Search
  • Follow NativePlanet
Share
» »ಚೆನ್ನೈನಿಂದ ಮಂತ್ರಮುಗ್ದರನ್ನಾಗಿಸುವ ಕೊಲ್ಲಿ ಬೆಟ್ಟಗಳ ಪ್ರರ್ವತ ಶ್ರೇಣಿಗಳ ಕಡೆಗೆ

ಚೆನ್ನೈನಿಂದ ಮಂತ್ರಮುಗ್ದರನ್ನಾಗಿಸುವ ಕೊಲ್ಲಿ ಬೆಟ್ಟಗಳ ಪ್ರರ್ವತ ಶ್ರೇಣಿಗಳ ಕಡೆಗೆ

By Manjula Balaraj Tantry

ಈ ವಾರಾಂತ್ಯದ ರಜಾದಿನಗಳಲ್ಲಿ ಕೊಲ್ಲಿ ಬೆಟ್ಟಗಳ ಬೆರಗು ಗೊಳಿಸುವ ಪರ್ವತ ಶ್ರೇಣಿಗಳಿಗೆ ಭೇಟಿ ಕೊಡುವ ಯೋಜನೆ ಹಾಕಿ ಕೊಂಡರೆ ಹೇಗಿರಬಹುದು? ಒಂದೇ ಜಾಗದಲ್ಲಿ ಇರಲು ನೀವು ಇಷ್ಟ ಪಡದವರಾಗಿದ್ದಲ್ಲಿ, ಮತ್ತು ನಿಮ್ಮ ವಾರಾಂತ್ಯದ ರಜಾದಿನಗಳನ್ನು ಪ್ರಕೃತಿ ಸೌಂದರ್ಯದಲ್ಲಿ ಕಳೆಯಲು ಬಯಸಿದಲ್ಲಿ ಕೊಲ್ಲಿ ಬೆಟ್ಟಗಳು ನಿಮ್ಮ ಪ್ರಯಾಣ ಪಟ್ಟಿಯಲ್ಲಿ ಸೇರಿಸಿಕೊಳ್ಳಲೇ ಬೇಕಾದುದಾಗಿದೆ. ಕೊಲ್ಲಿ ಬೆಟ್ಟಗಳ ಬಗ್ಗೆ , ಇಲ್ಲಿಗೆ ಚೆನ್ನೈನಿಂದ ಹೇಗೆ ತಲುಪಬಹುದು ಇತ್ಯಾದಿಗಳ ಬಗ್ಗೆ ಓದಿ ತಿಳಿಯಿರಿ.

ಪೂರ್ವ ಘಟ್ಟಗಳ ಒಂದು ಸುಸಜ್ಜಿತ ಭಾಗದಲ್ಲಿರುವ ಈ ಕೊಲ್ಲಿ ಬೆಟ್ಟವು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು ಇಲ್ಲಿರುವ ಜಲಪಾತ ಹಾಗೂ ದೇವಾಲಯಗಳಿಂದಾಗಿ ಇಲ್ಲಿಗೆ ಪ್ರವಾಸಿಗರು ವರ್ಷದುದ್ದಕ್ಕೂ ಭೇಟಿ ಕೊಡುತ್ತಿರುತ್ತಾರೆ. ಕೊಲ್ಲಿ ಬೆಟ್ಟವು ಪರ್ವತ ಶ್ರೇಣಿಯಾಗಿದ್ದು ಇದು ಅನೇಕ ಸಾಹಸಿಗರನ್ನೂ ಕೂಡಾ ಗಮನ ಸೆಳೆಯುತ್ತದೆ.

