Search
  • Follow NativePlanet
Share
» »ಬೃಹದೀಶ್ವರ ದೇವಾಲಯ -ಜೀವಂತವಾಗಿರುವ ಚೋಳ ದೇವಾಲಯ

ಬೃಹದೀಶ್ವರ ದೇವಾಲಯ -ಜೀವಂತವಾಗಿರುವ ಚೋಳ ದೇವಾಲಯ

By Manjula Balaraj Tantry

11ನೇ ಶತಮಾನದಲ್ಲಿ ನಿರ್ಮಿಸಲಾದ ತಂಜಾವೂರಿನ ಬೃಹದೀಶ್ವರ ದೇವಾಲಯವು ಚೋಳ ವಾಸ್ತುಶಿಲ್ಪ ಕಲೆಗೆ ಒಂದು ನಿದರ್ಶನವಾಗಿದೆ. ನೀವು ಕಲೆ ವಾಸ್ತುಶಿಲ್ಪ ಮತ್ತು ಇತಿಹಾಸಗಳನ್ನು ಅರಿಯುವ ಉತ್ಸಾಹಿಗಳಾಗಿದ್ದಲ್ಲಿ, ನೀವು ಖಂಡಿತವಾಗಿಯೂ ತಂಜಾವೂರಿನ ಬೃಹದೀಶ್ವರ ದೇವಾಲಯಕ್ಕೆ ಭೇಟಿ ಕೊಡಲೇಬೇಕು. ಗ್ರಾನೈಟ್ ನಲ್ಲಿ ಕೆತ್ತಲಾದ ಸುಂದರವಾದ ಶಿಲ್ಪಗಳು ,ಮತ್ತು ಫ್ರೆಸ್ಕೋ ವರ್ಣ ಚಿತ್ರಗಳು ಪ್ರಬಲ ಚೋಳರ ಅವಧಿಯ ಕಥೆಗಳನ್ನು ಹೇಳುತ್ತದೆ ಮತ್ತು ಛಾಯಾಚಿತ್ರಗ್ರಾಹಕರಿಗೆ ಇಲ್ಲಿ ಒಂದು ನಿಧಿಯಂತೆಯೇ ಇದೆ.

ತಂಜಾವೂರಿನ ಬೃಹದೀಶ್ವರ ದೇವಸ್ಥಾನವು ಚೋಳ ವಾಸ್ತುಶಿಲ್ಪದ ಒಂದು ನಿದರ್ಶನವೆಂಬಂತಿದೆ. ಈ ದೇವಾಲಯದ ಜೊತೆಗೆ ಐರಾವತೇಶ್ವರ ದೇವಾಲಯ ಮತ್ತು ಗಂಗೈಕೊಂಡ ಚೋಳಪುರಂ ದೇವಾಲಯಗಳ ಭವ್ಯತೆಗಾಗಿ ಚೋಳರ ದೇವಾಲಯದ ಹೆಸರನ್ನು ನೀಡಲಾಗಿದೆ ಮತ್ತು ಇವು ಗೌರವಾನ್ವಿತ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಒಂದು ಭಾಗವೆನಿಸಿದೆ.

ಈ ಭವ್ಯವಾದ ವಾಸ್ತುಶಿಲ್ಪ ತಾಣವು ಚೋಳ ಸಾಮ್ರಾಜ್ಯದ ವಿಸ್ತಾರವಾದ ವಾಸ್ತುಶಿಲ್ಫ ಶೈಲಿಯ ಬೆಳವಣಿಗೆಯನ್ನು ತೋರಿಸುತ್ತದೆ. ಇದನ್ನು ಗ್ರಾನೈಟ್ ನಲ್ಲಿ ನಿರ್ಮಿಸಲಾಗಿದೆ ಮತ್ತು ಗರ್ಭಗುಡಿಯ ಮೇಲಿರುವ ಗೋಪುರವು (ವಿಮಾನ ) ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡದಾಗಿದ್ದು ಇದರ ಜೊತೆಗೆ ಬೃಹತ್ ಪ್ರಾಕಾರದಲ್ಲಿ (ಕಾರಿಡಾರ್) ಭಾರತದ ಅತೀ ದೊಡ್ಡ ಶಿವಲಿಂಗವನ್ನು ಹೊಂದಿದೆ. ಈ ದೇವಾಲಯದಲ್ಲಿ ಹಿತ್ತಾಳೆಯ ನಟರಾಜನ ವಿಗ್ರಹವನ್ನು ನಿಯೋಜಿಸಲಾಗಿದೆ.

