• Follow NativePlanet
Share
» »ಗೋಕರ್ಣದಲ್ಲಿ ರಜಾದಿನಗಳನ್ನು ಕಳೆಯಲು ಮಾರ್ಗದರ್ಶನ

ಗೋಕರ್ಣದಲ್ಲಿ ರಜಾದಿನಗಳನ್ನು ಕಳೆಯಲು ಮಾರ್ಗದರ್ಶನ

Posted By: Manjula Balaraj Tantry

ಗೋಕರ್ಣಾವು ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಅರಬ್ಬಿ ಸಮುದ್ರದ ಕರಾವಳಿಯ ಒಂದು ಸಣ್ಣ ಪಟ್ಟಣವಾಗಿದೆ. ಮುಂಚೆ ಇದನ್ನು ದೇವಾಲಯದ ನಗರವೆಂದು ಕರೆಯಲಾಗುತ್ತಿತ್ತು ಆದರೆ ಇಲ್ಲಿಯ ಸುಂದರ ಕಡಲತೀರಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದರಿಂದ ಇದು ಇಲ್ಲಿಯ ಪ್ರಮುಖ ಆಕರ್ಷಣೆ ಎನಿಸಲ್ಪಟ್ಟಿದೆ.

ಅದರಲ್ಲೂ ವಿದೇಶೀ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಗೋಕರ್ಣವೆಂದರೆ ಹಸುವಿನ ಕಿವಿ ಎಂದು ಅರ್ಥೈಸುತ್ತದೆ. ಪುರಾಣಗಳ ಪ್ರಕಾರ ಶಿವ ದೇವರು ಇಲ್ಲಿ ಭೂಮಿ ತಾಯಿಯ ಕಿವಿಯಿಂದ ಹೊರ ಬಂದರು ಆದುದರಿಂದ ಈ ಜಾಗಕ್ಕೆ ಈ ಹೆಸರು ಬಂದಿದೆ ಎಂದು ನಂಬಲಾಗುತ್ತದೆ.

ದೇವಾಲಗಳ ನಗರವಲ್ಲದೆ ಗೋಕರ್ಣವು ಈಗ ಅನೇಕ ಬೆರಗುಗೊಳಿಸುವ ಕಡಲ ತೀರಗಳನ್ನು ಹೊಂದಿದೆ. ಇಲ್ಲಿ ಜನರ ಗದ್ದಲವು ಕಡಿಮೆ ಪ್ರಮಾಣವಿರುವುದರಿಂದ ಏಕಾಂತ ಪ್ರಿಯರಿಗೆ ಇದು ಸೂಕ್ತವಾದ ಸ್ಥಳವಾಗಿದೆ. ಆದುದರಿಂದ ಕೂಡಲೇ ನಿಮ್ಮ ಪ್ರಯಾಣವನ್ನು ಗೋಕರ್ಣದ ಕಡೆಗೆ ಹೋಗುವುದನ್ನು ಯೋಜಿಸಿ. ಇಲ್ಲಿರುವಾಗ ನಿಮ್ಮನ್ನು ನೀವು ತೊಡಗಿಸಿಕೊಳ್ಳ ಬಹುದಾದ ವಿಷಯಗಳ ಬಗ್ಗೆ ಒಮ್ಮೆ ಓದಿ ತಿಳಿಯಿರಿ.

ದೇವಾಲಯಗಳಿಗೆ ತ್ತೀರ್ಥಯಾತ್ರೆ

ದೇವಾಲಯಗಳಿಗೆ ತ್ತೀರ್ಥಯಾತ್ರೆ

PC: Sbblr geervaanee

ಮೇಲೆ ಹೇಳಿರುವಂತೆ ಗೋಕರ್ಣವು ಅನೇಕ ಪುಣ್ಯ ದೇವಾಲಯಗಳ ನೆಲೆಯಾಗಿರುವುದರಿಂದ ಇದು ಹೆಚ್ಚಾಗಿ ಹಬ್ಬಗಳ ಸಮಯಗಳಲ್ಲಿ ಕಿಕ್ಕಿರಿದಿರುತ್ತದೆ. ಅವುಗಳಲ್ಲಿ ಇಲ್ಲಿರುವ ಮಹಾಬಲೇಶ್ವರ ದೇವಾಲಯವು ಎಲ್ಲಕ್ಕಿಂತಲೂ ಹೆಚ್ಚು ಪ್ರಸಿದ್ದಿ ಪಡೆದುದಾಗಿದೆ.

