Search
  • Follow NativePlanet
Share
» »ರೋಮಾಂಚನ ಖಾತ್ರಿ ಪಡಿಸುವ ಚೆನ್ನೈನ ರಾತ್ರಿ

ರೋಮಾಂಚನ ಖಾತ್ರಿ ಪಡಿಸುವ ಚೆನ್ನೈನ ರಾತ್ರಿ

By Vijay

ದಕ್ಷಿಣ ಭಾರತದ ಮಹಾನಗರಗಳ ಪೈಕಿ ಚೆನ್ನೈ ಕೂಡ ಒಂದು. ಈ ಮೆಟ್ರೊಪಾಲಿಟನ್ ನಗರಕ್ಕೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಹಗಲಿರುಳೆನ್ನದೆ ಈ ನಗರವು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಮಹಾನಗರವಾಗಿರುವುದರಿಂದ ಚೆನ್ನೈನಲ್ಲಿ ಸುತ್ತಾಡಲು ಬಹಳಷ್ಟು ಸ್ಥಳಗಳಿವೆ. ಚೆನ್ನೈನಲ್ಲಿ ಹಗಲಿಗಿಂತಲೂ ಸಂಜೆ ಅಥವಾ ರಾತ್ರಿಯ ವೇಳೆ ಸುತ್ತಾಡುವುದು ಬಲು ಉತ್ತಮ.

ಗೋ ಐಬಿಬೊದ ಎಲ್ಲ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ

ಜಗಮಗಿಸುವ ಶಾಪಿಂಗ್ ಮಾಲ್ ಗಳು, ವೈಭವೋಪೇತ ಹೋಟೆಲುಗಳು, ಬಣ್ಣ ಬಣ್ಣದ ಪ್ರಕಾಶಗಳಿಂದ ಶೋಭಿಸುವ ವೈವಿಧ್ಯಮಯ ಅಂಗಡಿಗಳು, ಉಲುವಿನಿಂದ ಕೂಡಿರುವ ನಗರ ಪ್ರದೇಶಗಳು, ಉದ್ಯಾನಗಳು, ಜೀವಂತಿಕೆಯುಳ್ಳ ಜೀವನ ಶೈಲಿ ಇವೆಲ್ಲವೂ ಸೇರಿ ಚೆನ್ನೈ ನಗರವನ್ನು ನವವಧುವಿನಂತೆ ಸಿಂಗರಿಸುತ್ತವೆ. ರಾತ್ರಿಯ ಚೆನ್ನೈ ನೋಡುವುದೆ ಒಂದು ಚೆಂದದ ಅನುಭವ.

ವಿಶೇಷ ಲೇಖನ : ಮಹಾನಗರಗಳ ಆಕರ್ಷಕ ರಾತ್ರಿಗಳು

ಚೆನ್ನೈಗೆ ಭೇಟಿ ನೀಡಿದಾಗ, ಒಂದೊಮ್ಮೆ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲು ಸಮಯಾವಕಾಶ ಲಭಿಸದಿದ್ದಾಗ, ಹಾಗೆ ಸುಮ್ಮನೆ ರಾತ್ರಿಯ ಸಮಯದಲ್ಲಿ ಜಾಲಿಯಾಗಿ ನಗರದ ಕೆಲ ಸ್ಥಳಗಳಿಗೊಂದು ಸುತ್ತು ಹಾಕಿ ಬಿಡಿ. ಬೆಳಿಗ್ಗೆ ಕಂಡುಬರುವಂತಹ ಚೆನ್ನೈ ನಗರ ರಾತ್ರಿಯ ಸಮಯದಲ್ಲಿ ಅದೇನೊ ಒಂದು ರೀತಿಯಲ್ಲಿ ಬದಲಾಗಿದೆ ಎಂಬ ಆಭಾಸ ಮೂಡಿಸುತ್ತದೆ.

ವಿಶೇಷ ಲೇಖನ : ತಮಿಳುನಾಡಿನ ಜನಪ್ರೀಯ ಪ್ರವಾಸಿ ಆಕರ್ಷಣೆಗಳು

ಚೆನ್ನೈಗೆ ಹೊರಡಲು ಇರುವ ಆಯ್ಕೆಗಳ ಕುರಿತು ಇಲ್ಲಿ ಕ್ಲಿಕ್ ಮಾಡಿ ಹಾಗೂ ಚೆನ್ನೈನಲ್ಲಿ ತಂಗಬಹುದಾದ ಉತ್ತಮ ಹೋಟೆಲುಗಳ ವಿವರ ಇಲ್ಲಿ ಪಡೆಯಿರಿ. ಈಗ ಸ್ಲೈಡುಗಳ ಮೂಲಕ ರಾತ್ರಿಯಲ್ಲಿ ಕಂಡುಬರುವ ಚೆನ್ನೈ ನಗರದ ವೈಯಾರವನ್ನು ನಿಮ್ಮ ಕಣ್ಣಾರೆ ನೋಡಿ ಆನಂದಿಸಿ.

