Search
  • Follow NativePlanet
Share
» »ತಂದೆಯಂದಿರ ದಿನ : ಅವರಿಗಿಷ್ಟವಾಗುವ ಸ್ಥಳಗಳು

ತಂದೆಯಂದಿರ ದಿನ : ಅವರಿಗಿಷ್ಟವಾಗುವ ಸ್ಥಳಗಳು

By Vijay

ಸಮಯ ಕಳೆದಂತೆ ಹೊಸ ಹೊಸ ವಿಚಾರಗಳು ಹೆಚ್ಚುತ್ತಿವೆ. ಹೊಸ ಹೊಸ ವಿಷಯಗಳು ತಿಳಿಯುತ್ತಿವೆ. ಹಿಂದೊಮ್ಮೆ ತೆಪ್ಪಗಾಗಿದ್ದ ಸಮಾಜ ಇಂದು ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಎಲ್ಲೆಡೆ ಲವಲವಿಕೆ. ವರ್ಷಪೂರ್ತಿ ಒಂದೊಂದು ವಸ್ತು, ವಿಷಯ ಪಾತ್ರಕ್ಕೆ ಸಂಬಂಧಿಸಿದಂತೆ ಅವುಗಳಿಗೆಂದೆ ಮುಡಿಪಾದ ಒಂದು ದಿನವನ್ನು ಆಚಣೆಯಾಗಿ ಆಚರಿಸಲಾಗುತ್ತಿದೆ.

ಇದರ ಹಿಂದಿನ ಉದ್ದೇಶ ಇಷ್ಟೆ. ಸಮಾಜದಲ್ಲಿ ಒಳ್ಳೆಯ ವಿಷಯ, ವಸ್ತುಗಳಿಗೆ ಸಂಬಂಧಿಸಿದಂತೆ ಜಾಗೃತೆಯನ್ನು ಮೂಡಿಸುವುದು. ಜೀವನದಲ್ಲಿ ಮುಖ್ಯರಾದವರ ಕುರಿತು ಪ್ರೀತಿ ಗೌರವ ತೋರ್ಪಡಿಸುವುದು. ಅಂತೆಯೆ ಇಂದು ಜಗತ್ತಿನಾದ್ಯಂತ ತಾಯಿ ದಿನಾಚರಣೆ, ಭೂದಿನಾಚರಣೆ, ಮಹಿಳಾ ದಿನಾಚರಣೆ ಹೀಗೆ ಹತ್ತು ಹಲವು ಆಚರಣೆಗಳನ್ನು ಮಾಡುವುದನ್ನು ಗಮನಿಸಬಹುದು.

ಅದರಂತೆಯೆ ಪ್ರತಿಯೊಬ್ಬರ ವಿಶೇಷವಾಗಿ ಮಕ್ಕಳ ಜೀವನದಲ್ಲಿ ತಾಯಿಯಂತೆಯೆ ಅವರ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ತಂದೆಯೂ ಸಹ ಗೌರವ, ಪ್ರೀತಿಗೆ ಅರ್ಹರು. ಹಾಗಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪ್ರತಿ ವರ್ಷ ಜೂನ್ ತಿಂಗಳ ಮೂರನೇಯ ಭಾನುವಾರದಂದು ತಂದೆಯಂದಿರಿಗೆ ಗೌರವ ಸೂಚಕವಾಗಿ ತಂದೆ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಪ್ರಸ್ತುತ ಲೇಖನದಲ್ಲಿ, ವಿವಿಧ ಸ್ವಭಾವ/ಮನಸ್ಥಿತಿಯಿರುವ ತಂದೆಯರು ಅವರವರ ಸ್ವಭಾವಕ್ಕೆ ತಕ್ಕಂತೆ ಯಾವ್ಯಾವ ಸ್ಥಳಗಳಿಗೆ ತೆರಳಿದರೆ ಸಂತಸ ಪಡಬಹುದೆಂಬುದರ ಕುರಿತು ತಿಳಿಸಲಾಗಿದೆ. ನೀವು ಅಪ್ಪನ ಮುದ್ದಿನ ಮಗಳೆ ಆಗಿರಿ ಅಥವಾ ಮಗನೆ ಆಗಿರಿ ಈ ತಂದೆಯಂದಿರ ದಿನಾಚರಣೆಯ ಅಂಗವಾಗಿ ನಿಮ್ಮ ಪ್ರೀತಿಯ ಅಪ್ಪನನ್ನು ಈ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರಿಗೆ ಸಂತೋಷ ಆಶ್ಚರ್ಯ ಉಂಟುಮಾಡಿರಿ.

