Search
  • Follow NativePlanet
Share
» »ಪ್ರತಿಯೊಬ್ಬ ಮೋಟರ್ ಬೈಕ್ ಸವಾರರು ಹೋಗಲೇಬೇಕಾದಂತಹ ರೋಡ್ ಟ್ರಿಪ್‌ಗಳಿವು

ಪ್ರತಿಯೊಬ್ಬ ಮೋಟರ್ ಬೈಕ್ ಸವಾರರು ಹೋಗಲೇಬೇಕಾದಂತಹ ರೋಡ್ ಟ್ರಿಪ್‌ಗಳಿವು

ರಸ್ತೆ ಮೂಲಕ ಸವಾರಿ ಮಾಡುವುದೇ ಒಂದು ಸುಂದರವಾದ ಅನುಭವ. ರಸ್ತೆ ಮೇಲೆ ಸವಾರಿ ಮಾಡುತ್ತಾ ನಿಮ್ಮ ಮೇಲೆ ಬೀಸುವ ತಂಪಾದ ಗಾಳಿಯ ಅನುಭವ ಮತ್ತು ಪ್ರಕೃತಿಯ ಬದಲಾಗುತ್ತಿರುವ ರಚನೆಯ ಜೊತೆಗೆ ಪ್ರಯಾಣ ಮಾಡುವುದನ್ನು ಕೇವಲ ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ.

ಈ ದೇಶದ ಉತ್ತಮವಾದ ಅಂಶವೆಂದರೆ ಇಲ್ಲಿ ಮೋಟರ್ ಬೈಕು ಸವಾರರಿಗೆ ಅನುಕೂಲವಾಗುವಂತಹ ಅನೇಕ ಮಾರ್ಗಗಳಿರುವುದು. ಈ ಮಾರ್ಗಗಳು ಸವಾಲುದಾಯಕವಾಗಿದ್ದರೂ ಕೂಡಾ ಇನ್ನೂ ಇಲ್ಲಿ ಪ್ರಯಾಣಿಸುವವರಿಗೆ ಪ್ರಕೃತಿ ತಾಯಿಯ ಉತ್ತಮವಾದ ಅಂಶಗಳನ್ನು ಪ್ರತಿಯೊಬ್ಬ ಪ್ರವಾಸಿಗನೂ ಅನುಭವಿಸುವಂತೆ ಮಾಡುತ್ತದೆ.

ಭಾರತದಲ್ಲಿ ರಸ್ತೆಯಲ್ಲಿ ಪ್ರಯಾಣಿಸುವ ಮೋಟಾರು ಸವಾರರಿಗೆ ಬೇಕಾಗುವಂತಹ ಕೆಲವು ಅಂಶಗಳಿವೆ. ನೀವು ಇಲ್ಲಿಗೆ ಒಬ್ಬಂಟಿಯಾಗಿ ಅಥವಾ ನಿಮಗೆ ಇಷ್ಟವಾದವರ ಜೊತೆ ಸೇರಿಕೊಂಡು ಈ ಮರೆಯಲಾರದ ಪ್ರಯಾಣವನ್ನು ಪ್ರಾರಂಭಿಸಬಹುದಾಗಿದೆ...