ಇಲ್ಲಿ ಟ್ರಕ್ಕಿಂಗ್ ಮತ್ತು ಪಾದಯಾತ್ರೆ ಮಾಡುವ ಜನರನ್ನು ಕಾಣಬಹುದಾಗಿದೆ. ಮತ್ತು ನೀವು ಸಾಹಸ ಪ್ರೀಯರಲ್ಲೊಬ್ಬರಾಗಿದ್ದಲ್ಲಿ, ಕೊಲ್ಲಿ ಬೆಟ್ಟವು ಒಂದು ತಪ್ಪಿಸಲೇ ಬಾರದಂತಹ ವಾರಾಂತ್ಯದ ತಾಣವಾಗಿದೆ. ನೀವು ಇಲ್ಲಿ ಅನೇಕ ಹಿಂದು ಭಕ್ತರು ಅರಾಪಲೀಶ್ವರ ದೇವಾಲಯದಲ್ಲಿ ಗೌರವನ್ನು ಅರ್ಪಿಸುವುದನ್ನು ಕಾಣಬಹುದು. ಇಲ್ಲಿಯ ಒಂದು ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದ್ದು ಸುತ್ತಮುತ್ತಲು ಒಂದು ಭಕ್ತಿಮಯ ವಾತಾವರಣವನ್ನು ಹರಡುತ್ತದೆ.

ಕೊಲ್ಲಿ ಬೆಟ್ಟಗಳಿಗೆ ಭೇಟಿ ನೀಡಲು ಉತ್ತಮ ಸಮಯ

ಕೊಲ್ಲಿ ಬೆಟ್ಟಗಳಿಗೆ ಭೇಟಿ ನೀಡಲು ಉತ್ತಮ ಸಮಯ

PC- Pravinraaj

ಕೊಲ್ಲಿ ಬೆಟ್ಟವು ವರ್ಷಪೂರ್ತಿ ಭೇಟಿ ಕೊಡಬಹುದಾದ ತಾಣವಾದುದರಿಂದ ಇದನ್ನು ವರ್ಷದುದ್ದಕ್ಕೂ ಭೇಟಿ ನೀಡಬಹುದಾಗಿದೆ. ನೀವು ಚಳಿಗಾಲದ ಕಡಿಮೆ ತಾಪಮಾನದ ವಾತಾವರಣದಲ್ಲಿ ಇಷ್ಟ ಪಡದಿದ್ದಲ್ಲಿ ಇಲ್ಲಿಗೆ ಭೇಟಿ ಕೊಡಬಹುದಾದ ಉತ್ತಮ ಸಮಯವೆಂದರೆ ಅದು ಆಗಷ್ಟ್ ತಿಂಗಳಿನಿಂದ ನವೆಂಬರ್ ವರೆಗೆ ಮತ್ತು ಮಾರ್ಚ್ ತಿಂಗಳಿನಿಂದ ಎಪ್ರಿಲ್ ವರೆಗೆ ಈ ಸಮಯದಲ್ಲಿ ಹವಾಮಾನವು ಸಾಕಷ್ಟು ಅನುಕೂಲಕರವಾಗಿದ್ದು ನೀವು ಸುತ್ತ ಮುತ್ತ ತಿರುಗಾಡಲು ಸೂಕ್ತವಾಗಿರುತ್ತದೆ.

ಚೆನ್ನೈನಿಂದ ಕೊಲ್ಲಿ ಬೆಟ್ಟಗಳಿಗೆ ತಲುಪುವುದು ಹೇಗೆ

ಚೆನ್ನೈನಿಂದ ಕೊಲ್ಲಿ ಬೆಟ್ಟಗಳಿಗೆ ತಲುಪುವುದು ಹೇಗೆ

PC- Maps

ವಾಯುಮಾರ್ಗ ಮೂಲಕ : ಚೆನ್ನೈನಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣಕ್ಕೆ ನೀವು ವಿಮಾನದಲ್ಲಿ ಪ್ರಯಾಣ ಮಾಡಬಹುದು ಅಲ್ಲಿಂದ ಕ್ಯಾಬ್ ಮೂಲಕ ಕೊಲ್ಲಿ ಬೆಟ್ಟಕ್ಕೆ ಹೋಗಬಹುದು. ಕೊಲ್ಲಿ ಬೆಟ್ಟಗಳಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣವು 110 ಕಿ.ಮೀ ದೂರದಲ್ಲಿದೆ.

