• Follow NativePlanet
Share
Menu
» »ಭಾರತದ ಅತ್ಯುತ್ತಮ ಜಲಕ್ರೀಡಾ ತಾಣಗಳು

ಭಾರತದ ಅತ್ಯುತ್ತಮ ಜಲಕ್ರೀಡಾ ತಾಣಗಳು

Posted By: Manjula Balaraj Tantry

ಭಾರತದಲ್ಲಿ ಒಳ್ಳೆಯ ಜಲಕ್ರೀಡಾ ತಾಣವನ್ನು ಹುಡುಕುತ್ತಿರುವಿರಾ? ಗೋವಾ ಹೆಚ್ಚಾಗಿ ಎಲ್ಲರ ಆಯ್ಕೆಯಾಗಿರುತ್ತದೆ. ಇದೇನು ಆಶ್ಚರ್ಯದ ಸಂಗತಿಯೇನಲ್ಲ ಗೋವಾ, ಕೇವಲ ಕ್ರೀಡೆಗಳಿಗೆ ಮಾತ್ರ ಸೀಮಿತವಾಗಿರದೆ ಇಲ್ಲಿ ಐಷಾರಾಮಿ ಹೋಟೆಲ್ ಗಳೂ ಇರುವುದರಿಂದ ಈ ಜಾಗವು ಹೆಚ್ಚಿನ ಜನರ ಆಯ್ಕೆಯ ಜಾಗವಾಗಿರುತ್ತದೆ. ಆದರೂ ಇದರಂತೆಯೇ ಭಾರತದಲ್ಲಿ ಇನ್ನೂ ಕೆಲವು ಜಲಕ್ರೀಡೆ ಮಾಡುವಂತಹ ಜಾಗಗಳಿವೆ.

ಈ ಸ್ಥಳಗಳ ದೃಶ್ಯಗಳ ಹಿನ್ನೆಲೆಯಿಂದಾಗಿ ಜಲಕ್ರೀಡೆಯ ಜೊತೆಗೆ ಇನ್ನೂ ಕೆಲವು ಅನುಭವಕ್ಕೆ ಒಂದು ತಿರುವು ಸಿಕ್ಕಿದಂತಾಗುತ್ತದೆ. ನದಿಗಳಲ್ಲಿ ರಾಫ್ಟಿಂಗ್ ಬಗ್ಗೆ ಮೊದಲು ಬೌದ್ದ ಮಠಗಳು ಯೋಚಿಸಿಲಾಯಿತು ಮತ್ತು ಉಷ್ಣವಲಯದ ಪಾಮ್-ಫ್ರಿಂಜ್ಡ್ ಕಾಲುವೆಗಳ ಮೂಲಕ ಕಯಾಕಿಂಗ್ ನಡೆಸಲಾಯಿತು. ಇವುಗಳು ಜೀವನದ ಶ್ರೇಷ್ಟ ಅನುಭವಗಳಾಗಿವೆ. ಹೆಚ್ಚಿನ ಅಡ್ರಿನಾಲಿನ್ ಇರುವಲ್ಲಿ , ವರ್ಷಪೂರ್ತಿ ಯಾವುದೇ ಸಮಯದಲ್ಲಿ ಜಲ ಕ್ರೀಡೆಗಳನ್ನು ಮಾಡಬಹುದು.

ಸಾಹಸಪ್ರಿಯರು ಈ ವಿಧವಿಧವಾದ ಸಾಹಸಮಯ ಕ್ರೀಡೆಗಳಲ್ಲಿ ಭಾಗವಹಿಸುತ್ತಾ ಒಂದು ಉತ್ತಮ ಅನುಭವ ಪಡೆಯುತ್ತಾರೆ. ಆದರೆ ಕೆಲವರಿಗೆ ತರಬೇತಿಯ ಅಗತ್ಯವಿರುತ್ತದೆ, ಕೆಲವರು ಯಾವುದೇ ತರಬೇತಿ ಇಲ್ಲದೆಯೂ ಆಟವಾಡುತ್ತಾರೆ. ನೀವು ಇಂತಹ ಒಂದು ಜಾಗದ ಬಗ್ಗೆ ಹೋಗಲು ಇಚ್ಚಿಸುವಿರಾದರೆ ಇಲ್ಲಿ ಕೆಲವು ಜಲಕ್ರೀಡೆಗೆ ಪ್ರಸಿದ್ದವಾದ ಸ್ಥಳಗಳಿವೆ.