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಶಾಂತಿಪ್ರೀಯರಾಗಿದ್ದರೆ :

ನಿಮ್ಮ ಪ್ರೀತಿಯ ಅಪ್ಪ ಶಾಂತಿಯ ಪ್ರತಿರುಪದಂತಿದ್ದರೆ ಅವರಿಗೆ ಶಾಂತತೆಯಿಂದ ಕೂಡಿದ ಯಾವ ಸ್ಥಳವಾದರೂ ಇಷ್ಟವಾಗಬಹುದು. ಅದರಲ್ಲೂ ಭಾರತದ ಕೆಲ ಸ್ಥಳಗಳು ಶಾಂತಿಯಿಂದ ಕೂಡಿರುವ ವಾತಾವರಣಕ್ಕೆಂದೆ ಪ್ರಸಿದ್ಧವಾಗಿವೆ. ಅವುಗಲಲ್ಲೊಂದಾಗಿದೆ. ಪಾಂಡಿಚೆರಿಯಲ್ಲಿರುವ ಅರೋವಿಲ್. ಪಾಂಡಿಚೆರಿಯಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿದೆ. ಇದು ವಿವಿಧ ರಾಷ್ಟ್ರೀಯತೆ ಹಾಗೂ ಸಂಸ್ಕೃತಿಗಳ ನಗರ.

ಚಿತ್ರಕೃಪೆ: yogasanft

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

"ನಸುಕಿನ ನಗರ" ಎಂತಲೂ ಕರೆಯಲ್ಪಡುವ ಅರೋವಿಲ್, 40 ದೇಶಗಳಿಂದ ಬಂದು ನೆಲೆಸಿರುವ ಜನರ ಒಂದು ಧ್ಯಾನ ಕೆಂದ್ರವಾಗಿದೆ.

ಚಿತ್ರಕೃಪೆ: okramesh

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾದ ಈ ನಗರ ವಿವಿಧ ಸಂಸ್ಕೃತಿಗಳ ಸಮ್ಮಿಲನಗೊಂಡ ನಗರ ಹಾಗೂ ಸಮುದಾಯ ಜೀವನದ ನಗರ ಎಂದು ಹೆಸರುವಾಸಿಯಾಗಿದೆ. ಭಾರತದ ಉತ್ತಮ ಶಾಂತಿಯುತ ಪ್ರದೇಶಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: PROokramesh

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಸುವರ್ಣದಂತೆ ಪ್ರತಿಫಲಿಸುವ ಇಲ್ಲಿನ ಗೋಳಾಕಾರದ ರಚನೆಯು ಧ್ಯಾನ ಕೇಂದ್ರವಾಗಿದ್ದು ಅದನ್ನು ಮಾತೃ/ಮಾತ್ರಿ ಮಂದಿರ ಎಂದು ಕರೆಯುತ್ತಾರೆ. ಇಲ್ಲಿ ನೆರೆದ ಎಲ್ಲೆ ಜನರೂ ಸೂಜಿ ಬಿದ್ದರೂ ಕೇಳಿಸುವಷ್ಟು ಶಾಂತಿಯಿಂದ ಧ್ಯಾನ ಮಾಡುವುದನ್ನು ಗಮನಿಸಬಹುದು.

ಚಿತ್ರಕೃಪೆ: Devaiah PA

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಈ ವಿಭಾಗದಲ್ಲಿ ಮತ್ತೊಂದು ಆಯ್ಕೆ ಉತ್ತರಾಖಂಡದ ಪೌರಿ ಗಡ್ವಾಲ್ ಜಿಲ್ಲೆಯಲ್ಲಿರುವ ಲ್ಯಾನ್ಸ್ ಡೌನ್ ಪಟ್ಟಣ. ಕಲ್ಮಶರಹಿತ ವಾತಾವರಣ, ಅಗಾಧ ಸೃಷ್ಟಿ ಸೌಂದರ್ಯ ಹಾಗೂ ಎಲ್ಲೆಡೆ ಶಾಂತಿಯಿಂದ ಕೂಡಿರುವ ಈ ಸುಂದರ ಪಟ್ಟಣವು ನಿಮ್ಮ ಪ್ರೀತಿಯ ಅಪ್ಪನ ಮನ ಕದಿಯುತ್ತದೆ.