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನಗರವು ಮೊದಲೆ ಮಳೆಗೆ ಅಪಾರವಾದ ಖ್ಯಾತಿ ಗಳಿಸಿದೆ. ಒಂದೊಮ್ಮೆ ಮಳೆಗಾಲ ಪ್ರಾರಂಭವಾದರೆ ಸಾಕು ನಗರವು ಎಲ್ಲೆಲ್ಲೂ ನೀರಿನಲ್ಲೆ ಮೈತೊಳೆದುಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ನಗರದಲ್ಲಿ ಕೆಲ ಬೈಕು ಸವಾರರು ತಮ್ಮ ಚಾಲನಾ ಕೌಶಲ್ಯವನ್ನು ಪರೀಕ್ಷೆಗೆ ಒಡ್ಡುತ್ತಾರೆ. ಮಳೆಯ ಒಂದು ರಾತ್ರಿಯಲ್ಲಿ ರೋಮಾಂಚನಗೊಳಿಸುವ ರೈಡ್.

ಚಿತ್ರಕೃಪೆ: Vinoth Chandar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಮಳೆಯ ಸಂದರ್ಭದಲ್ಲಿ ಚೆನ್ನೈ ರಸ್ತೆಗಳು ಜಗಮಗಿಸ ತೊಡಗುತ್ತವೆ. ದೀಪಗಳ ಪ್ರತಿಫಲನಗಳು ರಸ್ತೆಯ ಮೇಲೆ ನಡೆಯುವಾಗ ರೋಮಾಂಚನಗೊಳಿಸುತ್ತವೆ. ಮಳೆಯಲ್ಲಿ ನೆನೆದ ರಸ್ತೆಯೊಂದರ ಮೇಲೆ ದಂಪಗಳಿಬ್ಬರ ಹಾಯಾದ ನಡಿಗೆ.

ಚಿತ್ರಕೃಪೆ: Vinoth Chandar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನ ಮರೀನಾ ಕಡಲ ತೀರದಲ್ಲಿ ಗ್ರಾಹಕರಿಗಾಗಿ ಕಾಯುತ್ತ ನಿಂತಿರುವ ಐಸ್ ಕ್ರೀಮ್ ವ್ಯಾಪಾರಿ.

ಚಿತ್ರಕೃಪೆ: Vinoth Chandar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ದೀಪಾವಳಿ ಹಬ್ಬವನ್ನು ದೇಶದ ಇತರೆಡೆಯಂತೆ ಚೆನ್ನೈನಲ್ಲೂ ಸಹ ಬಲು ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಚೆನ್ನೈ ನಗರವು ರಾತ್ರಿಯಲ್ಲಿ ಎಲ್ಲಿಲ್ಲದ ಜೀವ ಕಳೆ ಪಡೆಯುತ್ತದೆ. ಆಗಸದಲ್ಲಿ ಚಿತ್ತಾರ ಮೂಡಿಸುವ ಬಾಣ ಬಿರುಸುಗಳ ನರ್ತನ ನೋಡಲು ಮನಮೋಹಕವಾಗಿರುತ್ತದೆ.

ಚಿತ್ರಕೃಪೆ: Vinoth Chandar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ದೀಪಾವಳಿ ಸಮ್ದರ್ಭದಲ್ಲಿ ಚೆನ್ನೈನ ಸಾಕಷ್ಟು ವಸತಿ ಪ್ರದೇಶಗಳು ಪ್ರಕಾಶಮಾನವಾಗಿ ಬೆಳಗುತ್ತವೆ. ಹಬ್ಬದ ಒಂದು ಸಂದರ್ಭದಲ್ಲಿ ನಗರದ ಒಂದು ಮನೆಯ ಛಾವಣಿ ದೀಪಗಳಿಂದ ಆವೃತವಾಗಿರುವ ನೋಟ.