ರೈಲು ಮಾರ್ಗಗಳ ಮೂಲಕ : ಕೊಲ್ಲಿ ಬೆಟ್ಟಗಳಿಗೆ ನೇರ ರೈಲು ಸಂಪರ್ಕವಿರುವುದಿಲ್ಲವಾದುದರಿಂದ ನೀವು ಸೇಲಂ ಜಂಕ್ಷನ್ ಗೆ ರೈಲು ಹಿಡಿಯಬಹುದು ಮತ್ತು ಅಲ್ಲಿಂದ ಕ್ಯಾಬ್ ಮೂಲಕ ಕೊಲ್ಲಿ ಬೆಟ್ಟಕ್ಕೆ ಹೋಗಬಹುದು. ಕೊಲ್ಲಿ ಬೆಟ್ಟವು ಸೇಲಂ ಜಂಕ್ಷನ್ ನಿಂದ ಸುಮಾರು 45 ಕಿ.ಮೀ ಅಂತರದಲ್ಲಿದೆ.

ರಸ್ತೆ ಮೂಲಕ : ಸುಮಾರು 360 ಕಿಮೀ ಅಂತರದಲ್ಲಿರುವ ಕೊಲ್ಲಿ ಬೆಟ್ಟಗಳಿಗೆ ರಸ್ತೆ ಮೂಲಕ ಸುಲಭವಾಗಿ ಚೆನ್ನೈನಿಂದ ಮತ್ತು ಇನ್ನಿತರ ಪ್ರಮುಖ ನಗರಗಳಿಂದ ಸಂಪರ್ಕಿಸಬಹುದಾಗಿದೆ. ನೀವು ಕ್ಯಾಬ್ ಮೂಲಕವೂ ಚೆನ್ನೈ ನಿಂದ ಕೊಲ್ಲಿ ಬೆಟ್ಟಗಳಿಗೆ ಹೋಗಬಹುದಾಗಿದೆ.

ನೀವು ನಿಮ್ಮ ಸ್ವಂತ ವಾಹನದಲ್ಲಿ ಹೋಗಬಯಸಿದಲ್ಲಿ ನೀವು ಈ ಕೆಳಗಿನ ಮಾರ್ಗಗಳಲ್ಲಿ ಪ್ರಯಾಣಿಸಬಹುದಾಗಿದೆ.

ಮಾರ್ಗ 1 : ಚೆನ್ನೈ - ಚೆಂಗಲ್ಪಟ್ಟು - ವಿಲ್ಲುಪುರಮ್- ಕೊಲ್ಲಿ ಬೆಟ್ಟಗಳು

ಮಾರ್ಗ 2 : ಚೆನ್ನೈ - ಕಾಂಚೀಪುರಂ - ಸೇಲಂ -ಕೊಲ್ಲಿ ಬೆಟ್ಟಗಳು

ಆದರೂ ಮಾರ್ಗ 1ರಲ್ಲಿ ಬೇಗ ತಲುಪಬಹುದಾದ ಕಾರಣ ಈ ಮಾರ್ಗವು ಹೆಚ್ಚು ಸೂಕ್ತವಾದುದಾಗಿದೆ.

ನೀವು ನಿಮ್ಮ ತಲುಪಬೇಕಾದ ಗಮ್ಯಸ್ಥಾನವನ್ನು ಕಡಿಮೆ ಸಮಯದಲ್ಲಿ ತಲುಪಬೇಕೆಂದಿದ್ದಲ್ಲಿ ಮಾರ್ಗ ಒಂದರಲ್ಲಿ ಪ್ರಯಾಣಿಸುವುದು ಹೆಚ್ಚು ಸೂಕ್ತ. ನೀವು ಕೊಲ್ಲಿ ಬೆಟ್ಟಗಳ ಮಾರ್ಗದಲ್ಲಿ ಪ್ರಯಾಣಿಸಲು ಪ್ರಾರಂಭಿಸಿದಲ್ಲಿ ನೀವು ಈ ಕೆಳಗಿನ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ.