ಚಿತ್ರಕೃಪೆ: Priyambada Nath

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಉತ್ಸಾಹ, ಹುರುಪಿರುವ ವ್ಯಕ್ತಿಯಾಗಿದ್ದರೆ:

ನಿಮ್ಮ ಪ್ರೀತಿಯ ಅಪ್ಪ ಆಧುನಿಕತೆಗೆ ಒಗ್ಗಿಕೊಂಡು ಜೀವನವನ್ನು ಉತ್ಸಾಹದಿಂದ ಅನುಭವಿಸುವಂತಹ ವ್ಯಕ್ತಿತ್ವವುಳ್ಳವರಾಗಿದ್ದರೆ, ನಿಮಗೆ ಖಂಡಿತ ಸಾಕಷ್ಟು ಆಯ್ಕೆಗಳು ದೊರೆಯುತ್ತವೆ. ಮೊದಲನೇಯದಾಗಿ ಕಡಲ ಕಿನಾರೆಯ ಪಟ್ಟಣ ಗೋವಾಗೆ ಕರೆದುಕೊಂಡು ಹೋಗಬಹುದು.

ಚಿತ್ರಕೃಪೆ: Subhash Chandra

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಪಾರ್ಟಿ, ಔತಣಕೂಟಗಳು, ಶೋಕಿಯ ಜೀವನ, ಸ್ಪಾಗಳು, ಮಸಾಜ್ ಪಾರ್ಲರ್ ಗಳು, ಜಲಕ್ರೀಡೆಗಳು ಹೀಗೆ ಒಂದಾದರ ಮೇಲೊಂದಂತೆ ಮೋಜುಗಳನ್ನು ಸವಿಯಲು ಗೋವಾ ಹೆಸರುವಾಸಿಯಾಗಿದೆ. ಪ್ರತಿಯೊಬ್ಬರಿಗೂ ಗೋವಾ ಎಂದರೆ ಸಾಕು ಸಮುದ್ರ ತೀರಗಳಲ್ಲಿ ಕುಣಿದು ಕುಪ್ಪಳಿಸುವ ಕಲ್ಪನೆಗಳು ಮನದಲ್ಲಿ ಅವ್ಯಾಹತವಾಗಿ ಹರಿದಾಡಲು ಪ್ರಾರಂಭಿಸುತ್ತವೆ.

ಚಿತ್ರಕೃಪೆ: Vinoth Chandar

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಬೆಂಗಳೂರು ಈ ವಿಭಾಗದಲ್ಲಿ ಮತ್ತೊಂದು ಆಯ್ಕೆ. ಭಾರತದ ಹೊಸಮುಖ ಎಂದೆ ಪರಿಚಿತವಾಗಿರುವ ಬೆಂಗಳೂರು ಲವಲವಿಕೆಯಿಂದ ಕೂಡಿರುವ ಎಲ್ಲ ರೀತಿಯ ಅನುಕೂಲತೆಗಳಿರುವ, ಮಧ್ಯವಯಸ್ಕ ಹಾಗೂ ವಯಸ್ಸಾದವರು ಅದ್ಭುತವಾಗಿ ಸಮಯ ಕಳೆಯಲು ಸುಮ್ದರ ಉದ್ಯಾನಗಳು, ಕ್ಲಬ್ಬುಗಳು ಹಾಗೂ ರಿಸಾರ್ಟುಗಳಿರುವ ಬೆಂಗಳೂರು ಒಂದು ಉತ್ತಮವಾದ ಆಯ್ಕೆಯೆ ಹೌದು.

ಚಿತ್ರಕೃಪೆ: Ashwin Kumar

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಪ್ರಕೃತಿ ಪ್ರೀಯರಾಗಿದ್ದರೆ,

ನಿಮ್ಮ ತಂದೆಯು ನಿಸರ್ಗಪ್ರೀಯರಾಗಿದ್ದು, ಪ್ರಕೃತಿಗೆ ಸಂಬಂಧಿಸಿದಂತೆ ಅಪಾರ ಒಲವು ಹೊಂದಿದ್ದರೆ ಭಾರತದಲ್ಲಿರುವ ಕೆಲವು ಅದ್ಭುತ ಪ್ರಾಕೃತಿಕ ತಾಣಗಳಿಗೆ ಭೆಟಿ ನೀಡಬಹುದು. ಕೇರಳದ ಸೈಲೆಂಟ್ ವ್ಯಾಲಿ ಅಂತಹ ಒಂದು ಸ್ಥಳಗಳಲ್ಲೊಂದಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ನೀಲ್ಗಿರಿ ಬೆಟ್ಟಗಳಲ್ಲಿ ಸೈಲೆಂಟ್ ವ್ಯಾಲಿ ಎಂಬ ಹೆಸರಿನ ರಾಷ್ಟ್ರೀಯ ಉದ್ಯಾನವಿದೆ.

