Search
  • Follow NativePlanet
Share
» »ಬೆಂಗಳೂರು ಇಡೀ ವಿಶ್ವದಲ್ಲೇ ತುಂಬಾ ಅಗ್ಗದ ನಗರವಂತೆ, ಹೌದಾ !

ಬೆಂಗಳೂರು ಇಡೀ ವಿಶ್ವದಲ್ಲೇ ತುಂಬಾ ಅಗ್ಗದ ನಗರವಂತೆ, ಹೌದಾ !

PC:Jin Kemoole

ನಮ್ಮ ದೇಶದಲ್ಲಿ ಜೀವನ ಸಾಗಿಸಲು ಯೋಗ್ಯವಾದ ಅಗ್ಗದ ನಗರ ಯಾವುದು ಎಂದು ನಿಮ್ಮನ್ನುನೀವೇ ಪ್ರಶ್ನೆ ಹಾಕಿಕೊಂಡರೆ ಯಾವುದಾದರೂ ಸಣ್ಣ ಪುಟ್ಟ ಹಳ್ಳಿಯೋ, ನಗರವನ್ನೋ ಹೇಳುತ್ತೀರೇನೋ, ಆದರೆ ಅಗ್ಗದ ನಗರಗಳಲ್ಲಿ ಬೆಂಗಳೂರು ಇದ್ಎ ಅಂದರೆ ನೀವು ನಂಬುತ್ತೀರಾ? ನಹುತೇಕರು ನಂಬೋದಿಲ್ಲ, ಆದರೆ ಈಗ ನಂಬಲೇ ಬೇಕು. 2019 ರ ಎಕಾನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್‌ ನಡೆಸಿದ ಸರ್ವೇ ಪ್ರಕಾರ ಪ್ರಪಂಚದಲ್ಲಿ ಜೀವನ ನಡೆಸಲು ಯೋಗ್ಯವಾದ ನಗರಗಳಲ್ಲಿ ಭಾರತದ ಈ ಮೂರು ನಗರಗಳು ಬೆಸ್ಟ್ ಅಂತೆ. ಅವುಗಳೆಂದರೆ ದೆಹಲಿ, ಚೆನ್ನೈ ಹಾಗೂ ಬೆಂಗಳೂರು.

ದೇಶದ ಅಗ್ಗದ ನಗರ

ದೇಶದ ಅಗ್ಗದ ನಗರ

ಅಯ್ಯೋ, ಬೆಂಗಳೂರು ಜೀವನ ನಡೆಸಲು ಯೋಗ್ಯವಾದ ಸ್ಥಳನಾ ಅಂತ ನೀವು ಶಾಕ್ ಆಗಬಹುದು. ಇಲ್ಲಿ ಪ್ರತಿಯೊಂದರ ಬೆಲೆಯೂ ಅಧಿಕ. ಕುಡಿಯುವ ನೀರಿನಿಂದ ಹಿಡಿದು ಪ್ರತಿಯೊಂದಕ್ಕೂ ಹಣ ಖರ್ಚು ಮಾಡಬೇಕು. ಮನೆ ಬಾಡಿಗೆಯೂ ಸಿಕ್ಕಾಪಟ್ಟೆ ಇದೆ. ಹೀಗಿರುವಾಗ ಬೆಂಗಳೂರು ಹೇಗೆ ಅಗ್ಗದ ನಗರವಾಗಲು ಸಾಧ್ಯ ಎಂದು ನೀವು ಚಿಂತಿಸೋದು ಸಹಜ. ಆದರೆ ಈ ಸರ್ವೇ ಪ್ರಕಾರ ಬೆಂಗಳೂರು ಇತರ ನಗರಗಳಿಗೆ ಹೋಲಿಸಿದರೆ ಅಗ್ಗದ ನಗರವಂತೆ.