ಚೆಂಗಲ್ಪಟ್ಟು

ಚೆಂಗಲ್ಪಟ್ಟು

PC- Sarath Kuchi

ಚೆಂಗಲ್ಪಟ್ತು ಇಲ್ಲಿಯ ಕೋವಲೈ ಸರೋವರಕ್ಕೆ ಪ್ರಸಿದ್ದಿ ಯಾಗಿದೆ. ಇದು ಜಲಾಶಯದಂತೆ ಕಾರ್ಯನಿರ್ವಹಿಸುತ್ತಿದ್ದು, ಬೇಸಿಗೆ ಕಾಲದಲ್ಲಿ ಇದು ಸುತ್ತಮುತ್ತಲಿನ ಅನೇಕ ನಗರಗಳಿಗೆ ಮತ್ತು ಹಳ್ಳಿಗಳಿಗೆ ನೀರು ಪೂರೈಸುತ್ತದೆ. ಇದು ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಅತೀ ದೊಡ್ಡ ಪಟ್ಟಣಗಳಲ್ಲೊಂದಾಗಿದೆ. ಚೆಂಗಲ್ಪಟ್ಟು ತನ್ನ ಶುದ್ದವಾದ ಪರಿಸರ ಮತ್ತು ಪರಿಶುದ್ದವಾದ ಗಾಳಿ ಮತ್ತು ತಾಜಾತನದ ವಾತಾವರಣವನ್ನು ಹೊಂದಿರುವ ಕಾರಣಕ್ಕಾಗಿ ಅಪರೂಪಕ್ಕೆ ಭೇಟಿ ಕೊಡುವ ಪ್ರವಾಸಿಗರಲ್ಲೂ ಸಹ ಪ್ರಸಿದ್ದಿಯನ್ನು ಪಡೆದಿದೆ. ಆದುದರಿಂದ ಕಳಂಕ ರಹಿತ ಈ ಕೋವಲೈ ಸರೋವರದಲ್ಲಿ ಒಮ್ಮೆ ವಿಶ್ರಾಂತಿ ಪಡೆದರೆ ಹೇಗಿರಬಹುದು?

ವಿಲ್ಲುಪುರಂ

ವಿಲ್ಲುಪುರಂ

PC- Karthik Easvur

ತಮಿಳುನಾಡಿನ ದೊಡ್ಡ ಜಿಲ್ಲೆಯಾರುವ ವಿಲ್ಲುಪುರಂ ನ ಇತಿಹಾಸವು ಚೋಳರ ಕಾಲದ್ದಾಗಿದೆ. ಆ ಸಮಯದಲ್ಲಿ ಈ ಪಟ್ಟಣವು ಪ್ರಮುಖ ರಾಜಕೀಯ ಮತ್ತು ವಾಣಿಜ್ಯ ಕೇಂದ್ರವಾಗಿತ್ತು ಇಂದು ವಿಲ್ಲುಪುರಂ ಪ್ರಾಚೀನ ಜಿಂಗೀ ಕೋಟೆ ಮತ್ತು ಕೆಲವು ದೇವಾಲಯಗಳಿಗೆ ನೆಲೆಯಾಗಿದೆ. ಈ ಐತಿಹಾಸಿಕ ನಗರಕ್ಕೆ ಒಂದು ಭೇಟಿ ಕೊಟ್ಟು ಅಲ್ಲಿಯ ನಗರ ಮತ್ತು ಕಟ್ಟಡಗಳಲ್ಲಿ ಹುದುಗಿರುವ ಇತಿಹಾಸದ ಬಗ್ಗೆ ಅನ್ವೇಷಣೆ ನಡೆಸಿದರೆ ಹೇಗಿರಬಹುದು?

