Search
  • Follow NativePlanet
Share
» »ಕಲ್ಲಿನ ಕೋಟೆಯ ನಾಡು - ಚಿತ್ರದುರ್ಗ ಪ್ರವಾಸೋದ್ಯಮ

ಕಲ್ಲಿನ ಕೋಟೆಯ ನಾಡು - ಚಿತ್ರದುರ್ಗ ಪ್ರವಾಸೋದ್ಯಮ

ಚಿತ್ರದುರ್ಗವು ಕರ್ನಾಟಕದ ದಕ್ಷಿಣ ಭಾಗಕ್ಕೆ ಸೇರಿದ ಚಿತ್ರದುರ್ಗ ಜಿಲ್ಲೆಯ ಒಂದು ಪಟ್ಟಣವಾಗಿದೆ. ಚಿತ್ರದುರ್ಗ್, ಚಿತ್ತಾಲ್ ದುರ್ಗ್ ಮತ್ತು ಚಿತ್ರಕಲ್ ದುರ್ಗ ಎಂಬ ಅನೇಕ ಹೆಸರನ್ನು ಈ ಪಟ್ಟಣವು ಹೊಂದಿದೆ. ಚಿತ್ರಕಲಾದುರ್ಗಾ ಅಂದರೆ ಆಕರ್ಷಕ ಚಿತ್ರಸದೃಶವಾದ ಕೋಟೆ ಎಂಬ ಪದದಿಂದ ಚಿತ್ರದುರ್ಗದ ಹೆಸರನ್ನು ಪಡೆಯಲಾಗಿದೆ.

ಬೆಂಗಳೂರಿನ ವಾಯುವ್ಯಕ್ಕೆ 202 ಕಿಮೀ ದೂರದಲ್ಲಿರುವ ಚಿತ್ರದುರ್ಗವು ಕಣಿವೆಗಳು, ಮತ್ತು ಬೃಹತ್ ಬಂಡೆಗಳಿಂದ ಆವೃತವಾಗಿದೆ. ಹಿಂದೂ ಮಹಾ ಧರ್ಮಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಈ ಸ್ಥಳದ ಉಲ್ಲೇಖವಿದ್ದು, ಈ ಸ್ಥಳವು ಮೂರನೇ ಸಹಸ್ರಮಾನದ ಹಿಂದಿನಿಂದಲೂ ಇರುವುದಕ್ಕೆ ಇಲ್ಲಿ ಕೆಲವು ಕುರುಹುಗಳನ್ನು ಪುರಾತತ್ವ ಶಾಸ್ತ್ರ ಪರಿಶೋಧಕರಿಂದ ಕಂಡುಹಿಡಿಯಲ್ಪಟ್ಟಿದೆ. ಇಲ್ಲಿರುವ ಕಲ್ಲಿನ ಕೋಟೆಯಿಂದಾಗಿ ಚಿತ್ರದುರ್ಗವು ಜನಪ್ರಿಯವಾಗಿದೆ.

Chitraduraga Fort

ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ಬೆಂಗಳೂರಿನಿಂದ ಪ್ರಯಾಣಿಸಬಹುದಾದ ವಾರಾಂತ್ಯದ ತಾಣಗಳಲ್ಲಿ ಚಿತ್ರದುರ್ಗವೂ ಒಂದು. ಇಲ್ಲಿಯ ಕೆಲವು ಪ್ರವಾಸಿ ಆಕರ್ಷಣೆಗಳೆಂದರೆ ಚಿತ್ರದುರ್ಗ ಕೋಟೆ, ಚಂದ್ರವಳ್ಳಿ ಉದ್ಯಾನಗಳು, ಮಾರಿ ಕಣಿವೆ ಮತ್ತು ಓಬ್ಬವನ ಕಿಂಡಿ.\

ಚಿತ್ರದುರ್ಗವನ್ನು ತಲುಪುವುದು ಹೇಗೆ

ಭಾರತದ ವಿವಿಧ ಪ್ರವಾಸಿ ಸ್ಥಳಗಳಿಂದ ಚಿತ್ರದುರ್ಗವನ್ನು ರಸ್ತೆ, ರೈಲು ಮತ್ತು ವಿಮಾನದ ಮೂಲಕ ತಲುಪಬಹುದು.

ಚಿತ್ರದುರ್ಗದಲ್ಲಿಯ ಹವಾಮಾನ

ಕರ್ನಾಟಕದ ಹೆಚ್ಚಿನ ಸ್ಥಳಗಳಂತೆ, ಚಿತ್ರದುರ್ಗವು ವರ್ಷದ ಹೆಚ್ಚಿನ ಸಮಯದಲ್ಲಿ ಶುಷ್ಕ, ಬಿಸಿ ಉಷ್ಣವಲಯದ ಹವಾಮಾನವನ್ನು ಅನುಭವಿಸುತ್ತದೆ. ಚಿತ್ರದುರ್ಗಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್.

Read more about: chitradurga karnataka bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X