ವಿಶ್ವದ ಅಗ್ಗದ ನಗರಗಳು

ವಿಶ್ವದ ಅಗ್ಗದ ನಗರಗಳು

ವಿಶ್ವದ ಅಗ್ಗದ ನಗರಗಳ ಪಟ್ಟಿಯಲ್ಲಿ ಕಾರಾಕಾಸ್ (ವೆನೆಜುವೆಲಾ), ಡಮಾಸ್ಕಸ್ (ಸಿರಿಯಾ), ತಾಷ್ಕೆಂಟ್ (ಉಜ್ಬೇಕಿಸ್ತಾನ್), ಅಲ್ಮಾಟಿ (ಕಜಾಕ್ಸ್ತಾನ್), ಕರಾಚಿ (ಪಾಕಿಸ್ತಾನ), ಲಾಗೋಸ್ (ನೈಜೀರಿಯಾ), ಬ್ಯೂನಸ್ ಐರ್ಲೆಂಡ್ (ಅರ್ಜೆಂಟೀನಾ) ಮತ್ತು ಭಾರತೀಯ ಮೂರು ನಗರಗಳಾದ ಚೆನ್ನೈ , ದೆಹಲಿ ಮತ್ತು ಬೆಂಗಳೂರು ಸೇರಿದೆ.

ವಾರ್ಷಿಕ ಸಮೀಕ್ಷೆ

ಸಿಎನ್ಎನ್ ಹೇಳುವ ಪ್ರಕಾರ ವಾರ್ಷಿಕ ಸಮೀಕ್ಷೆ ಹೇಳುತ್ತದೆ. ಇದು ಜಗತ್ತಿನಾದ್ಯಂತದ 133 ನಗರಗಳಲ್ಲಿ 150 ಕ್ಕಿಂತಲೂ ಹೆಚ್ಚಿನ ವಸ್ತುಗಳ ಬೆಲೆಯನ್ನು ಮೌಲ್ಯಮಾಪನ ಮಾಡಿದೆ. ಅದರಲ್ಲಿ ದೆಹಲಿ, ಬೆಂಗಳೂರು, ಚೆನ್ನೈ ಜೀವನ ನಡೆಸಲು ಯೋಗ್ಯವಾದ ನಗರವಾಗಿದೆ. ಅಂದರೆ ಇಲ್ಲಿ ವಸ್ತುವಿನ ಬೆಲೆಗಳು ಕಡಿಮೆ ಇದೆ, ಜೊತೆಗೆ ಆರಾಮವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸಬಹುದು.

ದೆಹಲಿಯು ಮುಂಬೈಗಿಂತಲೂ ಅಗ್ಗವಾಗಿದೆ

ದೆಹಲಿಯ ಸ್ಥಳೀಯ ಮಾರುಕಟ್ಟೆಗಳಿಗೆ ನೀವು ಬರಬಹುದು. ದೆಹಲಿಯಲ್ಲಿ ವಿವಿಧ ಪ್ರಸಿದ್ಧ ಮತ್ತು ಅಗ್ಗದ ಮಾರುಕಟ್ಟೆಗಳಿವೆ. ದೆಹಲಿಯಲ್ಲಿ ಚೊರ್ ಬಜಾರ್, ಚಾಂದನಿ ಚೌಕ್, ಸರೋಜಿನಿ ಮಾರ್ಕೇಟ್‌ನಲ್ಲಿ ನಿಮಗೆ ಬೇಕಾದಂತಹ ವಸ್ತುಗಳೆಲ್ಲಾ ಕಡಿಮೆ ಬೆಲೆಗೆ ಸಿಗುತ್ತದೆ. ಮುಂಬೈನಲ್ಲೂ ಹಲವಾರು ಅಗ್ಗದ ಮಾರುಕಟ್ಟೆಗಳಿವೆ, ಆದರೆ ದೆಹಲಿಯಷ್ಟು ಅಗ್ಗವಾಗಿಲ್ಲ. ಕಮಲಾ ನಗರ್ ಉತ್ತಮ್ ನಗರ, ಪಟೇಲ್ ನಗರ್, ಅಶೋಕ್ ವಿಹಾರ ಮುಂತಾದವುಗಳು ದೆಹಲಿಯಲ್ಲಿ ವಾಸಕ್ಕೆ ಯೋಗ್ಯವಾದ ಸ್ಥಳಗಳಾಗಿವೆ. ಇಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ದೊರೆಯುತ್ತವೆ. ಕುತುಬ್ ಮಿನಾರ್, ಸೆಂಗೊಟ್ಟೈ, ಇಂಡಿಯಾ ಗೇಟ್. ಲೋಟಸ್ ಟೆಂಪಲ್ ಮತ್ತು ಅಕ್ಷರಧಾಮ ದೇವಸ್ಥಾನವು ಈ ಪ್ರದೇಶದ ಪ್ರಮುಖ ಆಕರ್ಷಣೆಗಳಾಗಿವೆ.