ಬೃಹದೀಶ್ವರ ದೇವಾಲಯವನ್ನು 11ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದರ ರಚನೆಯು ಮುಖ್ಯ ಗೋಪುರ, ಗರ್ಭಗುಡಿಗಳು, ಫೆಸ್ಕೋ ವರ್ಣಚಿತ್ರಗಳು, ಶೈವ, ಶಕ್ತಿ, ಮತ್ತು ವೈಷ್ಣವ ಧರ್ಮಕ್ಕೆ ಸಂಭಂಧಿಸಿದ ಶಾಸನಗಳು ಮತ್ತು ಶಿಲ್ಪಗಳನ್ನು ಹೊಂದಿದೆ.

ಬೃಹದೀಶ್ವವರ ದೇವಾಲಯವನ್ನು ಭೇಟಿ ಮಾಡಲು ಉತ್ತಮ ಸಮಯ

ಬೃಹದೀಶ್ವವರ ದೇವಾಲಯವನ್ನು ಭೇಟಿ ಮಾಡಲು ಉತ್ತಮ ಸಮಯ

PC: wikimedia.org

ಬೇಸಿಗೆಯಲ್ಲಿ ಬಿಸಿ ಮತ್ತು ಸೆಖೆಭರಿತ ವಾತಾವರಣವನ್ನು ಹೊಂದಿರುವುದರಿಂದ ಮಾನ್ಸೂನ್ ಸಮಯದಲ್ಲಿ ಇಲ್ಲಿ ಸ್ವಲ್ಪ ಮಳೆ ಬರುವುದರಿಂದ ಈ ಬಿಸಿಯಿಂದ ಸ್ವಲ್ಪ ತಪ್ಪಿಸಿಕೊಳ್ಳಬಹುದು ಆದುದರಿಂದ ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಚಳಿಗಾಲದಲ್ಲಿ.

ಚಳಿಗಾಲವು ಇಲ್ಲಿ ತಂಪಾಗಿ ಮತ್ತುಆಹ್ಲಾದಕರವಾಗಿರುತ್ತದೆ ಮತ್ತು ಈ ಸಮಯದಲ್ಲಿ ಅನೇಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಈ ದೇವಾಲಯವು ವರ್ಷವಿಡೀ ಭಕ್ತರಿಂದ ತುಂಬಿರುವುದರಿಂದ ಇಲ್ಲಿಗೆ ಭೇಟಿ ಕೊಡುವುದನ್ನು ಕಡೆಯಲ್ಲಿ ಯೋಚನೆ ಮಾಡುವುದಕ್ಕಿಂತ ಮುಂಚಿತವಾಗಿಯೇ ಯೋಜಿಸುವುದು ಉತ್ತಮ.

ಬೃಹದೀಶ್ವರ ದೇವಾಲಯವನ್ನು ತಲುಪುವುದು ಹೇಗೆ

ಬೃಹದೀಶ್ವರ ದೇವಾಲಯವನ್ನು ತಲುಪುವುದು ಹೇಗೆ

PC: Manoj Prabhakar

ತಂಜಾವೂರಿಗೆ ಪ್ರಮುಖ ನಗರಗಳಿಂದ ರಸ್ತೆ ಮತ್ತು ರೈಲು ಮಾರ್ಗಗಳಿಂದ ಉತ್ತಮ ಸಂಪರ್ಕವಿದೆ. ಈ ಸ್ಥಳದಲ್ಲಿ ವಿಮಾನ ನಿಲ್ದಾಣವಿಲ್ಲ ಆದರೆ ಪ್ರವಾಸಿಗರು ಹತ್ತಿರವಿರುವ ವಿಮಾನ ನಿಲ್ದಾಣವಾದ ತಿರುಚಿನಾಪಳ್ಳಿಗೆ ಪ್ರಯಾಣಿಸಬಹುದು ಮತ್ತು ಅಲ್ಲಿಂದ ಬಸ್ಸು, ಟ್ಯಾಕ್ಸಿ ಅಥವಾ ರೈಲಿನ ಮೂಲಕ ಪ್ರಯಾಣಿಸಿ ತಂಜಾವೂರು ತಲುಪಬಹುದು.

ರೈಲು ಮಾರ್ಗ : ಹತ್ತಿರದ ಅನೇಕ ನಗರಗಳಿಗೆ ತಂಜಾವೂರಿನಿಂದ ಸಂಪರ್ಕವಿದೆ. ದೂರದ ಅಂತರಕ್ಕೆ ಪ್ರಯಾಣಿಸುವ ರೈಲುಗಳು ಇಲ್ಲಿ ಕೆಲವೇ ಕೆಲವಿದೆ. ಜನ ಶತಾಬ್ದಿ ಎಕ್ಸ್ ಪ್ರೆಸ್ ನ ಇಲ್ಲಿ ನಿಲುಗಡೆ ಇದೆ. ಹತ್ತಿರದ ಪ್ರಮುಖ ರೈಲ್ವೇ ನಿಲ್ದಾಣವೆಂದರೆ ತಿರುಚಿರಾಪಳ್ಳಿ ಮತ್ತು ಇಲ್ಲಿಂದ ಟ್ಯಾಕ್ಸಿ ಮೂಲಕ ನೇರವಾಗಿ ತಂಜಾವೂರು ತಲುಪಬಹುದು.

