Search
  • Follow NativePlanet
Share
» »ಬದರಿನಾಥ ಏನು ಮಹತ್ವ, ಏನು ವಿಶೆಷತೆ, ಗೊತ್ತೆ?

ಬದರಿನಾಥ ಏನು ಮಹತ್ವ, ಏನು ವಿಶೆಷತೆ, ಗೊತ್ತೆ?

By Vijay

ಭಾರತದ ಹಲವು ಭಾಗಗಳಲ್ಲಿ ಕಂಡುಬರುವ ಹಲವು ಸ್ಥಳಗಳು ಸಾಕಷ್ಟು ವಿಶೇಷವಗಿವೆ. ಅದರಲ್ಲಿಯೂ ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದ ಅನೇಕ ಸ್ಥಳಗಳು ತಮ್ಮದೆ ಆದ ಹಿನ್ನಿಲೆ, ದಂತಕಥೆಗಳನ್ನು ಹೊಂದಿದ್ದು ಇಂದು ಧಾರ್ಮಿಕ ತಾಣಗಳಾಗಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಭಾರತದ "ದೇವ ಭೂಮಿ" ಎಂದಎ ಕರೆಯಲ್ಪಡುವ ಉತ್ತರಾಖಂಡ ರಾಜ್ಯವು ಸಾಕಷ್ಟು ಮಹತ್ವ ಪಡೆದ ಧಾರ್ಮಿಕ ಆಕರ್ಷಣೆಗಳನ್ನು ಹೊತ್ತು ನಿಂತ, ಹಿಮಾಲಯ ಪರ್ವತಗಳ ಬುಡದಲ್ಲಿ ನೆಲೆಸಿರುವ ಸುಂದರವಾದ ರಾಜ್ಯವಾಗಿದೆ. ಇಲ್ಲಿ ಸಾಕಷ್ಟು ತೀರ್ಥ ಯಾತ್ರಾ ಕ್ಷೇತ್ರಗಳಿರುವುದು ವಿಶೇಷ.

"ಚಾರ್ ಧಾಮ್" ಯಾತ್ರೆ ಕುರಿತು ನಿಮಗೇನಾದರೂ ಗೊತ್ತೆ?

ಹಿಂದುಗಳು ತಮ್ಮ ಜೀವಮಾನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕಾದ ತೀರ್ಥ ಕ್ಷೇತ್ರಗಳ ಪೈಕಿ ಚಾರ್ ಧಾಮ್ ಅಥವಾ ನಾಲ್ಕು ಪವಿತ್ರಧಾಮಗಳೂ ಸಹ ಒಂದು. ಬದರಿನಾಥ, ರಾಮೇಶ್ವರಂ, ದ್ವಾರಕಾ ಹಾಗೂ ಪುರಿ ಇವೆ ಆ ನಾಲ್ಕು ಮಹತ್ವದ ತೀರ್ಥ ಯಾತ್ರಾ ಕ್ಷೇತ್ರಗಳಾಗಿವೆ. ಜೀವನದಲ್ಲಿ ಒಂದೊಮ್ಮೆ ಈ ನಲ್ಕು ಕ್ಷೇತ್ರಗಳ ದರ್ಶನ ಮಾಡಿದರೆ ಸಾಕು ಪ್ರಭುವಿನ ಕೃಪಾ ಕಟಾಕ್ಷ ದೊರೆಯುತ್ತದೆ ಎನ್ನಲಾಗಿದೆ.

ಆದಾಗ್ಯೂ, ಈ ನಾಲ್ಕು ಪವಿತ್ರಧಾಮಗಲ ಪೈಕಿ ಬದರಿನಾಥ ಕ್ಷೇತ್ರವೂ ಸಾಕಷ್ಟು ಮಹತ್ವ ಪಡೆದ ಕ್ಷೇತ್ರವಾಗಿದೆ. ಹಾಗಾದರೆ ಬದರಿನಾಥ ಕ್ಷೇತ್ರದ ಮಹಿಮೆ ಏನು, ಮಹತ್ವ ಏನು, ಯಾವಾಗ ಭೇಟಿ ನೀಡಬಹುದೆಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ.