ಚಿತ್ರಕೃಪೆ: NIHAL JABIN

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಕನ್ನಡದಲ್ಲಿ ಈ ಉದ್ಯಾನದ ಹೆಸರು ಅಕ್ಷರಶಃ "ಶಾಂತ ಕಣಿವೆ" ಎಂದು ಅರ್ಥ ನೀಡುತ್ತದೆ ಹಾಗೂ ಹೆಸರಿಗೆ ತಕ್ಕ ಹಾಗೆಯೆ ಈ ಉದ್ಯಾನವು ಶಾಂತ ಹಾಗೂ ಮನಮೋಹಿತಗೊಳಿಸುವ ವಾತಾವರಣದಿಂದ ಕೂಡಿದೆ. ಇದೊಂದು ನಿತ್ಯ ಹರಿದ್ವರ್ಣದ ಕಾಡಾಗಿದ್ದು ಯಾವುದೆ ರೀತಿಯ ತೊಂದರೆಗಳಿಗೆ ಒಳಗಾಗಿಲ್ಲ. ಸೈಲೆಂಟ್ ವ್ಯಾಲಿ ಕಾಡಿನಲ್ಲಿರುವ ಕರುವರಾ ಜಲಪಾತ.

ಚಿತ್ರಕೃಪೆ: നിരക്ഷരൻ

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಸ್ಥಳೀಯವಾಗಿ ಅಂದರೆ ಮಲಯಾಳಂ ಭಾಷೆಯಲ್ಲಿ ಈ ಅರಣ್ಯವು ಸೈರಂಧ್ರಿವನಂ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಸ್ಥಳ ಪುರಾಣದ ಪ್ರಕಾರ ಹಿಂದೆ ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ದ್ರೌಪದಿಯು ರಾಣಿ ಸುದೇಶ್ನಾಳ ಸಹಾಯಕಿ ಸೈರಂಧ್ರಿಯ ವೇಷಧರಿಸಿ ಅಲೆದಾಡುತ್ತ ಕೊನೆಗೆ ಈ ಸ್ಥಳದಲ್ಲಿ ವಿಶ್ರಮಿಸಿದರು. ಅದರಂತೆ ಈ ವನಕ್ಕೆ ಸೈರಿಂಧ್ರಿವನಂ ಎಂಬ ಹೆಸರು ಬಂದಿತು. ಅಲ್ಲದೆ ಕುಂತಿಯ ಕಾರಣದಿಂದ ಇಲ್ಲಿರುವ ಒಂದು ನದಿಗೆ ಕುಂತಿಪುಳ ಎಂಬ ಹೆಸರೂ ಬಂದಿತು. ಕುಂತಿಪುಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ.

ಚಿತ್ರಕೃಪೆ: Cj.samson

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಸಾಹಸ ಪ್ರವೃತ್ತಿಯವರಾಗಿದ್ದರೆ,

ನಿಮ್ಮ ಪ್ರೀತಿಯ ಅಪ್ಪ ಮೊದಲಿನಿಂದಲೂ ಸಾಹಸ ಬಯಸುವ ಮನೋಭಾವವುಳ್ಳವರಾಗಿದ್ದರೆ, ಕೆಲವು ಮಧ್ಯಮ ಮಟ್ಟದಲ್ಲಿ ಆಸ್ವಾದಿಸಬಹುದಾದ ಚಾರಣ, ತೆಪ್ಪ ಸವಾರಿಯ ತಾನಗಳಿಗೆ ಕರೆದುಕೊಂಡು ಹೋಗಬಹುದು. ಆದರೆ ವಯಸ್ಸಾದಂತೆ ಶಕ್ತಿಯು ಕುಗ್ಗುವುದರಿಂದ ಸಾಕಷ್ಟು ಜಾಗರೂಕತೆವಹಿಸುವುದು ಆ ಸಂದರ್ಭದಲ್ಲಿ ಉಚಿತವಾದುದನ್ನು ಮಾಡುವುದು ನಿಮಗೆ ಬಿಟ್ಟಿದ್ದು. ಸಂಗಮದಲ್ಲಿನ ತೆಪ್ಪ ಸವಾರಿ ನಿಜವಾಗಿಯೂ ಅವರನ್ನು ಸಂತಸಪಡಿಸಬಹುದು. ಬಎಂಗಳೂರು ಬಳಿಯಿರುವ ಕನಕಪುರ ತಾಲೂಕಿನ ಅರ್ಕಾವತಿ ಹಾಗೂ ಕಾವೇರಿ ನದಿಯ ಸಂಗಮ ತಾಣವು ಹೆಚ್ಚು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Nagarjun Kandukuru