ರಸ್ತೆ ಮೂಲಕ: ರಸ್ತೆ ಮೂಲಕ ತಂಜಾವೂರಿಗೆ ಸಂಪರ್ಕವು ಉತ್ತಮವಾಗಿದೆ ಮತ್ತು ತಮಿಳುನಾಡಿನ ವಿವಿಧ ಭಾಗಗಳಿಂದ ರಾಜ್ಯ ಹೆದ್ದಾರಿಗಳ ಮೂಲಕ ತಂಜಾವೂರು ತಲುಪಬಹುದಾಗಿದೆ. ಪ್ರಮುಖ ಹೆದ್ದಾರಿಗಳೆಂದರೆ ರಾ.ಹೆ 45ಸಿ, ರಾ.ಹೆ 226 ಮತ್ತು ರಾ. ಹೆ 67. ಈ ಹೆದ್ದಾರಿಗಳು ಕೊಯಂಬತ್ತೂರು, ತಿರುಚಿನಾಪಳ್ಳಿ,ಪುದುಕೊಟ್ಟೈ, ಮಧುರೈ, ಚೆನ್ನೈ ಮತ್ತು ಇನ್ನಿತರ ಸ್ಥಳಗಳನ್ನು ಸಂಪರ್ಕಿಸುತ್ತದೆ.

ವಾಯುಮಾರ್ಗ: ಹತ್ತಿರದ ವಿಮಾನ ನಿಲ್ದಾಣವು ತಿರುಚಿರಾಪಲ್ಲಿಯಲ್ಲಿದೆ, ಇದು ಅನೇಕ ರಾಷ್ಟ್ರೀಯ ಮತ್ತು ಕೆಲವು ಅಂತರರಾಷ್ಟ್ರೀಯ ನಗರಗಳನ್ನು ಸಂಪರ್ಕಿಸುತ್ತದೆ.

ವಾಸ್ತುಶಿಲ್ಪ

ವಾಸ್ತುಶಿಲ್ಪ

PC: Udaya Karthick

ಈ ದೇವಾಲಯದ ರಚನೆಯು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಇದರ ಆವರಣವು 16ನೇ ಶತಮಾನದ ಕೋಟೆಯಾಕಾರದಲ್ಲಿದ್ದು ಇದರ ಪ್ರವೇಶ ದ್ವಾರದಲ್ಲಿ ನಂದಿಯ ದೊಡ್ಡ ಪ್ರತಿಮೆ ಇದೆ. ದೇವಾಲಯದಲ್ಲಿರುವ ಅಷ್ಟ ದಿಕ್ಪಾಲಕರು (ದಿಕ್ಕುಗಳ ರಕ್ಷಕರು) ಪ್ರಸಿದ್ದವಾಗಿದೆ. ಪ್ರತಿಮೆಗಳು, ಗ್ರಾನೈಟ್ ನಿಂದ ಸುಂದರವಾಗಿ ಕೆತ್ತಲಾದ ಶಿಲ್ಪಗಳು, ಮತ್ತು ಬಲಿಷ್ಟ ಚೋಳರ ಯುಗದ ಫ್ರೆಸ್ಕೊ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ಪವಿತ್ರ ಗರ್ಭಗುಡಿ

ಪವಿತ್ರ ಗರ್ಭಗುಡಿ

PC: Raj

ಇಲ್ಲಿಯ ಪ್ರಮುಖ ದೇವರಾದ ಶಿವ ದೇವರ ಪ್ರತಿಮೆಯು ಆವರಣದ ಪಶ್ಚಿಮ ಚೌಕದಲ್ಲಿನ ಕೇಂದ್ರ ಭಾಗದಲ್ಲಿದೆ. ಮತ್ತು ಈ ಇದರ ಸುತ್ತಲೂ ವೃತ್ತಾಕಾರದ ಮಾರ್ಗವನ್ನು ಪ್ರದಕ್ಷಿಣೆ ಬರಲು ಭಕ್ತರಿಗಾಗಿ ನಿರ್ಮಿಸಲಾಗಿದೆ. ದೇವರ ಗರ್ಭಗುಡಿಯ ಒಳ ಭಾಗಕ್ಕೆ ಪುರೋಹಿತರಿಗೆ ಮಾತ್ರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.