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಸಂಸ್ಕೃತದಲ್ಲಿ ಬದರಿ ಅಥವಾ ಬದ್ರಿ ಎಂದರೆ ಎಲಚಿ ಕಾಯಿ / ಬೋರೆ ಕಾಯಿ (ಬಾರಿ ಕಾಯಿ) ಎಂದಾಗುತ್ತದೆ. ಕೆಲವು ಪೌರಾಣಿಕ ಉಲ್ಲೇಖಗಳಲ್ಲಿ ಹೇಳಿರುವಂತೆ ಒಂದೊಮ್ಮೆ ಈ ಸ್ಥಳದಲ್ಲಿ ಬೋರೆಕಾಯಿಗಳು ಅತ್ಯಂತ ಹೆಚ್ಚಾಗಿ ಬೆಳೆಯುತ್ತಿದ್ದವಂತೆ. ಹಾಗಾಗಿ ಇದಕ್ಕೆ ಬದರಿ ಅಥವಾ ಬದ್ರಿ ಎಂಬ ಹೆಸರು ಬಂದಿತೆನ್ನಲಾಗಿದೆ.

ಚಿತ್ರಕೃಪೆ: Naresh Balakrishnan

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಅಲ್ಲದೆ ಇಲ್ಲಿರುವ ವಿಷ್ಣುವಿನ ದೇವಾಲಯದಿಂದಾಗಿ ಇದಕ್ಕೆ ಬದರಿನಾಥ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಬದರಿಗಳಿರುವ ನಾಡಿನ ನಾಥ (ಒಡೆಯ) ನಾಗಿ ಬದರಿನಾಥನನ್ನು ಕೊಂಡಾಡಲಾಗುತ್ತದೆ.

ಚಿತ್ರಕೃಪೆ: Drakrana

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಬದರಿನಾಥ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಧಾರ್ಮಿಕ ಮಹತ್ವವಿರುವ ಪಟ್ಟಣವಾಗಿದೆ. ಈ ಪಟ್ಟಣವು ಸಾಕಷ್ಟು ಸಾಹಸಿಮಯ ಟ್ರೆಕ್ ಮಾರ್ಗವಾದ ನೀಲಕಂಠ ಹಾಗೂ ಇತರೆ ರುದ್ರ ರಮಣೀಯ ಪರ್ವತಗಳಿಂದ ಸುತ್ತುವರೆದಿದ್ದು ಸಾಕಷ್ಟು ಪ್ರಕೃತಿವಿಕೋಪಗಳು ಸಂಭವಿಸಬಹುದಾದ ಸ್ಥಳದಲ್ಲಿ ನೆಲೆಸಿದೆ.

ಚಿತ್ರಕೃಪೆ: Guptaele

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಕಥೆಯೊಂದ ಪ್ರಕಾರ, ಆದಿ ಶಂಕರಾಚಾರ್ಯರು ಧರ್ಮ ಪ್ರಸಾರಕ್ಕಾಗಿ ಭಾರತ ಸಂಚರಿಸುವ ಸಂದರ್ಭದಲ್ಲಿ ಈ ಸ್ಥಳಕ್ಕೆ ಬಂದಾಗ ಅಲಕನಂದಾ ನದಿಯಲ್ಲಿ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಒಡಮೂಡಿದ ಬದರಿನಾರಾಯಣನ ವಿಗ್ರಹವು ದೊರೆತಿತ್ತು.