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆಯಲ್ಲಿರುವ ಶಿವಗಂಗೆ ಬೆಟ್ಟವು ಈ ವಿಭಾಗದಲ್ಲಿ ಮತ್ತೊಂದು ಆಯ್ಕೆಯಾಗಿದೆ. ಬೆಟ್ಟದ ಮೇಲೆ ದೇವಾಲಯವಿದ್ದು ಅದನ್ನು ತಲುಪಲು ಅನುಕೂಲವಾಗುವಂತೆ ಕಬ್ಬಿಣದ ಆಧಾರಗಳು ಹಾಗೂ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ನಿಧಾನವಾಗಿ ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತ ಪೂರ್ಣ ತುದಿಯಲ್ಲದಿದ್ದರೂ ಮೆಟ್ಟಿಲುಗಳನ್ನೇರಿ ಗುಡ್ಡದ ಮಧ್ಯದಲ್ಲಿರುವ ದೇವಾಲಯಕ್ಕಾದರೂ ಭೇಟಿ ನೀಡಬಹುದು.

ಚಿತ್ರಕೃಪೆ: Manjeshpv

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಚಿಂತನಾಶೀಲ/ಬಹುವ್ಯಕ್ತಿತ್ವವುಳ್ಳವರಾಗಿದ್ದರೆ,

ನಿಮ್ಮ ಪ್ರೀತಿಯ ತಂದೆ ಈ ರೀತಿಯ ವ್ಯಕ್ತಿತ್ವವುಳ್ಳವರಾಗಿದ್ದರೆ ಜ್ಞಾನ ವೃದ್ಧಿಸುವತಂಹ ತಾಣಗಳು ಅವರಿಗಿಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಅವರಿಗೆ ಗ್ರಂಥಾಲಯಗಳು, ವಸ್ತು ಸಂಗ್ರಹಾಲಯಗಳು ಇಷ್ಟವಾಗಬಹುದು. ಕೊಲ್ಕತ್ತದಲ್ಲಿರುವ ಭಾರತದ ಮೊದಲ ಹಾಗೂ ಅತಿ ದೊಡ್ಡ ವಸ್ತು ಸಂಗ್ರಹಾಲಯ ಅವರಿಗಿಷ್ಟವಾಗಬಹುದು.

ಚಿತ್ರಕೃಪೆ: ptwo

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಕೊನ್ನೆಮಾರಾ ಈ ವಿಭಾಗದಲ್ಲಿ ಮತ್ತೊಂದು ಆಯ್ಕೆ. ಚೆನ್ನೈ ನಗರದ ಎಗ್ಮೋರ್ ನಲ್ಲಿರುವ 1890 ರಲ್ಲಿ ಸ್ಥಾಪನೆಗೊಂಡ ಈ ಸಾರ್ವಜನಿಕ ಗ್ರಂಥಾಲಯವು ಹಲವು ಬುದ್ಧಿ ಜೀವಿಗಳ, ಅಧ್ಯಯನಕಾರರ ಹಾಗೂ ಸಾಹಿತ್ಯಾಸಾಕ್ತರ ಮನ ತಣಿಸುತ್ತದೆ.

ಚಿತ್ರಕೃಪೆ: SriniG

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಇಲ್ಲಿ ಐತಿಹಾಸಿಕ ಲೇಖನಗಳು, ಸುದ್ದಿ ಪುರಾತನ ಪತ್ರಿಕೆಗಳು, ವೈವಿಧ್ಯಮಯ ಚಿಂತನಶೀಲ ಲೇಖನಗಳು ಹೀಗೆ ಸಾಹಿತ್ಯದ ಭಂಡಾರವನ್ನೇ ಇಲ್ಲಿ ಕಾಣಬಹುದು.