ದೆಹಲಿಯಿಂದ ಲೇಹ್

ದೆಹಲಿಯಿಂದ ಲೇಹ್

ದೆಹಲಿಯಿಂದ ಲೇಹ್ ಗೆ ಮೋಟರ್ ಬೈಕ್ ಪ್ರವಾಸವು ಒಂದು ಅತ್ಯಂತ ಜನಪ್ರಿಯವಾದ ಮೋಟರ್ ಬೈಕ್ ಸವಾರಿಯ ಪ್ರವಾಸವಾಗಿದೆ ಈ ಎಷ್ಟೇ ನುರಿತ ಬೈಕ್ ಸವಾರರಿಗೂ ಅನೇಕ ಸವಾಲುಗಳನ್ನು ಒಡ್ಡುತ್ತದೆ. ಈ ಪ್ರವಾಸವು ಸುಮಾರು 15 ದಿವಸಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ದೆಹಲಿಯಿಂದ ಲೇಹ್ ಅಸಂಖ್ಯಾತ ರೋಚಕ ಸಾಹಸಗಳನ್ನು ಮತ್ತು ಮಂತ್ರಮುಗ್ದಗೊಳಿಸುವ ಎಂದರೆ ಕಡಿಮೆಯಾಗಬಹುದು ಎನ್ನುವಂತಹ ಬೆರಗುಗೊಳಿಸುವ ದೃಶ್ಯಗಳನ್ನು ಒದಗಿಸುತ್ತದೆ. ಈ ಮಾರ್ಗವು ಸವಾರರನ್ನು ಚಂಡೀಗಢದಿಂದ ನಂತರ ಮನಾಲಿಯವರೆಗೆ ಕೊಂಡೊಯ್ಯುತ್ತದೆ ಇಲ್ಲಿಂದ ನಿಜವಾದ ಸವಾರಿಯು ಪ್ರಾರಂಭವಾಗುತ್ತದೆ ಎನ್ನಬಹುದು.

ಇಲ್ಲಿ ಭೂದೃಶ್ಯವು ನಗರ ಪ್ರದೇಶದಿಂದ ಹಿಮಾಲಯದ ಹಳ್ಳಿಗಳವರೆಗೆ ನಿಧಾನವಾಗಿ ಬದಲಾಗುತ್ತಾ ಹೋಗುತ್ತದೆ ಮತ್ತು ಹಿಮಚ್ಚಾದಿತ ಪರ್ವತಗಳು ಮತ್ತು ಕೊನೆಗೆ ಬಂಡೆಗಳು ಮತ್ತು ಲೇಹ್ ನ ಮರುಭೂಮಿಯಂತಹ ಭೂಪ್ರದೇಶಗಳಲ್ಲಿ ಕೊನೆಗೊಳ್ಳುತ್ತದೆ. ದೇಶದಲ್ಲಿ ಅತ್ಯಂತ ಕಷ್ಟಕರವಾದ ರಸ್ತೆಗಳಾದ ಖಾರ್ದಂಗ್ ಲಾ ಸೇರಿದಂತೆ ದೇಶದ ಕೆಲವು ಕಠಿಣವಾದ ರಸ್ತೆಗಳ ಮೂಲಕ ಬೈಕ್ ಸವಾರಿ ನಡೆಸುತ್ತಾರೆ ಆದರೆ ಈ ದಾರಿಯಲ್ಲಿ ಅಪಾಯಗಳು ಅನೇಕ.

ಶಿಮ್ಲಾದಿಂದ ಸ್ಪಿತಿ ಕಣಿವೆ

ಶಿಮ್ಲಾದಿಂದ ಸ್ಪಿತಿ ಕಣಿವೆ

ಶಿಮ್ಲಾದಿಂದ ಸ್ಪಿತಿ ಕಣಿವೆಗಳ ಮೋಟಾರ್ ಸವಾರಿಯು ಅನುಭವವು ಹಿಮಾಲಯ ಪ್ರದೇಶದ ಮನಮೋಹಕ ದೃಶ್ಯಗಳನ್ನು ಸವಾರರಿಗೆ ಒದಗಿಸಿಕೊಡುತ್ತದೆ. ಇಲ್ಲಿಯ ಹಸಿರು ಮಿಶ್ರಣಗಳಿಂದ ಹಿಡಿದು ಹಿಮಾಚಲ ಪ್ರದೇಶದ ಹಿಮಚ್ಚಾದಿತ ಬೆಟ್ಟಗಳವರೆಗೆ ಈ ಭೂದೃಶ್ಯವು ನಿಧಾನವಾಗಿ ಬದಲಾಗುತ್ತಾ ಹೆಚ್ಚು ಬಂಡೆಗಳ ಹಾಗೆ ಗಟ್ಟಿಯಾಗುತ್ತಾ ರಾಜ್ಯದ ಮೇಲಿನ ಭಾಗಗಳಿಗೆ ಹೋದಂತೆ ಹೆಚ್ಚು ಸುಂದರವಾಗಿ ಕಾಣತೊಡಗುತ್ತದೆ.