ಚಿತ್ರಕೃಪೆ: Tapuu

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಹೀಗೆ ದೊರೆತ ನಾರಾಯಣನನ್ನು ಅವರು ತಪ್ತ ಕುಂಡ ಎಂಬ ಬಿಸಿ ನೀರಿನ ಬುಗ್ಗೆ ಬಳಿಯಿರುವ ಗುಹೆಯೊಂದರಲ್ಲಿ ಪ್ರತಿಷ್ಠಾಪಿಸಿ ಪ್ರವರ್ಧಮಾನಕ್ಕೆ ಬರುವಂತೆ ಮಾಡಿದ್ದರು. ನಂತರ ಹದಿನೈದನೇಯ ಶತಮಾನದಲ್ಲಿ ಇಲ್ಲಿನ ಗಡ್ವಾಲ್ ಪ್ರಾಂತವನ್ನಾಳುತ್ತಿದ್ದ ಅರಸನು ಈ ವಿಗ್ರಹವನ್ನು ಈಗಿರುವ ದೇವಾಲಯಕ್ಕೆ ಸ್ಥಳಾಂತರಿಸಿದನು.

ಚಿತ್ರಕೃಪೆ: Priyanath

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಮೊದ ಮೊದಲು ಕಡಿಮೆ ಜನರಿಂದ ಭೇಟಿ ನೀಡಲ್ಪಡುತ್ತಿದ್ದ ಈ ಕ್ಷೇತ್ರ ನಂತರದ ದಿನಗಳಲ್ಲಿ ಸಾಕಷ್ಟು ಪ್ರವಾಸಿಗರನ್ನು ಕಾಣಹತ್ತಿತು. ದಾಖಲೆಗಳೆ ಹೇಳುವಂತೆ 1961 ರ ಸಮಯದಲ್ಲಿ ಕೇವಲ 90,676 ಜನರಿಂದ ಭೇಟಿ ನೀಡಲ್ಪಟ್ಟಿದ್ದ ಈ ಕ್ಷೇತ್ರಕ್ಕೆ 2006 ರ ಸಂದರ್ಭದಲ್ಲಿ ಸುಮಾರು 600000 ಜನರು ಭೇಟಿ ನೀಡಿದ್ದಾರೆ!

ಚಿತ್ರಕೃಪೆ: Anubha khare

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಪ್ರಸ್ತುತ ಬದರಿನಾಥ ದೇವಾಲಯವು 50 ಅಡಿಗಳಷ್ಟು ಎತ್ತರವಿರುವ ರಚನೆಯಾಗಿದ್ದು ಬಂಗಾರದ ಪುಟ್ಟ ಗೋಪುರವನ್ನು ಹೊಂದಿದೆ. ಕಲ್ಲುಗಳಿಂದ ನಿರ್ಮಿಸಲಾಗಿರುವ ದೇವಾಲಯವು ಕಮಾನಿನಾಕಾರದ ಕಿಟಕಿಗಳನ್ನು ಹಾಗೂ ಪ್ರವೇಶಿಸಲು ಮೆಟ್ಟಿಲುಗಳನ್ನು ಹೊಂದಿದೆ.

ಚಿತ್ರಕೃಪೆ: Neilsatyam

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ತಮಿಳು ಅಳ್ವರರು ನಮೂದಿಸಿರುವ ದಿವ್ಯ ದೇಸಂನ, ವಿಷ್ಣುವಿಗೆ ಮುಡಿಪಾದ 108 ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿರುವ ಬದರಿನಾಥ ದೇವಾಲಯವು ವೈಷ್ಣವರ ಪ್ರಮುಖ ಯಾತ್ರಾ ಕೇಂದ್ರವಾಗಿ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Mayank.choudha

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ನರ ಹಾಗೂ ನಾರಾಯಣನ ವಿಧ್ಯುಕ್ತ ರೂಪವಾಗಿ ಬದರಿನಾಥನನ್ನು ಆರಾಧಿಸಲಾಗುತ್ತದೆ. ದೇವಾಲಯದ ಕುರಿತು ನಿಖರವಾದ ಮಾಹಿತಿಗಳು ಲಭ್ಯವಿಲ್ಲವಾದರೂ ವೈದಿಕ ಗ್ರಂಥಗಳಲ್ಲಿ ಹೇಳಿರುವಂತೆ ಇದನ್ನು ಬದ್ರಿಕಾ ಆಶ್ರಮ ಎಂದು ಕರೆಯಲಾಗಿದೆ.