ಚಿತ್ರಕೃಪೆ: Vinoth Chandar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ನೇಪಿಯರ್ ಸೇತುವೆ ಚೆನ್ನೈ ನಗರದ ಗುರುತರವಾದ ಆಕರ್ಷಣೆ. ಮದ್ರಾಸ್ ವಿಶ್ವವಿದ್ಯಾಲಯದ ಬಳಿ ನೆಲೆಸಿರುವ ಈ ಸೇತುವೆಯು 1869 ರಲ್ಲಿ ಅಂದಿನ ಮದ್ರಾಸ್ (ಚೆನ್ನೈ) ಗವರ್ನರ್ ಆಗಿದ್ದ ಫ್ರಾನ್ಸಿಸ್ ನೇಪಿಯರ್ ರಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: vishwaant avk

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಕೂವಂ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯು ಸೇಂಟ್ ಜಾರ್ಜ್ ಕೋಟೆಯನ್ನು ಮರೀನಾ ಕಡಲ ತೀರದೊಂದಿಗೆ ಬೆಸೆಯುತ್ತದೆ. ದೀಪಗಳಿಂದ ಅಲಂಕೃತವಾದಾಗ ಈ ಸೇತುವೆಯು ನೋಡಲು ಬಹಳ ಆಕರ್ಷಕವಾಗಿರುತ್ತದೆ.

ಚಿತ್ರಕೃಪೆ: Ashokarsh

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಅನ್ನಾ ನಗರದಲ್ಲಿರುವ ಉದ್ಯಾನ. ನಿತ್ಯ ಈ ಉದ್ಯಾನಕ್ಕೆ ವಿಹಾರಾರ್ಥವಾಗಿ ನೂರಾರು ಜನರು ಭೇಟಿ ನೀಡುತ್ತಾರೆ. ವಿರಾಮದ ಸಮಯವನ್ನು ಕಳೆಯಲು ಈ ಉದ್ಯಾನವು ಆದರ್ಶಮಯ ತಾಣವಾಗಿದೆ.

ಚಿತ್ರಕೃಪೆ: Vaikoovery

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಅನ್ನಾನಗರ ಉದ್ಯಾನದಲ್ಲಿರುವ ಅನ್ನಾನಗರ ವೀಕ್ಷಣಾ ಗೋಪುರ. ಗೋಪುರದ ತುದಿಯವರೆಗೂ ತಲುಪಲು ಮೆಟ್ಟಿಲುಗಳಿದ್ದು ಅಲ್ಲಿಂದ ಬಡಾವಣೆಯ ಸುಂದರ ನೋಟವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Acvasagam

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನ ಅನ್ನಾ ಸಲೈ ಪ್ರದೇಶದಲ್ಲಿರುವ ಎಲ್ ಐ ಸಿ ಕಚೇರಿಯ ಅದ್ಭುತ ಕಟ್ಟಡ. ರಾತ್ರಿಯ ಸಮಯದಲ್ಲಿ ಇದು ಇನ್ನಷ್ಟು ಚೆಂದವಾಗಿ ಕಾಣುತ್ತದೆ.

ಚಿತ್ರಕೃಪೆ: Arjuncm3

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ಬಳಿಯಿರುವ ಮಂದಾವೇಲಿ ಎಂಬ ಪ್ರದೇಶದಲ್ಲಿರುವ ರಾಮಕೃಷ್ಣ ಮಠ. ಇದು ಈ ಪ್ರದೇಶದ ಪ್ರಮುಖ ಹೆಗ್ಗುರುತಾಗಿದೆ.

ಚಿತ್ರಕೃಪೆ: Aravind Sivaraj

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಐಲ್ಯಾಂಡ್ ಗ್ರೌಂಡ್ ಅಥವಾ ನಡುಗಡ್ಡೆಯ ಮೈದಾನ ಪ್ರದೇಶವು ಚೆನ್ನೈ ನಗರದ ಕೂವಂ ನದಿಯಲ್ಲಿ ಕೃತಕವಾಗಿ ನಿರ್ಮಿಸಲಾದ ದ್ವೀಪ ಪ್ರದೇಶವಾಗಿದೆ. ಮನರಂಜನಾ ಪ್ರದರ್ಶನಗಳು, ಇತರೆ ಹಲವಾರು ದೊಡ್ಡ ಪ್ರಮಾಣದ ಸಭೆ, ಕಾರ್ಯಕ್ರಮಗಳನ್ನು ಇಲ್ಲಿರುವ ದೊಡ್ಡದಾದ ಖಾಲಿ ಪ್ರದೇಶದಲ್ಲಿ ವರ್ಷಪೂರ್ತಿ ಆವಾಗಾವಾಗ ಆಯೋಜಿಸಲಾಗುತ್ತಿರುತ್ತದೆ.

ಚಿತ್ರಕೃಪೆ: Prinzy555

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ಸೆಂಟ್ರಲ್ ಅಥವಾ ಚೆನ್ನೈ ಕೇಂದ್ರ ರೈಲು ನಿಲ್ದಾಣದ ಕಟಡ. ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ.