ಈ ದೇವಾಲಯವು ಶಿವ ದೇವರಿಗೆ ಸಮರ್ಪಿತವಾದುದಾಗಿದೆ ಮತ್ತು ದೇವರ ಕಲ್ಲಿನ ಚಿತ್ರವು ಸುಮಾರು 1,500 ವರ್ಷಳಷ್ಟು ಹಳೆಯದು ಎಂದು ನಂಬಲಾಗುತ್ತದೆ. ಇದನ್ನು ಸುಂದರವಾದ ಡ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಲಾಗಿದೆ. ಗೋಕರ್ಣದಲ್ಲಿರುವಾಗ ಭೇಟಿ ಕೊಡಬಹುದಾದ ಇನ್ನಿತರ ದೇವಾಲಯಗಳೆಂದರೆ ಭದ್ರಕಾಳಿ ದೇವಾಲಯ, ಮಹಾ ಗಣಪತಿ ದೇವಾಲಯ, ವೆಂಕಟರಮಣ ದೇವಾಲಯ ಇತ್ಯಾದಿಗಳನ್ನು ಹೆಸರಿಸಬಹುದು.

ಬೀಚ್- ಜಿಗಿತ

ಬೀಚ್- ಜಿಗಿತ

PC: Abhijit Shylanath

ಗೋಕರ್ಣಕ್ಕೆ ಪ್ರವಾಸ ಹೋಗಿ ಅಲ್ಲಿಯ ಬೀಚ್ ಗಳಿಗೆ ಭೇಟಿ ನೀಡದಿದ್ದಲ್ಲಿ ನಿಮ್ಮ ಪ್ರವಾಸವು ಅಪೂರ್ಣವೆಂದೇ ಹೇಳಬಹುದು. ಓಂ ಬೀಚ್, ಕುಡ್ಲೆ ಬೀಚ್ ಮತ್ತು ಗೋಕರ್ಣ ಬೀಚ್ ಇಲ್ಲಿಯ ಕೆಲವು ನೀವು ಭೇಟಿ ನೀಡಲೇ ಬೇಕಾದ ಸ್ಥಳಗಳು.

ಈ ಕಡಲ ತೀರಗಳ ಸುಂದರವಾದ ತೀರವನ್ನು ತುಂಬಿದ ಸ್ಪಷ್ಟವಾದ ಪ್ರಾಚೀನ ಹಳದಿ ಮರಳು ನಿಮ್ಮ ವಿಹಾರಕ್ಕೆ ನೀವು ಬೇಕಾದ ಒಂದು ಚಿಕಿತ್ಸೆಯನ್ನು ಕೂಡಾ ನೀಡುತ್ತದೆ. ಪ್ಯಾರಾಸೈಲಿಂಗ್, ಬೋಟಿಂಗ್, ವಾಟರ್ ಸ್ಕೂಟಿಂಗ್ ಮುಂತಾದ ಅತ್ಯಾಕರ್ಷಕ ಜಲ ಕ್ರೀಡೆಗಳನ್ನು ಸಹ ನೀವು ಪ್ರಯತ್ನಿಸಬಹುದು.

ಬೀಚ್ ಟ್ರಕ್ಕಿಂಗ್

ಬೀಚ್ ಟ್ರಕ್ಕಿಂಗ್

PC: Miran Rijavec

ನಮಗೆ ಪರ್ವತಗಳು, ಗುಡ್ಡಗಳು ಮತ್ತು ಕಾಡುಗಳಲ್ಲಿ ಚಾರಣ ಮಾಡುವ ಬಗ್ಗೆ ತಿಳಿದೇ ಇದೆ. ಆದರೆ ನೀವು ಯಾವಾಗಾದರೂ ಬೀಚ್ ಟ್ರಕ್ಕಿಂಗ್ ಬಗ್ಗೆ ಯೋಚಿಸಿದ್ದೀರಾ? ಇಲ್ಲದಿದ್ದರೆ ಈ ಸಾಹಸವನ್ನು ಪ್ರಯತ್ನಿಸಲು ಇಲ್ಲಿ ಪರಿಪೂರ್ಣ ಅವಕಾಶವಿದೆ.

ಗೋಕರ್ಣವು ಪರ್ವತ ಶ್ರೇಣಿಗಳ ತಪ್ಪಲಲ್ಲಿದ್ದು ಇವು ಬೀಚ್ ಗಳಿಂದ ಸುತ್ತುವರಿಯಲ್ಪಟ್ಟಿದೆ. ಆದುದರಿಂದ ನೀವು ಇಲ್ಲಿಯ ಸುಂದರವಾದ ಬೀಚ್ ಗಳಲ್ಲಿ ಟ್ರಕ್ಕಿಂಗ್ ಪ್ರಯತ್ನಿಸಬಹುದು ಮತ್ತು ನಂತರ ಇಲ್ಲಿಯ ಪರ್ವತ ಶ್ರೇಣಿಗಳು ಮತ್ತು ಗೋಕರ್ಣದ ಇತರ ಕಠಿಣ ಭೂಪ್ರದೇಶದಲ್ಲಿ ಪ್ರಯತ್ನಿಸಬಹುದು. ನಿಮ್ಮ ಟ್ರೆಕ್ಕಿಂಗ್ ಬೂಟುಗಳನ್ನು ತೆಗೆದುಕೊಂಡು ಈ ಆಹ್ಲಾದಕರ ಅನುಭವವನ್ನು ಕೈಗೊಳ್ಳಿ.