 ಗೋಕರ್ಣ

ಗೋಕರ್ಣ

PC: Kanenori

ಗೋವಾಗೆ ತುಂಬಾ ದೂರ ಎಂದು ಯೋಚಿಸುವಿರಾ? ಹಾಗಿದ್ದಲ್ಲಿ, ಗಡಿಯಲ್ಲಿರುವ ಗೋಕರ್ಣದ ಕಡೆಗೆ ನಿಮ್ಮ ಪ್ರಯಾಣ ಬೆಳೆಸಿ ಇದು ಗೋವಾದ ಬದಲಿಗೆ ಒಂದು ಉತ್ತಮವಾದ ಆಯ್ಕೆಯಾಗಿದೆ. ಇಲ್ಲೂ ಕೂಡಾ ನಿಮಗೆ ಗೋವಾದಲ್ಲಿರುವಂತೆಯೇ ಎಲ್ಲಾ ತರಹದ ಜಲಕ್ರೀಡಾ ವ್ಯವಸ್ಥೆಗಳು ಇವೆ.

ಅದೂ ಮುಖ್ಯವಾಗಿ ಓಂ ಬೀಚ್ ನಲ್ಲಿ ಕಾಣಬಹುದು. ಇನ್ನೂ ಜಾಸ್ತಿಗೆ ಪ್ರಯತ್ನಿಸುತ್ತಿರುವಿರಾ? ಹಾಗಿದ್ದಲ್ಲಿ ಗೋಕರ್ಣದ ಪ್ಲಾಸಿಡ್ ಬೀಚ್ ಸರ್ಫಿಂಗ್ ಕಲಿಯಲು ಒಂದು ಉತ್ತಮವಾದ ತಾಣವಾಗಿದೆ. ಇಲ್ಲಿ ಕಡಲ ತೀರದಲ್ಲಿ ಸರ್ಫಿಂಗ್ ಕಲಿಸುವ ಹಲವಾರು ಸಂಸ್ಥೆಗಳಿವೆ. ಇವು ವಿವಿಧ ಸರ್ಫಿಂಗ್ ಕೋರ್ಸ್ ಗಳನ್ನು ಕಲಿಸಿಕೊಡುತ್ತವೆ. ಮತ್ತು ಇವು ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಅಂಡಮಾನ್

ಅಂಡಮಾನ್

PC: joakant

ಪ್ಯಾರಸೈಕಲಿಂಗ್, ಜೆಟ್ ಸ್ಕೈಯಿಂಗ್, ಬೋಟಿಂಗ್ ಮುಂತಾದ ನೀವು ಇಂತಹುದು ಬೇಕು ಎಂದು ಹೆಸರಿಸಿ ಅವು ನಿಮ್ಮ ಮುಂದಿರುತ್ತದೆ ಇದೇ ಬಂಗಾಳಕೊಲ್ಲಿಯ ಸುಂದರವಾದ ಅಂಡಮಾನ್ ನಲ್ಲಿ. ಇಲ್ಲಿಯ ಉತ್ತಮವಾದ ಜಲಕ್ರೀಡೆಯೆಂದರೆ ಸ್ಕೂಬಾ ಡೈವಿಂಗ್, ಸ್ನೋರ್ಕ್ಲಿಂಗ್, ಮತ್ತು ಸಮುದ್ರದ ಅಡಿಯಲ್ಲಿ ನಡೆಯುವುದು. ಹಾವ್ಲಾಕ್ ದ್ವೀಪವು ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರಗಳ ನೆಲೆಯಾಗಿದೆ. ಇಲ್ಲಿ 15 ನಿಮಿಷಗಳ ಮುಖ್ಯ ತರಬೇತಿ ಕೊಡಲಾಗುತ್ತದೆ ಮತ್ತು 45 ನಿಮಿಷಗಳಷ್ಟು ಡೈವಿಂಗ್ ಅನ್ನು ಮಾಡಿಸಲಾಗುತ್ತದೆ.