ಚೆನ್ನೈ

ಚೆನ್ನೈ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ಮಲಯಾಳಿಗಳ ಎರಡನೇ ಮನೆಯಾಗಿದೆ. ಶಿಕ್ಷಣ, ಉದ್ಯಮ ಮತ್ತು ವ್ಯವಹಾರದಲ್ಲಿಯಶಸ್ಸು ಸಾಧಿಸಿರುವ ಚೆನ್ನೈ ಬ್ರಿಟಿಷ್ ಕಾಲದಲ್ಲಿ ದೊಡ್ಡ ನಗರವಾಗಿ ಬೆಳೆಯಿತು. ಬ್ರಿಟೀಷರ ಕಾಲದಲ್ಲಿ ಇದನ್ನು ಬಂದರುಗಳಾಗಿ ಪರಿವರ್ತಿಸಲಾಯಿತು. ಚೆನ್ನೈ ಎಲ್ಲ ರೀತಿಯ ವೀಕ್ಷಣೆಗಳಿಗೆ ನೆಲೆಯಾಗಿದೆ. ದೇವಾಲಯಗಳು, ತೀರ್ಥಯಾತ್ರೆಗಳು, ವಸ್ತು ಸಂಗ್ರಹಾಲಯಗಳು ಮತ್ತು ಕಡಲ ತೀರಗಳನ್ನು ಕಣ್ತುಂಬಿಸಿಕೊಳ್ಳಬಹುದು. ಮಹಾಬಲಿಪುರಂ ಮತ್ತು ಸಾರ್ವಜನಿಕ ವಸ್ತು ಸಂಗ್ರಹಾಲಯ, ಮರೀನಾ ಬೀಚ್, ಸಂತೋಮ್ ಬೆಸಿಲಿಕಾ ಮತ್ತು ಮೈಲಾಪೊರ್ ಇಲ್ಲಿನ ಅದ್ಭುತವಾದ ತಾಣಗಳಾಗಿವೆ.

ಬೆಂಗಳೂರು

ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರನ್ನು ಸಿಲಿಕಾನ್ ಸಿಟಿ ಎಂದೂ ಕರೆಯುತ್ತಾರೆ. ಸಾಕಷ್ಟು ಹೊರರಾಜ್ಯದ ಜನರು ಉದ್ಯೋಗವನ್ನರಸಿ ಬೆಂಗೂರಿಗೆ ಆಗಮಿಸುತ್ತಾರೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡುವುದು ಬಹಳಷ್ಟು ಜನರ ಕನಸು. ಬೆಂಗಳೂರಿನ ವಾತಾವರಣವೂ ಅಷ್ಟೇ ಪ್ರತಿಯೊಬ್ಬರನ್ನು ತನ್ನತ್ತ ಆಕರ್ಷಿಸುತ್ತದೆ. ಕಬ್ಬನ್ ಪಾರ್ಕ್, ಲಾಲ್‌ಬಾಗ್, ಇಸ್ಕಾನ್ ಟೆಂಪಲ್, ಪಿರಮಿಡ್ ವ್ಯಾಲಿ ಇವೆಲ್ಲಾ ಬೆಂಗಳೂರಿನಲ್ಲಿ ನೋಡಲೇ ಬೇಕಾದ ಸ್ಥಳಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X