ಗೋಕರ್ಣದ ಆಹಾರದ ಕಡೆಗೆ ನೋಟಹರಿಸಿ

ಗೋಕರ್ಣದ ಆಹಾರದ ಕಡೆಗೆ ನೋಟಹರಿಸಿ

PC: stu_spivack

ಸ್ಥಳೀಯ ರೆಸ್ಟೊರೆಂಟ್ ಮತ್ತು ಸ್ನ್ಯಾಕ್ಸ್ ಗಳು ಈ ಕಡಲ ತೀರಗಳ ತೀರವನ್ನು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿಸುತ್ತವೆ. ಕರ್ನಾಟಕದ ಸಾಂಪ್ರದಾಯಿಕ ದಕ್ಷಿಣ ಭಾರತದ ಭಕ್ಷ್ಯಗಳು ಮತ್ತು ಆಹಾರಗಳಾದ ಇಡ್ಲಿ ದೋಸೆಗಳು ಮಾತ್ರವಲ್ಲದೇ ಇಲ್ಲಿಯ ಇತ್ಯಾದಿಗಳನ್ನು ಕಾಣಬಹುದು. ಅಲ್ಲದೆ ಇಲ್ಲಿಯ ಸ್ಥಳೀಯ ಆಹಾರಗಳನ್ನೂ ಕೂಡಾ ಸವಿಯಬಹುದು.

ಇದು ಸಣ್ಣ ನಗರವಾಗಿದ್ದರೂ ಇಲ್ಲಿ ದೊಡ್ಡ ಸಂಖ್ಯೆಯ ವಿದೇಶೀ ಪ್ರವಾಸಿಗರನ್ನು ಹೊಂದಿರುವುದರಿಂದ ನೀವು ಇಲ್ಲಿ ಇಸ್ರೇಲಿ ರೆಸ್ಟೋರೆಂಟ್ ಗಳು ಪಿಟಾ ಬ್ರೆಡ್ ಹೂಮಸ್ ನೊಂದಿಗೆ ಅಥವಾ ಬಾಯಿನೀರೂರಿಸುವ ಪಾಸ್ತಾ ಮತ್ತು ಪಿಜ್ಜಾ ಗಳನ್ನು ಉಣಬಡಿಸುವ ಇಟಾಲಿಯನ್ ರೆಸ್ಟೋರೆಂಟ್ ಗಳನ್ನೂ ಇಲ್ಲಿ ಕಾಣಬಹುದು.

ಬೀಚ್ ನಲ್ಲಿ ಅಡ್ದಾಡಿ

ಬೀಚ್ ನಲ್ಲಿ ಅಡ್ದಾಡಿ

PC: Abhijit Shylanath

ಗೋಕರ್ಣಾದ ಎರಡು ಮುಖ್ಯ ಆಕರ್ಷಣೆಗಳಾದ ದೇವಾಲಯಗಳು ಮತ್ತು ಬೀಚುಗಳಲ್ಲಿ ನಿಮ್ಮ ರಜಾದಿನಗಳನ್ನು ಕಳೆಯುವುದರೊಂದಿಗೆ ಮುಗಿಯುತ್ತದೆ. ಇಲ್ಲಿಯ ಬೀಚ್ ಗಳು ಕಡಿಮೆ ಗದ್ದಲ ಗಳಿಂದ ಕೂಡಿದ್ದಾಗಿರುವುದರಿಂದ ಇಲ್ಲಿ ಇನ್ನೂ ಕೆಲವು ಆಸಕ್ತಿದಾಯಕ ವಿಷಯಗಳನ್ನು ಮಾಡಬಹುದಾಗಿದೆ.

ನಿಮ್ಮನ್ನು ನೀವು ಈ ಕಡಲತೀರದಲ್ಲಿ ಕೆಲವು ಯೋಗವನ್ನು ಮಾಡುವ ಮೂಲಕ ಆಧ್ಯಾತ್ಮಿಕತೆಯನ್ನು ಕಂಡುಕೊಳ್ಳಿ,ಅಥವಾ ಕಡಲ ತೀರಗಳಲ್ಲಿ ಬೀಚ್ ವಾಲಿಬಾಲ್, ಸೂರ್ಯ ಸ್ನಾನ ಮಾಡಿ ಅಥವಾ ಸುಮ್ಮನೆ ಮಲಗಿಕೊಂಡು ಗೋಕರ್ಣವನ್ನು ಸುತ್ತುವರೆದ ಆಕಾಶದಲ್ಲಿ ನಕ್ಷತ್ರಗಳನ್ನು ರಾತ್ರಿ ಪೂರ್ತಿ ವೀಕ್ಷಿಸಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