ನೀವು ಭೇಟಿ ಕೊಡಲು ಯೋಚಿಸಬಹುದಾದ ಇನ್ನೊಂದು ಅದ್ಭುತ ಐತಿಹಾಸಿಕ ತಾಣ. ಇದು ಮಧ್ಯಪ್ರದೇಶದಲ್ಲಿ ಲಕ್ನೋದಿಂದ 300 ಕಿ.ಮೀ ದೂರದಲ್ಲಿದೆ ಮತ್ತು ಇದು ಕೂಡ ಒಂದು ಬಿಡುವಿನ ವೇಳೆಯಲ್ಲಿ ನೋಡಬಹುದಾದಂತಹ ಅತ್ಯುತ್ತಮ ಪ್ರವಾಸಿ ತಾಣವಾಗಿದೆ.

ಖಜುರಾಹೊವು ಭವ್ಯವಾದ ಜೈನ ಮತ್ತು ಹಿಂದೂ ದೇವಸ್ಥಾನಗಳ ಸಮೂಹವನ್ನು ಹೊಂದಿದೆ ಆದ್ದರಿಂದ ಇದನ್ನು ಯುನೆಸ್ಕೊ(UNESCO) ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.ಚಂದೇಲಾ ರಾಜವಂಶವು ನಿರ್ಮಿಸಿದ ಒಂದು ಪ್ರಚೋದಕ ಶೈಲಿಯ ವಾಸ್ತುಶಿಲ್ಪವನ್ನು ಈ ದೇವಾಲಯಗಳು ಹೊಂದಿವೆ.
PC: Pedro

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