ಒಂದು ಕಡೆಯಲ್ಲಿ ಸುಂದರವಾದ ಹಿಮದಿಂದ ಆವೃತ್ತವಾದ ಶಿಖರಗಳು ಮತ್ತು ಇನ್ನೊಂದು ಕಡೆಯಲ್ಲಿ ಜಲಪಾತಗಳು ಭವ್ಯವಾಗಿ ಕಾಣುವುದಲ್ಲದೆ ಕಿನೌರ್ ನಲ್ಲಿಯ ಹಸಿರು ಹುಲ್ಲುಗಾವಲುಗಳಲ್ಲಿ ಕುರಿ ಮೇಯಿಸುವ ದೃಶಗಳು ಮತ್ತು ಸ್ಪಿತಿ ಕಣಿವೆಯ ಹಠಾತ್ ಬದಲಾವಣೆ ಇವೆಲ್ಲ ಸೇರಿ ಈ ಸ್ಥಳವನ್ನು ಇನ್ನೂ ಸುಂದರಗೊಳಿಸುತ್ತದೆ. ಈ ಸವಾರಿಯು ಹಾವಿನಂತಹ ಕಿರಿದಾದ ಪರ್ವತ ರಸ್ತೆಗಳು, ತೀಕ್ಷ್ಣವಾದ ಇಳಿಜಾರುಗಳು ಮತ್ತು ಕಲ್ಲಿನ ಭೂಪ್ರದೇಶದಿಂದ ಹೆಚ್ಚು ಕಷ್ಟಕರವಾದ ಕಾರಣದಿಂದಾಗಿ ಶ್ರಮದಾಯಕ ಮತ್ತು ಹೆಚ್ಚು ಸವಾಲುಗಳಿಂದ ಕೂಡಿದೆ.

ಬೆಂಗಳೂರಿನಿಂದ ಕಣ್ಣೂರ್

ಬೆಂಗಳೂರಿನಿಂದ ಕಣ್ಣೂರ್

ನೀವು ಮೋಟಾರು ಸೈಕಲ್ ಸವಾರಿಯ ಉತ್ಸಾಹಿಗಳಾಗಿದ್ದು ಬೆಂಗಳೂರಿನಲ್ಲಿ ವಾಸಿಸುವವರಾಗಿದ್ದಲ್ಲಿ, ನಿಮ್ಮನ್ನು ನೀವು ಅದೃಷ್ಟವಂತರೆಂದುಕೊಳ್ಳಿ. ನಾವು ಬೆಂಗಳೂರಿನಂತಹ ಪಟ್ಟಣ ಪ್ರದೇಶದಿಂದ ದಟ್ಟವಾದ ಹಸಿರಿನಿಂದ ಕೂಡಿದ ಪರಿಸರವಿರುವ ಕೇರಳದ ಕಣ್ಣೂರಿನ ಬಗ್ಗೆ ಹೇಳುತ್ತಿದ್ದೇವೆ. ಇಲ್ಲಿಗೆ ಸವಾರಿಯು ಅತ್ಯಂತ ಆಕರ್ಷಕವಾಗಿದ್ದು ಸವಾರರಿಗೆ ಬಂಡೆಗಳು ಮತ್ತು ಮನಮೋಹಕ ಹಸಿರು ಕಣಿವೆಗಳ ಅತ್ಯಂತ ಸುಂದರವಾದ ದೃಶ್ಯಗಳನ್ನು ಒದಗಿಸಿ ಸವಾರರಿಗೆ ಸಾರ್ಥಕತೆಯ ಅನುಭವವನ್ನು ಕೊಡುತ್ತದೆ.