ನೀವು ಸ್ನೋರ್ಕ್ಲಿಂಗ್ ಮತ್ತು ಸಮುದ್ರದ ಅಡಿಯಲ್ಲಿ ನಡೆಯುವುದನ್ನು ಆಯ್ಕೆ ಮಾಡುವಿರಾದರೆ ಹ್ಯಾವ್ ಲಾಕ್ ದ್ವೀಪದ ಎಲಿಫೆಂಟ್ ಬೀಚ್ ಕಡೆಗೆ ಹೋಗಿ. ಹ್ಯಾವ್ಲಾಕ್ ಬೀಚ್ ಕಡೆಗೆ ನಿಮಗೆ ಹೋಗಲು ಆಗದೆ ಇದ್ದಲ್ಲಿ ಪೋರ್ಟ್ ಬ್ಲೇರ್ ನಲ್ಲಿರುವ ಅಥವಾ ಉತ್ತರ ಬೇ ಬೀಚ್ನಲ್ಲಿರುವ ರಾಜೀವ್ ಗಾಂಧಿ ವಾಟರ್ ಸ್ಪೋರ್ಟ್ಸ್ ಸಂಕೀರ್ಣಗಳಿಗೆ ನೀವು ಸ್ನಾರ್ಕ್ಕಲಿಂಗ್ಗಾಗಿ ಹೋಗಬಹುದು.ಈ ಕಡಲ ತೀರವು ಅತ್ಯುತ್ತಮವಾದ ಹವಳದ ಬಂಡೆಗಳಿಗೆ ನೆಲೆಯಾಗಿದೆ ಮತ್ತು ಹಲವಾರು ಇತರ ಜಲ ಕ್ರೀಡೆಗಳನ್ನು ಒದಗಿಸುತ್ತದೆ

ಲಡಾಖ್

ಲಡಾಖ್

PC: Unknown

ಪುರಾತನ ಬೌದ್ಧ ಮಠಗಳು ಮತ್ತು ವೈಭವದ ಹಿಮಾಲಯನ್ ಕಮರಿಗಳು ಹರಿಯುವ ನದಿಗೆ ಅಡ್ಡಲಾಗಿ ಗ್ಲೈಡಿಂಗ್ ಕಲ್ಪಿಸಲಾಗಿದೆ. ಲಡಾಖ್ ನಲ್ಲಿ ಎತ್ತರದ ನದಿಯ ರಾಫ್ಟಿಂಗ್ ಬಹಳ ಅದ್ಭುತವಾಗಿದೆ ಮತ್ತು ಇದು ಪ್ರಪಂಚದ ಎಲ್ಲಾ ಕಡೆಗಳಿಗಿಂತಲೂ ಭಿನ್ನವಾಗಿದೆ. ಈ ಕ್ರೀಡೆಯು ಸಿಂಧೂನದಿ ಮತ್ತ ಈ ಪ್ರದೇಶದ ಸುತ್ತಲೂ ಹರಿಯುವ ಅದರ ಉಪನದಿಯಾದ ಝನ್ಸ್ಕಾರ್ ನಲ್ಲಿ ನಡೆಯುತ್ತದೆ.

ಝನ್ಸ್ಕಾರ್ ನದಿಯು ತನ್ನ ಭಯಂಕರತೆಗೆ ಹೆಸರುವಾಸಿಯಾಗಿದೆ. ನದಿ ಗ್ರೇಡ್ III ಮತ್ತು IV ನ ಹರಿಯುವ ವೇಗದ ಮಿತಿಯನ್ನು ತೋರಿಸುತ್ತದೆ. ಗ್ರೇಡ್ I ಮತ್ತು II ಕಡಿಮೆ ವೇಗವನ್ನು ತೋರಿಸುತ್ತದೆ. ನಂತರ ಲೇಹ್ ನ ಕಡೆಗೆ ಪ್ರಯಾಣಿಸಿ ಇಲ್ಲಿ ಕಡಿಮೆ ಸಮಯದಲ್ಲಿ ಜಲಕ್ರೀಡೆಗಳನ್ನು ಮಾಡಲಾಗುವುದು. ಕಲಿಯುವ ಹಂತದಲ್ಲಿರುವವರಿಗೆ ಒಂದು ಉತ್ತಮವಾದ ಮಾರ್ಗವೆಂದರೆ ಅದು ಹೆಮಿಸ್- ಸ್ಟಕ್ನಾ- ಷೇಯಿ- ಥಿಖ್ಸೆ- ಚೋಗ್ಲಮ್ಸರ್.