ಚಿತ್ರಕೃಪೆ: Greatartistssteal

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಒಂದು ದಂತ ಕಥೆಯ ಪ್ರಕಾರ, ಒಮ್ಮೆ ವಿಷ್ಣು ಲೋಕ ಕಲ್ಯಾಣಾರ್ಥವಾಗಿ ಥುಲಿಂಗ್ ಎಂಬ ಹಿಮಾಲಯ ಪರ್ವತಗಳಲ್ಲಿ ತಪಗೈಯುತ್ತಿರುವಾಗ ಅಲ್ಲಿನ ಮಾಂಸಾಹಾರಿಗಳು ಹಾಗೂ ಅಪವಿತ್ರರನ್ನು ಕುಂಡು ಬೇಸರಗೊಂಡು ಬದರಿ ಸ್ಥಳಕ್ಕೆ ಬಂದು ತಪಗೈಯಲು ಪ್ರಾರಂಭಿಸಿದ.

ಚಿತ್ರಕೃಪೆ: Guptaele

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಆದರೆ ಈ ಸ್ಥಳದಲ್ಲಿ ವಿಷ್ಣುವಿಗೆ ಸಾಕಷ್ಟು ಚಳಿಯುಂಟಾದಾಗ ಲಕ್ಷ್ಮಿ ದೇವಿಯು ಸ್ವತಃ ಜೂಜುಬಿ/ಬೋರೆ ಕಾಯಿಯ ಗಿಡಗಳ ಕಾಡಿನ ರೂಪ ತಳೆದು ವಿಷ್ಣುವನ್ನು ಕಾಯತೊಡಗಿದಳು. ಇದರಿಂದ ಪ್ರಸನ್ನನಾದ ನಾರಾಯಣ ಬದ್ರಿಕಾ ಆಶ್ರಮ ಎಂದು ಕರೆದ.

ಚಿತ್ರಕೃಪೆ: Kp.vasant

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಹೀಗೆ ವೇದಿಕ ಗ್ರಂಥಗಳಲ್ಲಿ ಈ ಸ್ಥಳವು ಎಲಚಿಕಾಯಿಯ ಗಿಡಗಳು ದಟ್ಟವಾಗಿರುವ ಕಾಡಿನಿಂದ ಕೂಡಿತ್ತು ಎಂದು ಹೇಳಿದೆಯಾದರೂ ಇಂದು ಆ ರೀತಿಯ ಗಿಡಗಳನ್ನು ಇಲ್ಲಿ ಕಾಣುವುದಿಲ್ಲ.

ಚಿತ್ರಕೃಪೆ: Aurobindo Ogra

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಅಲ್ಲದೆ ಈ ಬದರಿನಾಥ ಕ್ಷೇತ್ರದ ಕುರಿತು ಪುರಾತನವಾದ ಭಾಗವತ ಪುರಾಣ, ಸ್ಕಂದ ಪುರಾಣ ಹಾಗೂ ಮಹಾಭಾರತಗಳಲ್ಲಿಯೂ ಉಲ್;ಲೇಖಿಸಲಾಗಿರುವುದನ್ನು ಗಮನಿಸಬಹುದಾಗಿದೆ. ಸ್ಕಂದ ಪುರಾಣ ಹೀಗೆ ಉಲ್ಲೇಖಿಸುತ್ತದೆ : ಸ್ವರ್ಗ, ಭೂಮಿ, ನರಕಗಳಲ್ಲಿ ಹಲವು ಪವಿತ್ರ ಸ್ಥಳಗಳಿವೆಯಾದರೂ ಆ ಯಾವ ಪವಿತ್ರ ಸ್ಥಳಗಳು ಬದರಿಯ ಹಾಗಿಲ್ಲ.

