Search
  • Follow NativePlanet
Share
» » ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು

ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22 ವರೆಗೆ ಜನಿಸಿದವರು ತುಲಾ ರಾಶಿಯವರಾಗಿರುತ್ತಾರೆ. ತುಲಾ ರಾಶಿಯವರು ಎಲ್ಲರೊಂದಿಗೆ ಬೆರೆಯುವ , ಸಮತೋಲನವನ್ನು ಕಾಪಾಡುವ ಹಾಗೂ ಮನರಂಜನಾಪ್ರಿಯ ವ್ಯಕ್ತಿಗಳಾಗಿರುತ್ತಾರೆ. ತುಲಾ ರಾಶಿಯವರುಗೆ 2018ರಲ್ಲಿ ಪ್ರವಾಸಕ್ಕೆ ಹೋಗಲು ಮುನ್ನಾರ್ ಹಾಗೂ ಕನ್ಯಾಕುಮಾರಿ ಸೂಕ್ತವಾದದ್ದು.

ಟೀ ತೋಟಗಳ ನಾಡು ಮುನ್ನಾರ್

ಟೀ ತೋಟಗಳ ನಾಡು ಮುನ್ನಾರ್

PC: Pradeepvkrishna

ಮುನ್ನಾರ್ ವಿರಾಮ ಕಾಲ ಕಳೆಯುವ ಸ್ಥಳ ಎಂಬುದರ ಜೊತೆಗೆ ಪರಿಸರ ಪ್ರೇಮಿಗಳಿಗೆ ಬೇಕಾಗುವ ಎಲ್ಲಾ ಅಂಶಗಳನ್ನು ತನ್ನೊಳಗೆ ಒಳಗೊಂಡಿದೆ, ಮೇರೆ ಇಲ್ಲದ ಟೀ ತೋಟಗಳು, ಪ್ರಶಾಂತವಾದ ಕಣಿವೆಗಳು, ಏರಿ ಇಳಿದು ಸಾಗಿರುವ ಬೆಟ್ಟಗಳ ಸಾಲು, ಹಿತಕರವಾದ ಭೂಭಾಗಗಳು, ಹಸಿರಿನಿಂದ ಕೂಡಿದ ವನಸಿರಿ, ವಿಪುಲವಾಗಿ ಹರಡಿಕೊಂಡಿರುವ ಪ್ರಾಣಿ ಮತ್ತು ಸಸ್ಯ ಸಂಪತ್ತು, ದಟ್ಟವಾದ ಅರಣ್ಯಗಳು, ವನ್ಯಜೀವಿಧಾಮಗಳು, ಪರಿಮಳಯುಕ್ತವಾದ ಗಾಳಿ ಇವೆಲ್ಲವೂ ನಿಮ್ಮನ್ನು ಕೈಬೀಸಿ ಕರೆಯುತ್ತದೆ.

ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?

ಕೇರಳಕ್ಕೆ ಮನ್ನಣೆ ತಂದುಕೊಟ್ಟ ಮುನ್ನಾರ್

ಕೇರಳಕ್ಕೆ ಮನ್ನಣೆ ತಂದುಕೊಟ್ಟ ಮುನ್ನಾರ್

PC: S barath prabu

ತಮಿಳುನಾಡು ಗಡಿಯಲ್ಲಿರುವ ಮುನ್ನಾರ್ ಪಟ್ಟಣವು ಈ ನೆರೆಯ ರಾಜ್ಯದೊಂದಿಗೆ ಹಲವಾರು ಸಾಂಸ್ಕೃತಿಕ ಕೊಂಡಿಗಳನ್ನು ಉಳಿಸಿಕೊಂಡಿದೆ. ಪರ್ವತಭಾಗಗಳನ್ನು ಹೊಂದಿ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮುನ್ನಾರ್ ಕೇರಳ ರಾಜ್ಯಕ್ಕೆ ವಿಶ್ವದೆಲ್ಲೆಡೆಯಿಂದ ಮನ್ನಣೆ ದೊರೆಯಲು ಬಹುಪಾಲು ಕೊಡುಗೆಯನ್ನು ನೀಡಿದೆ. ಮುನ್ನಾರ್ - ಕೊಡೈಕನಲ್ ರಸ್ತೆಯಲ್ಲಿರುವ ಟಾಪ್ ಸ್ಟೇಷನ್ ತನ್ನ ಸುತ್ತಲಿನ ಪರಿಸರದ ವಿಹಂಗಮ ನೋಟವನ್ನು ಒದಗಿಸುವುದಕ್ಕಾಗಿ ಖ್ಯಾತಿ ಪಡೆದಿದೆ.