ರಿಷಿಕೇಶ

ರಿಷಿಕೇಶ

PC: sebadelval

ರಿಷಿಕೇಶವನ್ನು ಯೋಗದ ಜನ್ಮ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಈ ಸ್ಥಳವು ಆಧ್ಯಾತ್ಮಿಕತೆಗೆ ತನ್ನನ್ನು ನಿರ್ಬಂಧಿಸುವುದಿಲ್ಲ, ಆದರೆ ಪವಿತ್ರ ಗಂಗಾದಾದ್ಯಂತ ನದಿ ರಾಫ್ಟಿಂಗ್ ಮತ್ತು ಕಯಾಕಿಂಗ್ಗೆ ಉತ್ತಮ ತಾಣವಾಗಿದೆ. ಇಲ್ಲಿ ನದಿಯಲ್ಲಿ ರಾಫ್ಟಿಂಗ್ ಜೊತೆಗೆ ದೊಡ್ಡ ದೊಡ್ಡ ಸಾಯಸಮಯ ಕ್ರೀಡೆಗಳಾದ ಜಿಪ್ ಲೈನಿಂಗ್, ಕ್ಯಾಂಪಿಂಗ್, ಟ್ರಕ್ಕಿಂಗ್ ಮುಂತಾದುವುಗಳನ್ನು ಪ್ರಯತ್ನಿಸಬಹುದಾಗಿದೆ.

ಭೀಮ್ ತಲ್

ಭೀಮ್ ತಲ್

PC: Unknown

ಜೋರ್ಬಿಂಗನ್ನು ಭೂಮಿಯ ಮೇಲೆ ಮಾಡುವುದನ್ನು ಕೇಳಿದ್ದೇವೆ. ಆದರೆ ಇದನ್ನು ನೀರಿನಲ್ಲಿ ಹೇಗೆ? ನೀವು ಈ ಸಾಹಸಕ್ಕೆ ತಯಾರಾಗಿದ್ದೀರಿ ಎಂದಾದರೆ ಭೀಮ್ ತಲ್ ಕೊಳದತ್ತ ನಿಮ್ಮ ಪ್ರಯಾಣವನ್ನು ಬೆಳೆಸಿ ಇದು ಪ್ರಸಿದ್ದ ನೈನಿತಾಲ್ ಗಿರಿಧಾಮಕ್ಕೆ ಹತ್ತಿರದಲ್ಲಿದೆ.

ಇಲ್ಲಿಯ ಕ್ರೀಡೆಗೆ ಯಾವುದೇ ರೀತಿಯ ತರಬೇತಿಯ ಅವಶ್ಯಕತೆ ಇರುವುದಿಲ್ಲ. ಮತ್ತು ಹೆಚ್ಚಿನ ಪ್ರಮಾಣದ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ. ಇದಲ್ಲದೆ ಇಲ್ಲಿ ಇನ್ನೂ ಅನೇಕ ರೀತಿಯ ಜಲಕ್ರೀಡೆಗಳಾದ ಕಯಾಕಿಂಗ್, ಬೋಟಿಂಗ್, ಇತ್ಯಾದಿಗಳಿಗೆ ಅವಕಾಶವಿದೆ. ಪರ್ವತಗಳ ಮೇಲೆ ನೆಲೆಸಿರುವ ಈ ಸ್ಥಳವು ಬೇಸಿಗೆಯ ಶಾಖದಿಂದ ದೂರವಿರಲು ಸೂಕ್ತ ಸ್ಥಳವಾಗಿದೆ.

Read more about: ಭಾರತ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