ದೇವತೆಗಳು ಮತ್ತು ಶಿಲ್ಪಗಳು

ದೇವತೆಗಳು ಮತ್ತು ಶಿಲ್ಪಗಳು

PC: marguerite

ನೆಲದ ಭಾಗದಲ್ಲಿರುವ ಅಂತಸ್ತಿನಲ್ಲಿ ಎಲ್ಲಾ ಕಡೆಯಲ್ಲಿಯೂ ದೇವತೆಗಳ ವಿಗ್ರಹಗಳನ್ನು ಹೊಂದಿದೆ ಇಲ್ಲಿಯ ಪ್ರಧಾನ ದೇವತೆಗಳೆಂದರೆ ಪೂರ್ವ ಭಾಗದಲ್ಲಿ ಲಿಂಗೋದ್ಭವ, ದಕ್ಷಿಣ ಗೋಡೆಯ ಮೇಲಿನ ಭಿಕ್ಷಾಟನ, ಹರಿಹರ ಮತ್ತು ಪಶ್ಚಿಮ ದ್ವಾರದಲ್ಲಿ ಎರಡು ದ್ವಾರಪಾಲರುಗಳು ಮತ್ತು ಉತ್ತರ ಗೋಡೆಯ ಮೇಲೆ ಅರ್ಧನಾರೀಶ್ವರ.

ಎರಡನೇ ಅಂತಸ್ತಿನಲ್ಲಿ ಎರಡನೇ ಅಂತಸ್ತಿನಲ್ಲಿ, ಶಿವನ ತ್ರಿಪುರಾಂತಕವನ್ನು ವಿವಿಧ ಭಂಗಿಗಳಲ್ಲಿ ಚಿತ್ರಿಸಲಾಗಿದೆ. ಮೇಲಿನ ಅಂತಸ್ತಿನಲ್ಲಿ ಗೋಡೆಯಲ್ಲಿ ಭರತನಾಟ್ಯದ ಮೂಲವನ್ನು ಪ್ರತಿಬಿಂಬಿಸುವ ನಾಟ್ಯ ಶಾಸ್ತ್ರದ ನೃತ್ಯ ಭಂಗಿಗಳನ್ನು ಕೆತ್ತಲಾಗಿದೆ

ಭಿತ್ತಿ ಚಿತ್ರಗಳು

ಭಿತ್ತಿ ಚಿತ್ರಗಳು

PC: Udaya Karthick

ಇಲ್ಲಿ ನಡೆದಾಡುವ ಮಾರ್ಗವು ಸುಂದರವಾಗಿ ಚಿತ್ರಿಸಲ್ಪಟ್ಟ ವರ್ಣಮಯ ಫ್ರೆಸ್ಕೊ ಭಿತ್ತಿಚಿತ್ರಗಳನ್ನು ಎಲ್ಲಾ ಕಡೆಯಲ್ಲೂ ನೋಡಬಹುದಾಗಿದೆ. ಇದು ಚೋಳರ ಸಂಸ್ಕೃತಿಯನ್ನು, ರಾಜರುಗಳು ಮತ್ತು ದೈವಿಕ ಕಥೆಗಳನ್ನು ಪ್ರತಿಬಿಂಬಿಸುತ್ತದೆ. ಅವುಗಳೊಂದಿಗೆ ಇರುವ ಶಾಸನಗಳು ಚೋಳರ ಯುಗದ ಸಂಸ್ಕೃತಿ ಮತ್ತು ಸಮಾಜದ ಮೌಲ್ಯಯುತ ಒಳ ನೋಟವನ್ನು ನೀಡುತ್ತದೆ.

ಉತ್ಸವಗಳು

ಉತ್ಸವಗಳು

PC: Arian Zwegers

ಬೃಹನ್ ನಾಟ್ಯಾಂಜಲಿ ಎಂಬ ವಾರ್ಷಿಕ ಉತ್ಸವವನ್ನು ಇಲ್ಲಿ ಪ್ರತಿವರ್ಷ ನಡೆಸಲಾಗುತ್ತದೆ ಇದು 10 ದಿನಗಳ ಕಾಲ ನಡೆಯುತ್ತದೆ. ಇದೊಂದು ಸಾಂಸ್ಕೃತಿಕ ಉತ್ಸವವಾಗಿದ್ದು ಇದರಲ್ಲಿ ಭಾರತಾದ್ಯಂತದ ಕಲೆಗಳನ್ನು ಅದರಲ್ಲೂ ವಿಶೇಷವಾಗಿ ಶಾಸ್ತ್ರೀಯ ನೃತ್ಯಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X