ಹೋಮ್‌ ಸ್ಟೇ ಲಭ್ಯವಿದೆ

ಹೋಮ್‌ ಸ್ಟೇ ಲಭ್ಯವಿದೆ

PC: Bino Bose

ಮುನ್ನಾರಿಗೆ ಕೇರಳ ಮತ್ತು ತಮಿಳುನಾಡು ಎರಡು ರಾಜ್ಯಗಳಿಂದಲು ಸುಲಭವಾಗಿ ತಲುಪಬಹುದು. ಪ್ರವಾಸಿಗರು ಇಲ್ಲಿ ಹೋಟೆಲ್, ರೆಸಾರ್ಟುಗಳು, ಹೋಮ್- ಸ್ಟೇ ಮತ್ತು ವಿಶ್ರಾಂತಿ ಗೃಹಗಳಲ್ಲಿ ತಮಗೆ ಬೇಕಾದ ವಾಸ್ತವ್ಯ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ಕನ್ಯಾಕುಮಾರಿ

ಕನ್ಯಾಕುಮಾರಿ

PC: Ajoy Gharami

ಕನ್ಯಾಕುಮಾರಿಯಲ್ಲಿರುವ ದೇವಸ್ಥಾನಗಳು, ಬೀಚ್‌ಗಳು ಸಾಕಷ್ಟು ಯಾತ್ರಾರ್ಥಿಗಳನ್ನು ಮತ್ತು ಮೋಜಿಗೊಸ್ಕರ ಪ್ರಯಾಣಿಸುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿವೇಕಾನಂದ ಬಂಡೆ, ವತ್ತಕೊಟ್ಟೈ ಕೋಟೆ, ಪದ್ಮನಾಭಪುರ ಅರಮನೆ, ತಿರುವಳ್ಳುವರ್ ಪ್ರತಿಮೆ, ಉದಯಗಿರಿ ಕೋಟೆ, ಗಾಂಧಿ ಮ್ಯೂಸಿಯಂ ಇವು ಈ ನಗರದ ಮುಖ್ಯ ಆಕರ್ಷಣೆಗಳಾಗಿವೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಮೋಜಿಗೊಸ್ಕರ ಬರುವ ಪ್ರವಾಸಿಕರಿಗೆ ಕನ್ಯಾಕುಮಾರಿಯಲ್ಲಿರುವ ಬೀಚ್ ಗಳು ಹೆಚ್ಚು ಆಕರ್ಷಣೀಯ ಸ್ಥಳಗಳಾಗಿವೆ. ಸಂಗುತುರಾಯ್ ಬೀಚ್, ತೆಂಗಪತ್ತಿನಮ್ ಬೀಚ್, ಸೋಥಾವಿಲೈ ಬೀಚ್ ಇವುಗಳು ಹತ್ತಿರದಲ್ಲಿರುವ ಬೀಚ್ ಗಳಾಗಿವೆ.

 ಮಿಶ್ರ ಸಂಸ್ಕೃತಿಯನ್ನು ಕಾಣಬಹುದು

ಮಿಶ್ರ ಸಂಸ್ಕೃತಿಯನ್ನು ಕಾಣಬಹುದು

PC: Mdasiquek

ಈ ನಗರ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದವರನ್ನು ಒಳಗೊಂಡಿದ್ದು ಎಲ್ಲ ಧರ್ಮದವರ ಮಿಶ್ರ ಸಂಸ್ಕೃತಿಯನ್ನು ಇಲ್ಲಿ ಕಾಣಬಹುದು. ಕಳೆದ ಕೆಲವು ಶತಮಾನಗಳಿಂದ ತನ್ನ ಸಾಂಸ್ಕೃತಿಕ ಪರಂಪರೆಯ ಮೂಲಕ ಕನ್ಯಾಕುಮಾರಿಯು ಸಾವಿರಾರು ಯಾತ್ರಾರ್ಥಿಗಳನ್ನು ಸೆಳೆಯುತ್ತಿದೆ. ಇಲ್ಲಿನ ಸುಂದರ ಚರ್ಚ್ ಗಳು, ದೇವಸ್ಥಾನಗಳು, ಧಾರ್ಮಿಕ ಸ್ಮಾರಕಗಳು ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಕನ್ಯಾಕುಮಾರಿ ತಲುಪುವುದು ಹೇಗೆ?

ಕನ್ಯಾಕುಮಾರಿ ತಲುಪುವುದು ಹೇಗೆ?

PC: Drsjohn

ತಿರುವನಂತಪುರಂ ಕನ್ಯಾಕುಮಾರಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ, ಬಸ್, ರೈಲುಗಳ ಮೂಲಕ ಕನ್ಯಾಕುಮಾರಿಯನ್ನು ತಲುಪಬಹುದು. ಒಂದೊಮ್ಮೆ ಕನ್ಯಾಕುಮಾರಿಯಲ್ಲಿ ಇಳಿದರೆ ಆಟೋ ಅಥವಾ ಬಸ್ ನ ಮೂಲಕ ಪಟ್ಟಣದಲ್ಲಿ ಸುತ್ತಾಡಬಹುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Mdasiquek

ಕನ್ಯಾಕುಮಾರಿ ನೋಡಲು ಸೂಕ್ತ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ಅವಧಿಯು ಕನ್ಯಾಕುಮಾರಿಯ ಭೇಟಿಗೆ ಸೂಕ್ತವಾದ ಸಮಯವಾಗಿದೆ. ಈ ಸಂದರ್ಭದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಜೂನ್ ನಿಂದ ಆಗಸ್ಟ್ ವರೆಗಿನ ಸಮಯದಲ್ಲಿ ಈ ಪ್ರದೇಶವು ಹೆಚ್ಚಿನ ಪ್ರಮಾಣದ ಮಳೆ ಬರುವುದರಿಂದ ಭೇಟಿಗೆ ಸೂಕ್ತವಲ್ಲ.

Read more about: india travel munnar kanyakumari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X