ಚಿತ್ರಕೃಪೆ: Jm.kaarthik

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಇನ್ನೂ ಅಂತಿಮವಾಗಿ ನಿಮ್ಮ ತಂದೆಯು ಆಧ್ಯಾತ್ಮಿಕದೆಡೆ ಒಲವು ಹೊಂದಿದ್ದರೆ, ಸಾಕಷ್ಟು ಆಧ್ಯಾತ್ಮಿಕ ತಾಣಗಳು ಭಾರತದಲ್ಲಿದ್ದು ಅಲ್ಲಿಗೆ ಕರೆದುಕೊಂಡು ಹೋಗಬಹುದು. ಮೊದಲನೇಯದಾಗಿ ಭಾರತದ ಆಧ್ಯಾತ್ಮಿಕ ರಾಜಧಾನಿ ಎಂದು ಕರೆಸಿಕೊಳ್ಳುವ ವರಾಣಾಸಿಗೆ ಕರೆದುಕೊಂಡು ಹೋಗಬಹುದು.

ಚಿತ್ರಕೃಪೆ: Davi1974d

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯ ಇತಿಹಾಸವು ಪ್ರಸ್ತುತ ಜಗತ್ತಿನ ಕೆಲವು ಪ್ರಮುಖ ಧರ್ಮಗಳಿಗಿಂತಲೂ ಹಿಂದಿನದ್ದಾಗಿದೆ.

ಚಿತ್ರಕೃಪೆ: FlickreviewR

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ಹಿಂದೂ ಸಂಪ್ರದಾಯ ಹಾಗೂ ಇತರೆ ಆಚರಣೆಗಳನ್ನು ಅತಿ ಹತ್ತಿರದಿಂದ ನೋಡಬಯಸುವ ಪ್ರತಿಯೊಬ್ಬನೂ ವಾರಣಾಸಿ ನಗರಕ್ಕೊಮ್ಮೆ ಭೇಟಿ ನೀಡುವುದು ಅತಿ ಉತ್ತಮವಾದ ಆಯ್ಕೆ ಎಂದೆ ಹೇಳಬಹುದು. ಸನಾತನ ಹಿಂದೂ ಧರ್ಮದಲ್ಲಿ ಹೇಳಲಾಗಿರುವಂತೆ ಈ ಕ್ಷೇತ್ರವು ಎಷ್ಟೊಂದು ಪುಣ್ಯದಾಯಕವಾಗಿದೆ ಎಂದರೆ ಯಾವೋಬ್ಬ ವ್ಯಕ್ತಿಯು ಇಲ್ಲಿ ಸಾವನ್ನು ಪಡೆದರೆ ಅಥವಾ ಸತ್ತ ವ್ಯಕ್ತಿಯ ಅಂತಿಮ ಕ್ರಿಯೆಯನ್ನು ಇಲ್ಲಿ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ ಮೋಕ್ಷ ಪಡೆಯುತ್ತಾರೆ.

ಚಿತ್ರಕೃಪೆ: Mandy

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ತಂದೆಯಂದಿರು ಇಷ್ಟಪಡುವ ಸ್ಥಳಗಳು:

ರಾಮೇಶ್ವರಂ: ದಕ್ಷಿಣ ಭಾರತದ ನಿವಾಸಿಗಳಿಗೆ ದೇಶದ ದಕ್ಷಿಣ ಭಾಗದಲ್ಲಿರುವ ರಾಮೇಶ್ವರಂ ಪವಿತ್ರ ಕ್ಷೇತ್ರವಾಗಿದೆ. ಸ್ವತಃ ರಾಮನೆ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವನನ್ನು ಆರಾಧಿಸಿದ ಪುಣ್ಯ ಕ್ಷೇತ್ರ ರಾಮೇಶ್ವರಂ. ಹಿಂದೂ ಧರ್ಮದಲ್ಲಿ ಪ್ರಸ್ತಾಪಿಸಲಾಗಿರುವ ಶಿವನ ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ರಾಮೇಶ್ವರಂನಲ್ಲಿರುವ ಶಿವಲಿಂಗವು ಒಂದಾಗಿದ್ದು ಸ್ವತಃ ಶ್ರೀರಮನಿಂದಲೆ ಇದು ಪ್ರತಿಷ್ಠಾಪಿಸಲ್ಪಟ್ಟಿದೆ.

ಚಿತ್ರಕೃಪೆ: wishvam

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X