ಚಿತ್ರಕೃಪೆ: Wikitom2

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಚಿತ್ರಕೃಪೆ: L.vivian.richard

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ನೇಪಿಯರ್ ಸೇತುವೆಯ ಮೇಲಿನಿಂದ ಕಂಡುಬರುವ ಚೆನ್ನೈ ನಗರದ ಒಂದು ಭಾಗಶಃ ನೋಟ.

ಚಿತ್ರಕೃಪೆ: vishwaant avk

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನ ಮೈಲಾಪೋರ್ ಪ್ರದೇಶದಲ್ಲಿರುವ ಪ್ರಖ್ಯಾತ ಕಪಾಲೀಶ್ವರರ್ ಶಿವನ ದೇವಸ್ಥಾನ ಗೋಪುರ.

ಚಿತ್ರಕೃಪೆ: Vinoth Chandar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಸಂಜೆಯ ಹೊತ್ತಲ್ಲಿ ರಾತ್ರಿಯ ಸಮಯ ಕಾಯುತ್ತ ಮಿಣ ಮಿಣನೆ ಮೀನುಗಲು ಪ್ರಾರಂಭವಾಗುತ್ತಿರುವ ಕಪಾಲೀಶ್ವರರ್ ದೇವಸ್ಥಾನದ ಆವರಣ.

ಚಿತ್ರಕೃಪೆ: Vinoth Chandar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದಲ್ಲಿರುವ ಪ್ರಸಿದ್ಧ ಸ್ಯಾಂಥೋಮ್ ಬೆಸಿಲಿಕಾ ಚರ್ಚ್.

ಚಿತ್ರಕೃಪೆ: Vinoth Chandar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನ ಪ್ರಖ್ಯಾತ ವಿವೇಕಾನಂದ ಹೌಸ್. ಇದು ದಕ್ಷಿಣದಲ್ಲಿ ರಾಮಕೃಷ್ಣ ಚಳುವಳಿಯ ಪ್ರಮುಖ ಕೇಂದ್ರವಾಗಿದೆ.

ಚಿತ್ರಕೃಪೆ: SriniG

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಹಾಗೂ ಸಂಗೀತೋತ್ಸವಗಳು ಆಗಾಗ ಚೆನ್ನೈ ನಗರಗಳಲ್ಲಿ ಆಯೋಜನೆಗೊಳ್ಳುವುದು ಸಾಮಾನ್ಯ. ಅದೃಷ್ಟವಿದ್ದರೆ ನೀವು ನಗರಕ್ಕೆ ಭೇಟಿ ನೀಡಿದಾಗಲೂ ಜರುಗಬಹುದು. ಸಂಗೀತ ಕಾರ್ಯಕ್ರಮವೊಂದು ಚೆನ್ನೈ ನಗರದಲ್ಲಿ ಆಯೋಜನಗೊಂಡಿದ್ದ ಒಂದು ಸಂದರ್ಭ.

ಚಿತ್ರಕೃಪೆ: Sudhamshu Hebbar

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರ ಪ್ರದೇಶದಿಂದ 30 ಕಿ.ಮೀ ಗಳಷ್ಟು ದೂರದಲ್ಲಿರುವ ಮುಟ್ಟುಕಾಡು ಬೋಟಿಂಗ್ ತಾಣ. ಇದೊಂದು ಬಂಗಾಳ ಕೊಲ್ಲಿ ಸಮುದ್ರದ ಹಿನ್ನೀರಿನ ಪ್ರದೇಶವಾಗಿದ್ದು ವೇಗದ ದೋಣಿ ವಿಹಾರಗಳಿಗೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: J'ram DJ

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನ ಬ್ರಾಡ್ ವೇ ಪ್ರದೇಶದ ಮಿಂಟ್ ಸ್ಟ್ರೀಟ್ ನಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್.

ಚಿತ್ರಕೃಪೆ: Surajram Kumaravel

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನ ವೇಲಾಚೇರಿ ರೈಲು ನಿಲ್ದಾಣದ ಬಳಿಯ ಸುಂದರ ನೋಟ.

ಚಿತ್ರಕೃಪೆ: Vasanth Mohan

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈ ನಗರದ ವಿಶಿಷ್ಟ ರಾತ್ರಿಗಳು:

ಚೆನ್ನೈನಗರದ ಒಂದು ಬಡಾವಣೆಯ ಕಣ್ಣಾ ಬಾಗ್. ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಕಂಡು ಬರುವ ರೀತಿ.

ಚಿತ್ರಕೃಪೆ: Aleksandr Zykov

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X