ಕೊಲ್ಲಿ ಬೆಟ್ಟಗಳಲ್ಲಿ ಭೇಟಿ ಕೊಡಬಹುದಾದ ಪ್ರಮುಖ ಸ್ಥಳಗಳು

ಒಮ್ಮೆ ನೀವು ಕೊಲ್ಲಿ ಬೆಟ್ಟಗಳ ಗಡಿಯೊಳಗೆ ಪ್ರವೇಶಿಸಿದಲ್ಲಿ, ನಿಮ್ಮನ್ನು ತೃಪ್ತಿಗೊಳಿಸಿಕೊಳ್ಳಬಹುದಾದ ಮತ್ತು ನೀವು ಅನ್ವೇಷಿಸಬಹುದಾದ ಅನೇಕ ಆಯ್ಕೆಗಳು ನಿಮಗೆ ಸಿಗುತ್ತವೆ . ಕೊಲ್ಲಿ ಬೆಟ್ಟಗಳ ದಟ್ಟವಾದ ಕಾಡುಗಳಲ್ಲಿ ಮತ್ತು ಶ್ರೀಮಂತ ಸಸ್ಯಗಳ ಮಧ್ಯೆ ಆನಂದ ಪಡುವುದು ಮಾತ್ರವಲ್ಲದೆ ನೀವು ಇಲ್ಲಿ ಪ್ರಸಿದ್ದ ದೇವಾಲಯಗಳಿಗೆ , ತೋಟಗಳಿಗೆ, ಜಲಪಾತಗಳಿಗೂ ಕೂಡಾ ಭೇಟಿ ಕೊಡಬಹುದು. ನೀವು ಕೊಲ್ಲಿ ಬೆಟ್ಟಗಳಲ್ಲಿ ಇರುವಾಗ ಭೇಟಿ ನೀಡಬಹುದಾದಂತಹ ಕೆಲವು ಸ್ಥಳಗಳು ಈ ಕೆಳಗಿನಂತಿವೆ

ಆಕಾಶ್ ಗಂಗಾ ಜಲಪಾತ

ಆಕಾಶ್ ಗಂಗಾ ಜಲಪಾತ

PC- Docku

ನೀವು ಕೊಲ್ಲಿ ಬೆಟ್ಟಗಳಲ್ಲಿರುವ ಅರಪಾಲೀಶ್ವರ ದೇವಾಲಯದ ಬಳಿ ಇರುವ ಆಕಾಶ್ ಗಂಗಾ ಜಲಪಾತದ ಮನ ತಣಿಸುವಂತಹ ನೀರಿನಲ್ಲಿ ವಿಶ್ರಾಂತಿ ಪಡೆಯಯಸಿದಲ್ಲಿ ಈ ಪೂರ್ವ ಘಟ್ಟಗಳಲ್ಲಿರುವ ಈ ರೋಮಾಂಚಕ ಭೂಮಿಗೆ ಭೇಟಿ ಕೊಡುವ ಅವಕಾಶವನ್ನು ಖಂಡಿತವಾಗಿಯೂ ತಪ್ಪಿಸಲೇಬಾರದು. ಈ ಜಾಗವು ಬೇಸಿಗೆ ಕಾಲದಲ್ಲಿ ಅಸಂಖ್ಯಾತ ಪ್ರವಾಸಿಗರನ್ನು ಹೊಂದಿರುತ್ತದೆ. ಜನ ನಗರದ ಬಿಸಿ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಜಲಪಾತಗಳಿಂದ ಸುತ್ತುವರಿದ ಮತ್ತು ತಂಪಾದ ವಾತಾವರಣವನ್ನು ಹೊಂದಿದ ಈ ಸ್ಥಳಕ್ಕೆ ಧಾವಿಸುತ್ತಾರೆ.

ಮೇಲಿಂದ ಕೆಳಗೆ ಬೀಳುವ ಈ ಆಕಾಶ್ ಗಂಗೆ

ಅರಪಾಲೀಶ್ವರ ದೇವಾಲಯ

ಅರಪಾಲೀಶ್ವರ ದೇವಾಲಯ

PC- Karthickbala

ಅರಪಾಲೀಶ್ವರ ದೇವಾಲಯವಿರುವ ಕಾರಣಕ್ಕಾಗಿಯೇ ಕೊಲ್ಲಿ ಪರ್ವತಶ್ರೇಣಿಗಳು ಒಂದು ಯಾತ್ರೀ ತಾಣವೆನಿಸಿದೆ. ಇದು ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರನ್ನು ಪ್ರತೀವರ್ಷ ಆಕರ್ಷಿಸುತ್ತದೆ ಮತ್ತು ಇಲ್ಲಿ ಭಕ್ತರು ತಮ್ಮ ಕಾಣಿಕೆಯನ್ನು ಅರಪಾಲೀಶ್ವರ ದೇವರಿಗೆ ಅರ್ಪಿಸುತ್ತಾರೆ ಮತ್ತು ಕೊಲ್ಲಿ ಬೆಟ್ಟಗಳ ಕಾಡುಗಳಲ್ಲಿ ಚಾರಣವನ್ನೂ ಕೂಡ ಮಾಡುತ್ತಾರೆ.