ಇದರ ಜೊತೆಗೆ ಇಲ್ಲಿ ಹಲವಾರು ಸರೋವರಗಳು ಮಾರ್ಗದಲ್ಲಿ ಸಿಗುತ್ತವೆ ಇಲ್ಲಿ ಸವಾರರು ವಿಶ್ರಾಂತಿ ಪಡೆದು ಸ್ಥಳೀಯ ಹೊಟೇಲುಗಳಿಂದ ಸ್ವಾದಿಷ್ಟವಾ ಊಟ ಮಾಡಬಹುದಾಗಿದೆ. ಬೆಂಗಳೂರಿನಿಂದ ಕಣ್ಣೂರಿಗೆ ತಲುಪಲು ಬೈಕ್ ಸವಾರರು ಕನ್ನೂರ್ ತಲುಪುವ ಮೊದಲು ಸುಂದರವಾದ ತಾಣಗಳಾದ ನಾಗರ್ ಹೊಳೆ , ತೋಲ್ಪಟ್ಟಿ ಮತ್ತು ನಂತರ ಕುತುಪರಂಬಾದಿಂದ ಮನಂದ್ವಾಡಿ ಮತ್ತು ಕಡೆಗೆ ಕುತುಪರಂಬಾ್ದಂತಹ ತಾಣಗಳನ್ನು ದಾಟಿ ಹೋಗಬೇಕಾಗುತ್ತದೆ.

ಮುಂಬೈನಿಂದ ತಿರುವನಂತಪುರಂ

ಮುಂಬೈನಿಂದ ತಿರುವನಂತಪುರಂ

ಮೋಟಾರುಬೈಕಿಂಗ್ ಪ್ರವಾಸಕ್ಕೆ ಹೋಗಲು ಇದು ಸಾಮಾನ್ಯವಾದ ಮಾರ್ಗವಲ್ಲವಾದರೂ, ಮುಂಬೈನಿಂದ ತಿರುವನಂತಪುರಂಗೆ ಬರುವ ಸವಾರಿ ಯ ಮಾರ್ಗವು ಸಮುದ್ರ ಮತ್ತು ಬೆಟ್ಟಗಳ ಅತ್ಯುತ್ತಮ ಸಂಯೋಜನೆಯ ಮುದ ನೀಡುತ್ತದೆ. ಕರಾವಳಿಯ ಈ ಸವಾರಿಯು ಸವಾರರನ್ನು ಅನೇಕ ಬೀಚ್ ಗಳು ಮತ್ತು ಸರಿಸಾಟಿಯಿಲ್ಲದ ಪಶ್ಚಿಮ ಘಟ್ಟಗಳ ದಟ್ಟವಾದ ಹಸಿರು ಬೆಟ್ಟಗಳ ಕಡೆಗೆ ಕರೆದೊಯ್ಯುತ್ತದೆ.

ಇದರ ಜೊತೆಗೆ ನೀವು ಕರಾವಳಿಯ ಅದ್ಬುತವಾದ ಸ್ಥಳಗಳ ಮೂಲಕ ಸವಾರಿ ಮಾಡಬಹುದಾಗಿದೆ ಈ ಸವಾರಿಯಲ್ಲಿ ಅತ್ಯಂತ ಜನಪ್ರಿಯವಾದ ಕಡಲತೀರಗಳ ಪಟ್ಟಣವಾದ ಗೋವಾ ಮತ್ತು ಪ್ರವಾಸಿಗರ ಅಚ್ಚುಮೆಚ್ಚಿನ ಪಟ್ಟಣವಾದ ಕೊಚ್ಚಿ ಮತ್ತು ಕೇರಳದ ಅಲ್ಲೆಪ್ಪೆಗಳ ಸೌಂದರ್ಯತೆಗಳನ್ನೂ ನೋಡಿ ಅನುಭವಿಸಬಹುದಾಗಿದೆ. ಈ ಮಾರ್ಗಗಳಲ್ಲಿ ಸವಾರರು ಪ್ರಕೃತಿಯ ವಿಭಿನ್ನ ಸೌಂದರ್ಯತೆಗಳ ರೂಪಗಳನ್ನು ಬೀಚ್ ಗಳು, ಕಾಡುಗಳು ಮತ್ತು ಹಿನ್ನೀರಿನ ಮೂಲಕ ನೋಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more