Search
  • Follow NativePlanet
Share
ಮುಖಪುಟ » ಸ್ಥಳಗಳು » ಕನ್ಯಾಕುಮಾರಿ » ಹವಾಮಾನ

ಕನ್ಯಾಕುಮಾರಿ ಹವಾಮಾನ

ಎಲ್ಲ ಕಾಲದಲ್ಲೂ ಕನ್ಯಾಕುಮಾರಿ ಅಹ್ಲಾದಕರವಾಗಿರುವುದರಿಂದ ಯಾವ ಸಮಯದಲ್ಲಿ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ಹೆಚ್ಚು ವ್ಯತ್ಯಾಸವಿಲ್ಲದಿದ್ದರೂ ಅಕ್ಟೋಬರ್ ನಿಂದ ಮಾರ್ಚ್ ಕನ್ಯಾಕುಮಾರಿಗೆ ಹೋಗಲು ಸೂಕ್ತ ಸಮಯ.

ಬೇಸಿಗೆಗಾಲ

ಇಲ್ಲಿ ಬೇಸಿಗೆಗಾಲ ಮಾರ್ಚ್ ನಿಂದ ಪ್ರಾರಂಭವಾಗಿ ಮೇ ಯಲ್ಲಿ ಮುಗಿಯುತ್ತದೆ. ಈ ಕಾಲದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ವಾತಾವರಣದ ತಾಪಮಾನ 20 ರಿಂದ 35 ಡಿಗ್ರೀ ಯಷ್ಟಿರುತ್ತದೆ. ಪ್ರವಾಸಿಗರು ಬೀಚ್ ಗಳಲ್ಲಿ ಕಾಲಕಳೆಯಬಹುದು.

ಮಳೆಗಾಲ

ಮಳೆಗಾಲ ಜೂನ್ ನಿಂದ ಸೆಪ್ಟೆಂಬರ್ ಕೊನೆಯವರೆಗೆ ಇರುತ್ತದೆ. ಈ ಕಾಲದಲ್ಲಿ ಕಡಿಮೆಯಿಂದ ಹೆಚ್ಚು ಮಳೆ ಸುರಿಯುವುದರ ಜೊತೆಗೆ ಗುಡುಗು ಸಿಡಿಲುಗಳು ಇರುತ್ತವೆ. ಮಳೆಗಾಲವನ್ನು ಇಷ್ಟಪಡುವವರು ಈ ಸಮಯದಲ್ಲಿ ಭೇಟಿ ನೀಡಬಹುದು. ಈ ಸಮಯದಲ್ಲಿ ಕನ್ಯಾಕುಮಾರಿ ಆಕರ್ಷಕವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ಇಲ್ಲಿ ಚಳಿಗಾಲ. ಈ ಸಮಯದಲ್ಲಿ ವಾತಾವರಣ ಚೆನ್ನಾಗಿದ್ದು, ತಾಪಮಾನ 17 ರಿಂದ 32 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಈ ಸಮಯ ಬೀಚ್ನಲ್ಲಿ ಕಳೆಯಲು ಸರಿಯಾದ ಸಮಯ.