ಈ ಶಿವಲಿಂಗ ದೇವಾಲಯದ ದಂತಕಥೆಯು ಮೂಲತ: ವಾಗಿ ಸಂಗಮ ಕಾಲದ್ದಾಗಿದೆ ಮತ್ತು ಆ ನಂತರದಿಂದಲೂ ಇದನ್ನು ಪವಿತ್ರ ತಾಣವೆಂದು ಪರಿಗಣಿಸಲಾಗುತ್ತಿದೆ. ಇಲ್ಲಿ ಅಸಂಖ್ಯಾತ ಜನರು ತಮಗೆ ಶಾಂತಿಯುತ ಮನಸ್ಸು ಮತ್ತು ನಿರ್ವಾಣ ಸ್ಥಿತಿಯನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ.

ಬಾಟಾನಿಕಲ್ ಗಾರ್ಡನ್

ಬಾಟಾನಿಕಲ್ ಗಾರ್ಡನ್

PC- Karthickbala

ಬಟಾನಿಕಲ್ ಗಾರ್ಡನ್ ಪೂರ್ವ ಘಟ್ಟಗಳ ಕೊಲ್ಲಿ ಬೆಟ್ಟಗಳಲ್ಲಿದೆ. ಇಲ್ಲಿಯ ಪರ್ವತ ಶ್ರೇಣಿಗಳ ಸೌಂದರ್ಯತೆ ಮತ್ತು ಅಸ್ಥಿತ್ವದಲ್ಲಿರುವ ಮೋಡಿಯನ್ನು ಈ ಬಟಾನಿಕಲ್ ಗಾರ್ಡನ್ ಇನ್ನೂ ಹೆಚ್ಚಿಸುತ್ತದೆ. ಇಲ್ಲಿ ಬೋಟ್ ಸವಾರಿ ಯಿಂದ ಗುಲಾಬಿ ತೋಟಗಳವರೆಗೆ ಈ ಬಟಾನಿಕಲ್ ಗಾರ್ಡನ್ನು ಇಲ್ಲಿಗೆ ಭೇಟಿ ಕೊಡುವ ಸಂದರ್ಶಕರನ್ನು ಅಚ್ಚರಿಗೊಳಿಸುವ ಎಲ್ಲವನ್ನೂ ತನ್ನೊಳಗೆ ಹೊಂದಿದೆ. ಕೊಲ್ಲಿ ಬೆಟ್ಟಗಳ ಈ ಶ್ರೀಮಂತ ಭೂಮಿಯಲ್ಲಿ ಸುಂದರವಾದ ಉದ್ಯಾನವನದಲ್ಲಿರುವ ಒಂದು ದೈವಿಕ ಸೆಳೆತವು ಖಚಿತವಾಗಿಯೂ ಅನುಭವಿಸುವ ಮತ್ತು ಸವಿಯುವ ವಿಷಯವಾಗಿದೆ. ಕೊಲ್ಲಿ ಬೆಟ್ಟಗಳಿಗೆ ಪ್ರವಾಸ ಮಾಡುವ ಯೋಜನೆಯನ್ನು ಹಾಕಿಕೊಳ್ಳಿ ಮತ್ತು ನಿಮಗೆ ನೀವು ಈ ಪ್ರಕೃತಿ ತಾಯಿಯ ಮಡಿಲಲ್ಲಿ ಒಂದು ಅದ್ಬುತವಾದ ಕೊಡುಗೆ ಯನ್ನು ಕೊಟ್ಟುಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more