ಚಿತ್ರಕೃಪೆ: Drakrana

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ವಿಷ್ಣುವಿನನ್ನು ಆರಾಧಿಸಲಾಗುವ ಪಂಚಬದ್ರಿ ಸ್ಥಳಗಳ ಪೈಕಿ ಒಂದಾಗಿರುವ ಬದರಿನಾಥ ದೇವಾಲಯಕ್ಕೆ ಎಲ್ಲ ವರ್ಗದ, ಸಮುದಾಯದ ಹಿಂದುಗಳು ಅಪಾರ ಭಕ್ತಿ-ಶೃದ್ಧೆಗಳಿಂದ ಭೇಟಿ ನೀಡುತ್ತಾರೆ. ಭಾರತದ ಕೆಲವು ಪ್ರಖ್ಯಾತ ಮಠಗಳಾದ ಮಂತ್ರಾಲಯ ರಾಘವೇಂದ್ರ ಮಠ, ಉಡುಪಿ ಪೇಜಾವರ, ಕಾಶಿ ಮಠ ಹಾಗೂ ಜೀಯಾರ್ ಮಠಗಳ ಶಾಖೆಗಳು ಬದರಿನಾಥ ಕ್ಷೇತ್ರದಲ್ಲಿದೆ.

ಚಿತ್ರಕೃಪೆ: Sksumathy

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಸಾಕಷ್ಟು ಉತ್ಸವಗಳು ಜರುಗುವ ಈ ದೇವಾಲಯದಲ್ಲಿ ಪ್ರಮುಖವಾಗಿ ಗಂಗೆಯು ಭೂಮಿಗೆ ಬಂದದ್ದುದರ ಗೌರವಾರ್ಥವಾಗಿ ಆಚರಿಸಲಾಗುವ ಮಾತಾ ಮೂರ್ತಿ ಕಾ ಮೇಲಾ ಅತ್ಯಂತ ಪ್ರಮುಖವಾಗಿರುತ್ತದೆ. ಸಾಕಷ್ಟು ಭಕ್ತಾದಿಗಳು ಈ ಸಂದರ್ಭದಲ್ಲಿ ಬದರಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಗರ್ಭಗೃಹದ ಬಲಭಾಗದಲ್ಲಿ ನರ-ನಾರಾಯನ ವಿಗ್ರ ಕಾಣಬಹುದು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Redtigerxyz

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಮೇ ದಿಂದ ಅಕ್ಟೋಬರ್ ಸಮಯದಲ್ಲಿ ಬದರಿನಾಥವನ್ನು ತಲುಪಬಹುದಾದರೂ ಮಳೆಗಾಲದ ಸಮಯದಲ್ಲಿ ದೇವಾಲಯ ಮುಚ್ಚಿರುತ್ತದೆ. ಕಾರಾಣ ಇಲ್ಲಿ ಸಾಮಾನ್ಯವಾಗಿ ಸಂಭವಿಸುವ ಪ್ರಕೃತಿ ವಿಕೋಪಗಳು, ಭೂಕುಸಿತಗಳು.

ಚಿತ್ರಕೃಪೆ: Aurobindo Ogra

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಎಲ್ಲರನ್ನು ಬೆರುಗುಗೊಳಿಸುವ ಬದರಿನಾಥ:

ಬದರಿನಾಥಕ್ಕೆ ತೆರಳಲು ದೆಹಲಿ, ಹರಿದ್ವಾರ ಹಾಗೂ ರಿಶಿಕೇಷಗಳು ಪ್ರಮುಖ ಪಟ್ಟಣಗಳಾಗಿವೆ. ಈ ಸ್ಥಳಗಳಿಂದ ಕ್ರಮವಾಗಿ ಬದರಿನಾಥ 525 ಕಿ.ಮೀ, 325 ಕಿ.ಮೀ ಹಾಗೂ 296 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: ASIM CHAUDHURI

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more